ಮಾಹಿತಿ ನೀಡುವ ಬದಲು ತನಿಖೆ ಏನು ಮಾಡಿದೆ ? ಹೇಳಿ ! – ಮುಂಬಯಿ ಹೈಕೋರ್ಟ್

  • ಕಾಂ. ಪನ್ಸಾರೆ ಹತ್ಯೆ ಪ್ರಕರಣ

  • ಮುಂಬಯಿ ಹೈಕೋರ್ಟ್ ನಿಂದ ಭಯೋತ್ಪಾದನಾ ನಿಗ್ರಹ ದಳಕ್ಕೆ ಛೀಮಾರಿ !

  • ಹೊಸದಾಗಿ ತನಿಖಾ ವರದಿ ಸಲ್ಲಿಸಲು 3 ತಿಂಗಳ ಕಾಲಾವಕಾಶ

ಮುಂಬಯಿ – ಕಾಂ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಪ್ರಗತಿಯನ್ನು ಹೇಳುವ ಬದಲು ತನಿಖೆಯಲ್ಲಿ ಏನು ಪ್ರಗತಿಯಾಗಿದೆ ? ಅದನ್ನು ತೋರಿಸಿ, ಎಂದು ಮುಂಬಯಿ ಹೈಕೋರ್ಟ್ ಭಯೋತ್ಪಾದನಾ ನಿಗ್ರಹ ದಳದ ಮೇಲೆ ಕಿಡಿಕಾರಿತು. ತಂಡದ ನಿಧಾನಗತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಂಡ ಸಲ್ಲಿಸಿದ ವರದಿಯನ್ನು ಸ್ವೀಕರಿಸಲು ಮುಂಬಯಿ ಹೈಕೋರ್ಟ್ ನಿರಾಕರಿಸಿದೆ. ಈ ಪ್ರಕರಣದಲ್ಲಿ ಹೊಸದಾಗಿ ತನಿಖಾ ವರದಿ ಸಲ್ಲಿಸಲು ಭಯೋತ್ಪಾದನಾ ನಿಗ್ರಹ ದಳಕ್ಕೆ 3 ತಿಂಗಳ ಕಾಲಾವಕಾಶ ನೀಡಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು. ನ್ಯಾಯಮೂರ್ತಿ ಅಜಯ ಗಡ್ಕರಿ ಮತ್ತು ನ್ಯಾಯಮೂರ್ತಿ ಶಾಮ ಚಂಡಕ ಅವರ ವಿಭಾಗೀಯಪೀಠದ ಮುಂದೆ ಡಿಸೆಂಬರ್ 21 ರಂದು ವಿಚಾರಣೆ ನಡೆಯಿತು.

‘ಕೊಲ್ಹಾಪುರ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಪ್ರಕರಣದಲ್ಲಿ ಇದುವರೆಗೆ 17 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ ಎಂದು ಸರಕಾರಿ ವಕೀಲ ಮಾನಕುಂವರ್ ದೇಶಮುಖ ಅವರು ಹೈಕೋರ್ಟ್‌ಗೆ ತಿಳಿಸಿದರು. ಈ ಕುರಿತು ನ್ಯಾಯಾಲಯವು ‘ವಿಚಾರಣೆಗಿಂತ ತನಿಖೆಯ ಪ್ರಗತಿಯನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ’ ಎಂದು ಅಭಿಪ್ರಾಯಪಟ್ಟಿದೆ.