ಮ್ಯಾನ್ಮಾರ್‌ನಲ್ಲಿ ಶಸ್ತ್ರಸಜ್ಜಿತ ಬಂಡುಕೋರ ಗುಂಪುಗಳು ಚೀನಾದ ಗಡಿಯಲ್ಲಿನ ಮತ್ತೊಂದು ಚೆಕ್‌ಪಾಯಿಂಟ್‌ಅನ್ನು ವಶಕ್ಕೆ ತೆಗೆದುಕೊಂಡವು !

ಮ್ಯಾನ್ಮಾರ್ ಮಿಲಿಟರಿ ಆಡಳಿತಗಾರರು ಮತ್ತು ಚೀನಾ ಅಧ್ಯಕ್ಷರು ಆತಂಕದಲ್ಲಿ !

ಬ್ಯಾಂಕಾಕ್ (ಥಾಯ್ಲೆಂಡ್) – ಬಂಡುಕೋರ ಗುಂಪುಗಳನ್ನು ಎದುರಿಸುತ್ತಿರುವ ಮ್ಯಾನ್ಮಾರ್ ಸೇನೆಯು ಹಿಮ್ಮೆಟ್ಟುತ್ತಿದೆ. ಮ್ಯಾನ್ಮಾರ್‌ನಲ್ಲಿ ಪ್ರಸ್ತುತ ಮಿಲಿಟರಿ ಆಡಳಿತವಿದ್ದು, ಚೀನಾದ ಮುಕ್ತ ಬೆಂಬಲವನ್ನು ಹೊಂದಿರುವ ಕಾರಣ, ಚೀನಾದ ಅಧ್ಯಕ್ಷರು ಮಿಲಿಟರಿಯ ಸೋಲಿನ ಬಗ್ಗೆ ಚಿಂತಿತರಾಗಿದ್ದಾರೆ ಎನ್ನಲಾಗಿದೆ. ‘ಮ್ಯಾನ್ಮಾರ್ ನ ಸೇನಾ ದೊರೆ ಮಿನ್ ಆಂಗ್ ಹ್ಲೈಂಗ್ ಅವರನ್ನು ಸೋಲಿಸಲಾಗುತ್ತಿದೆ’ ಎಂಬ ಚರ್ಚೆಯೂ ನಡೆಯುತ್ತಿದೆ.

ಶಸ್ತ್ರಸಜ್ಜಿತ ಬಂಡುಕೋರರ ಗುಂಪು ಚೀನಾದ ಗಡಿಯಲ್ಲಿರುವ ಪ್ರಮುಖ ಚೆಕ್‌ಪಾಯಿಂಟ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದು ಉತ್ತರ ಶಾನ್ ರಾಜ್ಯದ ಕೊಕಾಂಗ್ ಸ್ವ-ಸರಕಾರದ ಪ್ರದೇಶದ ರಾಜಧಾನಿಯಾದ ಲೌಕ್ಕಿಂಗ್ ಟೌನ್‌ಶಿಪ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿ ಪೋಸ್ಟ್ ಆಗಿದೆ. ಮ್ಯಾನ್ಮಾರ್‌ನ ಸೇನೆ 2 ವರ್ಷಗಳ ಹಿಂದೆ ಪ್ರಜಾಸತ್ತಾತ್ಮಕ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಹಿಸಿಕೊಂಡಿತ್ತು.