ನಾನು ಯಾವಾಗಲೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳೊಂದಿಗೆ ನಿಲ್ಲುವೆನು ! – ನೆದರ್ಲ್ಯಾಂಡ್ಸ್ ಸಂಸದ ಗೀರ್ಟ್ ವೈಲ್ಡರ್ಸ್

ಗೀರ್ಟ್ ವೈಲ್ಡರ್ಸ್ ನಿಂದ ಭಾರತಕ್ಕೆ ಮತ್ತು ವಿಶೇಷವಾಗಿ ಹಿಂದೂಗಳಿಗೆ ಧನ್ಯವಾದ !

ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ನೆದರ್ಲೆಂಡ್ಸ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಲಪಂಥೀಯ ಸಂಸದ ಗೀರ್ಟ್ ವೈಲ್ಡರ್ಸ್ ಅವರು ವಿಶ್ವದಾದ್ಯಂತ ತಮಗೆ ಬಂದಿರುವ ಅಭಿನಂದನಾ ಸಂದೇಶಗಳಿಗೆ ಪ್ರತಿಕ್ರಿಯಿಸಿದ್ದಾರೆ. ವೈಲ್ಡರ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶವನ್ನು ಪ್ರಸಾರ ಮಾಡುವ ಮೂಲಕ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅವರು ಭಾರತಕ್ಕೆ ಮತ್ತು ವಿಶೇಷವಾಗಿ ಹಿಂದೂಗಳಿಗೆ ಧನ್ಯವಾದ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಇಸ್ಲಾಮಿಕ್ ದೇಶಗಳಲ್ಲಿ ಕೇವಲ ಹಿಂದೂಗಳು ಎಂಬ ಕಾರಣಕ್ಕಾಗಿ ದಾಳಿಗೊಳಗಾದ ಹಿಂದೂಗಳ ಪರವಾಗಿ ನಾನು ಯಾವಾಗಲೂ ನಿಲ್ಲುತ್ತೇನೆ ಎಂದು ಗೀರ್ಟ್ ವೈಲ್ಡರ್ಸ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಗೀರ್ಟ್ ವೈಲ್ಡರ್ಸ್ ನೆದರ್ಲೆಂಡ್ಸ್‌ನಲ್ಲಿ ಬಲಪಂಥೀಯ ರಾಷ್ಟ್ರೀಯತಾವಾದಿ ನಾಯಕರಾಗಿದ್ದಾರೆ. ಇತ್ತೀಚೆಗೆ ಅವರು ಕುರಾನ್ ಅನ್ನು ನಿಷೇಧಿಸುವ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು ಮತ್ತು ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರು ಎಂದು ಹೇಳಿದ್ದರು. ಅದಕ್ಕಾಗಿ ಅವರನ್ನು ಟೀಕಿಸಲಾಯಿತು. ಗೀರ್ಟ್ ವೈಲ್ಡರ್ಸ್ ಅವರು ‘ಪಾರ್ಟಿ ಫಾರ್ ಫ್ರೀಡಮ್’ ಸ್ಥಾಪಕರಾಗಿದ್ದಾರೆ. ಇಸ್ಲಾಂ ಧರ್ಮವನ್ನು ಡಚ್ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಮೌಲ್ಯಗಳಿಗೆ ಅಪಾಯವಿದೆ ಎಂದು ಅವರು ಆಗಾಗ್ಗೆ ಹೇಳಿದ್ದಾರೆ. ಕೆಲವು ವಿವಾದಾತ್ಮಕ ಹೇಳಿಕೆಗಳಿಂದಾಗಿ ಅವರು ಕಾನೂನು ಸವಾಲುಗಳನ್ನು ಎದುರಿಸಿದ್ದಾರೆ. ಅವರು ನೆದಲ್ಯಾಂಡ್ಸ್ ನಿಂದ ಮುಸ್ಲಿಮರನ್ನು ಹೊರಹಾಕಲು ಮತ್ತು ಅದನ್ನು ‘ಇಸ್ಲಾಂನಿಂದ ಮುಕ್ತ’ ಮಾಡಲು ಪ್ರತಿಪಾದಿಸುತ್ತಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಎಷ್ಟು ಹಿಂದೂ ಸಂಸದರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸಂತ್ರಸ್ತ ಹಿಂದೂಗಳ ಪರವಾಗಿ ಇಂತಹ ನಿಲುವು ತಳೆದಿದ್ದಾರೆ ?