ಭಾರತದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಪೂರೈಸುತ್ತಿದ್ದ ಯುವಕನ ಬಂಧನ!
ಮುಂಬಯಿ – ಭಾರತದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಗೂಢಚಾರ ಸಂಘಟನೆಗೆ ಪೂರೈಸಿರುವ ಪ್ರಕರಣದಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು 23 ವರ್ಷದ ಗೌರವ್ ಪಾಟೀಲ್ ನನ್ನು ನವಿ ಮುಂಬಯಿಯ ಅವನ ಮನೆಯಿಂದ ಬಂಧಿಸಿದ್ದಾರೆ. ಅವನು `ಹನಿ ಟ್ರ್ಯಾಪ್’ ನಲ್ಲಿ ( ಮಹಿಳೆಯ ಮಾಧ್ಯಮದಿಂದ ವ್ಯಕ್ತಿಯನ್ನು ಜಾಲದಲ್ಲಿ ಸಿಲುಕಿಸುವ ಪ್ರಕಾರ) ಸಿಲುಕಿದ್ದನು. ನ್ಯಾಯಾಲಯವು ಅವನನ್ನು ಒಂದು ವಾರ ಪೊಲೀಸ ಕಸ್ಟಡಿಗೆ ಒಪ್ಪಿಸಿದೆ.
1. ಗೌರವ್ ಪಾಟೀಲ ನೇವಲ್ ಡಾಕ್ ನಲ್ಲಿ ತರಬೇತಿ ಅಭ್ಯರ್ಥಿಯಾಗಿ ಕೆಲಸ ಮಾಡುತ್ತಿದ್ದನು. ಅವನು ವಾಟ್ಸ ಆಪ್ ಮತ್ತು ಫೇಸಬುಕ್ ಮೂಲಕ ಪಾಕಿಸ್ತಾನದಲ್ಲಿರುವ ಬೇಹುಗಾರಿಕಾ ಸಂಘಟನೆಯ ಸಂಪರ್ಕದಲ್ಲಿದ್ದನು.
2. ಫೇಸಬುಕ್ ಮೇಲಿನ ಮುಕ್ತಾ ಮಾಹತೋ, ಪಾಯಲ್ ಏಂಜೆಲ್ ಮತ್ತು ಆರತಿ ಶರ್ಮಾ ಈ ಹೆಸರುಗಳ ಖಾತೆಗಳಿಗೆ ಸಂಬಂಧಿಸಿರುವವರೊಂದಿಗೆ ಅವನು ಸಂಪರ್ಕದಲ್ಲಿದ್ದನು. ಈ ಮೂರು ಖಾತೆಗಳು ಪಾಕಿಸ್ತಾನದಿಂದ ಚಲಾಯಿಸಲ್ಪಡುತ್ತಿದ್ದವು.
3. ನಿಗ್ರಹ ದಳವು ಈ ಪ್ರಕರಣದಲ್ಲಿ ಒಟ್ಟು 4 ಜನರ ವಿರುದ್ಧ ದೂರು ದಾಖಲಿಸಿದೆ. ಇತರ ಮೂವರು ಗೌರವ ಪಾಟೀಲನೊಂದಿಗೆ ಸಂಪರ್ಕದಲ್ಲಿದ್ದರು.
4. ಗೌರವ ಅಪರಿಚಿತ ವ್ಯಕ್ತಿಗಳಿಗೆ ವಾಟ್ಸ ಆಪ್ ಮೂಲಕ ಹಡಗಿಗೆ ಸಂಬಂಧಿಸಿದ ಕೆಲವು ಮಹತ್ವದ ವೀಡಿಯೊ ಮತ್ತು ಫೋಟೋಗಳನ್ನು ಕಳುಹಿಸಿದ್ದನು. ಈ ಫೇಸಬುಕ್ ಮೇಲಿನ ಪ್ರೊಫೈಲನೊಂದಿಗೆ ಅವನು ಸಂಪರ್ಕದಲ್ಲಿದ್ದನು.
5. ಈ ಮಾಹಿತಿಯ ಬದಲಿಗೆ ಗೌರವನಿಗೆ ಅವರು ಹಣವನ್ನು ಕಳುಹಿಸುತ್ತಿದ್ದರು. ಈ ರೀತಿ ಎಪ್ರಿಲ್-ಮೇ ಮತ್ತು ಅಕ್ಟೋಬರ 2023ರ ಕಾಲಾವಧಿಯಲ್ಲಿ ನಡೆದಿದೆ.
6. ಗೌರವ ಪಾಟೀಲನಿಗೆ ಪಾಕಿಸ್ತಾನದಿಂದ ಎಷ್ಟು ಹಣ ಸಿಕ್ಕಿದೆಯೆಂದು ತನಿಖೆ ನಡೆಸಲಾಗುತ್ತಿದೆ.
(ಸೌಜನ್ಯ : Gallinews India)