ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್‌ ೨೬)ಯಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ೫೩ ನೇ ಹುಟ್ಟುಹಬ್ಬದ ನಿಮಿತ್ತ…

೧. ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್‌ ಇವರ ಮಾಧ್ಯಮದಿಂದ ಕೊಟ್ಟಿರುವ ಸ್ಪಟಿಕದ ಶಿವಲಿಂಗವು ಶಿವನ ಆತ್ಮಲಿಂಗವೇ, ಆಗಿದೆ ಎಂದು ಅನಿಸುವುದು ಹಾಗೂ ನಾಡಿವಾಚನದಲ್ಲಿಯೂ ಅದೇ ರೀತಿ ಉಲ್ಲೇಖವಿರುವುದು : ವರ್ಷ ೨೦೨೧ ರ ಜನವರಿ ತಿಂಗಳ ಮೊದಲ ವಾರದಲ್ಲಿ ನಾಡಿವಾಚನ ಕ್ರಮಾಂಕ ೧೬೪ ರಲ್ಲಿ ಉಲ್ಲೇಖಿಸಿದಂತೆ ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್‌ ಇವರ ಮಾಧ್ಯಮದಿಂದ ನನಗೆ ಒಂದು ಸ್ಪಟಿಕದ ಶಿವಲಿಂಗವನ್ನು ಕೊಟ್ಟರು. ಈ ಶಿವಲಿಂಗವು ಒಂದು ಮುಷ್ಟಿಯಷ್ಟಿದೆ. ಅದನ್ನು ಅನೇಕ ಪೀಳಿಗೆಗಳಿಂದ ಪೂ. ಡಾ. ಓಂ ಉಲಗನಾಥನ್‌ ಇವರ ಪರಂಪರೆಯಲ್ಲಿಡಲಾಗಿತ್ತು. ನಾಡಿವಾಚನದಲ್ಲಿ ಮಹರ್ಷಿಗಳು, ‘ಈ ಶಿವಲಿಂಗವನ್ನು ನೀವು ನಿಮ್ಮ ಬಳಿ ಇಟ್ಟುಕೊಳ್ಳಿ. ಅದು ನಿಮ್ಮ ರಕ್ಷಣೆ ಮಾಡುವುದು’ ಎಂದು ಹೇಳಿದರು. ಶಿವನು ಆದಿ ಶಂಕರಾಚಾರ್ಯರಿಗೆ ತನ್ನ ಆತ್ಮಲಿಂಗವನ್ನು ಕೊಟ್ಟಿದ್ದನು, ಹಾಗೆಯೇ ಈ ಸ್ಪಟಿಕದ ಶಿವಲಿಂಗವೆಂದರೆ ಶಿವನ ಆತ್ಮಲಿಂಗವೇ ಆಗಿದೆ ಹಾಗೂ ಶಿವನೇ ನನಗೆ ಕೊಟ್ಟಿದ್ದಾನೆ’, ಎಂದೆನಿಸಿತು. ನಾಡಿವಾಚನ ದಲ್ಲಿಯೂ ಮಹರ್ಷಿಗಳು ಇದೇ ರೀತಿ ಉಲ್ಲೇಖಿಸಿ ‘ಪ್ರತ್ಯಕ್ಷ ಶಿವನೇ ಅದನ್ನು ನಿಮಗೆ ಕೊಟ್ಟಿದ್ದಾನೆ’, ಎಂದು ಹೇಳಿದ್ದರು.

೨. ಆತ್ಮಲಿಂಗವಿರುವ ಆದಿ ಶಂಕರಾಚಾರ್ಯರ ಮಠವನ್ನು ನೋಡುವಾಗ ‘ನನಗೆ ಕೂಡ ಧರ್ಮಕಾರ್ಯಕ್ಕಾಗಿ ಶಿವನ ಇಂತಹ ಆತ್ಮಲಿಂಗ ಸಿಗಬೇಕು’, ಎಂಬ ವಿಚಾರ ಮನಸ್ಸಿನಲ್ಲಿ ಬರುವುದು ಹಾಗೂ ಸ್ಪಟಿಕದ ಶಿವಲಿಂಗ ಸಿಕ್ಕಿದಾಗ ‘ಸನಾತನದ ಧರ್ಮಕಾರ್ಯಕ್ಕೆ ಆಶೀರ್ವಾದವೆಂದು ಶಿವನು ತನ್ನ ಆತ್ಮಲಿಂಗವನ್ನೇ ನನಗೆ ಕೊಟ್ಟಿದ್ದಾನೆ’, ಎಂದು ಅನಿಸುವುದು : ಭಗವಂತನು ಆದಿ ಶಂಕರಾಚಾರ್ಯರಿಗೆ ನೀಡಿದ ೪ ಆತ್ಮಲಿಂಗಗಳನ್ನು ಎಲ್ಲಿ ಸ್ಥಾಪಿಸಲಾಗಿದೆಯೊ, ಅಲ್ಲಿ ಈಗ ಶಂಕರಾಚಾರ್ಯರ ೪ ಮಠಗಳಿವೆ. ಒಮ್ಮೆ ಈ ಲಿಂಗಗಳ ದರ್ಶನ ಪಡೆಯುವಾಗ ನನಗೆ ‘ಶಿವನು ನಮಗೂ ಧರ್ಮ ಕಾರ್ಯಕ್ಕಾಗಿ ತನ್ನ ಸ್ಪಟಿಕದ ಲಿಂಗವನ್ನು ಕೊಡಬೇಕು’, ಎಂದು ಅನಿಸಿತ್ತು. ನಂತರ ನಾನು ಆ ವಿಚಾರವನ್ನು ಮರೆತೆ; ಆದರೆ ಮಹರ್ಷಿಗಳು ನನಗೆ ಪೂ. ಡಾ. ಓಂ ಉಲಗನಾಥನ್‌ ಇವರ ಮಾಧ್ಯಮದಿಂದ ಸ್ಪಟಿಕದ ಶಿವಲಿಂಗವನ್ನು ಕೊಟ್ಟಾಗ ‘ನಿಜವಾಗಿಯೂ ಸನಾತನದ ಧರ್ಮಕಾರ್ಯಕ್ಕಾಗಿ ಆಶೀರ್ವಾದವೆಂದು ಶಿವನು ತನ್ನ ಆತ್ಮಲಿಂಗವನ್ನೇ ಕೊಟ್ಟಿದ್ದಾನೆ’, ಎಂದು ನನಗೆ ಅನಿಸಿತು.

೩. ಶೇ. ೮೫ ರಷ್ಟು ಆಧ್ಯಾತ್ಮಿಕ ಮಟ್ಟದ ಸಮಷ್ಟಿ ಸಂತರ ಮನಸ್ಸಿನಲ್ಲಿ ‘ಯಾವುದಾದರೊಂದು ವಿಷಯ ಬೇಕು’, ಎಂಬ ವಿಚಾರ ಬರುವುದು, ಸಕಾಮ ಇಚ್ಛೆ ಆಗಿರದೆ ಅದು ಈಶ್ವರೇಚ್ಛೆಯಿಂದಲೇ ಬಂದಿರುತ್ತದೆ : ‘ನನಗೆ ಇಂತಹ ಶಿವಲಿಂಗ ಬೇಕು’, ಎನ್ನುವ ನನ್ನ ಮನಸ್ಸಿನ ವಿಚಾರ ಸಕಾಮದ್ದಾಗಿರಲಿಲ್ಲ. ಅದೊಂದು ಈಶ್ವರೀ ನಿಯೋಜನೆಯೇ ಆಗಿತ್ತು. ಅದು ಈಶ್ವರನ ಇಚ್ಛೆಯೇ ಆಗಿತ್ತು. ‘ಶೇ. ೮೫ ರಷ್ಟು ಆಧ್ಯಾತ್ಮಿಕ ಮಟ್ಟದ ಸಮಷ್ಟಿ ಸಂತರ ಮನಸ್ಸಿನಲ್ಲಿ ‘ಯಾವುದಾದರೊಂದು ವಿಷಯ ಬೇಕು’, ಎಂಬ ವಿಚಾರ ಬರುವುದು’, ಇದು ಸಕಾಮ ಇಚ್ಛೆ ಅಥವಾ ಭಾವನಾತ್ಮಕ ಆಗಿರುವುದಿಲ್ಲ, ‘ಅವರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವು ಈಶ್ವರೇಚ್ಛೆಯಿಂದಲೇ ಬಂದಿರುತ್ತದೆ’, ಎಂದು ನನಗೆ ಅನಿಸಿತು.

೪. ವಿಶ್ವವ್ಯಾಪಕ ಕಾರ್ಯಕ್ಕೆ ಸ್ವಂತದ ಅಸ್ತಿತ್ವ ಬೇಡ !

ಅನೇಕ ಬಾರಿ ನನಗೆ ‘ನಾವು ಮಾಡುವುದೆಲ್ಲವೂ ಈಶ್ವರನ ನಿಯೋಜನೆಯೇ ಆಗಿದೆ, ಇದರಲ್ಲಿ ಸ್ವಂತದ್ದೇನೂ ಉಳಿದಿಲ್ಲ’, ಎಂದು ಅನಿಸುತ್ತದೆ ಹಾಗೂ ಅಧ್ಯಾತ್ಮದಲ್ಲಿ ಹೀಗೆಯೆ ಇರಬೇಕು. ಸ್ವಂತದ ಅಸ್ತಿತ್ವವೇ ಬೇಡ, ಹೀಗಾದರೆ ಮಾತ್ರ ವಿಶ್ವವ್ಯಾಪಕ ಕಾರ್ಯವಾಗುತ್ತದೆ; ಏಕೆಂದರೆ ಈಶ್ವರ ನಿಗೆ ಯಾವುದೂ ಅಸಾಧ್ಯವಾಗಿರುವುದಿಲ್ಲ.’

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಬಂದಿರುವ ದೈವೀ ಅನುಭೂತಿ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ತಮ್ಮ ಹಣೆಯ ಮೇಲೆ ಕೈ ಆಡಿಸುವಾಗ ‘ತಮ್ಮ ಮೂರನೇ ಕಣ್ಣಿನ ಮೇಲೆ ಕೈ ಆಡಿಸುತ್ತಿದ್ದೇನೆ’, ಎಂದು ಅನಿಸುವುದು : ‘ನವೆಂಬರ ೨೦೨೦ ರಲ್ಲಿ ಒಮ್ಮೆ ನನ್ನ ತಲೆ ನೋಯುತ್ತಿತ್ತು; ಆಗ ನಾನು ಹಣೆಗೆ ಬಾಮ್‌ ಹಚ್ಚಿಕೊಳ್ಳುತ್ತಿದ್ದೆ. ನಾನು ಹಣೆಯ ಮೇಲೆ ಕೈ ಆಡಿಸುತ್ತಿರುವಾಗ ಅನಿರೀಕ್ಷಿತವಾಗಿ ‘ನಾನು ನನ್ನ ಮೂರನೇ ಕಣ್ಣಿನ ಮೇಲೆ ಕೈ ಆಡಿಸುತ್ತಿದ್ದೇನೆ’, ಎಂದು ನನಗೆ ಅನಿಸಿತು. ನನಗೆ ಆ ಸ್ಪರ್ಶ ಒಂದು ಸೆಕೆಂಡ್‌ ಮಾತ್ರ ಅರಿವಾಗಿತ್ತು. ನಾನು ಗುರುದೇವರಿಗೆ ಇದನ್ನು ಹೇಳಿದಾಗ ಅವರು ನನಗೆ, ”ಈಗ ಸ್ಥೂಲ ಯುದ್ಧಕಾಲ ಆರಂಭವಾಗಿರುವುದರಿಂದ ಪ್ರಕಟ ಶಕ್ತಿಯ ಅವಶ್ಯಕತೆಯಿದೆ. ಆದ್ದರಿಂದ ನಿಮಗೆ ಹಣೆಯ ಮೇಲೆ ಕೈ ಆಡಿಸುವಾಗ ಹಾಗೆ ಅರಿವಾಯಿತು’’ ಎಂದರು.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಕೊಳ್ಳಿಮಲಯೀ, ತಮಿಳುನಾಡು (೧೫.೧.೨೦೨೧)