|
ಬೀಜಿಂಗ್ (ಚೀನಾ) – ಕಳೆದ ಕೆಲವು ವಾರಗಳಿಂದ ಚೀನಾದಲ್ಲಿ ಹಲವಾರು ನಿಗೂಢ ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ. ಸೋಂಕು ಅಲ್ಲಿ ವೇಗವಾಗಿ ಹರಡುತ್ತಿದೆ ಮತ್ತು ಉತ್ತರ ಚೀನಾದಲ್ಲಿ ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿದೆ. ನೆರೆಯ ವಿಯೆಟ್ನಾಂನಲ್ಲಿ ಸಹ ರೋಗಿಗಳು ಕಂಡುಬಂದಿದ್ದಾರೆ ಮತ್ತು ಚೀನಾದ ಈ ನಿಗೂಢ ಕಾಯಿಲೆಯ 7 ರೋಗಿಗಳು ‘ದೆಹಲಿ ಎಮ್ಸ್’ನಲ್ಲಿಯೂ ಕಂಡುಬಂದಿದ್ದಾರೆ; ಆದರೆ ಈ ರೋಗಿಗಳಿಗೆ ಚೀನಾದಲ್ಲಿ ನ್ಯುಮೋನಿಯಾ ಸಂಬಂಧವಿಲ್ಲ ಎಂದು ಹೇಳಿದೆ.
1. ‘ಮೈಕೋಪ್ಲಾಸ್ಮಾ ನ್ಯುಮೋನಿಯಾ’ ಎಂಬ ಹೆಸರಿನ ಈ ರೋಗದ ರೋಗಿಗಳು ಅಕ್ಟೋಬರ್ 2023 ರಲ್ಲಿ ಚೀನಾದಲ್ಲಿ ಕಂಡುಬಂದರು. ನವೆಂಬರ್ 23 ರಂದು, ಚೀನಾದ ಮಾಧ್ಯಮವು ಮೊದಲ ಬಾರಿಗೆ ಶಾಲೆಗಳಲ್ಲಿ ನಿಗೂಢ ಕಾಯಿಲೆ ಹರಡಿದೆ ಎಂದು ವರದಿ ಮಾಡಿತ್ತು. ‘ಅಲ್ ಜಜೀರಾ’ ಸುದ್ದಿ ಸಂಸ್ಥೆಯ ಪ್ರಕಾರ, ಈ ಕಾಯಿಲೆಯಿಂದ ಬಳಲುತ್ತಿರುವ ಅಂದಾಜು 1 ಸಾವಿರದ 200 ರೋಗಿಗಳು ಪ್ರತಿದಿನ ಬೀಜಿಂಗ್‌ನ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಭಾರತದ ಆರೋಗ್ಯ ಸಚಿವಾಲಯವು 10 ದಿನಗಳ ಹಿಂದೆಯೇ ಈ ರೋಗದ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿತ್ತು.
2. ಎಮ್ಸ್ ನಲ್ಲಿ ದಾಖಲಾಗಿರುವ 7 ರೋಗಿಗಳಿಗೆ ನ್ಯುಮೋನಿಯಾ ಇದೆ; ಆದರೆ ಚೀನಾದ ರೋಗಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಜನವರಿ 2023 ರಿಂದ, ಎಮ್ಸ್ ನಲ್ಲಿನ ಮೈಕ್ರೋಬಯಾಲಜಿ ವಿಭಾಗವು 611 ಮಾದರಿಗಳನ್ನು ಪರೀಕ್ಷಿಸಿದೆ ಮತ್ತು ಅವುಗಳಲ್ಲಿ ಯಾವುದೂ ಮೈಕೋಪ್ಲಾಸ್ಮಾ ನ್ಯುಮೋನಿಯಾ ಪತ್ತೆಯಾಗಲಿಲ್ಲ. ಕೇಂದ್ರ ಸರಕಾರ ಮತ್ತು ಆರೋಗ್ಯ ಇಲಾಖೆ ಇದರ ಮೇಲೆ ನಿಗಾ ಇಟ್ಟಿದೆ.
ಇದು ನಿಗೂಢ ಕಾಯಿಲೆಯ ಲಕ್ಷಣಗಳು !
ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಮಕ್ಕಳು ಈ ರೋಗಕ್ಕೆ ಒಳಗಾಗುತ್ತಾರೆ ಏಕೆಂದರೆ ಅವರ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಈ ರೋಗದ ಲಕ್ಷಣಗಳು ಇವುಗಳು :
- ಕೆಮ್ಮು
- ನೋವು ಅಥವಾ ಗಂಟಲು ಕಿರಿಕಿರಿ
- ಜ್ವರ
- ಶ್ವಾಸಕೋಶದ ಊತ
- ಉಸಿರಾಟದ ಪ್ರದೇಶದ ಊತ
- ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ರೋಗಿಯ ಸಂಪರ್ಕಕ್ಕೆ ಬಂದರೆ ರೋಗ ಹರಡುತ್ತದೆ. ಹಾಗಾಗಿಯೇ ಈ ರೋಗ ಹರಡುವ ಸಾಧ್ಯತೆ ಹೆಚ್ಚಿದೆ.
‘ಲ್ಯಾನ್ಸೆಟ್ ಮೈಕ್ರೋಬ್’ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದಲ್ಲಿ ‘ಪಿಸಿಆರ್’ ಪರೀಕ್ಷೆಯ ಮೂಲಕ ಪ್ರಕರಣವನ್ನು ಪತ್ತೆ ಮಾಡಲಾಗಿದೆ. ಉಳಿದ 6 ಪ್ರಕರಣಗಳನ್ನು ‘ಐಜಿಎಂ ಎಲಿಸಾ’ ಎಂಬ ಪರೀಕ್ಷೆಯಿಂದ ಪತ್ತೆ ಮಾಡಲಾಗಿದೆ. ಇದು ಒಂದು ರೀತಿಯ ರಕ್ತ ಪರೀಕ್ಷೆಯಾಗಿದೆ. ಸೋಂಕಿನ ನಂತರದ ಹಂತದಲ್ಲಿ ಇದನ್ನು ಮಾಡಲಾಗುತ್ತದೆ.
ಚೀನಾದಲ್ಲಿ ಕರೋನಾ ರೀತಿಯ ಪರಿಸ್ಥಿತಿ ಇದೆ ಎಂದು ‘ಪ್ರೊ-ಮೋಡ್’ ಸಂಸ್ಥೆ ಹೇಳಿಕೊಂಡಿದೆ !
2019 ರಲ್ಲಿ, ಅದೇ ಸಂಸ್ಥೆಯು ಕರೋನಾ ಬಗ್ಗೆ ಎಚ್ಚರಿಕೆಯ ಕುರಿತು ಪ್ರಸಾರ ಮಾಡಿತ್ತು !
ಕರೋನಾದಂತೆ, ಚೀನಾ ಈ ಬಾರಿಯೂ ಈ ನಿಗೂಢ ಕಾಯಿಲೆಯ ಬಗ್ಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ. ಈ ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಸರಕಾರವನ್ನು ಹಲವು ಬಾರಿ ಕೇಳಿದೆ. ಈ ರೋಗವು ಬ್ಯಾಕ್ಟೀರಿಯಾದ ಸೋಂಕಿನಿಂದ ಹರಡುತ್ತದೆ. ಈ ಬ್ಯಾಕ್ಟೀರಿಯಾವನ್ನು ‘ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾ’ ಎಂದು ಕರೆಯಲಾಗುತ್ತದೆ. ಆದರೆ, ಕಳೆದ ತಿಂಗಳು ನವೆಂಬರ್ 15ರಂದು ‘ಪ್ರೊ-ಮೆಡ್’ ಎಂಬ ಸಮೀಕ್ಷೆ ನಡೆಸುವ ಸಂಸ್ಥೆಯು ಚೀನಾದಲ್ಲಿ ನ್ಯುಮೋನಿಯಾ ಕುರಿತು ವಿಶ್ವಾದ್ಯಂತ ‘ಎಚ್ಚರಿಕೆ’ ನೀಡಿತ್ತು. ಅದೇ ಸಂಸ್ಥೆಯು 2019 ರಲ್ಲೂ ಕರೋನಾ ಬಗ್ಗೆ ಜಾಗರೂಕತೆಯ ಎಚ್ಚರಿಕೆಯನ್ನು ನೀಡಿತ್ತು. ಈ ಸಂಸ್ಥೆಯ ಪ್ರಕಾರ, ಬೀಜಿಂಗ್‌ನಲ್ಲಿ ಒಂದೇ ದಿನದಲ್ಲಿ 13 ಸಾವಿರ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಪ್ರತಿದಿನ 7 ಸಾವಿರಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ಬರುತ್ತಿದ್ದಾರೆ. ಇದೆಲ್ಲವೂ 2019 ರ ಕರೋನಾ ತರಹದ ಪರಿಸ್ಥಿತಿಯನ್ನು ನೆನಪಿಸುತ್ತದೆ. ಇದನ್ನೆಲ್ಲ ಗಮನಿಸಿದರೆ ‘ಇದು ಸಾಮಾನ್ಯ ನ್ಯುಮೋನಿಯಾ ಅಷ್ಟೇ’ ಎಂದು ಅನ್ನಿಸುವುದಿಲ್ಲ.