ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಿಂದ ಕಮ್ಯುನಿಸ್ಟ್ ಪಕ್ಷದ ನಾಯಕರಿಗೆ ಛೀಮಾರಿ !
ತಿರುವನಂತಪುರಂ (ಕೇರಳ) – ಕಮ್ಯುನಿಸ್ಟ್ ಪಕ್ಷದ ನಾಯಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರ’ ಎಂದು ಹೇಳುವುದನ್ನು ನಿಲ್ಲಿಸಬೇಕು. ಅವರು ಪ್ರತ್ಯೇಕತಾವಾದ ಮತ್ತು ಪ್ರಾದೇಶಿಕತೆಯ ಜ್ವಾಲೆಯನ್ನು ಪ್ರಚೋದಿಸಲು ಪ್ರಯತ್ನಿಸಬಾರದು. ಈ ಕೃತ್ಯ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿದೆ. ಹಾಗಾಗಿ ಇದೊಂದು ಸಂವಿಧಾನ ವಿರೋಧಿ ಕೃತ್ಯ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಟೀಕಿಸಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟರು ನಡೆಸುತ್ತಿರುವ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮೈತ್ರಿ ಸರಕಾರದ ಶಾಸಕ ಕೆ.ಟಿ. ಜಲೀಲ್ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರ’ ಎಂದು ವರ್ಣಿಸಿದ್ದರು; ಆದರ ನಂತರ ಆ ಪೋಸ್ಟ್ ಅನ್ನು ಅಳಿಸಿದ್ದರು. ಈ ಬಗ್ಗೆ ರಾಷ್ಟ್ರೀಯ ಸ್ವಯಂ ಸಂಘದ ಸ್ಥಳೀಯ ಮುಖಂಡ ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಕೆ.ಟಿ. ಜಲೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಂಪಾದಕರ ನಿಲುವು* ಕಮ್ಯುನಿಸ್ಟ್ ನಾಯಕರು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪವೂ ಮಾಡಿದರು ! * ಕಮ್ಯುನಿಸ್ಟರು ಯಾವಾಗಲೂ ಪ್ರತ್ಯೇಕತಾವಾದವನ್ನು ಬೆಂಬಲಿಸಿದ್ದಾರೆ, ಇದು ಇಲ್ಲಿಯವರೆಗಿನ ಇತಿಹಾಸವಾಗಿದೆ. ಆದ್ದರಿಂದ ದೇಶದ ಭದ್ರತೆಗಾಗಿ ಕಮ್ಯುನಿಸಂಅನ್ನು ಹೊರಹಾಕುವುದು ಅವಶ್ಯಕ ! |