RSS on Bangladesh Hindus : ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಕ್ಕಾಗಿ ಕೇಂದ್ರ ಸರಕಾರವು ಜಾಗತಿಕ ಜನಾಭಿಪ್ರಾಯವನ್ನು ರಚಿಸಬೇಕು ! – ದತ್ತಾತ್ರೇಯ ಹೊಸಬಾಳೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸಂಚಾಲಕ ದತ್ತಾತ್ರೇಯ ಹೊಸಬಾಳೆ ಇವರ ಹೇಳಿಕೆ

ದತ್ತಾತ್ರೇಯ ಹೊಸಬಾಳೆ

ನವ ದೆಹಲಿ – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಕೇಂದ್ರ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಕೇಂದ್ರ ಸರಕಾರವೇ ಜಾಗತಿಕ ಅಭಿಪ್ರಾಯವನ್ನು ಸಿದ್ದಪಡಿಸಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಸೂಕ್ತ ಪ್ರಯತ್ನಗಳನ್ನು ಮಾಡಬೇಕು. ಅದೇ ಸಮಯದಲ್ಲಿ, ಇದಕ್ಕಾಗಿ ಪರಿಣಾಮಕಾರಿ ಜಾಗತಿಕ ಸಂಸ್ಥೆಗಳ ಸಹಾಯ ಪಡೆಯಬೇಕು.  ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತ, ಜಾಗತಿಕ ಸಮುದಾಯ ಮತ್ತು ಸಂಸ್ಥೆಗಳು ಬಾಂಗ್ಲಾದೇಶದ ಸಂತ್ರಸ್ತರೊಂದಿಗೆ ನಿಲ್ಲಬೇಕು. ವಿಶ್ವಶಾಂತಿ ಮತ್ತು ಭ್ರಾತೃತ್ವ ಇದಕ್ಕಾಗಿ ಇದು ಅತ್ಯಂತ ಮಹತ್ವದ್ದಾಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸಂಚಾಲಕ ದತ್ತಾತ್ರೇಯ ಹೊಸಬಾಳೆ ಅವರು ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಹಿಂದೂಗಳ ನೇತೃತ್ವ ವಹಿಸಿದ್ದ ಚಿನ್ಮಯ್ ಪ್ರಭು ಅವರನ್ನು ಜೈಲಿಗೆ ತಳ್ಳಿದ್ದು ಅನ್ಯಾಯವಾಗಿದ್ದು ಅವರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಹೊಸಬಾಳೆ ಅವರು ಒತ್ತಾಯಿಸಿದ್ದಾರೆ.

ಸಹಸಂಚಾಲಕ ಹೊಸಬಾಳೆ ಮುಂದೆ ಮಾತನಾಡಿ,

1. ಬಾಂಗ್ಲಾದೇಶದಲ್ಲಿ ಹಿಂದೂಗಳು, ಮಹಿಳೆಯರು ಮತ್ತು ಇತರ ಎಲ್ಲಾ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ್ ಕಟ್ಟರವಾದಿಗಳಿಂದ ನಡೆಯುತ್ತಿರುವ ದಾಳಿಗಳು, ಹತ್ಯೆಗಳು, ಲೂಟಿಗಳು ಮತ್ತು ಬೆಂಕಿ ಅವಘಡಗಳಂತಹ ಘಟನೆಗಳು ಹಾಗೆಯೇ ಅಮಾನವೀಯ ದೌರ್ಜನ್ಯಗಳು ಅತ್ಯಂತ ಕಳವಳಕಾರಿಯಾಗಿವೆ. ರಾಷ್ಟ್ರೀಯ ಸ್ವಯಂಸೇವಕರ ಸಂಘ ಇದನ್ನು ಖಂಡಿಸುತ್ತದೆ.

2. ಹಿಂಸಾಚಾರ ಮಾಡುತ್ತಿರುವ ಜನರನ್ನು ತಡೆಯುವ ಬದಲು ಬಾಂಗ್ಲಾದೇಶದ ಮಧ್ಯಂತರ ಸರಕಾರ ಮತ್ತು ಇತರ ಸಂಸ್ಥೆಗಳು ಮೌನವಾಗಿವೆ. ಸ್ವರಕ್ಷಣೆಗಾಗಿ ಪ್ರಜಾಸತ್ತಾತ್ಮಕ ಪದ್ದತಿಯಿಂದ ಧ್ವನಿ ಎತ್ತುವ ಹಿಂದೂಗಳ ಧ್ವನಿಯನ್ನು ಹತ್ತಿಕ್ಕುವ ಸಲುವಾಗಿ ಬಾಂಗ್ಲಾದೇಶದಲ್ಲಿ ಅವರ ಮೇಲೆ ಅನ್ಯಾಯ ಮತ್ತು ದೌರ್ಜನ್ಯಗಳ ಹೊಸ ಸುತ್ತು ಪ್ರಾರಂಭವಾಗಿರುವುದು ಕಾಣಿಸುತ್ತಿದೆ ಎಂದರು.