ಹಿಂದೂಗಳನ್ನು ಜಾತಿ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ವಿಭಜಿಸಿಲ್ಪಟ್ಟರೆ, ವಿನಾಶವಾಗುವುದು ! – ದತ್ತಾತ್ರೇಯ ಹೊಸಬಾಳೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇವರ ಹೇಳಿಕೆ

ಮಥುರಾ (ಉತ್ತರ ಪ್ರದೇಶ) – ಸಮಾಜ, ಜಾತಿ ಮತ್ತು ಭಾಷೆಯಲ್ಲಿ ತಾರತಮ್ಯ ಮಾಡಿದರೆ, ನಮ್ಮ (ಹಿಂದೂಗಳ) ನಾಶವಾಗುವುದು, ಆದ್ದರಿಂದ ಏಕತೆ ಅಗತ್ಯವಾಗಿದೆ. ಹಿಂದೂ ಸಮಾಜದ ಏಕತೆ ಸಮಾಜದ ಕಲ್ಯಾಣಕ್ಕಾಗಿ ಇದೆ. ಅದು ಎಲ್ಲರಿಗೂ ಸಂತೋಷವನ್ನು ನೀಡುತ್ತದೆ. ಹಿಂದೂಗಳನ್ನು ವಿಭಜಿಸಲು ಶಕ್ತಿ ಕಾರ್ಯನಿರತವಾಗಿದೆ. ಅವರಿಗೆ ಎಚ್ಚರಿಕೆ ನೀಡುವುದು ಮಹತ್ವದ್ದಾಗಿದೆಯೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಹೇಳಿದ್ದಾರೆ. ಅವರು `ದೀನದಯಾಳ ಉಪಾಧ್ಯಾಯ ಹಸು ವಿಜ್ಞಾನ ಸಂಶೋಧನೆ ಮತ್ತು ತರಬೇತಿ ಕೇಂದ್ರ’ದ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ 2 ದಿನಗಳ ಸಭೆಯ ಸಮಾರೋಪದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಬಟೆಂಗೆ ತೊ ಕಟೆಂಗೆ’ (ವಿಭಜಿಸಲ್ಪಟ್ಟರೆ, ಸಾಯುತ್ತೇವೆ) ಈ ಹೇಳಿಕೆಯ ಸಂದರ್ಭದಲ್ಲಿ ಹೊಸಬಾಳೆಯವರು ಮಾತನಾಡುತ್ತಿದ್ದರು. ‘ಹಿಂದೂ ಸಮಾಜ ಎಂದಿಗೂ ಒಗ್ಗಟ್ಟಾಗಿ ಉಳಿಯದಿದ್ದರೆ, ಇಂದಿನ ಭಾಷೆಯಲ್ಲಿ ‘ಬಟೆಂಗೆ ತೊ ಕಟೇಂಗೆ’ ಎಂಬ ಪರಿಸ್ಥಿತಿ ಬರಬಹುದು’ ಎಂದು ಅವರು ಹೇಳಿದರು.

ಸಹಕಾರ್ಯವಾಹ ಹೊಸಬಾಳೆಯವರು ಮಾತು ಮುಂದುವರಿಸುತ್ತಾ,

1. ಹಿಂದೂಗಳ ಏಕತೆ ಜನಕಲ್ಯಾಣಕ್ಕಾಗಿ ಇರುವುದು. ಅದನ್ನು ಉಳಿಸಿಕೊಳ್ಳಲು ಮತ್ತು ಇತರೆ ಜನರ ಕಲ್ಯಾಣಕ್ಕಾಗಿ ಹಿಂದೂ ಒಗ್ಗಟ್ಟಿನಿಂದ ಇರುವುದು ಆವಶ್ಯಕವಾಗಿದೆ. ಇದನ್ನು ಕೇವಲ ಮಾತನಾಡಿ ಆಗುವುದಿಲ್ಲ, ಬದಲಾಗಿ ಅದಕ್ಕಾಗಿ ಪ್ರಯತ್ನಿಸಬೇಕಾಗುವುದು, ಆಚರಣೆಯಲ್ಲಿ ತರಬೇಕಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.

2. ಅನೇಕ ಸ್ಥಳಗಳಿಂದ ಮತಾಂತರದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶ್ರೀ ದುರ್ಗಾಪೂಜೆ ಮತ್ತು ಶ್ರೀ ಗಣೇಶಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲಾಗಿತ್ತು. ಹಿಂದೂ ಸಮಾಜವು ತನ್ನನ್ನು ರಕ್ಷಿಸಿಕೊಂಡು ಒಗ್ಗಟ್ಟಿನಿಂದ ಇರಬೇಕು.

3. ವಕ್ಫ್ ಕಾನೂನಿಗೆ ಮುಸಲ್ಮಾನರಿಂದಲೂ ವಿರೋಧ !

ಸಂಸತ್ತಿನಲ್ಲಿ ವಕ್ಫ ಕಾನೂನಿನ ಸಂದರ್ಭದಲ್ಲಿ ತಂದಿರುವ ಮಸೂದೆಯ ಮೇಲಿನ ಪ್ರಶ್ನೆಯ ಕುರಿತು ಹೊಸಬಾಳೆ ಇವರು ಮಾತನಾಡಿ, ಬಹಳ ಹಿಂದೆ ರೂಪಿಸಲಾದ ವಕ್ಫ ಅಧಿನಿಯಮದಲ್ಲಿ 2013 ರಲ್ಲಿ ಮಾಡಿದ ತಿದ್ದುಪಡಿಗಳಿಂದಾಗಿ ಭಾರತದಲ್ಲಿಯೇ ಒಂದು ರೀತಿಯಲ್ಲಿ ಸ್ವತಂತ್ರ ಶಾಖೆಯ ಸ್ಥಾಪನೆಯಾಗಿತ್ತು. ಇದರಲ್ಲಿ ಸಮರ್ಥ ಅಧಿಕಾರಿಗೂ ಹಸ್ತಕ್ಷೇಪ ಮಾಡುವ ಅಧಿಕಾರವಿರಲಿಲ್ಲ. ಕೇವಲ ಹಿಂದೂಗಳು ಮಾತ್ರ ಈ ಮಸೂದೆಗೆ ವಿರೋಧಿಸುತ್ತಿಲ್ಲ, ಬದಲಾಗಿ ಮುಸಲ್ಮಾನ ಸಮುದಾಯದ ಬಹಳಷ್ಟು ವ್ಯಕ್ತಿಗಳೂ ಇದನ್ನು ವಿರೋಧಿಸುತ್ತಿದ್ದಾರೆ. ವಕ್ಫ ಮೂಲಕ ಮಾಡಲಾಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯಗಳಿಂದ ಸಮಾಜ ನಲುಗಿದೆ.

4. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ರಕ್ಷಣೆ ಸಿಗಬೇಕು !

ಬಾಂಗ್ಲಾದೇಶಕ್ಕೆ ಸಂಬಂಧಿಸಿದಂತೆ, ಭಾರತ ಸರಕಾರವು ಎಲ್ಲಾ ಸಮಾಜಗಳಿಗೆ ನೆರವು ನೀಡಿದೆ. ಅಲ್ಲಿನ ಹಿಂದೂ ಸಮಾಜವು ಅಲ್ಲಿಯೇ ಉಳಿಯುತ್ತದೆ ಎನ್ನುವುದು ಸಂಘಕ್ಕೆ ವಿಶ್ವಾಸವಿತ್ತು. ಓಡಿ ಹೋಗಬಾರದು, ದೃಢವಾಗಿ ನಿಲ್ಲಬೇಕು. ಅಲ್ಲಿ ಹಿಂದೂಗಳು ಉಳಿಯುತ್ತಿದ್ದರೆ, ಅವರಿಗೆ ರಕ್ಷಣೆ ಸಿಗಬೇಕು. ಬಾಂಗ್ಲಾದೇಶದಲ್ಲಿಯೂ ಸಂಘದ ವಿಚಾರಗಳಿಗೆ ಸಂಬಂಧಿಸಿದ ಜನರು ಪರಸ್ಪರ ಸಹಾಯ ಮಾಡುತ್ತಿದ್ದಾರೆ.

5. ‘ಓಟಿಟಿ’ ಗೂ ಸೆನ್ಸಾರ್ ಬೋರ್ಡ್‌ ಇರಬೇಕು !

ಚಲನಚಿತ್ರಗಳಿಗೆ ಹೇಗೆ ಸೆನ್ಸಾರ್ ಬೋರ್ಡ್‌ ಇದೆಯೋ, ಅದೇ ರೀತಿ `ಓಟಿಟಿ’ಗೂ (ಓಟಿಟಿ ಎಂದರೆ `ಓವರ ದಿ ಟಾಪ್’ ಆಪ್ ಮಾಧ್ಯಮದಿಂದ ಚಲನಚಿತ್ರ, ಮಾಲಿಕೆ ಇತ್ಯಾದಿ ಕಾರ್ಯಕ್ರಮವನ್ನು ನೋಡುವುದು) ಮಸೂದೆ ಜಾರಿಗೊಳಿಸಬೇಕು. ಈ ಬಗ್ಗೆಯೂ ಸರಕಾರ ವಿಚಾರ ಮಾಡಬೇಕು. ಮಕ್ಕಳ ಕೈಯಲ್ಲಿ ಮೊಬೈಲ ಬಂದಿದೆ. ವಿಷಯಗಳು ಮನಸ್ಸನ್ನು ಚಂಚಲಗೊಳಿಸುತ್ತವೆ ಮತ್ತು ಕೆಟ್ಟಚಟಗಳಿಗೆ ಬಲಿಯಾಗುತ್ತಾರೆ. ಈ ಬಗ್ಗಯೂ ಸ್ವಲ್ಪ ನಿಯಂತ್ರಣದ ಅಗತ್ಯವಿದೆ. ಇದರಿಂದ ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ.

6. ಶ್ರೀಕೃಷ್ಣಜನ್ಮಭೂಮಿಯ ಪ್ರಕರಣವನ್ನು ನ್ಯಾಯಾಲಯ ಇತ್ಯರ್ಥಗೊಳಿಸುವುದು !

ಶ್ರೀಕೃಷ್ಣಜನ್ಮಭೂಮಿಯ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯವು ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತದೆ ಎಂದು ನನಗೆ ವಿಶ್ವಾಸವಿದೆ, ಅಯೋಧ್ಯೆ ಸಮಸ್ಯೆ ಬಗೆಹರಿದಿದೆ. ಪ್ರತಿಯೊಂದು ಪ್ರಕರಣವನ್ನು ಒಂದೇ ರೀತಿಯಲ್ಲಿ ನಿಭಾಯಿಸುವುದು ಆವಶ್ಯಕವಲ್ಲ. ನ್ಯಾಯಾಲಯದಲ್ಲಿ ನಂಬಿಕೆ ಇಡಬೇಕು. ಹಿಂದೂ ಸಮಾಜ ಧ್ವನಿ ಎತ್ತುತ್ತಿದೆ, ನಾವು ಅವರೊಂದಿಗೆ ಇದ್ದೇವೆ ಎಂದು ಹೇಳಿದರು.