America Doctors : ಅಮೆರಿಕದಲ್ಲಿ ಹೆಚ್ಚುತ್ತಿರುವ ಕೆಲಸದ ಸಮಯ ಮತ್ತು ‘ಟಾರ್ಗೆಟ್’ನಿಂದ ವೈದ್ಯರು ಸಂಕಷ್ಟದಲ್ಲಿ !

ಕಾರ್ಖಾನೆಯ ಕಾರ್ಮಿಕರಂತೆ ನಡೆಸಿಕೊಳ್ಳುತ್ತಾರೆ !

ವಾಷಿಂಗ್ಟನ (ಅಮೇರಿಕಾ) – ಅಮೇರಿಕಾದಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಲು ಒತ್ತಾಯಿಸುತ್ತಿರುವುದರಿಂದ ಅಲ್ಲಿನ ಅನೇಕ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಯವರು ಹೆಚ್ಚಿನ ಒತ್ತಡದಲ್ಲಿದ್ದಾರೆ. ಅನೇಕ ಜನರು ಆಸ್ಪತ್ರೆಗಳ ನೌಕರಿಯನ್ನು ಬಿಟ್ಟಿರುವುದರಿಂದ ಉಳಿದ ಜನರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಅವರು, ನಾವು ನಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತಿದ್ದೇವೆ. ಇಂತಹುದರಲ್ಲಿಯೇ ಡಾಕ್ಟರರಿಗೆ ಇರುವ ಒತ್ತಡ, ಚಿಂತೆ ಮತ್ತು ಆಯಾಸಗಳ ಕಾರಣದಿಂದ ರೋಗಿಗಳಿಗೆ ಅಪಾಯ ಹೆಚ್ಚಾಗುತ್ತಿದೆ. ಈ ಸಂಪೂರ್ಣ ಪ್ರಕರಣವು ಆರೋಗ್ಯ ಕ್ಷೇತ್ರದಲ್ಲಿನ ಏಕಸ್ವಾಮ್ಯತೆ ಮತ್ತು ಹೆಚ್ಚಿನ ಲಾಭ ಗಳಿಸಲು ಸಂಸ್ಥೆಗಳು ಪ್ರಾರಂಭಿಸಿದ ‘ಕಾರ್ಪೊರೇಟ್ ಕಲ್ಚರ್’ಗೆ ಸಂಬಂಧಿಸಿದೆ. ಹೀಗಾಗಿ ಈಗ ವೈದ್ಯರು ಈ ಸಮಸ್ಯೆಯ ಮೇಲೆ ಈಗ ಕಾನೂನಿನ ನೆರವು ಪಡೆಯಬೇಕಾಗುತ್ತದೆ ಎನ್ನುತ್ತಿದ್ದಾರೆ.

ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ, ಹೆಚ್ಚಿದ ಕೆಲಸದ ಸಮಯ ಮತ್ತು ವಿಭಿನ್ನ ‘ಗುರಿ'(ಟಾರ್ಗೆಟ್) ಗಳ ಕಾರಣದಿಂದ ವೈದ್ಯರು ತುಂಬಾ ಒತ್ತಡಕ್ಕೆ ಒಳಗಾಗಿರುವುದರಿಂದ ಅವರು ಆಡಳಿತ, ಸಂಸ್ಥೆಗಳು ಮತ್ತು ಮಹಾಮಂಡಳಿಗಳ ವಿರುದ್ಧ ಬಂಡಾಯವನ್ನು ಪ್ರಾರಂಭಿಸಿದ್ದಾರೆ. ಪ್ರಾರಂಭದಲ್ಲಿಯೇ, ಯುನಿಯನ್ ಮಾಡಿ ವಿರೋಧ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅನೇಕ ಔಷಧಿ ಅಂಗಡಿಕಾರರು ಮತ್ತು ದಾದಿಯರನ್ನು ವಶಕ್ಕೆ ಪಡೆಯಲಾಗುತ್ತಿದೆ.

ಸಂಪಾದಕರ ನಿಲುವು

* ಆಸ್ಪತ್ರೆಗಳಿಂದ ‘ಕಾರ್ಪೊರೇಟ್ ಕಲ್ಚರ್’ನ ಹೆಸರಿನಡಿಯಲ್ಲಿ ಸಾಧ್ಯವಾದಷ್ಟು ಅಧಿಕ ಲಾಭವನ್ನು ಗಳಿಸಲು ರೋಗಿಗಳನ್ನು ಲೂಟಿಮಾಡುವುದರೊಂದಿಗೆ ವೈದ್ಯರ ಪರಿಸ್ಥಿತಿಯೂ ಅದೇ ರೀತಿ ಇದೆ. ಅಮೇರಿಕಾದ ಈ ಸುದ್ದಿ ಅದರ ಪರಿಣಾಮವಾಗಿದೆಯೆನ್ನುವುದನ್ನು ಗಮನದಲ್ಲಿಡಬೇಕು !

* ಭಾರತದಲ್ಲಿಯೂ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಅದೇ ಪರಿಸ್ಥಿತಿಯಿದೆ. ಇದರ ಮೇಲೆ ಉಪಾಯವನ್ನು ಕಂಡುಕೊಳ್ಳಲು ಸರಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸುವುದು ಅವಶ್ಯಕವಾಗಿದೆ !