ಒಮ್ಮೆ ನಮ್ಮಲ್ಲಿ (ಸೌ. ಭವಾನಿ ಪ್ರಭು ಮತ್ತು ಪೂ. ಭಾರ್ಗವರಾಮ ಇವರಲ್ಲಿ) ನಡೆದ ಸಂವಾದವನ್ನು ಇಲ್ಲಿ ಕೊಡುತ್ತಿದ್ದೇನೆ.
೧. ಪೂ. ಭಾರ್ಗವರಾಮ ಪ್ರಭು ಇವರಿಗೆ ತಮ್ಮ ತಪ್ಪುಗಳ ವಿಷಯದಲ್ಲಿ ಉಂಟಾದ ವಿಷಾದ !
ಪೂ. ಭಾರ್ಗವರಾಮ : ಅಮ್ಮಾ, ನೀನು ನನ್ನ ಜನ್ಮವಾಗುವ ಮೊದಲು ‘ನನಗೆ ಒಳ್ಳೆಯ ಮಗುವನ್ನು ಕೊಡು’, ಎಂದು ದೇವರಿಗೆ ಹೇಳಿದ್ದೀಯಲ್ಲಾ ?
ನಾನು : ಹೌದು, ನಾನು ಹಾಗೆ ದೇವರಿಗೆ ಹೇಳಿದ್ದೆ.
ಪೂ. ಭಾರ್ಗವರಾಮ : ಆದರೂ ನಾನು ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತೇನೆ, ಹೀಗೇಕೆ ಆಗುತ್ತದೆ ? ನೀನಂತೂ ದೇವರಲ್ಲಿ
ಒಳ್ಳೆಯ ಮಗು ಬೇಕೆಂದು ಬೇಡಿಕೊಂಡಿದ್ದೀಯಲ್ಲ ?
ನಾನು : ನಿಮ್ಮಿಂದ ಯಾವಾಗಲಾರದು ತಪ್ಪಾದರೆ, ‘ಅದು ಅಯೋಗ್ಯವಾಗಿದೆ’, ಎಂಬುದು ನಿಮಗೆ ಮೊದಲೇ ತಿಳಿದಿರುವುದಿಲ್ಲ. ನಿಮಗೆ ‘ಹಾಗೆ ಮಾಡುವುದು ಸರಿಯಲ್ಲ’, ಎಂದು ತಿಳಿದ ನಂತರವೂ ನೀವು ಪುನಃ ಅಂತಹ ತಪ್ಪು ಮಾಡಿದರೆ, ಅದು ಸರಿಯಲ್ಲ. ನಾನು ದೇವರಲ್ಲಿ ಒಳ್ಳೆಯ ಮಗು ಬೇಕೆಂದು ಬೇಡಿಕೊಂಡಿದ್ದರಿಂದಲೇ, ಗುರುದೇವರು ನನಗೆ ಒಳ್ಳೆಯ ಮಗುವನ್ನೇ ನೀಡಿದ್ದಾರೆ. ‘ಗುರುದೇವರು ನಮಗೆ ಹೇಳಿದ್ದನ್ನು ನಾವು ಯೋಗ್ಯ ರೀತಿಯಲ್ಲಿಯೇ ಮಾಡಬೇಕು’, ಇದೇ ನಮ್ಮ ಸಾಧನೆಯಾಗಿದೆ.
೨. ಪೂ. ಭಾರ್ಗವರಾಮ ಇವರ ಕಲಿಯುವ ವೃತ್ತಿ !
ಪೂ. ಭಾರ್ಗವರಾಮ : ನೀನು ದೇವರಲ್ಲಿ ಇನ್ನೂ ಏನೇನು ಬೇಡಿಕೊಂಡಿದ್ದೀ ?
ನಾನು : ನಾನು ‘ನನಗೆ ರಾಷ್ಟ್ರ ಮತ್ತು ಧರ್ಮ ಕಾರ್ಯವನ್ನು ಮಾಡುವ ಮಗು ಕೊಡು’, ನೀನೇ ಆ ಮಗುವಿನಿಂದ ಅಖಂಡ ಸೇವೆ ಮತ್ತು ಸಾಧನೆಯನ್ನು ಮಾಡಿಸಿಕೊ’ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೆ.
ಪೂ. ಭಾರ್ಗವರಾಮ : ಎಲ್ಲ ಮಾತೆಯರು ದೇವರಲ್ಲಿ ಹೀಗೆಯೇ ಬೇಡಿಕೊಳ್ಳುತ್ತಾರೆಯೇ ?
ನಾನು : ಎಲ್ಲ ಮಾತೆಯರೂ ತಮ್ಮ ಮಕ್ಕಳಿಗಾಗಿ ಒಳ್ಳೆಯದನ್ನೆ ಬೇಡುತ್ತಾರೆ; ಆದರೆ ‘ಒಳ್ಳೆಯ’ ಎಂಬುದರ ಅರ್ಥ ಪ್ರತಿಯೊಬ್ಬ ತಾಯಿಯ ದೃಷ್ಟಿಯಲ್ಲಿ ಬೇರೆಯಾಗಿರಬಹುದು. ಓರ್ವ ಮಾತೆ ಹೇಳುತ್ತಾಳೆ, ‘ನನ್ನ ಮಗುವನ್ನು ಶಕ್ತಿಶಾಲಿಯನ್ನಾಗಿ ಮಾಡು’, ಇನ್ನೊರ್ವ ಮಾತೆ ಹೇಳುತ್ತಾಳೆ, ‘ನನ್ನ ಮಗುವನ್ನು ಸುಂದರನನ್ನಾಗಿ ಮಾಡು.’ ಇನ್ನೊರ್ವ ಮಾತೆ ಹೇಳುತ್ತಾಳೆ ‘ನನ್ನ ಮಗುವನ್ನು ಬುದ್ಧಿವಂತನನ್ನಾಗಿ ಮಾಡು.’
ಪೂ. ಭಾರ್ಗವರಾಮ : ನನ್ನ ತರಗತಿಯಲ್ಲಿ ಒಬ್ಬ ಕೆಟ್ಟ ಹುಡುಗನಿದ್ದಾನೆ. ಅವನು ಹಾಗೇಕೆ ಇದ್ದಾನೆ ?
ನಾನು : ಅವನು ಹಾಗಿರಲು ಕಾರಣ, ಅವನಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಲು ಕಲಿಸುವವರು ಯಾರೂ ಇಲ್ಲ. ನಿಮಗೆ ಮನೆಯವರೆಲ್ಲರೂ, ಪೂ. ಅಜ್ಜಿ (ಪೂ. (ಶ್ರೀಮತಿ) ರಾಧಾ ಪ್ರಭು, ಸನಾತನದ ೪೪ ನೇ ಸಂತರು) ಮತ್ತು ಸೇವಾಕೇಂದ್ರದ ಸಾಧಕರು ಒಳ್ಳೆಯ ರೀತಿಯಲ್ಲಿ ವರ್ತಿಸಲು ಕಲಿಸುತ್ತಾರೆ. ನಾವು ಒಳ್ಳೆಯ ಕಾರ್ಯವನ್ನು ಮಾಡಿದರೆ, ಮಾತ್ರ ನಾವು ಒಳ್ಳೆಯವರಾಗುತ್ತೇವೆ. ನಾವು ಅಯೋಗ್ಯ ರೀತಿಯಲ್ಲಿ ವರ್ತಿಸಬಾರದು. ನೀವು ಹಾಗೆ ಏಕೆ ಕೇಳುತ್ತಿದ್ದೀರಿ ?
ಪೂ. ಭಾರ್ಗವರಾಮರು ಒಂದು ಕ್ಷಣ ಶಾಂತರಾಗಿದ್ದು ವಿಚಾರ ಮಾಡಿದರು. ನಂತರ ಅವರು ನನಗೆ, ”ನಾನು ಇದನ್ನು ಕಲಿಯಬೇಕಲ್ಲ; ಅದಕ್ಕಾಗಿ ಕೇಳಿದೆ” ಎಂದು ಹೇಳಿದರು.
ನಮ್ಮ ಈ ಸಂವಾದ ನಡೆಯುವ ಮೊದಲು ಪೂ. ಭಾರ್ಗವರಾಮರು ಆಡುತ್ತಿದ್ದರು. ಆಟದ ನಡುವೆಯೇ ನಿಂತು ಅವರು ನನ್ನ ಬಳಿಗೆÉ ಬಂದು ಈ ಎಲ್ಲ ಪ್ರಶ್ನೆಗಳನ್ನು ಕೇಳಿದರು. ಆಗ ನನಗೆ ‘ಪೂ. ಭಾರ್ಗವರಾಮರು ಆಟ ಆಡುವಾಗಲೂ ಬೇರೆಯೇ ಸ್ಥಿತಿಯಲ್ಲಿ ಇರುತ್ತಾರೆ,’ ಎಂಬುದು ತಿಳಿಯಿತು. ಈ ಸಂವಾದದಿಂದ ಪೂ. ಭಾರ್ಗವರಾಮರ ಕಲಿಯುವ ವೃತ್ತಿಯ ಬಗ್ಗೆ ನನಗೆ ಅರಿವಾಯಿತು. ‘ಗುರುದೇವರೇ, ಕೇವಲ ನಿಮ್ಮ ಕೃಪೆಯಿಂದಲೇ ಪೂ. ಭಾರ್ಗವರಾಮರು ಕೇಳುತ್ತಿದ್ದ ಪ್ರಶ್ನೆ ಗಳಿಗೆ ಉವ್ರಿಸÀಲು ನನಗೆ ಸಾಧ್ಯವಾಯಿತು’, ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಸೌ. ಭವಾನಿ ಭರತ ಪ್ರಭು (ಪೂ. ಭಾರ್ಗವರಾಮರ ತಾಯಿ), ಮಂಗಳೂರು (೨೭.೮.೨೦೨೩)