ಸಾಧನೆ ಮಾಡಿ ವಾಸ್ತು ದೋಷಗಳ ಹಾನಿಕರ ಪರಿಣಾಮಗಳನ್ನು ಕಡಿಮೆ ಮಾಡಿ ! – ರಾಜ ಕರ್ವೆ, ಜ್ಯೋತಿಷಿ ವಿಶಾರದ ಮತ್ತು ವಾಸ್ತು ಶಾಸ್ತ್ರ ಚಿಂತಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಅಗರ್ತಲಾದಲ್ಲಿ (ತ್ರಿಪುರಾ) ವಾಸ್ತುಶಾಸ್ತ್ರ ಕುರಿತು ಸಂಶೋಧನೆ ಮಂಡನೆ !

“ಯಾವ ರೀತಿ ವಾಸ್ತುವಿನ ಪರಿಣಾಮವು ವ್ಯಕ್ತಿಯ ಮೇಲಾಗುತ್ತದೆಯೋ ಅದೇ ರೀತಿ ವ್ಯಕ್ತಿಯಿಂದಲೂ ವಾಸ್ತು ವಿನ ಮೇಲೆ ಪ್ರಭಾವವಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯಿಂದ ವಾಸ್ತುವಿನ ಮೇಲೆ ಸಕಾರಾತ್ಮಕ ಪರಿಣಾಮವಾಗೊ ವಾಸ್ತು ದೋಷಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ’ ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷಿ ವಿಶಾರದ ಮತ್ತು ವಾಸ್ತುಶಾಸ್ತ್ರ ಚಿಂತಕ ಶ್ರೀ. ರಾಜ ಕರ್ವೆ ಇವರು ಪ್ರತಿಪಾದಿಸಿದರು. ತ್ರಿಪುರಾದ ಅಗರ್ತಲಾದಲ್ಲಿ ಇತ್ತೀಚೆಗೆ ನಡೆದ ‘ನ್ಯಾಶನಲ್ ಸೆಮಿನಾರ ಆನ್ ಕಾಂಟ್ರಿಬ್ಯೂಶನ್ ಆಫ್ ವಾಸ್ತು ಶಾಸ್ತ್ರ ಇನ್ ಮಾಡರ್ನ ಕಂಟೆಕ್ಸ್ಟ’ ಈ ಪರಿಷತ್ತಿನಲ್ಲಿ ಶ್ರೀ. ರಾಜ ಕರ್ವೆ ಇವರು ಮಾತನಾಡುತ್ತಿದ್ದರು. ಅವರು ‘ವಾಸ್ತುಶಾಸ್ತ್ರದ ಪ್ರಕಾರ ವಾಸ್ತುವನ್ನು ನಿರ್ಮಿಸುವುದರಿಂದಾಗುವ ಪ್ರಯೋಜನಗಳು ಮತ್ತು ವಾಸ್ತು ದೋಷ ನಿವಾರಣೆಗೆ ಸುಲಭವಾದ ಆಧ್ಯಾತ್ಮಿಕ ಪರಿಹಾರಗಳೊಂದಿಗೆ ‘ಸಾಧನೆ ಮಾಡುವ ಮಹತ್ವ !’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಇದರ ಮಾರ್ಗದರ್ಶಕರಾಗಿದ್ದೂ ಶ್ರೀ.ಕರ್ವೆ ಇವರು ಲೇಖಕರಾಗಿದ್ದಾರೆ.

ಶ್ರೀ. ರಾಜ ಕರ್ವೆ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಅಕ್ಟೋಬರ್ 2016 ರಿಂದ ನವೆಂಬರ್ 2023 ರವರೆಗೆ ಒಟ್ಟು 111 ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ, ಇದರಲ್ಲಿ 18 ರಾಷ್ಟ್ರೀಯ ಮತ್ತು 93 ಅಂತರರಾಷ್ಟ್ರೀಯ ಪರಿಷತ್ತುಗಳಿವೆ. ಇವುಗಳಲ್ಲಿ 13 ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ‘ಅತ್ಯುತ್ತಮ ಪ್ರಸ್ತುತಿ’ ಪ್ರಶಸ್ತಿಗಳನ್ನು ಪಡೆದಿದೆ.

ಶ್ರೀ. ರಾಜ ಕರ್ವೆ ಇವರು ಮಾತನಾಡಿ, ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರವೇಶ ದ್ವಾರವು ಸರಿಯಾದ ಸ್ಥಾನದಲ್ಲಿದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ, ಅದೇ ರೀತಿ ಪ್ರವೇಶ ದ್ವಾರವು ನಿಷೇಧಿತ ಸ್ಥಾನದಲ್ಲಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ. ಇದನ್ನು ವೈಜ್ಞಾನಿಕ ಉಪಕರಣಗಳ ಮೂಲಕ ನಡೆಸಿದ ಪ್ರಯೋಗಗಳ ಮೂಲಕವೂ ಕಂಡುಬಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಿಸುವುದು ಮನೆಯಲ್ಲಿ ಸಕಾರಾತ್ಮಕ ಕಂಪನಗಳನ್ನು ಉಂಟುಮಾಡುತ್ತದೆ ಮತ್ತು ವ್ಯಕ್ತಿಗೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಎಂದರು.

ಶ್ರೀ. ರಾಜ ಕರ್ವೆ ಅವರು ಮಾತು ಮುಂದುವರೆಸಿ, ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಿಸುವಾಗ ಮನೆಯಲ್ಲಿ ಸಕಾರಾತ್ಮಕ ಸ್ಪಂದನಗಳು ಬಂದರೂ ಅದನ್ನು ಶಾಶ್ವತವಾಗಿ ಇರಿಸುವುದು ಮನೆಯಲ್ಲಿ ವಾಸಿಸುವ ಜನರ ಆಚರಣೆಯ ಮೇಲೆ ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಸ್ವಭಾವ ದೋಷಗಳು ಮತ್ತು ಅಹಂನ ಪ್ರಮಾಣವು ಜಾಸ್ತಿಯಿದ್ದಲ್ಲಿ ಅವನು / ಅವಳು ಅನುಚಿತವಾಗಿ ವರ್ತಿಸುತ್ತಾರೆ ಮತ್ತು ವಾಸ್ತುದಲ್ಲಿ ನಕಾರಾತ್ಮಕ ಸ್ಪಂದನಗಳು ನಿರ್ಮಾಣವಾಗುತ್ತದೆ, ಅದೇ ರೀತಿ ಒಬ್ಬ ವ್ಯಕ್ತಿಯು ಹೆಚ್ಚು ಉತ್ತಮ ಗುಣಗಳನ್ನು ಹೊಂದಿದ್ದರೆ, ಅವನಿಂದ / ಅವಳಿಂದ ಯೋಗ್ಯ ಆಚರಣೆಯಾಗಿ ವಾಸ್ತುದಲ್ಲಿ ಸಕಾರಾತ್ಮಕ ಸ್ಪಂದನಗಳು ನಿರ್ಮಾಣವಾಗುತ್ತದೆ. ಸಾಧನೆಯಿಂದ ವ್ಯಕ್ತಿಯಲ್ಲಿನ ಸ್ವಭಾವ ದೋಷಗಳು ಮತ್ತು ಅಹಂಕಾರಗಳು ಕಡಿಮೆಯಾಗಿ ಸದ್ಗುಣಗಳು ಹೆಚ್ಚಾಗುತ್ತವೆ ಮತ್ತು ವ್ಯಕ್ತಿಯಲ್ಲಿ ರಜ ಮತ್ತು ತಮ ಗುಣಗಳು ಕಡಿಮೆಯಾಗುತ್ತವೆ ಮತ್ತು ಸತ್ವಗುಣವು ಹೆಚ್ಚಾಗುತ್ತದೆ. ವಾಸ್ತುವಿನ ಮೇಲೆ ಈ ಮಂಗಳಕರ ಪರಿಣಾಮವು ಸಕಾರಾತ್ಮಕ (ಸಾತ್ವಿಕ) ಆಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಸಂತರ ವಾಸ್ತು ! ಸಂತರು ಸಾಧನೆ ಮಾಡುತ್ತಿರುವುದರಿಂದ ಅವರು ನೆಲೆಸಿರುವ ವಾಸ್ತು ಸಾತ್ವಿಕವಾಗುತ್ತದೆ. ಆದ್ದರಿಂದ ಭಾರತದಲ್ಲಿ ಸಂತರ ಜನ್ಮಸ್ಥಳ, ನಿವಾಸ, ಸಂತರು ಬಳಸುವ ವಸ್ತುಗಳು ಇತ್ಯಾದಿಗಳನ್ನು ಸಂರಕ್ಷಿಸುವ ಸಂಪ್ರದಾಯವಿದೆ. ಈ ನಿಟ್ಟಿನಲ್ಲಿ ಸಂಶೋಧನೆಯನ್ನೂ ಮಂಡಿಸಲಾಗಿದೆ’ ಎಂದರು.