ಹಿಂದೂಗಳ ಸಂಘಟಿತ ಶಕ್ತಿಯ ಪರಿಣಾಮವನ್ನು ತಿಳಿಯಿರಿ  !

೧. ಇಂತಹ ಹಿಂದೂದ್ರೋಹಿಗಳ ವಿರುದ್ಧ ಸರಕಾರ ಯಾವಾಗ ಕ್ರಮ ಕೈಗೊಳ್ಳುವುದು ?

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರು, ಇಂದಿನ ತನಕ ೪ ಕೈಗಳ ಮಗುವೇ ಹುಟ್ಟದಿರುವಾಗ ೪ ಕೈಗಳ ಲಕ್ಷ್ಮೀ (ದೇವಿ) ಹೇಗೆ ಜನ್ಮ ತಾಳಬಹುದು ?’ ಎಂದು ಟ್ವೀಟ್‌ ಮಾಡಿದ್ದಾರೆ.

೨. ಹಿಂದೂಗಳ ಸಂಘಟಿತ ಶಕ್ತಿಯ ಪರಿಣಾಮವನ್ನು ತಿಳಿಯಿರಿ  !

ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ, ಹಿಂದೂಗಳ ಹಬ್ಬದಲ್ಲಿ ಆಭರಣಗಳ ಜಾಹೀರಾತು ಮಾಡಿದರೂ ಕುಂಕುಮ ಹಚ್ಚದ ಮಹಿಳೆಯರನ್ನು ತೋರಿಸುವ ಅನೇಕ ಒಡವೆ ವ್ಯಾಪಾರಿಗಳು ಈ ವರ್ಷ ಸುಧಾರಣೆಗಳನ್ನು ಮಾಡುತ್ತಿದ್ದಾರೆ ಮತ್ತು ದೀಪಾವಳಿ ನಿಮಿತ್ತ ಮಾಡಿದ ಆಭರಣಗಳ ಜಾಹೀರಾತುಗಳಲ್ಲಿ ಹಿಂದೂ ಸಂಸ್ಕೃತಿಯಂತೆ ಮಹಿಳೆಯರನ್ನು ಕುಂಕುಮ ಸಹಿತ ತೋರಿಸುತ್ತಿದ್ದಾರೆ.

೩. ಬಾಂಗ್ಲಾದೇಶದ ಹಿಂದೂಗಳ ರಕ್ಷಕರು ಯಾರು ?

ಬಾಂಗ್ಲಾದೇಶದಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚಾಗ ತೊಡಗಿವೆ. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಲಾಗುತ್ತಿದ್ದು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ ಮತ್ತು ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಆದ್ದರಿಂದ ಕೆಲವೆಡೆ ಹಿಂದೂಗಳು ಪಲಾಯನ ಮಾಡಲಾರಂಭಿಸಿದ್ದಾರೆ.

೪. ಭಾರತೀಯರ ಒಗ್ಗಟ್ಟಿನ ಪ್ರಯತ್ನದ ಉತ್ತಮ ಪರಿಣಾಮ !

‘ಕಾನ್ಫೆಡರೇಶನ್‌ ಆಫ್‌ ಆಲ್‌ ಇಂಡಿಯಾ ಟ್ರೇಡರ್ಸ’  (ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ) ಕಾರ್ಯದರ್ಶಿ  ಪ್ರವೀಣ ಖಂಡೇಲ್ವಾಲ್‌ ಅವರು, ‘ಚೀನಾಗೆ ಈ ಬಾರಿ ದೀಪಾವಳಿಯ ಅವಧಿಯಲ್ಲಿ ವ್ಯವಹಾರದಲ್ಲಿ ೧ ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ’, ಎಂದು ತಿಳಿಸಿದ್ದಾರೆ.

೫. ಹಿಂದೂಗಳ ದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

ಜಾರ್ಖಂಡದ ಮಂಡಾರದಲ್ಲಿ ಹಿಂದೂಗಳ ನಾಲ್ಕು ದೇವಸ್ಥಾನಗಳಲ್ಲಿ ವಿಧ್ವಂಸಕ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಛನಲ್ಲಿರುವ  ಶಿವಮಂದಿರದಲ್ಲಿ ಭಯೋತ್ಪಾದಕರು ಬಾಂಬ್‌ ಸ್ಫೋಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸರಕಾರಿ ಶಿಕ್ಷಕ ಅಬ್ದುಲ್‌ ರಶೀದ್‌  ಸೇರಿದಂತೆ ಮೆಹರಾಜ್‌ ಅಹ್ಮದ್‌ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ.

೬. ಇಡೀ ದೇಶದಲ್ಲಿ ಹಲಾಲ್‌ ಪ್ರಮಾಣಪತ್ರದ ವಿರುದ್ಧ ಇಂತಹ ಕ್ರಮ ತೆಗೆದುಕೊಳ್ಳಬೇಕು !

ಹಲಾಲ್‌ ಪ್ರಮಾಣಪತ್ರದ ವಿರುದ್ಧ ದೂರು ಸ್ವೀಕರಿಸಿದ ನಂತರ ಉತ್ತರ ಪ್ರದೇಶ ಸರಕಾರವು ಹಲಾಲ್‌ ಪ್ರಮಾಣಪತ್ರಗಳನ್ನು ನೀಡುವ ಇಸ್ಲಾಮಿಕ್‌ ಸಂಘಟನೆಗಳ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ಈಗ ಹಲಾಲ್‌ ಪ್ರಮಾಣಪತ್ರವಿರುವ ಉತ್ಪನ್ನಗಳ ಉತ್ಪಾದನೆ, ಸಂಗ್ರಹ, ವಿತರಣೆ ಮತ್ತು ಮಾರಾಟಗಳನ್ನು ನಿಷೇಧಿಸಿದೆ.

೭. ಗಾಂಧಿವಾದಿ ಕಾಂಗ್ರೆಸ್ಸಿಗರ ಹಿಂಸಾತ್ಮಕ ವರ್ತನೆಯನ್ನು ತಿಳಿಯಿರಿ  

ಕೇರಳದ ಕಾಂಗ್ರೆಸ್‌ ಸಂಸದ ರಾಜಮೋಹನ್‌ ಉನ್ನೀತನ್‌ ಅವರು ಪ್ಯಾಲೆಸ್ಟೈನ್‌ ಬೆಂಬಲದ ಮೆರವಣಿಗೆಯಲ್ಲಿ ‘ಇಸ್ರೈಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸದೇ ಗುಂಡಿಕ್ಕಿ ಕೊಲ್ಲಬೇಕು’ ಎಂದು ಹೇಳಿಕೆ ನೀಡಿದ್ದರು.