ಒಂದು ಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾರ್ಗದರ್ಶನ ಮಾಡಿ ಅವರ ಸಾಧನೆಯಲ್ಲಿನ ಸಂದೇಹ ನಿವಾರಣೆ ಮಾಡಿದರು, ಆ ಮಾರ್ಗದರ್ಶನದಲ್ಲಿನ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇವೆ.
೧. ಸ್ವಭಾವದೋಷ ಮತ್ತು ಅಹಂನಿರ್ಮೂಲನೆಯ ಪ್ರಕ್ರಿಯೆಯಿಂದ ಸಾಧಕಿಯ ವಿಚಾರಗಳಲ್ಲಾದ ಸಕಾರಾತ್ಮಕ ಬದಲಾವಣೆ ಕು. ಮಯೂರಿ ಆಗಾವಣೆ : ಈ ಮೊದಲು ನನ್ನ ಮನಸ್ಸಿನಲ್ಲಿ ಕೆಲವು ವಿಕಲ್ಪ ಮತ್ತು ಪ್ರತಿಕ್ರಿಯೆಗಳು ಬರುತ್ತಿದ್ದವು. ನನ್ನ ಮನಸ್ಸಿನಲ್ಲಿ ವಿಚಾರಗಳ ಪ್ರಮಾಣ ಬಹಳವಿದ್ದುದರಿಂದ ಅದು ನನ್ನ ಗಮನಕ್ಕೆ ಬರುತ್ತಿರಲಿಲ್ಲ; ಆದರೆ ಈಗ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯಿಂದ ಅದು ನನ್ನ ಗಮನಕ್ಕೆ ಬರುತ್ತಿದೆ. ಈಗ ನನ್ನ ಮನಸ್ಸಿನಲ್ಲಿ ‘ಇದಕ್ಕಾಗಿ ನಾನು ಪ್ರಯತ್ನಿಸಬೇಕು’, ಎಂಬ ವಿಚಾರಗಳು ಬರುತ್ತವೆ.
ಪರಾತ್ಪರ ಗುರು ಡಾ. ಆಠವಲೆ : ತುಂಬಾ ಚೆನ್ನಾಗಿದೆ !
ಕು. ಮಯೂರಿ ಆಗಾವಣೆ : ಈ ಮೊದಲು ನನ್ನಲ್ಲಿ ನಕಾರಾತ್ಮಕತೆಯು ಬಹಳ ಹೆಚ್ಚು ಪ್ರಮಾಣದಲ್ಲಿತ್ತು ಮತ್ತು ಅದರಿಂದ ಹೊರಗೆ ಬರಲು ನನ್ನಿಂದ ಪ್ರಯತ್ನಗಳಾಗುತ್ತಿರಲಿಲ್ಲ; ಆದರೆ ಈಗ ತೇಜಲಾಕ್ಕ (ಸುಶ್ರೀ (ಕು.) ತೇಜಲ ಪಾತ್ರಿಕರ. ಆಧ್ಯಾತ್ಮಿಕ ಮಟ್ಟ ಶೇ. ೬೧ (ಸಂಗೀತ ವಿಶಾರದ, ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ)) ನನಗೆ ಮತ್ತು ಸಂಗೀತ ವಿಭಾಗದವರೆಲ್ಲರಿಗೂ ಚೆನ್ನಾಗಿ ಮಾರ್ಗದರ್ಶನ ಮಾಡುತ್ತಾಳೆ. ಸೌ. ಸುಪ್ರಿಯಾಅಕ್ಕನಿಂದ (ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಸಾಧಕಿ ಸೌ. ಸುಪ್ರಿಯಾ ಮಾಥೂರ (ಆಧ್ಯಾತ್ಮಿಕ ಮಟ್ಟ ಶೇ. ೬೭) ಇವರಿಂದಲೂ) ನನಗೆ ಸಹಾಯವಾಗುತ್ತಿದೆ. ನನ್ನಲ್ಲಿನ ಸಕಾರಾತ್ಮಕತೆ ಹೆಚ್ಚಾಗಿದೆ ಮತ್ತು ಅದನ್ನು ನಾನು ಅನುಭವಿಸಲು ಸಾಧ್ಯವಾಗುತ್ತಿದೆ.
೨. ಹೇಳಿದಂತೆ ಮಾಡುವುದರಿಂದ ಮನೋಲಯ ಮತ್ತು ಬುದ್ಧಿಲಯವಾಗುತ್ತದೆ !
ಕು. ಮಯೂರಿ ಆಗಾವಣೆ : ನನಗೆ ಸ್ವಲ್ಪ ಮಾನಸಿಕ ವಿಚಾರಗಳ ತೊಂದರೆಯಿದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯಿಂದ ನನ್ನ ಮನಸ್ಸಿನಲ್ಲಿ, ‘ಈ ವಿಚಾರಗಳಲ್ಲಿ ಸಿಲುಕದೇ ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ಹೇಳಿರುವುದನ್ನೇ ಮಾಡಬೇಕಾಗಿದೆ ಮತ್ತು ನನಗೆ ಹೇಳಿದಂತಹ ಇತರ ಪ್ರಯತ್ನಗಳನ್ನು ಮಾಡಬೇಕಾಗಿದೆ.’ ಎಂಬ ವಿಚಾರ ಬಂದಿತು.
ಪರಾತ್ಪರ ಗುರು ಡಾ. ಆಠವಲೆ : ‘ಹೇಳಿರುವುದನ್ನು ಮಾಡಬೇಕಾಗಿದೆ’, ಎಂಬುದು ಮಹತ್ವದ್ದಾಗಿದೆ. ಆದ್ದರಿಂದ ನಮ್ಮ ಬುದ್ಧಿ ಮತ್ತು ಮನಸ್ಸು ನಾಶವಾಗುತ್ತದೆ. ಇದನ್ನೇ ನಾವು ‘ಮನೋಲಯ ಮತ್ತು ಬುದ್ಧಿಲಯ’ ಎಂದು ಹೇಳುತ್ತೇವೆ ಅಲ್ಲವೇ ! ಕೇವಲ ಭಗವಂತನ ಮನಸ್ಸು ಮತ್ತು ಬುದ್ಧಿ, ಅಂದರೆ ಭಗವಂತನ ವಿಚಾರಗಳನ್ನು ಗ್ರಹಿಸಲು ನಮಗೆ ಸಾಧ್ಯವಾಗುತ್ತದೆ.
೧. ಕೆಟ್ಟ ಶಕ್ತಿಯ ತೊಂದರೆಯಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದರೆ, ನಾಮಜಪವನ್ನು ಮಾಡಬೇಕು !
ಕು. ಮಿಲ್ಕಿ ಅಗ್ರವಾಲ : ಕೆಲವೊಮ್ಮೆ ನನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ನಕಾರಾತ್ಮಕ ವಿಚಾರ ಗಳು ಬರುತ್ತವೆ, ‘ನನ್ನಿಂದ ಏನು ಆಗಲಿಕ್ಕಿಲ್ಲ. ನನ್ನಲ್ಲಿನ ಸ್ವಭಾವದೋಷ ಮತ್ತು ಅಹಂ ಹೋಗುವುದೇ ಇಲ್ಲ.’ ಈ ವಿಚಾರಗಳು ನನ್ನ ಮನಸ್ಸಿನಲ್ಲಿ ತುಂಬಾ ತೀವ್ರವಾಗಿ ಬರುತ್ತವೆ. ಕೆಲವೊಮ್ಮೆ ನನಗೆ ಅಳು ಬರುತ್ತದೆ. ನನಗೆ ಅದರಿಂದ ತುಂಬಾ ಒತ್ತಡ ಬರುತ್ತದೆ. ಈ ಕುರಿತು ನಾನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರೊಂದಿಗೂ ಮಾತನಾಡಿದೆ, ಆದರೂ ಕೆಲವೊಮ್ಮೆ ನನ್ನ ಮನಸ್ಸಿನಲ್ಲಿ ಈ ವಿಚಾರಗಳು ತುಂಬಾ ತೀವ್ರವಾಗಿ ಬರುತ್ತವೆ. ‘ಇವು ನನ್ನ ವಿಚಾರಗಳೋ ಅಥವಾ ಕೆಟ್ಟ ಶಕ್ತಿಯ ವಿಚಾರಗಳೋ ?’, ಎಂಬುದು ನನ್ನ ಗಮನಕ್ಕೆ ಬರುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ನಿಮಗೆ ಕೆಟ್ಟ ಶಕ್ತಿಯ ತೊಂದರೆಯಿದೆಯೇ ?
ಕು. ಮಿಲ್ಕಿ ಅಗ್ರವಾಲ : ಮಧ್ಯಮ ತೊಂದರೆಯಿದೆ.
ಪರಾತ್ಪರ ಗುರು ಡಾ. ಆಠವಲೆ : ಕೆಟ್ಟ ಶಕ್ತಿಯ ತೊಂದರೆಗಳಿಗೆ, ‘ನಾಮಜಪವೇ’, ಪರಿಹಾರೋಪಾಯವಾಗಿದೆ; ಆಗಲೇ ಕೆಟ್ಟ ಶಕ್ತಿಯ ತೀವ್ರತೆ ಕಡಿಮೆಯಾಗುತ್ತದೆ. ನಂತರ ಇಂತಹ ವಿಚಾರಗಳು ನಿಂತುಹೋಗುತ್ತವೆ.
೨. ಮನಸ್ಸಿನಲ್ಲಿ ಅಯೋಗ್ಯ ವಿಚಾರಗಳು ಬಂದನಂತರ ‘ಇ ೨ (ಕ)’ ಈ ಸ್ವಯಂಸೂಚನೆಯ ಪದ್ಧತಿಗನುಸಾರ ತನ್ನನ್ನು ತಾನೆ ಅನೇಕ ಬಾರಿ ಚಿವುಟಿಕೊಳ್ಳುವುದರಿಂದ ಮನಸ್ಸಿನಲ್ಲಿ ಬರುವ ವಿಚಾರಗಳು ಕಡಿಮೆಯಾಗುತ್ತವೆ !
ಪರಾತ್ಪರ ಗುರು ಡಾ. ಆಠವಲೆ : ಇದು ನಮ್ಮ ಮನಸ್ಸಿನ, ಅಂದರೆ ಮಾನಸಿಕ ಮಟ್ಟದ (ಸೈಕೋಲಾಜಿಕಲ್ ಮಟ್ಟದ) ತೊಂದರೆಯಾಗಿದ್ದಲ್ಲಿ, ಮನಸ್ಸಿನಲ್ಲಿ ಬರುವ ವಿಚಾರಗಳನ್ನು ತಖ್ತೆಯಲ್ಲಿ ಬರೆಯಬೇಕು. ಈ ವಿಚಾರಗಳು ಕಡಿಮೆಯಾಗಲು ‘ಇ ೨ (ಕ)’ (ಟಿಪ್ಪಣಿ) ಎಂಬಸ್ವಯಂಸೂಚನೆ ಪದ್ಧತಿಯಿದೆ. ತಕ್ಷಣ ಪರಿಣಾಮ ಬೀರಲು ತನ್ನನ್ನು ತಾನೇ ಚಿವುಟಿಕೊಳ್ಳ ಬೇಕು (ಪಿಂಚಿಂಗ್).
ಟಿಪ್ಪಣಿ – ಸ್ವಯಂಸೂಚನೆ ಪದ್ಧತಿ ‘ಇ ೨ (ಕ)’ : ಸ್ವಭಾವದೋಷಗಳು ವ್ಯಕ್ತವಾದೊಡನೆ ತನ್ನನ್ನು ತಾನೇ ಶಿಕ್ಷಿಸಿಕೊಳ್ಳುವುದು. ಇದರಿಂದ ಮನಸ್ಸಿಗೆ ಅಯೋಗ್ಯ ವಿಚಾರಗಳ ಅರಿವಾಗುತ್ತದೆ ಮತ್ತು ಕ್ರಮೇಣ ಮನಸ್ಸಿನಲ್ಲಿ ಅಯೋಗ್ಯ ವಿಚಾರಗಳು ಬರುವುದು ಕಡಿಮೆಯಾಗುತ್ತದೆ.
ಕು. ಮಿಲ್ಕಿ ಅಗ್ರವಾಲ : ಆ ಸಮಯದಲ್ಲಿ ಆ ವಿಚಾರಗಳು ಎಷ್ಟೊಂದು ಪ್ರಬಲವಾಗಿರುತ್ತವೆ, ಎಂದರೆ ನನಗೆ ‘ಇದೇ ಯೋಗ್ಯವಾಗಿದೆ, ಹೀಗೆಯೇ ಆಗಲಿದೆ.’ ಎಂದು ಅನಿಸುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ಯಾವಾಗ ಇಂತಹ ವಿಚಾರಗಳು ಮನಸ್ಸಿನಲ್ಲಿ ಬರುತ್ತವೆಯೋ, ಆಗ ಅವುಗಳನ್ನು ಹೋಗಲಾಡಿಸಲು ಚಿವುಟಿಕೊಳ್ಳುವಾಗ ನೋವಾಗುತ್ತದೆ. ಆದ್ದರಿಂದ ಆ ವಿಚಾರಗಳು ಇನ್ನೊಮ್ಮೆ ಮನಸ್ಸಿನಲ್ಲಿ ಬರುವುದೇ ಇಲ್ಲ.
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |