‘ಎಪ್ರಿಲ್ ೧೯೯೭ ರಲ್ಲಿ ‘ನಾಮಜಪದ ೪ ವಾಣಿಗಳಿಗೆ ಸಂಬಂಧಿಸಿದಂತೆ ಅಭ್ಯಾಸವರ್ಗವನ್ನು ತೆಗೆದುಕೊಳ್ಳಬೇಕು’, ಎಂದು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಸಂದೇಶ ನನಗೆ ಸಿಕ್ಕಿತು. ಆಗ ನನಗೆ ನಾಮಜಪದ ವಾಣಿಯ ವೈಖರಿ, ಮಧ್ಯಮಾ, ಪಶ್ಯಂತಿ ಮತ್ತು ಪರಾ ಈ ೪ ಪ್ರಕಾರಗಳು ಗೊತ್ತಿವೆ. ಇದನ್ನು ಬಿಟ್ಟರೆ ನನಗೆ ಬೇರೆ ಯಾವುದೇ ಮಾಹಿತಿ ಇಲ್ಲ ಮತ್ತು ಇಷ್ಟು ಮಾಹಿತಿ ಅಭ್ಯಾಸವರ್ಗ ತೆಗೆದುಕೊಳ್ಳಲು ಸಾಕಾಗುವುದಿಲ್ಲ, ಎಂದು ಅನಿಸಿತು. ಆದುದರಿಂದ ಮೊದಲು ನಾನು ಅಭ್ಯಾಸವರ್ಗವನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಆಗ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನನಗೆ ಪುನಃ, ‘ಈ ಅಭ್ಯಾಸವರ್ಗವನ್ನು ನೀವೇ ತೆಗೆದುಕೊಳ್ಳಬೇಕು’, ಎಂಬ ಸಂದೇಶ ಬಂದಿತು. ಆದುದರಿಂದ ಅವರ ಈ ಇಚ್ಛೆಯನ್ನು ಆಜ್ಞೆಯೆಂದು ತಿಳಿದು ನಾನು ಅಭ್ಯಾಸವರ್ಗವನ್ನು ತೆಗೆದುಕೊಳ್ಳಲು ನಿಶ್ಚಯಿಸಿದೆ. ಆ ಸಮಯದಲ್ಲಿ ನಾನು ಒಂದು ಜಿಲ್ಲೆಯ ಒಂದು ಆಸ್ಪತ್ರೆಯಲ್ಲಿ ರೋಗಿಗಳನ್ನು ಪರೀಕ್ಷಿಸಲು ಕುಳಿತುಕೊಳ್ಳುತ್ತಿದ್ದೆ. ನನ್ನ ‘ಕನ್ಸಲ್ಟೆಶನ್’ ಕೋಣೆಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರವನ್ನು ಹಾಕಲಾಗಿತ್ತು. ಅಲ್ಲಿ ಕುಳಿತಿರುವಾಗ ನಾನು ಅವರೊಂದಿಗೆ ಮಾತನಾಡತೊಡಗಿದೆ. ನಾನು ತಕರಾರು ಮಾಡುವ ಸ್ವರದಲ್ಲಿ ಅವರಿಗೆ, ”ನೀವು ನಾಮಜಪದ ಬಗ್ಗೆ ಕೇವಲ ೪ ಶಬ್ದಗಳನ್ನು ಹೇಳಿರುವಿರಿ. ಇಷ್ಟೇ ಮಾಹಿತಿಯ ಮೇಲೆ ಅಭ್ಯಾಸವರ್ಗವನ್ನು ಹೇಗೆ ತೆಗೆದುಕೊಳ್ಳುವುದು ?” ಎಂದು ಕೇಳಿದೆನು. ಆ ಸಮಯದಲ್ಲಿ ನನಗೆ ನಾನು ಡಾಕ್ಟರ್ ಆಗಿದ್ದೇನೆ ಎಂಬುದರ ಬಹಳ ಅಹಂಕಾರವಿತ್ತು. ಆದುದರಿಂದ ‘ನಾಮಜಪದ ವಾಣಿ ಮತ್ತು ಅದರ ಮಹತ್ವವನ್ನು ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರಕ್ಕಸಾರ ಎಲ್ಲರಿಗೂ ತಿಳಿಸಿಹೇಳಲು ಬಂದರೆ ಮಾತ್ರ, ಅದು ಎಲ್ಲರಿಗೂ ತಿಳಿಯುತ್ತದೆ’, ಎಂದು ನನಗೆ ಅನಿಸಿತ್ತು. ಹಿಂದಿನ (೨೫/೧೦ ನೇ) ಸಂಚಿಕೆಯಲ್ಲಿ ಮುದ್ರಣವಾದ ಲೇಖನದಲ್ಲಿ ನಾವು ‘ಅಧ್ಯಾತ್ಮಶಾಸ್ತ್ರಕ್ಕನುಸಾರ ಮನುಷ್ಯನ ದೇಹ ಮತ್ತು ಅವನ ನಾಮಜಪದ ವಾಣಿ’, ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಂಡೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.
ಭಾಗ – ೩
೬. ವಿಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ನಾಮಜಪದಿಂದ ಆಗುವ ಚಿತ್ತಶುದ್ಧಿಯ ಪ್ರಕ್ರಿಯೆ (ಸಾಧನೆಯ ಮೂಲಕ ಆಗುವ ಆನಂದಪ್ರಾಪ್ತಿಯ ವಿಜ್ಞಾನ)
೬ ಅ. ಕಿವಿ ಈ ಜ್ಞಾನೇಂದ್ರಿಯವು – ಧ್ವನಿಯನ್ನು ಪ್ರಕಾಶದಲ್ಲಿ ರೂಪಾಂತರಿಸುವ ಯಂತ್ರ : ಅನಂತರ ನಾನು ಜ್ಞಾನ ಶ್ರುತಿ ಸ್ವರೂಪದಲ್ಲಿ ಹೇಳುವ ಆ ದಿವ್ಯ ವಿಭೂತಿಯ ಬಳಿ, ‘ನಾಮಜಪ ಸಾಧನೆ, ಆಧುನಿಕ ವಿಜ್ಞಾನ, ಆಧುನಿಕ ವೈದ್ಯಕೀಯ ಶಾಸ್ತ್ರ ಇವುಗಳ ಮನುಷ್ಯನ ಆರೋಗ್ಯ ಮತ್ತು ಮೋಕ್ಷಪ್ರಾಪ್ತಿ ಇವುಗಳ ನಡುವಿನ ಸಂಬಂಧವೇನು ?’, ಎಂದು ಕೇಳಿದೆನು. ಆಗ ಅವರು ”ಗಡಿಬಿಡಿ ಏಕೆ ಮಾಡುವೆ, ಎಲ್ಲವನ್ನೂ ಹೇಳುವೆನು”, ಎಂದು ಹೇಳಿ ಮಾತನ್ನು ಮುಂದುವರಿಸಿದರು. ಅವರು ನನಗೆ, ”ನೀನು ಕಿವಿ-ಮೂಗು-ಗಂಟಲು ತಜ್ಞ ನಲ್ಲವೇ ? ನೀನು ಶರೀರದ ಕ್ರಿಯೆ-ವಿಜ್ಞಾನವನ್ನು (nerves) ಕಲಿತಿರುವೆ ಅಲ್ಲವೇ ? ಹಾಗಾದರೆ ಹೇಳು, ‘ಮನುಷ್ಯನು ನಾದವನ್ನು ಕೇಳುತ್ತಾನೆಯೋ ಅಥವಾ ಪ್ರಕಾಶವನ್ನು ?’ ಎಂದಾಗ ನಾನು ಕೂಡಲೇ ”ಮನುಷ್ಯನು ನಾದವನ್ನು ಕೇಳುತ್ತಾನೆ”, ಎಂದು ಹೇಳಿದೆನು. ಅದಕ್ಕೆ ಅವರು, ‘ಮನುಷ್ಯನು ನಾದವನ್ನು ಕೇಳುತ್ತಾನೆ, ಎಂಬುದು ಭ್ರಮೆಯಾಗಿದೆ. ಮನುಷ್ಯನು ಎಲ್ಲವನ್ನು ಪ್ರಕಾಶ ಭಾಷೆಯಲ್ಲಿ ಕೇಳುತ್ತಾನೆ. ಭಗವಂತನು ನಮ್ಮ ಶರೀರದಲ್ಲಿ ಕಿವಿ ಎಂಬ ಹೆಸರಿನ ಒಂದು ಯಂತ್ರವನ್ನು ನೀಡಿದ್ದಾನೆ. ಈ ಯಂತ್ರವು ಹೊರಗಿನಿಂದ ಬರುವ ಧ್ವನಿಯನ್ನು ಕಿವಿಯ ಪರದೆಯ ಮೇಲೆ ಅಪ್ಪಳಿಸಿದಾಗ ಅದು ಕಿವಿಗಳಲ್ಲಿನ ಮೂಳೆಗಳ ಮೂಲಕ ಪ್ರವಾಸ ಮಾಡುತ್ತಾ ಅದು ನಂತರ ಒಳಗಿನ ಕಿವಿಯಲ್ಲಿನ ದ್ರವದಲ್ಲಿ ಕಂಪನಗಳನ್ನು ಉತ್ಪನ್ನ ಮಾಡಿ ವಿದ್ಯುತ್ ಲಹರಿಗಳಲ್ಲಿ ಪ್ರತಿಫಲಿಸುತ್ತದೆ. ಈ ವಿದ್ಯುತ್ ಲಹರಿಗಳೆಂದರೇನೇ ಪ್ರಕಾಶಸ್ವರೂಪ ಧ್ವನಿಯಾಗಿದೆ ! ಈ ಪ್ರಕಾಶರೂಪಿ ಧ್ವನಿಯನ್ನು ಆತ್ಮವು ಮೆದುಳಿನ ಮೂಲಕ ಗ್ರಹಿಸುತ್ತದೆ. ಮೆದುಳಿನಲ್ಲಿ ಈ ಜನ್ಮಕ್ಕಾಗಿ, ಈ ಯೋನಿಗಾಗಿ ಆವಶ್ಯಕವಿರುವ ಜ್ಞಾನವು ಸಂಗ್ರಹವಾಗಿರುತ್ತದೆ. ಅದರ ಆಧಾರದಲ್ಲಿ ಆತ್ಮವು ಬಾಹ್ಯ ಜಗತ್ತಿನ ಈ ಸಂದೇಶಗಳನ್ನು ಗ್ರಹಣ ಮಾಡುತ್ತದೆ ಮತ್ತು ಮೆದುಳಿನ ಮೂಲಕ ಇತರ ‘ನರಗಳ'(ಟಿಎಡಿವೆಸ್) ಮೂಲಕ ಆವಶ್ಯಕವಾಗಿರುವ ಪ್ರತಿಕ್ರಿಯೆ ಯನ್ನು ನೀಡುತ್ತದೆ. ಈ ರೀತಿ ಎಲ್ಲ ಜ್ಞಾನೇಂದ್ರಿಯಗಳಿಂದ ಬೇರೆ ಬೇರೆ ಯಾಂತ್ರಿಕ ಕಾರ್ಯಗಳು ನಡೆಯುತ್ತವೆ. ಗಂಧ, ರಸ, ರೂಪ ಮತ್ತು ಸ್ಪರ್ಶ ಇವುಗಳ ಸಂದರ್ಭ ದಲ್ಲಿಯೂ ಇದೇ ರೀತಿ ಇದೆ. ಈ ಸಂವೇದನೆಗಳು ಅನುಕ್ರಮವಾಗಿ ಮೂಗು, ನಾಲಿಗೆ, ಕಣ್ಣು ಮತ್ತು ಚರ್ಮ ಇವುಗಳ ಮೂಲಕ ಮೊದಲು ಸ್ಥೂಲ ರೂಪದಲ್ಲಿ ಗ್ರಹಿಸುತ್ತವೆ. ನರತಂತುಗಳ ಮೂಲಕ ಅವು ವಿದ್ಯುತ್ ಲಹರಿಗಳಲ್ಲಿ ಪ್ರತಿಫಲನಗೊಳ್ಳುತ್ತವೆ. ಆತ್ಮವು ಮೆದುಳಿನ ಮೂಲಕ ಅವು ಗಳನ್ನು ಪ್ರಕಾಶ ಸ್ವರೂಪದಲ್ಲಿ ಗ್ರಹಣ ಮಾಡುತ್ತದೆ ಮತ್ತು ಸಂವೇದನೆಗಳನ್ನು ತಿಳಿದುಕೊಳ್ಳುತ್ತದೆ. ಯಾವುದಾದರೊಂದು ಜ್ಞಾನೇಂದ್ರಿಯ ಅಥವಾ ಅದಕ್ಕೆ ಸಂಬಂಧಿಸಿದ ನರ ಅಥವಾ ಮೆದುಳಿನಲ್ಲಿನ ಅದರ ವಿಶಿಷ್ಟ ಸ್ಥಾನ ಯಾವುದಾದರೂಂದು ಕಾಯಿಲೆ ಅಥವಾ ಅಪಘಾತದಿಂದ ನಿಷ್ಕ್ರೀಯವಾಗಿದ್ದಲ್ಲಿ ಅದರ ಕಾರ್ಯ ನಿಲ್ಲುತ್ತದೆ. ಉದಾಹರಣೆಗಾಗಿ ಕುಷ್ಠ ರೋಗದಲ್ಲಿ ಚರ್ಮದ ಸಂವೇದನೆಗಳು ತಿಳಿಯುವುದಿಲ್ಲ, ಅನಾರೋಗ್ಯದಲ್ಲಿ ನಾಲಿಗೆ ಸ್ವಲ್ಪ ಸಮಯ ಕಾರ್ಯ ಮಾಡದೇ ಇದ್ದಾಗ ಬಾಯಿಗೆ ರುಚಿ ಇರುವುದಿಲ್ಲ, ಕಣ್ಣುಗಳು ನಿಷ್ಪ್ರಯೋಜಕವಾದರೆ ಕಾಣಿಸುವುದಿಲ್ಲ ಇತ್ಯಾದಿ.
೬ ಆ. ನಾಮ ಕಾರ್ಯವನ್ನು ಹೇಗೆ ಮಾಡುತ್ತದೆ ? : ಈಗ ನಾಮ ಕಾರ್ಯವನ್ನು ಹೇಗೆ ಮಾಡುತ್ತದೆ ? ಎಂಬುದನ್ನು ನೋಡೋಣ. ಆ ದಿವ್ಯ ವಿಭೂತಿಯು ನನಗೆ, ‘ಧ್ವನಿ ಊರ್ಜೆ ಅಥವಾ ಪ್ರಕಾಶ ಊರ್ಜೆ ಇವುಗಳ ಮೂಲಕ ನೀವು ಯಾವುದಾದರೂ ರೋಗವನ್ನು ದೂರ ಮಾಡಲು ಪ್ರಯತ್ನಿಸುತ್ತೀರಾ ?’, ಎಂದು ಕೇಳಿದರು. ನನಗೆ ತಕ್ಷಣ ಗಮನಕ್ಕೆ ಬರಲಿಲ್ಲ. ಅವರು ನನಗೆ, ”ಲಿಥೊಟ್ರಿಪ್ಸಿ (‘ಶಾಕ್ ವೇವ್ಸ್’ಗಳ ಮೂಲಕ ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಒಡೆಯುವುದು) ಎಂದರೇನು ? ಕ್ಯಾನ್ಸರ್ ಚಿಕಿತ್ಸೆಯಲ್ಲಿನ ‘ರೆಡಿಯೇಶನ್ ಥೆರಪಿ’ ಅಂದರೇನು ?” ಎಂದು ಕೇಳಿದರು. ನನಗೆ ಅದು ಕೂಡಲೇ ಗಮನಕ್ಕೆ ಬಂದಿತು. ನಾನು, ‘ಲಿಥೊಟ್ರಿಪ್ಸಿಯ ಮೂಲಕ ಕಿಡ್ನಿಯಲ್ಲಿನ (ಮೂತ್ರಪಿಂಡದಲ್ಲಿನ) ದೊಡ್ಡ ಆಕಾರದ ಕಲ್ಲುಗಳನ್ನು ಒಡೆದು ಅದರ ಚಿಕ್ಕ ಚಿಕ್ಕ ತುಂಡುಗಳನ್ನು ಮಾಡುವುದರಿಂದ ಅವು ನಂತರ ಮೂತ್ರ ಮಾರ್ಗದಿಂದ ಬಿದ್ದು ಹೋಗುತ್ತವೆ, ಹಾಗೆಯೇ ಮೂತ್ರಕಲ್ಲುಗಳಿಂದ ಮೂತ್ರಪಿಂಡದ ಮೇಲಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ. ಅದೇ ರೀತಿ ‘ರೆಡೀಯೇಶನ್’ ಮೂಲಕ ಕ್ಯಾನ್ಸರ್‌ನ ಕೋಶಗಳನ್ನು ಸುಡಲಾಗುತ್ತದೆ’ ಎಂದು ಹೇಳಿದೆ. ಆಗ ಅವರು, ”ವೈದ್ಯಕೀಯ ಶಾಸ್ತ್ರದಲ್ಲಿ ಯಾವ ರೀತಿ ಹೊರಗೆ ಕೇಳಿಸದಿರುವ ‘ಶಾಕ್ ವೇವ್ಸ್’ಗಳ ಮೂಲಕ (ಶಾಕ್ ವೇವ್ಸ್ ಅಂದರೆ ಧ್ವನಿಯ ರಚನಾತ್ಮಕ ಪ್ರಕಾರ) ಅಥವಾ ಪ್ರಕಾಶ ಕಿರಣಗಳ ಮೂಲಕ (‘ರೆಡಿಯೇಶನ್ಸ್’ ಮೂಲಕ) ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಆಗುತ್ತದೆಯೋ, ತೀರಾ ಅದೇ ರೀತಿ ನಾಮಜಪವನ್ನು ಮಾಡುವವನಿಗೆ ಆರಂಭದಲ್ಲಿ ಕೇಳಿ ಬರುವ ನಾಮಜಪದಿಂದ ಉತ್ಪನ್ನವಾಗುವ ಧ್ವನಿ ಊರ್ಜೆ, ನಂತರ ಕೇಳಿಸದಿರುವ ನಾಮಜಪದಲ್ಲಿನ ಧ್ವನಿ-ಪ್ರಕಾಶ ಊರ್ಜೆ ಮತ್ತು ಕೊನೆಗೆ ಕೇವಲ ಪ್ರಕಾಶ ಊರ್ಜೆ ಇವುಗಳ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಆಧ್ಯಾತ್ಮಿಕ ಲಾಭಗಳು ದೊರಕುತ್ತವೆ. ಈ ನೈಸರ್ಗಿಕ ಅಥವಾ ದಿವ್ಯ ಊರ್ಜೆಯಿಂದ ಮನಸ್ಸಿನಲ್ಲಿನ ವಿಚಾರ, ಸಂಸ್ಕಾರಗಳು ಕ್ರಮೇಣ ನಾಶವಾಗಿ ಮನಸ್ಸು ಸಂಸ್ಕಾರರಹಿತವಾಗುತ್ತದೆ. ಪರಿಣಾಮಸ್ವರೂಪ ಆರಂಭದಲ್ಲಿ ಸ್ವಭಾವದೋಷಗಳು ಮತ್ತು ಕೊನೆಗೆ ಅಹಂಭಾವವೂ ನಾಶವಾಗುವುದರಿಂದ ಅನಾವಶ್ಯಕ ವಿಚಾರಗಳು ನಾಶವಾಗಿ ಮನಸ್ಸು ನಿರ್ವಿಚಾರವಾಗುತ್ತದೆ. ಅರ್ಥಾತ ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ನಾಮಜಪದೊಂದಿಗೆ ಅಷ್ಟಾಂಗ ಸಾಧನೆಯನ್ನು ಹೇಳಲಾಗಿದೆ. ಆದುದರಿಂದ ಈ ಪ್ರಕ್ರಿಯೆ ಶೀಘ್ರ ಗತಿಯಲ್ಲಿ ಆಗುತ್ತದೆ.” ಕೇಳಿಸದಿರುವ ಧ್ವನಿ ಊರ್ಜೆಯಲ್ಲಿ ಮನಸ್ಸಿನಲ್ಲಿನ ವಿಚಾರಗಳೆಲ್ಲವೂ ಸಂಗ್ರಹವಾಗಿರುತ್ತವೆ. ಅವು ಅಲ್ಟ್ರಾಸೌಂಡ್‌ಗಿಂತ ಸೂಕ್ಷ್ಮ, ಆದರೆ ಅತಿ ಕಡಿಮೆ ಪ್ರಕಾಶ ಊರ್ಜೆಯ ಸ್ವರೂಪ ದಲ್ಲಿರುತ್ತವೆ. ನಾಮಜಪವು ಮಧ್ಯಮಾವಾಣಿಯಲ್ಲಿ ಆರಂಭವಾದ ಮೇಲೆ, ನಡುನಡುವೆ ಮನಸ್ಸಿನ ಸ್ಥಿರತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ ಮತ್ತು ಪಶ್ಯಂತಿವಾಣಿಯಲ್ಲಿನ ನಾಮಜಪದಲ್ಲಿ ಮನಸ್ಸು ಸ್ಥಿರವಾಗುವುದು, ಸಮಾಧಿಯ ಅನುಭೂತಿಯನ್ನು ಪಡೆಯುವುದು, ಇಂತಹ ಅವಸ್ಥೆ ಪ್ರಾಪ್ತವಾಗುತ್ತದೆ. ಈ ಅವಸ್ಥೆಯನ್ನು ತಲುಪುವವರೆಗೆ ಚಿತ್ತ ಹೆಚ್ಚಿನಂಶ ಶುದ್ಧವಾಗಿರುತ್ತದೆ,
– (ಸದ್ಗುರು) ಡಾ. ಚಾರುದತ್ತ ಪಿಂಗಳೆ