೨೦೧೩ ರಲ್ಲಿ ‘ಅಂನಿಸ’ದ (ಅಂಧಶ್ರದ್ಧಾ ನಿರ್ಮೂಲನ ಸಮಿತಿಯ) ಡಾ. ನರೇಂದ್ರ ದಾಭೋಳ್ಕರ್, ೨೦೧೫ ರಲ್ಲಿ ಕಾ. ಗೋವಿಂದ ಪಾನ್ಸರೆ ಮತ್ತು ಸಾಹಿತಿ ಪ್ರಾ. ಎಸ್.ಎಮ್. ಕಲ್ಬುರ್ಗಿ ಮತ್ತು ೨೦೧೭ ರಲ್ಲಿ ಪತ್ರಕರ್ತೆ ಗೌರಿ ಲಂಕೇಶ ಈ ಪ್ರಗತಿಪರರ ಹತ್ಯೆಯ ಹಿಂದೆ ಹಿಂದುತ್ವನಿಷ್ಠರು ಮತ್ತು ವಿಶೇಷವಾಗಿ ‘ಸನಾತನ ಸಂಸ್ಥೆಯ ಕೈವಾಡವಿದೆ’, ಎಂಬುದನ್ನು ಹೇಗಾದರೂ ಮಾಡಿ ಸಿದ್ಧಪಡಿಸಬೇಕೆಂದು ಅವರ ಹತ್ಯೆಯಾದ ದಿನದಿಂದ ಹರಸಾಹಸ ನಡೆಯುತ್ತಿದೆ. ಇದರಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್.), ‘ಸಿಬೈ’, ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಈ ರಾಷ್ಟ್ರೀಯ ಸ್ತರದ ವಿವಿಧ ತನಿಖಾ ದಳಗಳಿಗೆ ಯೋಗ್ಯ ಸಾಕ್ಷಿಗಳು ಸಿಗದಿರುವುದರಿಂದ ಅವು ಕೂಡ ಬಿಕ್ಕಟ್ಟಿನಲ್ಲಿರುವುದು ತಿಳಿದು ಬಂದಿದೆ.
ವಿವಿಧ ತನಿಖಾ ದಳಗಳು ಕಳೆದ ಅನೇಕ ವರ್ಷಗಳಿಂದ ಪ್ರಗತಿಪರರ ಹತ್ಯೆಯ ತನಿಖೆ ನಡೆಸಿರುವ ಅತಿ ದೊಡ್ಡ ಪ್ರಕ್ರಿಯೆಯಲ್ಲಿನ ಗೊಂದಲ ಮತ್ತು ಸನಾತನದ ಸಾಧಕರನ್ನು ಆರೋಪಿಯ ಕಟಕಟೆಯಲ್ಲಿ ನಿಲ್ಲಿಸುವ ಅಟ್ಟಹಾಸಕ್ಕಾಗಿ ತನಿಖಾ ದಳದವರು ಸಂಗ್ರಹಿಸಿರುವ ಸುಳ್ಳು ಸಾಕ್ಷಿಗಳು, ರಚಿಸಿದ ಕಾಲ್ಪನಿಕ ಕಥೆ, ಅದಕ್ಕಾಗಿ ಬಳಸಿಕೊಂಡ ಸರಕಾರಿ ವ್ಯವಸ್ಥೆ ಮತ್ತು ಖರ್ಚು ಮಾಡಿದ ಸಾವಿರಾರು ರೂಪಾಯಿಗಳು, ವ್ಯರ್ಥಗೊಳಿಸಿದ ಸಮಯ, ಆಗಾಗ ಕೇಳಿಸಿದ ನ್ಯಾಯಾಲಯದಲ್ಲಿನ ಮಾತುಗಳು ಮತ್ತು ಇದೆಲ್ಲದರಿಂದ ತನಿಖೆಯ ಬಗ್ಗೆ ಉದ್ಭವಿಸಿದ ಅನೇಕ ಪ್ರಶ್ನೆಗಳ ಬಗ್ಗೆ ಸಂಕ್ಷಿಪ್ತದಲ್ಲಿ ಮಂಡಿಸುವ ‘ದಾಭೋಳ್ಕರ್-ಪಾನ್ಸರೆ ಹತ್ಯಾ ತನಿಖೆಯ ರಹಸ್ಯ ?’, ಈ (ಮರಾಠಿ) ಪುಸ್ತಕವನ್ನು ‘ಉದ್ವೇಲಿ ಬುಕ್ಸ್’ ಈ ಪ್ರಕಾಶಕರು ಪ್ರಕಾಶಿಸಿದ್ದಾರೆ.
ಅದರಲ್ಲಿನ ‘ತನಿಖೆಯಲ್ಲಿನ ಒಂದು ಉತ್ತರವಿಲ್ಲದ ಪ್ರಶ್ನೆ : ‘ಪಿಸ್ತೂಲ್ ಎಲ್ಲಿ ಹೋಯಿತು ?’ ಈ ಒಂದೇ ಪ್ರಕರಣದಿಂದ ಈ ತನಿಖೆಯಲ್ಲಿನ ಕೊರತೆಗಳೇನು ಎಂಬುದು ಸಹಜವಾಗಿ ಜನಸಾಮಾನ್ಯರಿಗೂ ಗಮನಕ್ಕೆ ಬರುತ್ತದೆ. ಇಂತಹ ಕೊರತೆಗಳು ಮುಂದೆಯೂ ಬರುತ್ತವೆ. ಈ ವಿಭಾಗಗಳ ತನಿಖೆಯನ್ನು ನೋಡಿ ಅಕ್ಷರಶಃ ‘ನಗಬೇಕೋ ಅಳಬೇಕೊ ?’ ಎಂಬುದೇ ತಿಳಿಯುವುದಿಲ್ಲ.ಈ ತನಿಖೆಯಿಂದ ಹಿಂದೂಗಳಿಗೆ ಮತ್ತು ಸನಾತನದ ಸಾಧಕರಿಗಾಗುತ್ತಿರುವ ಅನ್ಯಾಯ ಮತ್ತು ಪೀಡೆಗೆ ಮಿತಿಯಿಲ್ಲ. ಈ ತನಿಖೆಯಿಂದ ಪ್ರಗತಿಪರರು ಮತ್ತು ಆಡಳಿತ ವ್ಯವಸ್ಥೆಯ ವಿಕೃತ ಮತ್ತು ಹಿಂದೂದ್ವೇಷಿ ಮಾನಸಿಕತೆಯು ಬೆಳಕಿಗೆ ಬರುತ್ತದೆ. ಅನೇಕ ವರ್ಷಗಳಿಂದ ನಡೆಯುತ್ತಿರುವ ಸಾಮ್ಯವಾದಿಗಳ ಅನೇಕ ಹಿಂದೂವಿರೋಧಿ ಅನೇಕ ಸ್ತರದಲ್ಲಿನ ಹೋರಾಟ ಮತ್ತು ಅವರು ಮಾಡಿದ ಸಾವಿರಾರು ಹತ್ಯೆಗಳನ್ನು ನೋಡಿದರೆ ೪ ಜನ ಸಾಮ್ಯವಾದಿಗಳ ಹತ್ಯೆಯ ಹೊಣೆಯನ್ನು ಹಿಂದೂಗಳ ಮೇಲೆ ಹೊರಿಸಲು ಅವರು ಪಡುತ್ತಿರುವ ಶ್ರಮ ಈ ಒಂದೇ ಪ್ರಕರಣದಿಂದ ಗಮನಕ್ಕೆ ಬರುತ್ತದೆ. (ಈ ಲೇಖನದಲ್ಲಿ ಪುಸ್ತಕದಲ್ಲಿದ್ದ ಭಾಗವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿ ಇದ್ದ ಹಾಗೆಯೇ ಇಲ್ಲಿ ಕೊಡುತ್ತಿದ್ದೇವೆ.)
೧. ತನಿಖೆಯಲ್ಲಿನ ಒಂದು ಉತ್ತರವಿಲ್ಲದ ಪ್ರಶ್ನೆ : ಪಿಸ್ತೂಲ್ ಎಲ್ಲಿ ಹೋಯಿತು ?
ಡಾ. ದಾಭೋಳ್ಕರರ ಹತ್ಯೆಯಲ್ಲಿ ಅಗ್ನಿಶಸ್ತ್ರದ ಅಂದರೆ ಪಿಸ್ತೂಲ್‌ನ್ನು ಉಪಯೋಗಿಸಲಾಗಿದೆಯೆಂಬುದು ಪುಣೆ ಪೊಲೀಸರ ಹೇಳಿಕೆಯಾಗಿತ್ತು. ದಾಭೋಳ್ಕರ್ ಕೊಲೆ ಮತ್ತು ಆ ಕೊಲೆಯಲ್ಲಿ ಉಪಯೋಗಿಸಿದ ಪಿಸ್ತೂಲ್ ಒಂದು ದೊಡ್ಡ ರಹಸ್ಯವಾಗಿದೆ. ಈ ಪ್ರಕರಣವನ್ನು ನೋಡುವ ಮೊದಲು ‘ತನಿಖೆ ಹೇಗಿರಬೇಕು ?’, ಎಂಬುದರ ಜಾಗತಿಕ ಸ್ತರದ ಕೆಲವು ತತ್ತ್ವಗಳನ್ನು ಮೊದಲು ತಿಳಿದುಕೊಳ್ಳೋಣ
ಅ. ತನಿಖೆಯು ಪ್ರಾಮಾಣಿಕವಾಗಿರಬೇಕು.
ಆ. ಸೂರ್ಯನ ಕಿರಣಗಳು ಹೇಗೆ ಮುಂದೆ ಮುಂದೆ ಒಂದೇ ದಿಕ್ಕಿನಲ್ಲಿ ಸರಿಯುತ್ತದೆಯೋ, ಹಾಗೆಯೇ ತನಿಖೆ ಮುಂದೆ ಮುಂದೆ ಸರಿಯಬೇಕು. ಅದು ಪುನಃ ಹಿಂತಿರುಗಿ ಬರುವುದು ಮತ್ತು ಗೋಲಾಕಾರವಾಗಿ ತಿರುಗುವುದು, ಇಂತಹ ತನಿಖೆಯಾಗಬಾರದು.
ಇ. ತನಿಖೆಯ ಮೂಲದಲ್ಲಿ ತನ್ನದೇ ಆದ ಒಂದು ಕಥೆ ಇರಬೇಕು. ನಡೆಯುತ್ತಿರುವ ತನಿಖೆಯು ಆ ಕಥೆಯನ್ನು ಬಿಡಿಸುತ್ತಾ ಮುಂದೆ ಹೋಗಬೇಕು.
ಈ. ಮೂಲಭೂತ ತನಿಖೆಯ ಆವಶ್ಯಕತೆಯನ್ನು ಸಂಪೂರ್ಣ ದುರ್ಲಕ್ಷಿಸುವ ದಾಭೋಳ್ಕರ್ ಪ್ರಕರಣದಲ್ಲಿನ ‘ಪಿಸ್ತೂಲಿನ ತನಿಖೆಯಾಗಿದೆ’, ಎಂದು ಹೇಳಿದರೆ ಅಯೋಗ್ಯವಾಗಲಿಕ್ಕಿಲ್ಲ. (ದಾಭೋಲ್ಕರ್ ಪ್ರಕರಣದಲ್ಲಿ ಪಿಸ್ತೂಲ್ ತನಿಖೆಯು ಈ ಮೂಲಭೂತ ತನಿಖೆಯ ಅಗತ್ಯತೆಗಳನ್ನು ಸಂಪೂರ್ಣವಾಗಿ ತಪ್ಪಿಸಿದೆ ಎಂದು ಹೇಳುವ ಪ್ರಮೇಯ ತುಂಬಾ ದೂರವಿಲ್ಲ.)
೨. ‘ಯಾರು ಯಾರನ್ನು ಮೋಸ ಮಾಡುತ್ತಿದ್ದಾರೆ ?’, ಇದನ್ನು ಜನರು ಈ ಮುಂದಿನ ಘಟನಾಕ್ರಮದಲ್ಲಿ ಹುಡುಕಬೇಕು !
ಅ. ೨೦ ಆಗಸ್ಟ್ ೨೦೧೩ ರಂದು ಕೊಲೆಯಾಯಿತು ಮತ್ತು ೧ ಸಪ್ಟೆಂಬರ್ ೨೦೧೩ ರಂದು ಆ ಸೇತುವೆಯ ಸ್ವಚ್ಛತೆ ಮಾಡುವ ಒಬ್ಬ ಕಾರ್ಮಿಕ ಹೇಳುತ್ತಾನೆ, ದಾಭೋಳ್ಕರರ ಹಿಂದಿನಿಂದ ಇಬ್ಬರು ಯುವಕರು ಓಡುತ್ತಾ ಬಂದರು. ಒಬ್ಬನು ಗುಂಡು ಹಾರಿಸಿದನು, ಆಮೇಲೆ ಇನ್ನೊಬ್ಬನೂ ಗುಂಡು ಹಾರಿಸಿದನು. ಪುನಃ ಹಿಂತಿರುಗಿ ಓಡುವಾಗ ಎರಡನೇಯವನು ಅವನ ಕೈಯಲ್ಲಿದ್ದ ಪಿಸ್ತೂಲನ್ನು ಮೊದಲಿನವನ ಕೈಯಲ್ಲಿ ಕೊಟ್ಟನು ಮತ್ತು ಅವನು ಎರಡೂ ಪಿಸ್ತೂಲುಗಳನ್ನು ತನ್ನ ಹೆಗಲ ಮೇಲಿದ್ದ ಚೀಲದಲ್ಲಿ ಹಾಕಿದನು. ಮೀನಾನಾಥ ಗಾಯಕವಾಡ ಎಂಬ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಸಾಕ್ಷಿದಾರನೂ ಇಬ್ಬರು ಗುಂಡು ಹಾರಿಸಿರುವುದಾಗಿ ಹೇಳಿದನು. ಇದರ ಅರ್ಥ ‘ಇಬ್ಬರು ಕೊಲೆಗಾರರೂ ಗುಂಡು ಹಾರಿಸಿದರು ಮತ್ತು ಎರಡು ಪಿಸ್ತೂಲುಗಳನ್ನು ಉಪಯೋಗಿಸಿದರು’, ಎಂದಾಗುತ್ತದೆ.
ಆ. ಮಹಾರಾಷ್ಟ್ರದ ಪುಣೆ ಪೊಲೀಸರ ತರಾತುರಿಯ ತನಿಖೆಯಲ್ಲಿ ಅವರು ಈ ಕೊಲೆಯಲ್ಲಿ ವಿಕಾಸ ಖಂಡೇಲವಾಲ ಮತ್ತು ಮನೀಷ ನಾಗೋರಿ ಈ ಇಬ್ಬರನ್ನು ಬಂಧಿಸಿದರು. ಪೊಲೀಸರ ಹೇಳಿಕೆಗನುಸಾರ ೨೦ ಆಗಸ್ಟ್ ೨೦೧೩ ರಂದು ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮುಂಬ್ರಾದಲ್ಲಿ ಇವರಿಬ್ಬರನ್ನು ಠಾಣೆ ಪೊಲೀಸರು ಕಪ್ಪಕಾಣಿಕೆ ಕೇಳಿದ ಆರೋಪದಲ್ಲಿ ಬಂಧಿಸಿದ್ದರು. ಅವರಲ್ಲಿ ಅಕ್ರಮ ಶಸ್ತ್ರ ಮತ್ತು ಮದ್ದುಗುಂಡು ಗಳು ಸಿಕ್ಕವು. ಈ ಶಸ್ತ್ರ ಮತ್ತು ಮದ್ದುಗುಂಡುಗಳನ್ನು ಠಾಣೆ ಪೊಲೀಸರು ಮುಂಬಯಿಯ ಸರಕಾರಿ ವಿಧಿವಿಜ್ಞಾನ ಇಲಾಖೆಗೆ (ಫಾರೆನ್ಸಿಕ ವಿಭಾಗ) ಕಳುಹಿಸಿದರು. ನಿಜವಾಗಿ ನೋಡಿದರೆ ಇದೊಂದು ಬೇರೆಯೇ ಅಪರಾಧದ ಘಟನೆ ಆಗಿತ್ತು; ಆದರೆ ಪುಣೆ ಪೊಲೀಸರಿಂದ ದಾಭೋಳ್ಕರ್ ಪ್ರಕರಣದಲ್ಲಿ ಶಸ್ತ್ರ ಸಿಗದೆ ‘ಫಾರೆನ್ಸಿಕ್ ಲ್ಯಾಬ್’ನಲ್ಲಿ ‘ಬೇರೆ ಅಪರಾಧಗಳಲ್ಲಿ ಬರುವ ಶಸ್ತ್ರಗಳನ್ನು ದಾಭೋಳ್ಕರರ ಕೊಲೆಗಾಗಿ ಉಪಯೋಗಿಸಲಾಗಿತ್ತೇ ?’, ಎಂಬುದರ ತನಿಖೆ ಮಾಡಬೇಕು’, ಎಂದು ವಿನಂತಿಸಲಾಗಿತ್ತು. ಪುಣೆ ಪೊಲೀಸರ ಹೇಳಿಕೆಯಂತೆ ಆ ಪತ್ರಕ್ಕನುಸಾರ ‘ಫಾರೆನ್ಸಿಕ್ ಲ್ಯಾಬ್’ ಮುಂಬ್ರಾದಲ್ಲಿನ ಹಣ ವಸೂಲಿಯ ಅಪರಾಧದಲ್ಲಿ ಜಪ್ತಿಯಾದ ಶಸ್ತ್ರಗಳನ್ನು ಪರಿಶೀಲನೆ ಮಾಡಿದಾಗ ಆ ತನಿಖೆಯಲ್ಲಿ ದಾಭೋಳ್ಕರರ ಶರೀರದಲ್ಲಿ ಸಿಕ್ಕಿದ ಗುಂಡು ಮತ್ತು ಆ ಪರಿಸರದಲ್ಲಿ ಬಿದ್ದಿರುವ ಖಾಲಿ ಅವಶೇಷಗಳಿಂದ ಅಕ್ರಮ ಶಸ್ತ್ರಸಂಗ್ರಹದಲ್ಲಿನ ಒಂದು ಪಿಸ್ತೂಲಿನಿಂದ ಹಾರಿಸ ಲಾಗಿತ್ತು ಎಂಬುದು ಬೆಳಕಿಗೆ ಬಂದಿತ್ತು. ಪುಣೆ ಪೊಲೀಸರು ಇವರಿಬ್ಬರನ್ನೂ ಈ ಮೊದಲು ಬೇರೆ ಎರಡು ಅಪರಾಧಗಳಲ್ಲಿ ಬಂಧಿಸಿದರು ಮತ್ತು ಆ ಮೇಲೆ ದಾಭೋಳ್ಕರ್ ಕೊಲೆ ಖಟ್ಲೆಯಲ್ಲಿ ಬಂಧಿಸಿದರು. ತಂತ್ರಜ್ಞಾನದ ಸಹಾಯದಿಂದ ಕೊಲೆ ಮಾಡಿದ ಪಿಸ್ತೂಲಿನ ಗುರುತು ಸಿಕ್ಕಿತು. ಪಿಸ್ತೂಲ್ ಬಳಸಿರುವ ಕೈಯನ್ನು ಹುಡುಕಲು ಖಂಡೇಲವಾಲ ಮತ್ತು ನಾಗೋರಿ ಇವರ ತನಿಖೆ ಮಾಡುವುದು ಅಪೇಕ್ಷಿತವಾಗಿತ್ತು.
ಅದೃಷ್ಟ ಇದೊಂದು ವಿಲಕ್ಷಣ ವಿಷಯವಾಗಿದೆ. ಇವರಿಬ್ಬರನ್ನೂ ಪುಣೆ ಪೊಲೀಸರು ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ಅವರು ‘ನಮಗೆ ೨೫ ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ‘ಎ.ಟಿ.ಎಸ್.’ನ ಮುಖ್ಯಸ್ಥ ರಾಕೇಶ ಮಾರಿಯಾ ಇವರು ಆಮಿಷ ತೋರಿಸುತ್ತಿದ್ದಾರೆ, ಅಪರಾಧವನ್ನು ಒಪ್ಪಿಕೊಳ್ಳಿ, ನಿಮ್ಮ ವಿರುದ್ಧದ ಸಾಕ್ಷಿಗಳನ್ನು ಸಡಿಲಗೊಳಿಸುತ್ತೇವೆ, ಅಂದರೆ ನೀವು ಮುಕ್ತರಾಗುವಿರಿ’, ಎಂದು ನ್ಯಾಯಾಧೀಶರ ಮುಂದೆ ಹೇಳಿದರು. ಪತ್ರಕರ್ತರು ಇದನ್ನು ಎಲ್ಲ ಕಡೆಗಳಲ್ಲಿ ಮುದ್ರಿಸಿದರು. ಬಹುಶಃ ನ್ಯಾಯಾಲಯ ಇದನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಅನಿಸುತ್ತದೆ; ಆದರೆ ಜನರವರೆಗೆ ಈ ವಿಷಯ ತಲುಪಿತು. ಇಂದು ಕೂಡ ಇಂಟರ್‌ನೆಟ್‌ನಲ್ಲಿ ನಮಗೆ ಈ ವಾರ್ತೆಗಳು ಸಿಗುತ್ತವೆ.ಇದರಲ್ಲಿ ಸೋಜಿಗದ ವಿಷಯವೆಂದರೆ, ‘ಒಂದೇ ಪಿಸ್ತೂಲಿನಿಂದ ಎಲ್ಲ ಗುಂಡುಗಳನ್ನು ಹಾರಿಸಲಾಗಿದೆ’, ಎಂದು ಇದರಿಂದ ಸ್ಪಷ್ಟವಾಗುತ್ತಿತ್ತು. ಫಾರೆನ್ಸಿಕ ಶಸ್ತ್ರಾಸ್ತ್ರದ ತನಿಖೆಯನ್ನು ಅತ್ಯಂತ ಮಹತ್ವದ್ದೆಂದು ತಿಳಿಯಲಾಗುತ್ತದೆ, ಅಂದರೆ ತಂತ್ರಜ್ಞಾನ (ವಿಜ್ಞಾನ) ಒಂದು ಪಿಸ್ತೂಲ್ ಎಂದು ಹೇಳುತ್ತಿತ್ತು, ಆದರೆ ಪ್ರತ್ಯಕ್ಷದರ್ಶಿ ಸಾಕ್ಷಿದಾರರು ‘೨ ಪಿಸ್ತೂಲ್‌ಗಳನ್ನು ಉಪಯೋಗಿಸಲಾಗಿದೆ’ ಎಂದು ಹೇಳುತ್ತಿದ್ದರು. ಇದೇನು ಎಂಬುದು ಸ್ಪಷ್ಟವಾಗುವ ಮೊದಲೆ ತನಿಖೆಯನ್ನು ಮೇ ೨೦೧೪ ರಂದು ಪುಣೆ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ ಅಂದರೆ ‘ಸಿಬೈ’ಗೆ ಒಪ್ಪಿಸಲಾಯಿತು. ‘ಖಂಡೇಲ್‌ವಾಲ, ನಾಗೋರಿ ಇವರಿಗೆ ಜಾಮೀನು ಸಿಕ್ಕಿತು; ಏಕೆಂದರೆ ಕೇವಲ ಇಷ್ಟು ಸಾಕ್ಷಿಯಿಂದ ಇವರಿಬ್ಬರ ವಿರುದ್ಧ ಆರೋಪತ್ರ ದಾಖಲಿಸಲು ಬರುವುದಿಲ್ಲ’, ಎಂದು ಪುಣೆ ಪೊಲೀಸರು ಸತ್ಯ ವಿಷಯವನ್ನು ಪ್ರತಿಜ್ಞಾಪತ್ರದಲ್ಲಿ ನ್ಯಾಯಾಲಯದಲ್ಲಿ ಹೇಳಿದರು. ಮೇ ೨೦೧೪ ರಿಂದ ಜೂನ್ ೨೦೧೬ ರ ವರೆಗೆ ಉಚ್ಚ ನ್ಯಾಯಾಲಯ ‘ಸಿಬೈ’ಯನ್ನು ಪ್ರಶ್ನಿಸು ತ್ತಿತ್ತು, ಅಂಧಶ್ರದ್ಧಾ ನಿರ್ಮೂಲನೆ ಸಮಿತಿಯವರು ಅಂದೋಲನ ಗಳನ್ನು ಮಾಡುತ್ತಾ ಹೋದರು. ವಿಷಯದ ಚರ್ಚೆಯಾಗುತ್ತಿತ್ತು.
ಇ. ತನಿಖೆ ‘ಸಿಬೈ’ಯ ಕೈಗೆ ಹೋದಾಗ ಜೂನ್ ೨೦೧೬ ರಲ್ಲಿ ಡಾ. ತಾವಡೆಯವರನ್ನು ಬಂಧಿಸಲಾಯಿತು. ತಾವಡೆಯವರ ಮೇಲೆ ಆರೋಪಪತ್ರ ದಾಖಲಾಯಿತು. ಅದರಲ್ಲಿ ಸಾರಂಗ ಅಕೋಲಕರ್ ಮತ್ತು ವಿನಯ ಪವಾರ ಇವರು ಗುಂಡು ಹಾರಿಸಿದ್ದಾರೆಂದು ‘ಸಿಬೈ’ ಹೇಳಿಕೆ ನೀಡಿತ್ತು. ಇವರಿಬ್ಬರೂ ತಲೆಮರೆಸಿಕೊಂಡಿದ್ದಾರೆ, ಎಂದು ಘೋಷಿಸಲಾಯಿತು. ‘ಸಿಬೈ’ ಅವರ ಮೇಲೆ ಬಹುಮಾನ ಘೋಷಿಸಿತು. ದಾಭೋಳ್ಕರರ ಅನುಯಾಯಿಗಳು ದೇಶದಾದ್ಯಂತ ಇವರನ್ನು ಹುಡುಕಲು ದೊಡ್ಡ ಆಂದೋಲನ ಆರಂಭಿಸಿದರು. ಅಲ್ಲಲ್ಲಿ ಇವರಿಬ್ಬರ ಛಾಯಾಚಿತ್ರಗಳನ್ನು ಅಂಟಿಸಲಾಯಿತು. ಅವರ ಮನೆಯಲ್ಲಿ ವಿಚಾರಣೆ ಆರಂಭ ವಾಯಿತು, ಅವರ ಮನೆಗಳ ಮೇಲೆ ದಾಳಿ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಪಿಸ್ತೂಲಿನ ರಹಸ್ಯ ಹಾಗೆಯೆ ಉಳಿಯಿತು.
ಈ. ಪುನಃ ಏನಾಯಿತೆಂದರೆ, ದಾಭೋಳ್ಕರರ ಶರೀರದಲ್ಲಿ ಸಿಕ್ಕಿದ ಗುಂಡು ಮತ್ತು ಶವದ ಸಮೀಪದಲ್ಲಿ ಬಿದ್ದಿರುವ ಖಾಲಿ ಅವಶೇಷಗಳು, ಇವೆಲ್ಲ ವಸ್ತುಗಳು ಮತ್ತು ಪಾನ್ಸರೆ ಕೊಲೆ ಪ್ರಕರಣದಲ್ಲಿನ ಪಾನ್ಸರೆಯವರ ಶರೀರದಲ್ಲಿನ ಒಂದು ಗುಂಡು ಮತ್ತು ಘಟನಾಸ್ಥಳದಲ್ಲಿ ಬಿದ್ದಿರುವ ೫ ಅವಶೇಷಗಳು ಇವೆಲ್ಲವನ್ನೂ ‘ಸಿಬೈ’ ಮತ್ತು ಕೊಲ್ಹಾಪುರದ ವಿಶೇಷ ತನಿಖಾ ತಂಡವು ಕಲಬುರ್ಗಿ ಕೊಲೆಯ ತನಿಖೆ ಮಾಡುತ್ತಿದ್ದ ಕರ್ನಾಟಕದ ಅಪರಾಧ ತನಿಖೆಯ ಶಾಖೆಗೆ ಒಪ್ಪಿಸಿತು. ಕರ್ನಾಟಕದ ಅಪರಾಧ ತನಿಖಾ ಶಾಖೆಯು ಈ ಎಲ್ಲ ವಸ್ತುಗಳು ಮತ್ತು ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿನ ಗುಂಡು ಮತ್ತು ಖಾಲಿ ಅವಶೇಷ ಈ ಎಲ್ಲವನ್ನೂ ಬೆಂಗಳೂರಿನ ‘ಫಾರೆನ್ಸಿಕ್ ಲ್ಯಾಬೋರೇಟರಿ’ಗೆ ಕಳುಹಿಸಿತು. ಈ ‘ಫಾರೆನ್ಸಿಕ್ ಲ್ಯಾಬೋರೇಟರಿ’ ಇನ್ನೂ ವಿಚಿತ್ರ ವರದಿಯನ್ನು ನೀಡಿತು. ಅವುಗಳಲ್ಲಿನ ಮಹತ್ವದ ವಿಷಯಗಳು ಕೆಳಗಿನಂತಿವೆ.
ಈ ೧. ದಾಭೋಳ್ಕರ್ ಕೊಲೆ ಪ್ರಕರಣದಲ್ಲಿನ ಎಲ್ಲ ಗುಂಡುಗಳು ಮತ್ತು ಖಾಲಿ ಅವಶೇಷಗಳನ್ನು ಒಂದೇ ಪಿಸ್ತೂಲಿನಿಂದ ಹಾರಿಸಲಾಗಿದೆ.
ಈ ೨. ಪಾನ್ಸರೆ ಕೊಲೆ ಪ್ರಕರಣದಲ್ಲಿನ ಕೆಲವು ಅವಶೇಷಗಳು ದಾಭೋಳ್ಕರ್ ಕೊಲೆ ಪ್ರಕರಣದಲ್ಲಿ ಉಪಯೋಗಿಸಿದ ಪಿಸ್ತೂಲಿನಿಂದ ಹಾರಿಸಿದ್ದಾಗಿದ್ದವು, ಆದರೆ ಉಳಿದ ಅವಶೇಷಗಳು ಬೇರೆ ಪಿಸ್ತೂಲಿನಿಂದ ಹಾರಿಸಿದ್ದಾಗಿದ್ದವು ಮತ್ತು ನಂತರ ಇದೇ ಬೇರೆ ಪಿಸ್ತೂಲನ್ನು ಕಲ್ಬುರ್ಗಿಯವರ ಕೊಲೆಯಲ್ಲಿ ಉಪಯೋಗಿಸಲಾಗಿತ್ತು.
ಉ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಪಾನ್ಸರೆ ಕೊಲೆ ಪ್ರಕರಣ ದಲ್ಲಿ ಎರಡು ಪಿಸ್ತೂಲ್‌ಗಳನ್ನು ಉಪಯೋಗಿಸಲಾಯಿತು. ಅದರಲ್ಲಿನ ಒಂದು ಪಿಸ್ತೂಲ್ನ್ನು ಮೊದಲು ದಾಭೋಳ್ಕರ್ ಪ್ರಕರಣದಲ್ಲಿ ಉಪಯೋಗಿಸಲಾಗಿತ್ತು ಮತ್ತು ಇನ್ನೊಂದನ್ನು ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಉಪಯೋಗಿಸಲಾಯಿತು, ಆದ್ದರಿಂದ ಪೊಲೀಸರು ಈ ಮೂರೂ ಕೊಲೆಗಳನ್ನು ಒಂದೇ ಗುಂಪು ಮಾಡಿತ್ತು ಎಂದು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದರು.
ಈ ರೀತಿಯಲ್ಲಿ ‘ಪಾನ್ಸರೆ ಪ್ರಕರಣದಲ್ಲಿನ ೨ ಪಿಸ್ತೂಲ್‌ಗಳಲ್ಲಿನ ಒಂದನ್ನು ಮೊದಲು ದಾಭೋಳಕರ್ ಕೊಲೆಯಲ್ಲಿ ಉಪಯೋಗಿಸಲಾಯಿತು ಮತ್ತು ಇನ್ನೊಂದನ್ನು ನಂತರ ಕಲ್ಬುರ್ಗಿ ಕೊಲೆಯಲ್ಲಿ ಉಪಯೋಗಿಸಿದರು’, ಎನ್ನುವ ವರದಿಯನ್ನು ಬೆಂಗಳೂರಿನ ‘ಫಾರೆನ್ಸಿಕ್ ಲ್ಯಾಬೋರೇಟರಿ’ ನೀಡಿತು. (ಮಹಾರಾಷ್ಟ್ರದಲ್ಲಿನ ಚರ್ಚೆಯ ವಿಷಯವಾಗಿರುವ ಡಾ. ನರೇಂದ್ರ ದಾಭೋಳ್ಕರ್ ಮತ್ತು ಕಾ. ಗೋವಿಂದ ಪಾನ್ಸರೆ ಇವರ ಹತ್ಯೆಗೆ ಸಂಬಂಧಿಸಿದ ದಿನಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿ, ಆರೋಪಪತ್ರಗಳು ಮತ್ತು ನ್ಯಾಯಾಲಯಗಳ ಆದೇಶಗಳು ಈ ಮಾಹಿತಿ ಇರುವ ಈ ಪುಸ್ತಕ ಒಂದು ವಿಸ್ತಾರವಾದ ಸಂಶೋಧನೆಯಾಗಿದೆ. ಈ ಪ್ರಕರಣದಲ್ಲಿ ಎರಡು ಪಕ್ಷಗಳಿವೆ. ಒಂದು ಹತ್ಯೆಯಾಗಿರುವ ನಾಸ್ತಿಕವಾದಿಗಳು ಮತ್ತು ಇನ್ನೊಂದು ಹತ್ಯೆಯ ಆರೋಪ ವಿರುವ ಸಂಸ್ಥೆಯ ಸದಸ್ಯರು. ಪ್ರಸ್ತುತ ಲೇಖಕರು ಯಾವುದೇ ಪಕ್ಷದ ಪರವಾಗಿ ಲೇಖನ ಮಾಡದೆ ಪೂರ್ಣ ತನಿಖೆಯನ್ನು ತಟಸ್ಥವಾಗಿ ಸತ್ಯಸಂಶೋಧನೆ ಮಾಡಿದ್ದಾರೆ. ಉಭಯ ಪ್ರಕರಣದಲ್ಲಿನ ತನಿಖಾ ದಳಗಳ ಪೂರ್ಣ ವೈಫಲ್ಯ ಮತ್ತು ಪೊಲೀಸರ ತನಿಖೆಯಲ್ಲಿನ ರಾಜಕೀಯ ಪ್ರಭಾವದ ಮೇಲೆ ಈ ಪುಸ್ತಕ ವಿಶ್ಲೇಷಣೆ ಮಾಡುತ್ತದೆ. ನಿಜವಾದ ಆರೋಪಿ ಸಿಗದಿದ್ದರೆ ಸಿಬೈನಂತಹ ದೊಡ್ಡ ಸಂಸ್ಥೆಯೂ ಹೇಗೆ ಅನ್ಯಾಯಕಾರಿ ಕೃತ್ಯವನ್ನು ಮಾಡುತ್ತದೆ, ಎಂಬುದು ಈ ಪುಸ್ತಕದಲ್ಲಿನ ಉದಾಹರಣೆ ಗಳಿಂದ ತಿಳಿಯುತ್ತದೆ. ಈ ಪುಸ್ತಕದಲ್ಲಿ ಲೇಖಕರು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡಲು ಮತ್ತು ನಿರಪರಾಧಿಗಳಿಗೆ ರಕ್ಷಣೆ ನೀಡಲು ದೀರ್ಘಕಾಲದಿಂದ ಮಂದಗತಿಯಲ್ಲಿ ನಡೆಯುವ ಪೊಲೀಸ್ ದಳ ಮತ್ತು ನ್ಯಾಯಪ್ರಕ್ರಿಯೆಯಲ್ಲಿ ತಕ್ಷಣ ಸುಧಾರಣೆಯಾಗ ಬೇಕು, ಎಂಬುದಕ್ಕಾಗಿ ಬೆಂಬೆತ್ತುವಿಕೆಯನ್ನು ಮಾಡುತ್ತಿದ್ದಾರೆ. (ಮುಂದುವರಿಯುವುದು)
ಲೇಖಕರು : ಡಾ. ಅಮಿತ ಥಡಾನಿ, ಖ್ಯಾತ ಶಸ್ತ್ರಚಿಕಿತ್ಸಕರು, ಮುಂಬಯಿ.
(ಆಧಾರ : ‘ದಾಭೋಳ್ಕರ್-ಪಾನ್ಸರೆ ಹತ್ಯೆ : ತನಿಖೆಯಲ್ಲಿನ ರಹಸ್ಯ ?’, ಈ ಮರಾಠಿ ಭಾಷೆಯ ಪುಸ್ತಕದಿಂದ) ಈ ಪುಸ್ತಕ ‘ಅಮೆಝಾನ್’ನ ಜಾಲತಾಣದಲ್ಲಿ ಈ ಮುಂದಿನ ಲಿಂಕ್‌ನಲ್ಲಿ ಮಾರಾಟಕ್ಕಾಗಿ ಇಡಲಾಗಿದೆ. ಹ್ಣಣಠಿಸ್://ಚಿಮ್ಞ್ಟಿ.ಎಉ/ಜ/೭ಹ್8ಮ್1ಶ್