ಎಲ್ಲೆಡೆಯ ನಿವೃತ್ತಿ ವೇತನದಾರರಿಗೆ ಮಹತ್ವದ ಮಾಹಿತಿ

ಮುಂದಿನ ವರ್ಷದ ನಿವೃತ್ತಿ ವೇತನವನ್ನು ಪಡೆಯಲು ನವೆಂಬರ್‌ ೨೦೨೩ ರಲ್ಲಿ ಬ್ಯಾಂಕಿಗೆ ‘ಜೀವನ ಪ್ರಮಾಣಪತ್ರ’ವನ್ನು (‘ಲೈಫ್‌ ಸರ್ಟಿಫಿಕೆಟ್‌’) ನೀಡಿ !

‘ಸರಕಾರಿ ಅಥವಾ ಸರಕಾರೇತರ ನೌಕರರಿಗೆ ನಿವೃತ್ತಿಯ ನಂತರ ಪ್ರತಿ ತಿಂಗಳಿಗೆ ‘ನಿವೃತ್ತಿ ವೇತನ’ (ಪೆನ್ಶನ್‌)ವನ್ನು ಕೊಡಲಾಗುತ್ತದೆ. ಅದಕ್ಕಾಗಿ ಅವರಿಗೆ ಯಾವ ಬ್ಯಾಂಕ್‌ನಿಂದ ನಾವು ನಿವೃತ್ತಿ ವೇತನವನ್ನು ಪಡೆಯುತ್ತೇವೆಯೋ, ಆ ಬ್ಯಾಂಕ್‌ಗೆ ಪ್ರತಿವರ್ಷ ನವೆಂಬರ್‌ ತಿಂಗಳಿನಲ್ಲಿ ‘ಜೀವನ ಪ್ರಮಾಣಪತ್ರ’ವನ್ನು ಸಲ್ಲಿಸಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಮುಂದಿನ ವರ್ಷವಿಡಿ ನಿವೃತ್ತಿ ವೇತನವು ಮುಂದುವರಿಯುತ್ತದೆ. ಈ ಪ್ರಮಾಣಪತ್ರವನ್ನು ಸಲ್ಲಿಸುವ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

೧. ಜೀವನ ಪ್ರಮಾಣಪತ್ರ ಎಲ್ಲಿ ಸಲ್ಲಿಸಬೇಕು ?

೧ ಅ. ಸಂಬಂಧಿತ ಬ್ಯಾಂಕಿನ ಯಾವುದೇ ಶಾಖೆಯಿಂದ ಡಿಜಿಟಲ್‌ ‘ಜೀವನ ಪ್ರಮಾಣಪತ್ರ’ವನ್ನು ಸಲ್ಲಿಸಬಹುದು ! : ಪ್ರಮಾಣಪತ್ರವನ್ನು ಕೊಡಲು ಬ್ಯಾಂಕಿನ ಯಾವ ಶಾಖೆ ಯಲ್ಲಿ ಖಾತೆಯನ್ನು ತೆರೆಯಲಾಗಿದೆಯೋ, ಪ್ರತ್ಯಕ್ಷ ಆ ಶಾಖೆಗೆ ಹೋಗುವ ಆವಶ್ಯಕತೆ ಇಲ್ಲ. ಸದ್ಯ ವಾಸ್ತವ್ಯವಿರುವ ಸ್ಥಳದಲ್ಲಿ ಆ ಬ್ಯಾಂಕಿನ ಯಾವ ಶಾಖೆ ಇದೆಯೋ, ಅಲ್ಲಿ ಮುಂದಿನ ಕಾಗದಪತ್ರಗಳನ್ನು ತೋರಿಸಿ ಡಿಜಿಟಲ್‌ ‘ಜೀವನ ಪ್ರಮಾಣಪತ್ರ’ವನ್ನು ಕೊಡಬಹುದು. ಉದಾ. ಒಬ್ಬರು ನಿವೃತ್ತಿ ವೇತನಕ್ಕಾಗಿ ಶಿವಮೊಗ್ಗದಲ್ಲಿ ಬ್ಯಾಂಕ್‌ ಖಾತೆಯನ್ನು ತೆರೆದಿದ್ದರೆ ಮತ್ತು ಸದ್ಯ ಅವರು ದೆಹಲಿಯಲ್ಲಿ ವಾಸ್ತವ್ಯಕ್ಕೆ ಇದ್ದರೆ ದೆಹಲಿಯ ಆ ಬ್ಯಾಂಕಿನ ಶಾಖೆಯಿಂದಲೂ ಆ ಪ್ರಮಾಣಪತ್ರವನ್ನು ನೀಡಬಹುದು.

೧ ಆ. ಕೆಲವೆಡೆ ಸರಕಾರಿ ಮತ್ತು ಸರಕಾರೇತರ ಸೌಲಭ್ಯ ಗಳನ್ನು ಒದಗಿಸಲು ‘ಕಾಮನ್‌ ಸರ್ವಿಸ್‌ ಸೆಂಟರ್’ ಆರಂಭ ಗೊಂಡಿವೆ. ಅಲ್ಲಿ ಹಾಗೂ ಅಂಚೆ ಮೂಲಕವೂ ಜೀವನ ಪ್ರಮಾಣಪತ್ರವನ್ನು ನೀಡಬಹುದು. ತಮ್ಮ ಪರಿಸರದಲ್ಲಿರುವ ‘ಕಾಮನ್‌ ಸರ್ವಿಸ್‌ ಸೆಂಟರ್ಸ’ ಮಾಹಿತಿಯು https://locator.csccloaud.in ಈ ಜಾಲತಾಣದಲ್ಲಿ ದೊರೆಯುವುದು

೨. ಆವಶ್ಯಕ ಕಾಗದಪತ್ರಗಳು

ಅ. ಆಧಾರ ಕಾರ್ಡ್‌ನ ಮೂಲ ಮತ್ತು ಝೆರಾಕ್ಸ್ ಪ್ರತಿ
ಆ. ನಿವೃತ್ತಿ ವೇತನ ಜಮೆಯಾಗುವ ಖಾತೆಯ ಪಾಸ್‌ಬುಕ್‌
ಇ. ಪೆನ್ಶನ್‌ ಪೆಮೆಂಟ್‌ ಆರ್ಡರ್‌ (ಪಿ.ಪಿ.ಓ.) ಕ್ರಮಾಂಕ ಅದರ ನಂತರ ಬ್ಯಾಂಕಿನ ಅಧಿಕಾರಿಯು ನಿವೃತ್ತಿ ವೇತನ ದಾರರಿಗೆ ಪ್ರಮಾಣಪತ್ರವನ್ನು ನೀಡುವ ಮುಂದಿನ ಪ್ರಕ್ರಿಯೆ ಯನ್ನು ಮಾಡುವರು.
ಈ. ಬ್ಯಾಂಕಿಗೆ ಅಥವಾ ‘ಕಾಮನ್‌ ಸರ್ವಿಸ್‌ ಸೆಂಟರ್‌’ನಲ್ಲಿ ಹೋಗುವಾಗ ಜೊತೆಗೆ ಆಧಾರ ಕಾರ್ಡಿನ ರಿಜಿಸ್ಟರ್‌ ಮಾಡಿದ ನಮ್ಮ ಸಂಚಾರವಾಣಿಯನ್ನು ತೆಗೆದುಕೊಂಡು ಹೋಗಬೇಕು. ಇದರಿಂದ ಅದಕ್ಕೆ ‘ಓ.ಟಿ.ಪಿ.’ (ಒನ್‌ ಟೈಮ್‌ ಪಾಸವರ್ಡ್‌) ಸಿಗುವುದು ಮತ್ತು ಅದನ್ನು ತಕ್ಷಣ ಬ್ಯಾಂಕಿಗೆ ಕೊಡಬಹುದು.
ಅನಂತರ ಗಣಕಯಂತ್ರದಲ್ಲಿ ಡಿಜಿಟಲ್‌ ‘ಜೀವನ ಪ್ರಮಾಣಪತ್ರ’ವು ಸಿದ್ಧವಾಗುತ್ತದೆ ಮತ್ತು ನಿವೃತ್ತಿ ವೇತನವನ್ನು ನೀಡುವ ಸಂಬಂಧಿತ ಸಂಸ್ಥೆಯ ಬಳಿ ಅದು ಜಮೆಯಾಗುತ್ತದೆ. ಇದರ ಮುದ್ರಿತ ಪ್ರತಿಯು ನಿವೃತ್ತಿ ವೇತನದಾರರಿಗೂ ಸಿಗುತ್ತದೆ. ಈ ಪ್ರತಿಯನ್ನು ನಿವೃತ್ತಿ ವೇತನದಾರರು ತಮ್ಮ ಬಳಿ ಇಟ್ಟುಕೊಳ್ಳಬೇಕು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಥವಾ ಸಂದೇಹಗಳಿದ್ದರೆ https://jeevanpramaan.gov.in ಈ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಂಬಂಧಿತ ಬ್ಯಾಂಕನ್ನು ಸಂಪರ್ಕಿಸಿ !

೩. ನಮ್ಮ ವಾಸ್ಯವ್ಯದ ಸ್ಥಳದಿಂದಲೇ ‘ಡಿಜಿಟಲ್‌ ಜೀವನ ಪ್ರಮಾಣಪತ್ರ’ವನ್ನು ಸಲ್ಲಿಸುವ ಸೌಲಭ್ಯ ಲಭ್ಯ !

ಅಂಚೆ ಕಚೇರಿಯದ (‘ಪೋಸ್ಟ ಆಫೀಸ್‌’ನ) ಮೂಲಕ ಪೋಸ್ಟಮನ್‌ ನಮ್ಮ ವಾಸ್ತವ್ಯದ ಸ್ಥಳದಲ್ಲಿ ಬಂದು ಅವರ ಮಾಧ್ಯಮದಿಂದ ‘ಡಿಜಿಟಲ್‌ ಜೀವನ ಪ್ರಮಾಣಪತ್ರ’ವನ್ನು ಸಿದ್ಧಗೊಳಿಸಿ ಕೊಡುವ ಸೌಲಭ್ಯವು ಲಭ್ಯವಾಗುತ್ತಿದೆ. ‘ಡಿಜಿಟಲ್‌ ಜೀವನ ಪ್ರಮಾಣಪತ್ರ’ವನ್ನು ಸಿದ್ಧಗೊಳಿಸಲು ಅಗತ್ಯವಿರುವ ಕಾಗದಪತ್ರಗಳನ್ನು ಮತ್ತು ಸಂಪರ್ಕ ಕ್ರಮಾಂಕ ಇರುವ ಸಂಚಾರವಾಣಿಯನ್ನು ಜೊತೆಯಲ್ಲಿ ಇರುವುದು ಅವಶ್ಯಕವಾಗಿದೆ. ಈ ಸೌಲಭ್ಯಗಳಿಗಾಗಿ ಅಂಚೆ ಕಚೇರಿಯಿಂದ ನಾಮಮಾತ್ರ ಹಣ ಪಾವತಿ ಮಾಡಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅಥವಾ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು. ಇದೇ ರೀತಿ ಮನೆಯ ವರೆಗೆ ತಲುಪಿಸುವ ಅವಕಾಶ (ಡೋರ್‌ ಸ್ಟೆಪ್‌ ಸರ್ವಿಸ್) ಕೆಲವು ರಾಷ್ಟ್ರೀಯ ಬ್ಯಾಂಕಿನಲ್ಲಿ (ನ್ಯಾಶನಲ್‌ ಬ್ಯಾಂಕಿ
ನಲ್ಲಿ) ನೀಡಲಾಗುತ್ತದೆ. ನಮ್ಮ ಸಂಬಂಧಿಸಿದ ಬ್ಯಾಂಕನ್ನು ಸಂಪರ್ಕಿಸಿ ಈ ಕುರಿತು ಮಾಹಿತಿಯನ್ನು ಪಡೆಯಬಹುದು.

೪. ಸಂಚಾರವಾಣಿಯಿಂದ ‘ಡಿಜಿಟಲ್‌ ಜೀವನ ಪ್ರಮಾಣಪತ್ರ’ವನ್ನು ನೀಡುವ ಸೌಲಭ್ಯ ಲಭ್ಯ !

‘AadhaarFaceRd’ ಮತ್ತು ‘JeevanPraman’ ಈ ಎರಡು ‘ಯಾಪ್’ ಸಂಚಾರವಾಣಿಯಲ್ಲಿ ‘ಇನ್ಸ್ಟಾಲ್’ ಮಾಡಿ ನಾವು ಸ್ವತಃ ನಮ್ಮ ಅಥವಾ ಇತರ ವ್ಯಕ್ತಿಯ ಜೀವನ ಪ್ರಮಾಣಪತ್ರವನ್ನು ಜಮೆ ಮಾಡಬಹುದು. ಎರಡೂ ‘ಯಾಪ್’ ಸಂಚಾರವಾಣಿಯಲ್ಲಿ ‘ಇನ್ಸ್ಟಾಲ್’ ಮಾಡಿದ ನಂತರ ‘JeevanPraman’ ವನ್ನು ‘ಯಾಪ್‌’ನ್ನು ತೆರೆಯಬೇಕು ಮತ್ತು ಅದರಲ್ಲಿ ನೀಡಿದ ಸೂಚನೆಗಳಂತೆ ಮಾಹಿತಿಯನ್ನು ತುಂಬಬೇಕು.

ಕೆಲವರಿಗೆ ಸಂಚಾರವಾಣಿಯಲ್ಲಿ ಈ ಮಾಹಿತಿಯನ್ನು ತುಂಬಲು ಕಠಿಣವೆನಿಸಬಹುದು. ಅದಕ್ಕಾಗಿ ನಾವು ನಮ್ಮ ಹತ್ತಿರದಲ್ಲಿನ ಯಾವುದಾದರೊಬ್ಬ ತಿಳುವಳಿಕೆಯುಳ್ಳ ವ್ಯಕ್ತಿಯ ಸಹಾಯವನ್ನು ಪಡೆಯಬಹುದು; ಒಟ್ಟಿನಲ್ಲಿ ನಮಗೆ ಮನೆಯಲ್ಲಿ ಕುಳಿತುಕೊಂಡು ಪ್ರಮಾಣಪತ್ರವನ್ನು ಜಮೆ ಮಾಡಲು ಸಾಧ್ಯವಾಗುವುದು.

೫. ನಿವೃತ್ತಿವೇತನದಾರರು ಪ್ರಸ್ತುತಪಡಿಸಿದ

‘ಜೀವನ ಪ್ರಮಾಣಪತ್ರ’ಕ್ಕೆ ೧ ವರ್ಷದವರೆಗೆ ಮಾತ್ರ ವ್ಯಾಲಿಡಿಟಿ ಇರುತ್ತದೆ. ಕೆಲವು ಸರಕಾರಿ ನೌಕರರಿಗೆ ಸಂಬಂಧಿಸಿದ ನಿವೃತ್ತಿ ವೇತನವನ್ನು ನೀಡುವ ಸಂಸ್ಥೆಗಳಲ್ಲಿ ಡಿಜಿಟಲ್‌ ‘ಜೀವನ ಪ್ರಮಾಣಪತ್ರವನ್ನು ಸ್ವೀಕರಿಸುವ ಸೌಲಭ್ಯವು ಇಲ್ಲಿಯವರೆಗೆ ಲಭ್ಯವಾಗಿಲ್ಲ. ಆದ್ದರಿಂದ ಆ ವೇತನದಾರರಿಗೆ ಮೊದಲಿನಂತೆ ಬ್ಯಾಂಕಿನ ಅಧಿಕಾರಿಗಳ ಸಹಿಯಿರುವ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದಕ್ಕಾಗಿ ಸಂಬಂಧಿತ ಬ್ಯಾಂಕಿನ ಸ್ಥಳೀಯ ಶಾಖೆಯಲ್ಲಿ ತಮ್ಮ ಈ ಕಾಗದಪತ್ರಗಳನ್ನು ತೋರಿಸಿ ಮುಂದಿನ ಪ್ರಕ್ರಿಯೆ ಮಾಡಬೇಕು. (೨೦.೧೦.೨೦೨೩)