ಧನತ್ರಯೋದಶಿ ನಿಮಿತ್ತ…
ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ ! ಆದ್ದರಿಂದ ಈ ದಿನವನ್ನು ‘ಧನ್ವಂತರಿ ಜಯಂತಿ’ ಎಂದು ಆಚರಿಸಲಾಗುತ್ತದೆ. ದೇವತೆಗಳ ವೈದ್ಯನಾಗಿರುವ ಧನ್ವಂತರಿ ದೇವತೆ ಎಂದರೆ ಆರೋಗ್ಯವನ್ನು ನೀಡುವ ದೇವತೆ ! ಸಾಕ್ಷಾತ್ ಆರೋಗ್ಯದಾತನಾಗಿದ್ದಾನೆ !. ಆದರೆ ಈ ದೇಹರೂಪಿ ಮಾಧ್ಯಮವು ಒಂದು ವೇಳೆ ಬಲಹೀನವಾದರೆ, ನಾವು ಕಾಯಿಲೆಗಳಿಂದ ಬಳಲುತ್ತಿದ್ದರೆ, ನಮಗೆ ಸಾಧನೆಯನ್ನು ಮಾಡಲು ಸಾಧ್ಯವಾಗುವುದೇನು? ಆದರೂ ಈಶ್ವರಪ್ರಾಪ್ತಿಯ ಇಚ್ಛೆಯನ್ನು ಪೂರ್ಣಗೊಳಿಸಲು ನಮ್ಮ ದೇಹವನ್ನು ನಿರೋಗಿಯನ್ನಾಗಿರಿಸಿ ಆರೋಗ್ಯರೂಪೀ ಧನಸಂಪತ್ತನ್ನು ಪ್ರದಾನಿಸಲು ಸಾಕ್ಷಾತ್ ಧನ್ವಂತರಿ ದೇವತೆಯು ನಮ್ಮ ಮೇಲೆ ಅಮೃತವನ್ನು ಸುರಿಸಲಿದ್ದಾರೆ. ಸಾಧನೆಗಾಗಿ ದೇಹಮಿತಿಯನ್ನು ದಾಟಿ, ಆ ದೇಹವು ಸಾಧನೆಯಲ್ಲಿ ಶ್ರಮಪಡಬೇಕೆಂದು ಆರೋಗ್ಯಕರ ದೀರ್ಘಾಯುಷ್ಯವನ್ನು ಪ್ರದಾನಿಸಲು ನಾವು ಸಾಕ್ಷಾತ್ ಧನ್ವಂತರಿ ದೇವತೆಯ ಬಳಿ ಪ್ರಾರ್ಥಿಸೋಣ.
-ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (8.11.2023)