ಇಸ್ರೇಲ್ ನಲ್ಲಿ ಅಕ್ಟೋಬರ್ ೭ ರಂದು ನಡೆದಿರುವ ದಾಳಿ, ಭಯೋತ್ಪಾದನೆಯ ಕೃತ್ಯ ! – ಭಾರತ

ಭಾರತದ ವಿದೇಶಾಂಗ ಸಚಿವರಾದ ಎಸ್. ಜೈ ಶಂಕರ್

ರೋಮ – ಇಸ್ರೇಲ್ ನಲ್ಲಿ ಅಕ್ಟೋಬರ್ ೭ ರಂದು ನಡೆದಿರುವ ದಾಳಿಯು ಭಯೋತ್ಪಾದಕ ಕೃತ್ಯವಾಗಿತ್ತು, ಎಂದು ಭಾರತದ ವಿದೇಶಾಂಗ ಸಚಿವರಾದ ಎಸ್. ಜೈ ಶಂಕರ್ ಇವರು ಇಟಲಿಯಲ್ಲಿ ನಡೆದಿರುವ ಸಂಯುಕ್ತ ಸಚಿವರ ಸಭೆಯಲ್ಲಿ ಮಾತನಾಡುವಾಗ ಅಭಿಪ್ರಾಯ ವ್ಯಕ್ತಪಡಿಸಿದರು. ಇಸ್ರೇಲ್ ಹಮಾಸ್ ಯುದ್ಧದ ಬಗ್ಗೆ ಮಾತನಾಡುವಾಗ ಜೈ ಶಂಕರ್ ಇವರು, ಅಕ್ಟೋಬರ್ ೭ ರ ನಂತರ ಕೂಡ ಸತತವಾಗಿ ಭಯೋತ್ಪಾದಕ ದಾಳಿಗಳು ಮುಂದುವರೆದಿದೆ. ಭಯೋತ್ಪಾದನೆ ಸಹಿಸಲು ಸಾಧ್ಯವಿಲ್ಲ. ನಾವೆಲ್ಲರೂ ಅದರ ವಿರುದ್ಧ ನಿಲ್ಲುವ ಅವಶ್ಯಕತೆ ಇದೆ ಎಂದು ಹೇಳಿದರು.

ಜೈ ಶಂಕರ್ ಮಾತು ಮುಂದುವರೆಸಿ ,

೧. ದ್ವಿರಾಷ್ಟ್ರ, ಎಂದರೆ ಒಂದು ಇಸ್ರೇಲ್ ಮತ್ತು ಇನ್ನೊಂದು ಪ್ಯಾಲೆಸಟೈನ್ ಇದೆ ಈ ಸಮಸ್ಯೆಯ ಮೇಲಿನ ಏಕೈಕ ಉಪಾಯವಾಗಿದೆ.
೨. ಪ್ಯಾಲೆಸಟೈನಿನ ಜನರೆ ಈ ಸಮಸ್ಯೆಯ ಬಗ್ಗೆ ಉಪಾಯ ಹುಡುಕುವುದು ಆವಶ್ಯಕವಾಗಿದೆ.
೩. ಯಾವುದೇ ಪ್ರಶ್ನೆ ಇದು ಸಂವಾದ ಮತ್ತು ಒಪ್ಪಂದ ಇದರ ಮೂಲಕ ಪರಿಹರಿಸಬಹುದು.
೪. ಯುದ್ಧ ಮತ್ತು ಭಯೋತ್ಪಾದನೆಯಿಂದ ಏನನ್ನು ಸಾಧಿಸಲಾಗದು.
೫. ಈಗಿನ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರೂಪಿಸಲಾಗಿರುವ ಮಾನವ ಹಕ್ಕುಗಳ ಕಾನೂನಿನ ಪಾಲನೆ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು..