ಪಾಕನ ಮುಸಲ್ಮಾನ ಕ್ರಿಕೆಟ್‌ ಪಟುಗಳ ನಿಜರೂಪ ತಿಳಿಯಿರಿ !

ದಾನೀಶ ಕನೇರಿಯಾ

೧. ಪಾಕನ ಮುಸಲ್ಮಾನ ಕ್ರಿಕೆಟ್‌ ಪಟುಗಳ ನಿಜರೂಪ ತಿಳಿಯಿರಿ !

ಪಾಕಿಸ್ತಾನದ ಹಿಂದೂ ಧರ್ಮೀಯ ಮಾಜಿ ಕ್ರಿಕೆಟ್‌ ಆಟಗಾರ ದಾನೀಶ ಕನೇರಿಯಾ ಇವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಅಂದಿನ ಪಾಕಿಸ್ತಾನದ ಮುಸಲ್ಮಾನ ಕ್ರಿಕೆಟ ಆಟಗಾರರು ತಮಗೆ ಇಸ್ಲಾಂಅನ್ನು ಸ್ವೀಕರಿಸಲು ಸದಾ ಒತ್ತಡ ತರುತ್ತಿದ್ದರು ಎಂದು ಹೇಳಿದ್ದಾರೆ.

೨. ಜಗತ್ತಿನಾದ್ಯಂತ ಹಿಂದೂಗಳಿಗಾಗಿ ಹೀಗೆ ಯಾರಾದರೂ ಎದ್ದು ನಿಲ್ಲುತ್ತಾರೆಯೇ ?

ಇಸ್ರೈಲ್‌ ಒಂದು ವೇಳೆ ಗಾಝಾಪಟ್ಟಿಯ ಮೇಲಿನ ದಾಳಿಯನ್ನು ಮುಂದುವರಿಸಿದರೆ, ಜಗತ್ತಿನಾದ್ಯಂತದ ಮುಸಲ್ಮಾನರನ್ನು ಮತ್ತು ಇರಾನ್‌ ಸೈನ್ಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಎಂದು ಇರಾನಿನ ಸರ್ವೋಚ್ಚ ಮುಖಂಡ ಆಯತುಲ್ಲಾ ಖಾಮೆನೆಯೀ ಇವರು ಬೆದರಿಕೆಯೊಡ್ಡಿದ್ದಾರೆ.

೩. ಮೈದಾನದಲ್ಲಿ ನಮಾಜುಪಠಾಣದ ಬಗ್ಗೆಯೂ ದೂರು ನೀಡಲಿ

ಭಾರತ ಮತ್ತು ಪಾಕಿಸ್ತಾನ ನಡುವೆ ಅಕ್ಟೋಬರ್‌ ೧೪ ರಂದು ನಡೆದ ಆಟದ ಸಮಯದಲ್ಲಿ ಪ್ರೇಕ್ಷಕರು ‘ಜಯ ಶ್ರೀರಾಮ’ ಎಂದು ಘೋಷಣೆ ನೀಡಿದ್ದರು. ಈ ಬಗ್ಗೆ ಪಾಕಿಸ್ತಾನದ ಕ್ರಿಕೆಟ್‌ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ದೂರು ನೀಡಿದೆ.

೪. ಪಾಕಿಸ್ತಾನಿಯರ ಭಾರತದ್ವೇಷವನ್ನು ತಿಳಿಯಿರಿ !

‘ಪೇಶಾವರದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಪ್ರೇಕ್ಷಕರು ನನ್ನ ಮೇಲೆ ಮೊಳೆ ಎಸೆದಿದ್ದರು. ಈ ಮೊಳೆ ನನ್ನ ಕಣ್ಣಿನ ಕೆಳಗೆ ತಾಗಿತ್ತು’, ಎಂದು ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಇರ್ಫಾನ್‌ ಪಠಾಣ ಹೇಳಿದ್ದಾರೆ. ‘ಪಾಕ್‌ ಕ್ರಿಕೆಟ ಮಂಡಳಿಯು ಭಾರತವನ್ನು ದೂರುವುದಕ್ಕಿಂತ ತನ್ನನ್ನು ನೋಡಬೇಕು’, ಎಂದೂ ಪಠಾಣ ಹೇಳಿದ್ದಾರೆ.

೫. ಪ್ರಭಾವಿ ಹಿಂದೂ ಸಂಘಟನೆಯ ಅಭಾವದ ಲಕ್ಷಣ !

ಶಿವಮೊಗ್ಗ ನಗರದಲ್ಲಿ ಗಲಭೆ ಪೀಡಿತ ರಾಗಿಗುಡ್ಡದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಇವರಿಗೆ ಭೇಟಿ ನೀಡಲು ನಿಷೇಧಿಸಲಾಗಿದೆ. ಮುಂದಿನ ೩೦ ದಿನಗಳ ಕಾಲ ಮುತಾಲಿಕ ಇವರು ಶಿವಮೊಗ್ಗ ನಗರಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ.

೬. ಕ್ರೈಸ್ತ-ಹಿಂದೂ ಸಮಾಜದ ನಡುವಿನ ಹಿಂಸಾಚಾರವನ್ನು ಜಿಹಾದಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ? ಇದನ್ನು ಪತ್ತೆ ಹಚ್ಚಿ !

ರಾಷ್ಟ್ರೀಯ ತನಿಖಾ ದಳವು ಮಣಿಪುರ ಪೊಲೀಸರ ಸಹಾಯದಿಂದ ಮಹಮ್ಮದ್‌ ಇಸ್ಲಾಉದ್ದೀನ್‌ ಖಾನ್‌ನನ್ನು ಬಂಧಿಸಿದೆ. ೨೧ ಜೂನ್‌ ೨೦೨೩ ರಂದು ಮಣಿಪುರದ ಬಿಷ್ಣುಪುರ ಜಿಲ್ಲೆಯ ಕ್ವಾಕ್ಟಾ ಪ್ರದೇಶದಲ್ಲಿ ಒಂದು ಕಾರಿನಲ್ಲಾದ ಬಾಂಬ್‌ ಸ್ಫೋಟದಲ್ಲಿ ಆತನ ಕೈವಾಡವಿತ್ತು.

೭. ಮುಸಲ್ಮಾನ ಅಥವಾ ಕ್ರೈಸ್ತರ ಧಾರ್ಮಿಕ ಕಾರ್ಯದಲ್ಲಿ ಹಿಂದೂಗಳನ್ನು ಸೇರಿಸಿಕೊಂಡಿದ್ದು ಕೇಳಿದ್ದೇವೆಯೇ ?

ಕೊಲಕಾತಾದ ಹೊಸ ನಗರಿಯಲ್ಲಿ ಶ್ರೀದುರ್ಗಾ ಪೂಜೆಯ ಆಯೋಜಕರು ಪೂಜೆಯ ಪರಂಪರೆಗೆ ಧಕ್ಕೆ ತರುತ್ತಾ ಮಹಾಷ್ಟಮಿಗೆ ‘ಕುಮಾರಿ ಪೂಜೆ’ಗಾಗಿ ಶ್ರೀ ದುರ್ಗಾದೇವಿ ಎಂದು ನಫೀಸಾ ಎಂಬ ೮ ವರ್ಷದ ಮುಸಲ್ಮಾನ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ. ಕೋಮು ಸೌಹಾರ್ದದ ಸಂದೇಶಕ್ಕಾಗಿ ಈ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ಹೇಳಿದರು.