ಭಾರತದಲ್ಲಿ ಈಗ ಸನಾತನ ಧರ್ಮವನ್ನು ನಾಶ ಮಾಡುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಹಿಂದೂಗಳು ನಿರ್ಲಕ್ಷಿಸಬಾರದು. ‘ಸನಾತನ ಧರ್ಮ ಇದು ಅವಿನಾಶಿ ಧರ್ಮವಾಗಿದೆ ಹಾಗೂ ಅದನ್ನು ಯಾರೂ ನಾಶ ಮಾಡಲಾರರು’, ಎಂಬ ವಿಚಾರ ಅಥವಾ ಈ ವೃತ್ತಿ ಅಪಾಯಕಾರಿಯಾಗಿದೆ. ‘ಅವಿನಾಶಿ ಸನಾತನ ಧರ್ಮ, ಅಂದರೆ ಯಾವುದೇ ಪರಿಸ್ಥಿತಿಯಲ್ಲಿ ಯಾವುದು ಯೋಗ್ಯವಾಗಿದೆ ?’, ಎನ್ನುವ ವಿಷಯದ ಜ್ಞಾನವನ್ನು ಯಾರೂ ಕೂಡ ನಾಶ ಮಾಡಲು ಸಾಧ್ಯವಿಲ್ಲ; ಆದರೆ ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದಲ್ಲಿನ ಹಿಂದೂಗಳ ದಯನೀಯ ಸ್ಥಿತಿಯನ್ನು ನೋಡಿರಿ. ಅಂತಹ ಸ್ಥಿತಿ ಭಾರತದಲ್ಲಿನ ಹಿಂದೂಗಳಿಗೆ ಬರಬಾರದು. ಒಂದು ವೇಳೆ ಹೀಗೆಯಾದರೆ ಮಾನವತೆಯ ಅಂತಿಮ ಆಶಾಕಿರಣ ನಾಶವಾಗುವುದು.
ತಮಿಳುನಾಡಿನ ಮಂತ್ರಿ ಹಾಗೂ ಸದ್ಯದ ಮುಖ್ಯಮಂತ್ರಿಗಳ ಪುತ್ರ ಉದಯನಿಧಿ ಸ್ಟಾಲಿನ್ ಏನು ಹೇಳಿದ್ದಾರೋ, (ಸನಾತನ ಧರ್ಮವನ್ನು ನಾಶಗೊಳಿಸುವ ಬಗ್ಗೆ), ಅದು ಚರ್ಚ್, ಇಸ್ಲಾಮಿನ ಮೌಲ್ವಿ (ಇಸ್ಲಾಮ ಧರ್ಮದ ನೇತಾರರು) ಹಾಗೂ ಸಾಮ್ಯವಾದಿಗಳ ಅನೇಕ ವರ್ಷಗಳ ಕನಸಾಗಿದೆ. ಇದರಲ್ಲಿ ಉದಯನಿಧಿ ಸ್ಟಾಲಿನ್ ಒಬ್ಬರೇ ಇಲ್ಲ, ಅವರು ಯಾವ ಪರಿಷತ್ತಿನಲ್ಲಿ ‘ಸನಾತನ ಧರ್ಮವನ್ನು ನಾಶಗೊಳಿಸಬೇಕು’, ಎಂದು ಹೇಳಿದರೋ, ಆ ಪರಿಷತ್ತಿಗೆ ‘ಸನಾತನ ಧರ್ಮವನ್ನು ನಾಶಗೊಳಿಸುವುದು’, ಎಂಬ ಶೀರ್ಷಿಕೆಯನ್ನೇ ನೀಡಲಾಗಿತ್ತು. ಅವರು ಹಿಂದೂ ಧರ್ಮವನ್ನು ಮಲೇರಿಯಾ ಹಾಗೂ ಡೆಂಗ್ಯೂನೊಂದಿಗೆ ತುಲನೆ ಮಾಡಿ ಅದನ್ನು ನಾಶಗೊಳಿಸುವುದರ ಆವಶ್ಯಕತೆಯಿದೆ, ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಅವರ ಮೇಲೆ ತುಂಬಾ ಟೀಕೆಗಳು ಬಂದ ಮೇಲೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವಾಗ ‘ನಾನು ಹಿಂದೂಗಳ ಹತ್ಯಾಕಾಂಡದ ಬಗ್ಗೆ ಮಾತನಾಡಿಲ್ಲ’, ಎಂದು ಹೇಳಿದರು ಹಾಗೂ ಅವರ ಹಿಂದೂ ಧರ್ಮದ ವಿಷಯದ ಹೇಳಿಕೆ ಸ್ತುತ್ಯವಾಗಿದೆ ಎನ್ನುವಂತೆ ನಟಿಸಿದರು.
೧. ಉದಯನಿಧಿ ಇವರಿಗೆ ಸನಾತನ ಧರ್ಮವನ್ನು ನಾಶಗೊಳಿಸಬೇಕೆಂದು ಏಕೆ ಅನಿಸುತ್ತದೆ ?
ಉದಯನಿಧಿ ಸ್ಟಾಲಿನ್ ಇವರಿಗೆ ಸನಾತನ ಧರ್ಮದ ಬಗ್ಗೆ ಇಷ್ಟು ಅಜ್ಞಾನವಿದೆಯೇ ? ಸನಾತನ ಧರ್ಮ, ಎಲ್ಲರಲ್ಲಿಯೂ ಆತ್ಮದ ಅಸ್ತಿತ್ವವಿದೆ ಹಾಗೂ ಅದು ಪವಿತ್ರವಾಗಿದೆ ಎಂದು ಹೇಳುತ್ತದೆ. ಇದು ಅವರಿಗೆ ಗೊತ್ತಿಲ್ಲವೇ ? ವೇದಗಳು ಹಾಗೂ ಉಪನಿಷತ್ತುಗಳು ಸನಾತನ ಧರ್ಮದ ಮೂಲ ಗ್ರಂಥಗಳಾಗಿದ್ದು ಅವುಗಳಿಗೆ ಏಶಿಯಾದಲ್ಲಿ ತುಂಬಾ ಗೌರವವಿದೆ ಹಾಗೂ ಈ ಗ್ರಂಥಗಳಿಂದ ಅನೇಕ ಪಾಶ್ಚಿಮಾತ್ಯ ತತ್ತ್ವಜ್ಞಾನಿಗಳು ಹಾಗೂ ವೈಜ್ಞಾನಿಕರು ಸ್ಫೂರ್ತಿ ಪಡೆದಿದ್ದಾರೆ, ಇದು ಅವರಿಗೆ ಗೊತ್ತಿಲ್ಲವೇ ? ಸದ್ಯ ವಿಜ್ಞಾನದಲ್ಲಿ ಎಲ್ಲಕ್ಕಿಂತ ಆಧುನಿಕವಾಗಿರುವ ಭೌತಶಾಸ್ತ್ರದಲ್ಲಿನ ‘ಕ್ವಾಂಟಮ್ ಥಿಯರಿ’ ವೇದದಲ್ಲಿನ ಜ್ಞಾನವನ್ನು ಆಧರಿಸಿದೆ. ಸನಾತನ ಧರ್ಮವು ಎಲ್ಲ ಮಾನವತೆಯನ್ನು ಸಮಾವೇಶಗೊಳಿಸುವ ಹಾಗೂ ‘ವಸುಧೈವ ಕುಟುಮ್ಬಕಮ್ |’, ಅಂದರೆ ‘ಸಂಪೂರ್ಣ ಪೃಥ್ವಿಯೇ ಒಂದು ಕುಟುಂಬವಾಗಿದೆ’, ಎಂದು ನಂಬುವುದಾಗಿದೆ, ಇದು ಅವರಿಗೆ ಗೊತ್ತಿಲ್ಲವೇ ? ತದ್ವಿರುದ್ಧ ಅಬ್ರಾಹಮಿಕ್ ಧರ್ಮ (ಏಕೇಶ್ವರವಾದವನ್ನು ನಂಬುವ ಇಸ್ಲಾಮ್, ಕ್ರೈಸ್ತ ಹಾಗೂ ಜ್ಯೂ ಪಂಥಗಳಿಗೆ ಅಬ್ರಾಹಮಿಕ್ ಧರ್ಮ ಎನ್ನಲಾಗುತ್ತದೆ.) ಅವರ ಧರ್ಮವನ್ನು ನಂಬುವವರು ಹಾಗೂ ನಂಬದಿರುವವರು ಹೀಗೆ ಭೇದಭಾವ ಮಾಡಿ ಮಾನವತೆಯನ್ನು ವಿಭಜಿಸುತ್ತಿದ್ದಾರೆ. ಯಾರು ಅವರ ಧರ್ಮವನ್ನು ನಂಬುವುದಿಲ್ಲವೋ, ಅವರೊಂದಿಗೆ ಅವರು ಸಮಾನವಾಗಿ ವರ್ತಿಸುವುದಿಲ್ಲ. ಸನಾತನ ಧರ್ಮ ಅಥವಾ ಹಿಂದುತ್ವದ ಜಾತಿ ವ್ಯವಸ್ಥೆಯೊಂದಿಗೆ ತುಲನೆ ಮಾಡುವಾಗ ಬ್ರಿಟಿಷರು ಈ ಶ್ರೇಣಿ ಇರುವ ವ್ಯವಸ್ಥೆಯನ್ನು ನಿರ್ಮಾಣ ಮಾಡಿದರು, ಇದು ಅವರಿಗೆ ಗೊತ್ತಿಲ್ಲವೇ ? ಬ್ರಿಟಿಷರು ಕೆಲವು ಜಾತಿಗಳನ್ನು ಜನ್ಮದಿಂದಲೇ ಅಪರಾಧಿಗಳೆಂದು ನಿರ್ಧರಿಸಿದ್ದರು. ವೈದಿಕ ವರ್ಣವ್ಯವಸ್ಥೆಯು ಸಮಾಜಕ್ಕೆ ‘ಆದರ್ಶ’ವಾಗಿದೆ, ಎಂಬುದು ಅವರಿಗೆ ಗೊತ್ತಿಲ್ಲವೇ ? ಸಮಾಜದಲ್ಲಿ ಒಮ್ಮತ ಇರಬೇಕಾದರೆ ೪ ವರ್ಣಗಳು ಅತ್ಯಂತ ಆವಶ್ಯಕವಾಗಿವೆ. ವೇದಗಳಲ್ಲಿ ೪ ವರ್ಣಗಳನ್ನು ಶರೀರದ ೪ ಭಾಗಗಳೊಂದಿಗೆ ತುಲನೆ ಮಾಡಲಾಗಿದೆ. ಬ್ರಾಹ್ಮಣ ವರ್ಣವನ್ನು ತಲೆಯೊಂದಿಗೆ, ಕ್ಷತ್ರೀಯರನ್ನು ಕೈಗಳೊಂದಿಗೆ, ವೈಶ್ಯರನ್ನು ತೊಡೆಗಳೊಂದಿಗೆ ಮತ್ತು ಶೂದ್ರರನ್ನು ಕಾಲುಗಳೊಂದಿಗೆ ತುಲನೆ ಮಾಡಲಾಗಿದೆ. ಇದರ ಅರ್ಥ ‘ತಲೆಗೆ ಗೌರವ ಕೊಡಬೇಕು ಹಾಗೂ ಕಾಲುಗಳ ಜೊತೆಗೆ ದುರ್ವರ್ತನೆಯನ್ನು ಮಾಡಬೇಕು’, ಎಂದಾಗುವುದಿಲ್ಲ. ಆದರೂ ಭಾರತೀಯ ಸಮಾಜದಲ್ಲಿ ಅಪಾರ ಭೇದಭಾವ ಇರುವುದು ಕಂಡುಬರುತ್ತದೆ.
೨. ಅಂದಿನ ಭಾರತದಲ್ಲಿದ್ದ ಅಸಮಾನತೆ ಹಾಗೂ ಕೊಡಲಾಗುತ್ತಿದ್ದ ವರ್ತನೆ
ನಾನು ೧೯೮೦ ರಲ್ಲಿ ಯಾವಾಗ ಭಾರತದಲ್ಲಿ ಹೊಸಬಳಾಗಿದ್ದೆನೋ, ಆಗ ಈ ವಿಷಯ ನನಗೆ ತಿಳಿಯಿತು. ನಾನು ಒಂದು ರೈಲು ಬಂಡಿಯಲ್ಲಿದ್ದೆ, ರೈಲು ಹೊರಡುವ ಸ್ಥಿತಿಯಲ್ಲಿತ್ತು. ಆಗ ಒಬ್ಬ ಒಳ್ಳೆಯ ಉಡುಪುಗಳನ್ನು ಧರಿಸಿದ ವ್ಯಕ್ತಿ ತಡವಾಗಿ ರೈಲಿನ ಡಬ್ಬಿಯಲ್ಲಿ ಪ್ರವೇಶ ಮಾಡಿದರು. ಅವರೊಂದಿಗೆ ಅವರ ಸಾಮಾನುಗಳನ್ನು ತೆಗೆದುಕೊಂಡು ಹಮಾಲನೂ ಬಂದನು. ಹಮಾಲನಿಗೆ ಹಣಕೊಡುವ ಬದಲು ಅವರು ಅವನನ್ನು ತನ್ನ ನೀರಿನ ಬಾಟ್ಲಿ ತುಂಬಿಸಿ ಕೊಂಡು ಬರಲು ಕಳುಹಿಸಿದರು. ಆ ಹಮಾಲ ಹೋಗಿ ನೀರು ತುಂಬಿಸಿಕೊಂಡು ಬರುವಷ್ಟರಲ್ಲಿ ರೈಲು ಹೊರಟಿತು. ಗಾಡಿಯಲ್ಲಿದ್ದ ಈ ವ್ಯಕ್ತಿ ನಿಧಾನವಾಗಿ ತನ್ನ ಪರ್ಸ್‌ನಿಂದ ಹಣ ತೆಗೆದು ಆ ಹಮಾಲನಿಗೆ ಸ್ವಲ್ಪ ಹಣ ಕೊಡಲು ಮುಂದಾದರು. ಹಮಾಲ ಓಡೋಡಿ ಬಾಗಿಲಿನಲ್ಲಿ ಬಂದು ಆ ಹಣವನ್ನು ಹಿಡಿದುಕೊಂಡನು. ಆಗ ‘ಆ ಹಮಾಲ ಯಾವ ಜಾತಿಯವನು ಅಥವಾ ವರ್ಣದವನು ? ಅಥವಾ ‘ಗಾಡಿಯಲ್ಲಿ ಪ್ರವಾಸ ಮಾಡುವ ವ್ಯಕ್ತಿ ಯಾರು ?’, ಎಂಬುದು ನನಗೆ ತಿಳಿದಿರಲಿಲ್ಲ. ಆಗ ನನಗೆ ಭಾರತದ ವಿಷಯದಲ್ಲಿ ಬಹಳ ಕಡಿಮೆ ಮಾಹಿತಿ ಇತ್ತು. ಆದರೆ ಆ ವ್ಯಕ್ತಿ ಹಮಾಲನೊಡನೆ ವರ್ತಿಸಿದ ಪದ್ಧತಿಯು ವಸಾಹತವಾದಿ ಬ್ರಿಟಿಷರ ಪರಂಪರೆಯ ಹಾಗಿತ್ತು ಎಂದು ನನಗೆ ಅನಿಸಿತು. ಅನಂತರ ನನಗೆ ಯಾರು ಚೆನ್ನಾಗಿ ಆಂಗ್ಲ ಭಾಷೆ ಮಾತನಾಡುತ್ತಾರೋ ಹಾಗೂ ಯಾರಿಗೆ ಆಂಗ್ಲ ಭಾಷೆ ಮಾತನಾಡಲು ಬರುವುದಿಲ್ಲ, ಇದರ ಮೇಲೆ ಭಾರತದಲ್ಲಿ ಜಾತಿವ್ಯವಸ್ಥೆ ಇದೆ ಎಂಬುದು ತಿಳಿಯಿತು. ಯಾರಿಗೆ ಚೆನ್ನಾಗಿ ಆಂಗ್ಲ ಭಾಷೆ ಮಾತನಾಡಲು ಬರುತ್ತಿತ್ತೋ, ಅವರಿಗೆ ಒಳ್ಳೆಯ ವೇತನದ ನೌಕರಿ ಸಿಗುತ್ತಿತ್ತು ಹಾಗೂ ಅವರು ಸಮಾಜದಲ್ಲಿ ಇತರ ವ್ಯಕ್ತಿಗಳಿಗಿಂತ ತಮ್ಮನ್ನು ಶ್ರೇಷ್ಠರೆಂದು ತಿಳಿಯುತ್ತಿದ್ದರು. ಆಗ ಬಹುಶಃ ಆ ಬ್ರಿಟಿಷ ಅಧಿಕಾರಿಗಳು ಭಾರತದಲ್ಲಿ ತೋರಿಸುವ ಕೃಪಾಶೀಲತೆಯನ್ನು ಅವರ ದೇಶದಲ್ಲಿ ತೋರಿಸಲು ಸಾಧ್ಯವಿಲ್ಲ ಎಂಬುದು ಭಾರತೀಯರಿಗೆ ತಿಳಿದಿರಲಿಕ್ಕಿಲ್ಲ. ಅವರು ಭಾರತದ ಸ್ಥಳೀಯರನ್ನು ಅಸಂಸ್ಕೃತರೆಂದು ತೋರಿಸಲು ಅವರೊಂದಿಗೆ ತಿರಸ್ಕಾರ ಭಾವನೆಯಿಂದ ಹಾಗೆ ವರ್ತಿಸುತ್ತಿದ್ದರು.
೩. ವೈದಿಕ ವರ್ಣವ್ಯವಸ್ಥೆಗೆ ಸಮಾನತೆ ಆಧಾರ !
ಬ್ರಿಟಿಷರಿಂದ ಆಡಳಿತವನ್ನು ಕೈಯಲ್ಲಿ ತೆಗೆದುಕೊಂಡ ನಂತರ ‘ತಮ್ಮ ಕೈಕೆಳಗೆ ಕೆಲಸ ಮಾಡುವವರಿಂದ ಗೌರವವನ್ನು ಪಡೆಯಲು ಹೀಗೆ ವರ್ತಿಸುವುದು ಆವಶ್ಯಕವಾಗಿದೆ’, ಎಂದು ಭಾರತೀಯರಿಗೆ ಅನಿಸುತ್ತದೆಯೇ ? ಹಾಗೆಯೇ ನನ್ನ ಗಮನಕ್ಕೆ ಬಂದ ಅಂಶವೆಂದರೆ ಅನೇಕ ಭಾರತೀಯರು ತಮ್ಮ ಕೈಕೆಳಗೆ ಕೆಲಸ ಮಾಡುವ ಹಿರಿಯ ವ್ಯಕ್ತಿಗಳನ್ನು ನಮ್ರತೆಯಿಂದ ಸಂಬೋಧಿಸುವುದು ಕಾಣಿಸುವುದಿಲ್ಲ. ಅದೇ ರೀತಿ ಈ ಜನರ ಮಕ್ಕಳು ಹಾಗೂ ಸಂಬಂಧಿಕರ ಬಗ್ಗೆಯೂ ಅದೇ ಭಾಷೆಯನ್ನು ಉಪಯೋಗಿಸುತ್ತಾರೆ. ಇದಕ್ಕೆ ವೈದಿಕ ಸಮಾಜರಚನೆಗೆ ಯಾವುದೇ ಸಂಬಂಧವಿಲ್ಲ, ಇದು ಬ್ರಿಟಿಷರ ಕೊಡುಗೆಯಾಗಿದೆ. ‘ವೈದಿಕ ವರ್ಣವ್ಯವಸ್ಥೆಯಲ್ಲಿ ಇತರರನ್ನು ಅವಮಾನಿಸುವ ಕಲ್ಪನೆ ಇಲ್ಲ, ಅದರಲ್ಲಿ ಸಮಾಜ ಒಳ್ಳೆಯ ರೀತಿಯಲ್ಲಿ ನಡೆಯಬೇಕಾದರೆ ಎಲ್ಲ ಪ್ರಕಾರದ ಕೆಲಸಗಳನ್ನು ಮಾಡಬೇಕು’, ಎಂಬ ಕಲ್ಪನೆ ಇದೆ. ಈ ರಚನೆ ಶ್ರೇಣಿ (ಲೆವಲ್) ಪದ್ಧತಿಯನ್ನು ಆಧರಿಸಿರದೆ ಸಮಾನತೆಯನ್ನು ಆಧರಿಸಿದೆ.
೪. ವಿದೇಶಗಳಲ್ಲಿ ಭಾರತದ ಬಗ್ಗೆ ನಿರ್ಮಿಸಿರುವ ತಪ್ಪು ಚಿತ್ರಣ
ನಾನು ಜರ್ಮನಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿರುವಾಗ ‘ಭಾರತದಲ್ಲಿ ಭಯಾನಕ ಜಾತಿವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಇದೆ’, ಎಂದು ನನಗೆ ಕಲಿಸಲಾಗಿತ್ತು. ಇದರ ಕಾರಣವೆಂದರೆ, ಚರ್ಚ್‌ಗೆ ೧೮ ಮತ್ತು ೧೯ ನೇ ಶತಮಾನದಲ್ಲಿ ಭಾರತದಲ್ಲಿನ ಜ್ಞಾನದ ಪ್ರಶಂಸೆಯ ವಿರುದ್ಧ ಕಾರ್ಯವನ್ನು ಮಾಡಲಿಕ್ಕಿತ್ತು. ಇದರ ಪದ್ಧತಿಯೆಂದರೆ ಮಕ್ಕಳಿಗೆ ಹೇಳುವುದು, ”ಉದ್ಧಟತನದ ಬ್ರಾಹ್ಮಣರು ಕೆಳಜಾತಿಯ ಜನರಿಂದ ನೀರು ತೆಗೆದುಕೊಳ್ಳುವುದಿಲ್ಲ ಅಥವಾ ಅವರನ್ನು ಸ್ಪರ್ಶಿವುದಿಲ್ಲ; ಏಕೆಂದರೆ ಅವರು ಕೆಳಜಾತಿಯ ಜನರನ್ನು ಅಸ್ವಚ್ಛವೆಂದು ತಿಳಿಯುತ್ತಾರೆ, ಎಂದು ಕಲ್ಪನೆ ಮಾಡಿರಿ, ಇದು ಎಷ್ಟು ಭಯಾನಕವಾಗಿದೆ !” ಈ ಸ್ವಚ್ಛತೆಯ ವಿಷಯದಲ್ಲಿ ಚರ್ಚೆಯನ್ನು ಮಾಡಬಹುದು; ಆದರೆ ಈ ನಿಯಮದಿಂದ ಅತ್ಯಂತ ಲಾಭದಾಯಕವಾಗಿರುವ ಸನಾತನ ಧರ್ಮವನ್ನು ನಾಶ ಮಾಡಬೇಕೆಂದು ಹೇಳುವುದು, ಇದೆಂತಹ ಢೋಂಗಿತನವಾಗಿದೆ ? ಯಾವುದಾದರೊಂದು ಪುಸ್ತಕದ ಮೇಲೆ (ಬೈಬಲ್ ಮತ್ತು ಕುರಾನ್) ವಿಶ್ವಾಸವಿಡುವುದಿಲ್ಲವೆಂದು ಲಕ್ಷಗಟ್ಟಲೆ ಜನರನ್ನು ಹಿಂಸಿಸಿ ಅವರನ್ನು ಹತ್ಯೆ ಮಾಡುವುದಕ್ಕಿಂತ ಯಾರು ಮಾಂಸ ತಿನ್ನುತ್ತಾರೆಯೋ, ಅವರನ್ನು ಸ್ಪರ್ಶ ಮಾಡದಿರುವುದು, ಹೆಚ್ಚು ಕ್ರೂರವಾಗಿದೆ’, ಎನ್ನುವ ಚಿತ್ರಣವನ್ನು ನಿರ್ಮಿಸಲಾಯಿತು. ಎರಡು ಅಬ್ರಾಹ್ಮಿಕ ಧರ್ಮ ಹಾಗೂ ಸಾಮ್ಯವಾದಿಗಳು ಮಾನವತೆಯ ವಿರುದ್ಧ ಮಾಡಿದ ಪ್ರಚಂಡ ಪಾಪಗಳ ಬಗ್ಗೆ ಎಲ್ಲಿಯೂ ಉಲ್ಲೇಖವಾಗುವುದಿಲ್ಲ; ಆದರೆ ಭಾರತೀಯ ಜಾತಿವ್ಯವಸ್ಥೆಯ ವಿಷಯದಲ್ಲಿ ಪಠ್ಯಕ್ರಮವನ್ನು ಕಲಿಸಲಾಗುತ್ತದೆ, ಅದೇ ರೀತಿ ವಾರ್ತಾವಾಹಿನಿಗಳಲ್ಲಿಯೂ ಇದರ ಬಗ್ಗೆ ಮಾತನಾಡಲಾಗುತ್ತದೆ. – ಮಾರಿಯಾ ವರ್ಥ, ಹಿಂದೂ ಧರ್ಮದ ಅಭ್ಯಾಸಕಿ, ಜರ್ಮನಿ. ೫. ದಕ್ಷಿಣ ಭಾರತದ ರಾಜಕಾರಣಿಗಳು ಸನಾತನ ಧರ್ಮ ಮತ್ತು ಬ್ರಾಹ್ಮಣರ ಮೇಲೆ ಏಕೆ ಪ್ರಹಾರ ಮಾಡುತ್ತಿದ್ದಾರೆ ?
ಇದರ ಹಿಂದೆ ಕ್ರೈಸ್ತ ಮಿಶನರಿಗಳಿಗೆ ಇಲ್ಲಿ ಕ್ರೈಸ್ತೀ ಕರಣ ಮಾಡಬೇಕೆಂಬ ಒಂದು ದೊಡ್ಡ ಯೋಜನೆಯಿದೆ. ಕ್ರೈಸ್ತೀಕರಣಕ್ಕಾಗಿ ಥಾಮಸ್ ಅಪೋಸ್ಟಲ್ ಎಂಬವನು ಒಂದನೇ ಶತಮಾನದಲ್ಲಿ ಕೇರಳಕ್ಕೆ ಬಂದನು. ‘ಅವನನ್ನು ಧೂರ್ತ ಬ್ರಾಹ್ಮಣರು ಚೆನ್ನೈಯಲ್ಲಿ ಕೊಂದು ಹಾಕಿದರು’, ಎನ್ನುವ ಸುಳ್ಳು ಕಥೆಯ ಆಧಾರ ಪಡೆಯಲಾಗುತ್ತದೆ. ಬ್ರಾಹ್ಮಣರು ಅವರಿಗಾಗಿ ಅಡಚಣೆಯಾಗಿದ್ದಾರೆ; ಏಕೆಂದರೆ ಅವರು ವೇದಗಳಲ್ಲಿನ ಜ್ಞಾನವನ್ನು ಜೀವಂತ ಇಟ್ಟಿದ್ದಾರೆ. ಅವರು ನಿಜವಾಗಿಯೂ ಸನಾತನ ಧರ್ಮದ ಪ್ರಮುಖರಾಗಿದ್ದಾರೆ ಹಾಗೂ ಕ್ರೈಸ್ತ ಮಿಶನರಿಗಳಿಗೆ ಅವರು ಬೇಡವಾಗಿದ್ದಾರೆ. ಒಂದು ವೇಳೆ ಬ್ರಾಹ್ಮಣರನ್ನು ದುರ್ಬಲಗೊಳಿಸಿ ಅವರನ್ನು ದೇಶದಿಂದ ದೂರ ಮಾಡಿದರೆ ಮಿಶನರಿಗಳಿಗೆ ಮತಾಂತರ ಮಾಡಿ ಸನಾತನ ಧರ್ಮವನ್ನು ನಾಶಮಾಡಲು ಸುಲಭ ವಾಗುವುದು. ಉದಯನಿಧಿ ಸ್ಟಾಲಿನ್ ಇವರ ಹೇಳಿಕೆಗೆ ಮತ್ತು ಇದಕ್ಕೆ ಸಂಬಂಧವಿದೆ ಎಂದು ಅನಿಸುತ್ತದೆ.
ನವೆಂಬರ ೨೦೨೨ ರಲ್ಲಿ ಸ್ಟಾಲಿನ್, ‘ನನಗೆ ಕ್ರೈಸ್ತನಾಗಿರುವುದರ ಬಗ್ಗೆ ಅಭಿಮಾನವಿದೆ’ ಎಂದು ಹೇಳಿದ್ದರು. ಅವರಿಗೆ ಕ್ರೈಸ್ತ ಧರ್ಮದ ಬಗ್ಗೆ ಏಕೆ ಅಭಿಮಾನವಿದೆ, ಎಂಬುದು ನನಗೆ ತಿಳಿದಿಲ್ಲ. ಕ್ರೈಸ್ತೀಕರಣದ ಹೆಸರಿನಲ್ಲಿ ಭಾರತ ಮತ್ತು ವಿಶ್ವದಾದ್ಯಂತ ಲಕ್ಷಗಟ್ಟಲೆ ಜನರನ್ನು ಹತ್ಯೆ ಮಾಡಿದ ಚರ್ಚ್‌ಗಳ ಇತಿಹಾಸವಿದೆ. ಅವರಿಗೆ ಇದರ ಅಭಿಮಾನವಿದೆಯೇ ? ಅಥವಾ ‘ನಿಜವಾದ ದೇವರು ಕೇವಲ ಕ್ರೈಸ್ತರನ್ನು ಸ್ವರ್ಗಕ್ಕೆ ಹಾಗೂ ಹಿಂದೂಗಳನ್ನು ನರಕಕ್ಕೆ ಕಳುಹಿಸುತ್ತಾನೆ’, ಈ ಕಲಿಕೆಯ ಬಗ್ಗೆ ಇದೆಯೇ ?, ಎಂಬುದನ್ನು ಅವರು ಸ್ಪಷ್ಟಪಡಿಸಬೇಕು; ಆದರೆ ಅವರು ಹಾಗೆ ಮಾಡುವುದಿಲ್ಲ; ಏಕೆಂದರೆ ಕ್ರೈಸ್ತ ಧರ್ಮದ ಬಗ್ಗೆ ಅಭಿಮಾನವಿರುವುದರ ಬಗ್ಗೆ ಅವರಲ್ಲಿ ಸಬಲ ಕಾರಣವಿಲ್ಲ. ಅದಕ್ಕೂ ಸ್ವಲ್ಪ ಹಿಂದಕ್ಕೆ ಹೋಗಿ ನೋಡಿದರೆ, ಅವರು ‘ನಾನು ನಾಸ್ತಿಕನಾಗಿದ್ದೇನೆ’, ಎಂದು ಘೋಷಣೆಯನ್ನು ಮಾಡಿದ್ದರು. ಆದರೂ ಮಾನವತೆಯ ಆಧಾರವಿರುವ ಅವಿನಾಶಿ ಸನಾತನ ಧರ್ಮ ಹಾಗೂ ಹಿಂದೂಗಳ ಮೇಲೆ ಭಾರತದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಆಕ್ರಮಣಗಳು ಆಗುತ್ತಿವೆ. ಯಾರಿಗೆ ಮಾನವತೆಯ ಮೇಲೆ ಸಂಪೂರ್ಣ ನಿಯಂತ್ರಣ ತರಲಿಕ್ಕಿದೆಯೋ, ಅವರಿಗೆ ಸನಾತನ ಧರ್ಮ ಅಪಾಯಕಾರಿಯಾಗಿದೆ.
೬. ಹಿಂದೂಗಳು ಹಿಂದೂ ಧರ್ಮವನ್ನು ನಾಶ ಮಾಡಬೇಕು ಎಂಬ ಕರೆಯತ್ತ ಗಮನ ಕೊಡಬೇಕು !
ಜಾಗತಿಕ ‘ಆರ್ಥಿಕ ವ್ಯವಸ್ಥೆಯ ವಿಷಯದಲ್ಲಿ ಮಾತ ನಾಡುವ ಯುವಲ ನೋಹ ಹರಾರಿ ಇವನೊಬ್ಬ ದೊಡ್ಡ ತತ್ತ್ವಜ್ಞಾನಿ (?) ಆಗಿದ್ದಾನೆ. ಅವನು, ‘ಆತ್ಮ ಅಥವಾ ದೇವರು ಅಸ್ತಿತ್ವದಲ್ಲಿಲ್ಲ’ ಎನ್ನುತ್ತಾನೆ. ಈಗ ಹಿಂದೂ ಧರ್ಮದ ಮೇಲೆ ಬಹಿರಂಗವಾಗಿ ಆಘಾತಗಳನ್ನು ಮಾಡಲಾಗುತ್ತಿದೆ; ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಧರ್ಮ ಬಲಿಷ್ಠ ವಾಗುತ್ತಿದೆ. ಬಾಗೇಶ್ವರ ಧಾಮದಲ್ಲಿನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮಹಾರಾಜರ ಸತ್ಸಂಗಕ್ಕೆ ಬರುವ ಜನದಟ್ಟಣೆಯನ್ನು ನೋಡಿ ಅವರಿಗೆ ಚಿಂತೆಯಾಗುತ್ತಿರಬಹುದು. ಆದ್ದರಿಂದ ಎರಡು ವಿಶೇಷ ಧರ್ಮಗಳು (ಇಸ್ಲಾಮ್ ಹಾಗೂ ಕ್ರೈಸ್ತ ಪಂಥಗಳು) ಹಿಂದೂ ಧರ್ಮವನ್ನು ನಾಶಗೊಳಿಸಬೇಕೆಂದು ಬಹಳ ಹಿಂದೆಯೇ ಕರೆ ನೀಡಿದ್ದವು, ಆದರೆ ಹಿಂದೂಗಳು ಅದನ್ನು ನಿರ್ಲಕ್ಷಿಸಿದರು. ಈಗ ರಾಜಕಾರಣಿಗಳೂ ಅದರಲ್ಲಿ ಸೇರಿದ್ದಾರೆ. ಆದ್ದರಿಂದ ಇದು ಒಂದು ರೀತಿಯಲ್ಲಿ ಹಿಂದೂ ಧರ್ಮದ ವಿರುದ್ಧ ಯುದ್ಧ ಸಾರಿದಂತಾಗಿದೆ ಹಾಗೂ ಅದನ್ನು ನಿರ್ಲಕ್ಷಿಸುವಂತಿಲ್ಲ. ಪುರಾಣಗಳಲ್ಲಿ ದೇವರು ಹಾಗೂ ಅಸುರರಲ್ಲಿನ ಪ್ರಾಚೀನ ಯುದ್ಧಗಳ ಬಗ್ಗೆ ಹೇಳ ಲಾಗಿದೆ. ಕೆಲವೊಮ್ಮೆ ಅಸುರರಿಗೆ ಆಶೀರ್ವಾದ ಸಿಗುತ್ತಿತ್ತು ಹಾಗೂ ಅವರು ಅಜೇಯರಂತೆ ವರ್ತಿಸುತ್ತಿದ್ದರು; ಆದರೆ ಯಾವಾಗಲೂ ದೇವತೆಗಳೇ ವಿಜಯೀಯಾಗುತ್ತಿದ್ದರು. ಇವೆಲ್ಲವೂ ಯುದ್ಧ ಮಾಡದೆ ಆಗಿರಲಿಲ್ಲ.
– ಮಾರಿಯಾ ವರ್ಥ, ಹಿಂದೂ ಧರ್ಮದ ಅಭ್ಯಾಸಕಿ, ಜರ್ಮನಿ.