ಮನೆಯಲ್ಲಿ ಸಂಗ್ರಹಿಸಿಡಬೇಕಾದ ಹೋಮಿಯೋಪಥಿ ಔಷಧಗಳು

‘ಮನೆಯಲ್ಲಿಯೆ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ ! (ಲೇಖನ ೬)

ಸದ್ಯದ ಒತ್ತಡದ ಜೀವನದಲ್ಲಿ ಯಾರಾದರೂ ಮತ್ತು ಯಾವಾಗ ಲಾದರು ಸೋಂಕು ರೋಗಗಳಿಗೆ ಅಥವಾ ಇತರ ಯಾವುದೇ ರೋಗಗಳಿಗೆ ಬಲಿಯಾಗುವ ಸಾಧ್ಯತೆಯಿರುತ್ತದೆ. ಇಂತಹ ಸಮಯದಲ್ಲಿ ಕೂಡಲೇ ತಜ್ಞ ವೈದ್ಯಕೀಯ ಸಲಹೆ ಸಿಗುವುದೆಂದು ಹೇಳಲು ಬರುವುದಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಪಿತ್ತ ಇಂತಹ ವಿವಿಧ ರೋಗಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಹೋಮಿಯೋಪಥಿ ಚಿಕಿತ್ಸಾಪದ್ಧತಿ ಅತ್ಯಂತ ಉಪಯೋಗಿ ಆಗಿದೆ. ಈ ಉಪಚಾರ ಪದ್ಧತಿಯನ್ನು ಮನೆಯಲ್ಲಿಯೆ ಹೇಗೆ ಮಾಡಬಹುದು ? ಹೋಮಿಯೋಪಥಿ ಔಷಧಗಳನ್ನು ಮನೆಯಲ್ಲಿಯೇ ಹೇಗೆ ತಯಾರಿಸಬೇಕು ? ಅವುಗಳನ್ನು ಮನೆಯಲ್ಲಿಯೇ ಹೇಗೆ ಸಂಗ್ರಹಿಸಿಡಬೇಕು ? ಇಂತಹ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನದ ಮೂಲಕ ಕೊಡುತ್ತಿದ್ದೇವೆ.

೨೫/೦೫ರ ಸಂಚಿಕೆಯಲ್ಲಿನ ಲೇಖನದಲ್ಲಿ ನಾವು ‘ಹೋಮಿಯೋಪಥಿ ಔಷಧಗಳನ್ನು ಎಷ್ಟು ದಿನ ಸೇವಿಸಬೇಕು ? ಕಾಯಿಲೆ ಗುಣವಾದನಂತರ ಬಾಕಿ ಉಳಿದ ಔಷಧ ಏನು ಮಾಡಬೇಕು ?, ತಪ್ಪಿ ಹೋಮಿಯೋಪಥಿ ಔಷಧಗಳನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡರೆ ಏನು ಮಾಡಬೇಕು ? ಬೇರೆ ಪದ್ಧತಿಯ ಉಪಚಾರ ನಡೆಯುತಿದ್ದರೆ ಆಗ ಏನು ಮಾಡಬೇಕು ? ಹಾಗೂ ಮನೆಯಲ್ಲಿ ಉಪಯೋಗಿಸಲು ಹೋಮಿಯೋಪಥಿ ಔಷಧಗಳನ್ನು ಸಂಗ್ರಹಿಸಿಡುವ ಅವಶ್ಯಕತೆ ಏನಿದೆ ?’, ಎಂಬ ವಿಷಯದ ಮಾಹಿತಿಯನ್ನು ಓದಿದೆವು. ಇಂದು ನಾವು ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ .

ಹೊಮಿಯೋಪಥಿ ಔಷಧಿಗಳನ್ನಿಡಲು ಸಾಗುವಾನಿ ಮರದ ಖಾನೆಗಳಿರುವ ಪೆಟ್ಟಿಗೆ ಮತ್ತು ಖಾನೆಗಳಿರುವ ಚೀಲ (ಪೌಚ್)

೭. ಆ. ಮನೆಯಲ್ಲಿ ಉಪಯೋಗಿಸಲು ಯಾವ ಔಷಧಗಳನ್ನು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಬೇಕು ? : ಮನೆಯಲ್ಲಿ ಉಪಯೋಗಿಸಲು ಹೋಮಿಯೋಪಥಿ ಔಷಧಗಳನ್ನು ‘ಎಸ್‌.ಬಿ.ಎಲ್‌.’, ‘ಎಲನ್’ (Allen), ಭಾರ್ಗವ, ಭಂಡಾರಿ ಇತ್ಯಾದಿ ಇಂತಹ ಪ್ರಖ್ಯಾತ ಕಂಪನಿಗಳ ಔಷಧಗಳನ್ನು ಖರೀದಿಸಬೇಕು. ನಮ್ಮ ಸಂಗ್ರಹದಲ್ಲಿ ಪ್ರತಿಯೊಂದನ್ನು ೩೦ ‘ಪೊಟೆನ್ಸಿ’ಯ (ಶಕ್ತಿಯ) ಹಾಗೂ ೧೫ ಮಿ.ಲೀ. ಪ್ರಮಾಣದಲ್ಲಿ ಕನಿಷ್ಠ ಮುಂದಿನ ಔಷಧಗಳನ್ನು ಇಟ್ಟುಕೊಳ್ಳಬಹುದು. ಔಷಧಗಳನ್ನು ಅವುಗಳ ಆಂಗ್ಲ ಹೆಸರಿನ ಆದ್ಯಾಕ್ಷರಿಗಳಿಗನುಸಾರ ಕ್ರಮದಲ್ಲಿ ಕೊಡಲಾಗಿದೆ.

೧. ಎಕೋನಾಯಿಟ್‌ ನ್ಯಾಪೆಲಸ್‌ (Aconite Napellus)
೨. ಎಲಿಯಮ್‌ ಸೇಪಾ (Allium Cepa)
೩. ಎಲೋ ಸೋಕೋಟ್ರಿನಾ (Aloe Socotrina)
೪. ಎಂಟಿಮೊನಿಯಮ್‌ ಕ್ರೂಡಮ್‌ (Antimonium Crudum)
೫. ಅರ್ನಿಕಾ ಮೊಂಟಾನಾ (Arnica Montana)
೬. ಅರ್ಸೆನಿಕಮ್‌ ಅಲ್ಬಮ್‌ (Arsenic Album)
೭. ಬೆಲಾಡೋನಾ (Belladona)
೮. ಬ್ರಾಯೋನಿಯಾ ಅಲ್ಬಾ (Bryonia Alba)
೯. ಕಲ್ಕೇರಿಯಾ ಫಾಸ್ಪೋರಿಕಮ್‌ (Calcarea Phosphoricum)
೧೦. ಕ್ಯಾಲೆಂಡುಲಾ ಆಫಿಸಿನಲಿಸ್‌ (Calendula Officinalis)
೧೧. ಕ್ಯಾನ್ಥರಿಸ್‌ ವೆಸಿಕಾಟೋರಿಯಾ (Cantharis Vesicatoria)
೧೨. ಕಾರ್ಬೋ ವೆಜಿಟಾಬಿಲಿಸ್‌ (Carbo Vegetabilis)
೧೩. ಚಾಯನಾ ಆಫಿಸಿನಾಲಿಸ್‌ (China Officinalis)
೧೪. ಕೊಲೋಸಿಂಥಿಸ್‌ (Colocynthis)
೧೫. ಡ್ರಾಸೆರಾ ರೊಟಂಡಿಫೊಲಿಯಾ (Drosera Rotundifolia)
೧೬. ಯುಪಟೋರಿಯಮ್‌ ಪರ್ಫೋಲಿಯೇಟಮ್‌ (Eupatorium Perfoliatum)
೧೭. ಜಲ್ಸೇಮಿಯಮ್‌ ಸೆಮ್ಪರ್ವಿರೇನ್ಸ್ (Gelsemium Sempervirens)
೧೮. ಗ್ರಾಫಾಯಟಿಸ್‌ (Graphites)
೧೯. ಹೇಪಾರ ಸಲ್ಫುರಿಸ್‌ ಕ್ಯಾಲ್ಕರಿಯಾ (Hepar Sulphuris Calcarea)
೨೦. ಇಪೆಕಾಕುಆನಾ (Ipecacuanha)
೨೧. ಲೆಡಮ್‌ ಪಾಲುಸ್ರೇ (Ledum Palustre)
೨೨. ಲೈಕೋಪೋಡಿಯಮ್‌ ಕ್ಲೆವೇಟಮ್‌ (Lycopodium Clavatum)
೨೩. ಮರ್ಕ್ಯುರಿಯಸ್‌ ಸಾಲ್ಯುಬಿಲಿಸ್‌ (Mercurius Solubilis)
೨೪. ನಕ್ಸ್ ವೋಮಿಕಾ (Nux Vomica)
೨೫. ಫಾಫ್ಸೋರಸ್‌ (Phosphorous)
೨೬. ಪೋಡೋಫೈಲಮ್‌ ಪೆಲ್ಟಾಟಮ್‌ (Podophyllum Peltatum)
೨೭. ಪಲ್ಸೆಟಿಲಾ ನಿಗ್ರಿಕನ್ಸ್ (Pulsatilla Nigricans)
೨೮. ಹ್ರಸ್‌ ಟಾಕ್ಸಿಕೋಡೆಂಡ್ರಾನ್‌ (Rhus Toxicodendron)
೨೯. ರುಟಾ ಗ್ರ್ಯಾವಿಓಲೆನ್ಸ್ (Ruta Graveolens)
೩೦. ಸೇಪಿಯಾ ಆಫಿಸಿನಾಲಿಸ್‌ (Sepia Officinalis)
೩೧. ಸಲ್ಫರ್‌ (Sulphur)
೩೨. ಸಿಂಫೈಟಮ್‌ ಆಫಿಸಿನಾಲಿಸ್‌ (Symphytum Officinalis)
೩೩. ಆರ್ಟಿಕಾ ಯುರೇನ್ಸ್ (Urtica Urens)

೭ ಇ. ಔಷಧಗಳನ್ನು ಹೇಗೆ ಸಂಗ್ರಹಿಸಿಡಬೇಕು ? : ಹೋಮಿಯೋಪಥಿ ಔಷಧಗಳನ್ನು ಇಡಲು ಮೇಲೆ ಚಿತ್ರದಲ್ಲಿ ತೋರಿಸಿದಂತಹ ವಿಶಿಷ್ಟ ಪ್ರಕಾರದ, ವಿವಿಧ ಆಕಾರದ ಸಾಗವಾನಿ ಮರದ ಪೆಟ್ಟಿಗೆಗಳು ಸಿಗುತ್ತವೆ. ಇತ್ತೀಚೆಗೆ ಖಾನೆಗಳಿರುವ ಚೀಲಗಳೂ (ಪೌಚ್‌ಗಳೂ) ಸಿಗುತ್ತವೆ. ಪೆಟ್ಟಿಗೆ ಮತ್ತು ಚೀಲ ಹೋಮಿಯೋಪಥಿ ಔಷಧಗಳು ಸಿಗುವ ದೊಡ್ಡ ಅಂಗಡಿಗಳಲ್ಲಿ ಸಿಗುತ್ತವೆ. ಈ ಒಂದೊಂದು ಪೆಟ್ಟಿಗೆ ಅಥವಾ ಚೀಲಗಳಲ್ಲಿ ೪೦, ೬೦, ೮೦, ೧೨೦ ಇಷ್ಟೊಂದು ಪ್ರಮಾಣದಲ್ಲಿ ಬಾಟ್ಲಿಗಳನ್ನು ಇಡಬಹುದು ಹಾಗೂ ಪ್ರವಾಸದಲ್ಲಿ ಕೂಡ ಅವುಗಳನ್ನು ಜೊತೆಗಿಟ್ಟುಕೊಳ್ಳಬಹುದು. ಪ್ರತಿಯೊಂದು ಬಾಟ್ಲಿಯ ಮೇಲೆ ಔಷಧದ ಹೆಸರನ್ನು ಬರೆದಿರಬೇಕು.

ಹೋಮಿಯೋಪಥಿ ಔಷಧಗಳಲ್ಲಿ ‘ಅಲ್ಕೋಹಾಲ್’ ಇರುವುದರಿಂದ ಅವು ಬಾಷ್ಪೀಭವನ ಆಗುವ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಈ ಔಷಧಗಳನ್ನು ತಂಪು ಸ್ಥಳದಲ್ಲಿಡಬೇಕು ಹಾಗೂ ಸೂರ್ಯನ ಪ್ರಕಾಶದಿಂದ ದೂರಿಡಬೇಕು. ಸ್ಪ್ರೇ, ಕೀಟನಾಶಕಗಳು, ಆಧುನಿಕ ಔಷಧಗಳು ಮತ್ತು ಕರ್ಪೂರದಿಂದ ಹೋಮಿಯೋಪಥಿ ಔಷಧಗಳನ್ನು ದೂರವಿಡಬೇಕು. (ಮುಂದುವರಿಯುವುದು)