ಹಮಾಸ ಎಂಬ ಪ್ಯಾಲೆಸ್ಟೈನ್ ಜಿಹಾದಿ ಭಯೋತ್ಪಾದಕ ಸಂಘಟನೆಯು ಇಸ್ರೈಲ್‌ನ ಮೇಲೆ ನಡೆಸಿದ ದಾಳಿಯ ನಂತರ ಇಡೀ ಜಗತ್ತು ೨ ಗುಂಪುಗಳಲ್ಲಿ ವಿಭಜಿಸಲ್ಪಟ್ಟಿದೆ. ಒಂದು ಗುಂಪು ಹಮಾಸ ಪರವಾಗಿ, ಇನ್ನೊಂದು ಗುಂಪು ಇಸ್ರೈಲ್ ಪರವಾಗಿದೆ. ಜಗತ್ತಿನಲ್ಲಿನ ಬಹುತೇಕ ಮುಸ್ಲಿಂ ದೇಶಗಳು ಹಮಾಸ ಪರವಾಗಿವೆ. ಏಕೆಂದರೆ ಹಮಾಸ ಮುಸಲ್ಮಾನರ ಸಂಘಟನೆ ಆಗಿದೆ. ಇಸ್ರೈಲ್‌ನ ಅಕ್ಕಪಕ್ಕದಲ್ಲಿರುವ ಎಲ್ಲ ದೇಶಗಳೂ ಇಸ್ಲಾಮೀ ದೇಶಗಳಾಗಿವೆ. ಕಳೆದ ೭೫ ವರ್ಷಗಳಿಂದ ಇಸ್ರೈಲ್ ಅವರೆಲ್ಲರೊಂದಿಗೆ ಹೋರಾಡುತ್ತ ಗೌರವದಿಂದ ಘನತೆಯಿಂದ ಬದುಕುತ್ತಿದೆ. ಇದಕ್ಕಾಗಿಯೇ ಅನೇಕ ಇಸ್ಲಾಮಿಕ್ ದೇಶಗಳು ಇಸ್ರೈಲ್ನ್ನು ‘ದೇಶ’ ಎಂದು ಪರಿಗಣಿಸುವುದಿಲ್ಲ. ಇಸ್ರೈಲ್ ಪ್ಯಾಲೆಸ್ಟೈನಿನ ಭೂಮಿಯನ್ನು ಕಬಳಿಸಿ ಅಲ್ಲಿ ತನ್ನ ದೇಶವನ್ನು ರಚಿಸಿಕೊಂಡಿರುವುದಾಗಿ ಪ್ಯಾಲೆಸ್ಟೈನಿಯನ್ನರು ಆರೋಪಿಸುತ್ತಾರೆ ಮತ್ತು ‘ಮುಸಲ್ಮಾನರ ಮೇಲೆ ಇಸ್ರೈಲ್ ದೌರ್ಜನ್ಯ ನಡೆಸಿದೆ’ ಎಂದು ಮುಸ್ಲಿಂ ದೇಶಗಳು ಇಸ್ರೈಲ್‌ನ್ನು ವಿರೋಧಿಸುತ್ತವೆ. ಭಾರತದಲ್ಲಿಯೂ ಕಾಂಗ್ರೆಸ್ ರಾಜ್ಯ ಇರುವವರೆಗೆ ಪ್ಯಾಲೆಸ್ಟಾಯೀನನ್ನು ಬಹಿರಂಗವಾಗಿ ಸಮರ್ಥಿಸಲಾಗುತ್ತಿತ್ತು. ಪ್ಯಾಲೆಸ್ಟೈನನ ಫಾತೀಹಾ ಪಕ್ಷದ ನಾಯಕ ಯಾಸರ ಅರಾಫತನನ್ನು ಇಂದಿರಾ ಗಾಂಧಿ, ರಾಜೀವ ಗಾಂಧಿ ಮುಂತಾದ ಕಾಂಗ್ರೆಸ್ಸಿಗರು ಓಲೈಸುತ್ತಿದ್ದರು’ ಇದನ್ನು ಯಾರೂ ಮರೆಯಲಾರರು. ಇದರ ಹಿಂದೆ ಭಾರತದಲ್ಲಿರುವ ಮುಸಲ್ಮಾನರನ್ನು ಓಲೈಸಿ ಅವರ ಮತಗಳನ್ನು ಗಳಿಸುವ ಏಕೈಕ ಸ್ವಾರ್ಥ ಅಡಗಿತ್ತು. ಇಂದಿಗೂ ಕಾಂಗ್ರೆಸ್ಸಿಗರ ಮಾನಸಿಕತೆ ಹಾಗೆಯೇ ಇದೆ. ಕಾಂಗ್ರೆಸ್ ಮಾತ್ರವಲ್ಲ, ಇತರ ಮುಸ್ಲಿಂಪ್ರೇಮಿ ಮತ್ತು ಹಿಂದೂದ್ವೇಷಿ ರಾಜಕೀಯ ಪಕ್ಷಗಳೂ ಇದನ್ನೇ ಮಾಡುತ್ತಿವೆ. ಉತ್ತರಪ್ರದೇಶದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮುಸಲ್ಮಾನ ವಿದ್ಯಾರ್ಥಿಗಳು ಮೆರವಣಿಗೆಯನ್ನು ನಡೆಸಿ ‘ಹಮಾಸ್’ನ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿದರು.
ಹಾಗೆಯೇ ಈ ವಿಶ್ವವಿದ್ಯಾಲಯದ ಜಿಹಾದಿ ಮಾನಸಿಕತೆಯ ಮಾಜಿ ವಿದ್ಯಾರ್ಥಿ ಶರಜಿಲ್ ಉಸ್ಮಾನಿಯು, ‘ಮುಸಲ್ಮಾನರು ಹಮಾಸ್ನ್ನು ಬೆಂಬಲಿಸುತ್ತಾರೆ ಮತ್ತು ಭಾರತದ ಹಿಂದುತ್ವನಿಷ್ಠರು ಅದನ್ನು ವಿರೋಧಿಸುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಇದು ಮುಸಲ್ಮಾನರ ಹೇಳಿಕೆಯಾದರೆ, ಭಾರತದಲ್ಲಿರುವ ಕೆಲವು ಜಾತ್ಯತೀತವಾದಿ ಮತ್ತು ಪ್ರಗತಿ(ಅಧೋ)ಪರ ಹಿಂದೂಗಳೂ ಸಹ ಹಮಾಸ್ನ್ನು ಬೆಂಬಲಿಸುತ್ತಿದ್ದಾರೆ. ಇದರಲ್ಲಿ ಸದಾ ಮುಂಚೂಣಿಯಲ್ಲಿರುವ ನಟಿ ಸ್ವರಾ ಭಾಸ್ಕರ, ಟ್ವೀಟ್ ಮಾಡಿ ‘ಹಮಾಸ್ ನಡೆಸಿದ ಅತ್ಯಾಚಾರಗಳ ಬಗ್ಗೆ ಮಾತನಾಡುವವರು ಈ ಹಿಂದೆ ಪ್ಯಾಲೆಸ್ಟೈನದ ಮೇಲಾದ ದೌರ್ಜನ್ಯದ ಬಗ್ಗೆ ಮೌನ ವಾಗಿದ್ದಾರೆ’ ಎಂದು ಹೇಳಿ ಬೆಂಬಲಿಸಿದ್ದಾರೆ. ಜಗತ್ತಿನಾದ್ಯಂತದ ಮುಸಲ್ಮಾನರು ಎಲ್ಲಿದ್ದರೂ ಒಂದೇ ಆಗಿರುತ್ತಾರೆಂಬುದನ್ನು ಇದು ತೋರಿಸುತ್ತದೆ. ಹಿಂದೂಗಳ ಸ್ಥಿತಿ ಇದಕ್ಕೆ ವಿರುದ್ಧ ವಾಗಿದೆ. ಹಿಂದೂಗಳು ನೆರೆಹೊರೆಯವರಾಗಿದ್ದರೂ, ಪರಸ್ಪರ ಸಹಾಯ ಮಾಡುವುದಿಲ್ಲ. ಭಾರತದಲ್ಲಿರುವ ಮತಾಂಧ ಮುಸಲ್ಮಾನರು ಮತ್ತು ಜಾತ್ಯತೀತವಾದಿಗಳು ಯಾರ ಪರವಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹಮಾಸನ್ನು ವಿರೋಧಿಸುವ ಒಬ್ಬನೇ ಒಬ್ಬ ಮುಸಲ್ಮಾನ ಅಥವಾ ಮುಸ್ಲಿಂ ಸಂಘಟನೆಯು ಮುಂದೆ ಬಂದಿಲ್ಲ. ಹಮಾಸ್ ಇಸ್ರೈಲ್ ಮೇಲೆ ಕೇವಲ ದಾಳಿ ಮಾತ್ರ ನಡೆಸಿಲ್ಲ. ಇಸ್ರೈಲ್‌ನಲ್ಲಿ ನುಗ್ಗಿ ಇಸ್ರೈಲ್ ನಾಗರಿಕರನ್ನು ಬಂಧಿಸಿದೆ. ಇದರಲ್ಲಿ ಪುರುಷರು, ಮಕ್ಕಳು ಮತ್ತು ಮಹಿಳೆಯರೂ ಇದ್ದಾರೆ. ಅವರ ಮೇಲೆ ದೌರ್ಜನ್ಯ ಎಸಗಿ ಅವರನ್ನು ಕೊಲ್ಲಲಾಗುತ್ತಿದೆ. ಮಹಿಳೆಯರನ್ನು ಬಲಾತ್ಕರಿಸಿ ಅವರನ್ನು ವಿವಸ್ತ್ರಗೊಳಿಸಿ ಮೆರವಣಿಗೆಯನ್ನು ಮಾಡಲಾಗುತ್ತಿದೆ. ಹತ್ಯೆಗೀಡಾದ ಇಸ್ರೈಲ್ ನಾಗರಿಕರ ಮೇಲೆ ಮೂತ್ರ ವಿಸರ್ಜಿಸುತ್ತಿರುವ, ಮಕ್ಕಳನ್ನು ಪಕ್ಷಿಗಳು ಮತ್ತು ಪ್ರಾಣಿಗಳ ಪಂಜರದಲ್ಲಿ ಇಟ್ಟಿರುವ ವೀಡಿಯೊಗಳು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಎಷ್ಟರಮಟ್ಟಿಗೆ ಕ್ರೌರ್ಯವನ್ನು ಮಾಡಲು ಸಾಧ್ಯವಿದೆಯೋ, ಅಸ್ಪಷ್ಟ ಕ್ರೌರ್ಯವನ್ನು ಹಮಾಸ್‌ನ ಈ ಜಿಹಾದಿ ಭಯೋತ್ಪಾದಕರು ಮಾಡುತ್ತಿದ್ದಾರೆ. ಇದಕ್ಕೆ ಯುದ್ಧ ಎಂದು ಹೇಳಲು ಬರುವುದಿಲ್ಲ, ಇದು ‘ಜಿಹಾದ್’ ಆಗಿದೆ. ಇದು ಯಹೂದಿಗಳ (ಜ್ಯೂ ಜನರ) ವಿರುದ್ಧ ಪ್ಯಾಲೆಸ್ಟೈನ್ ಮುಸ್ಲಿಮರು ಘೋಷಿಸಿದ ಜಿಹಾದ್ ಆಗಿದೆ. ಅದಕ್ಕಾಗಿಯೇ ಇಷ್ಟೊಂದು ದೌರ್ಜನ್ಯಗಳನ್ನು ಮಾಡುವವರಿಗೆ ಇರಾನ್, ತುರ್ಕಿಯೇ, ಕತಾರ್, ಯೆಮೆನ್, ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶಗಳು ಬೆಂಬಲ ನೀಡುತ್ತಿವೆ. ಅವರು ಹಮಾಸನ ದೌರ್ಜನ್ಯವನ್ನು ವಿರೋಧಿಸಿ ಒಂದೇ ಒಂದು ಮಾತಾಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
ಭಾರತದಲ್ಲಿನ ಹಿಂದೂಗಳೂ ಅಸುರಕ್ಷಿತರು !
ಇಸ್ರೈಲ್ ಪ್ರತೀಕಾರವಾಗಿ ಪ್ಯಾಲೆಸ್ಟೈನ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ ಬಳಿಕ ಇಸ್ರೈಲ್ ನಿರಾಶ್ರಿತ ಮುಸಲ್ಮಾನರ ಸ್ಥಳದಲ್ಲಿರುವ ಮಸೀದಿಗಳ ಧ್ವ್ವನಿವರ್ಧಕಗಳಿಂದ ಇಸ್ರೈಲ್ ವಿರುದ್ಧ ಯುದ್ಧ ಮಾಡಲು ಸ್ಥಳೀಯ ಮುಸಲ್ಮಾನರನ್ನು ಪ್ರಚೋದಿಸಲಾಗುತ್ತಿದೆ. ಇವರನ್ನು ಇಸ್ರೈಲ್ ನಂತರ ವಿಚಾರಿಸಿ
ಕೊಳ್ಳುವುದು; ಆದರೆ ‘ಜಿಹಾದ್ ಮಾಡಲು ದೇಶ ಮಹತ್ವದ್ದಾಗಿರುವುದಿಲ್ಲ, ಧರ್ಮ ಮಹತ್ವದ್ದಾಗಿರುತ್ತದೆ’, ಎನ್ನುವುದನ್ನು ಇಲ್ಲಿ ಗಮನದಲ್ಲಿಡಬೇಕು. ‘ಇಸ್ಲಾಂನ ಪ್ರಕಾರ, ಮುಸ್ಲಿಮರನ್ನು ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ಮತ್ತು ಅವರ ಅನುಯಾಯಿಗಳು ಕಾಫೀರ ಆಗಿದ್ದಾರೆ. ಅವರನ್ನು ಕೊಲ್ಲುವುದು ಧರ್ಮಪಾಲನೆಯಾಗಿದೆ. ಅವರ ಸಂಪತ್ತು ಮತ್ತು ಮಹಿಳೆಯರನ್ನು ದೋಚುವುದು ಕರ್ತವ್ಯ ವಾಗಿದೆ’ ಎಂಬಂತಹ ಪಾಠವನ್ನು ಕಲಿಸಲಾಗುತ್ತದೆ. ಇದರಿಂದಲೇ ಇಂತಹ ಮಾನಸಿಕತೆ ನಿರ್ಮಾಣವಾಗಿದೆ. ಈ ಮಾನಸಿಕತೆಯಿಂದಲೇ ಕಾಶ್ಮೀರದಲ್ಲಿ ೩೩ ವರ್ಷಗಳ ಹಿಂದೆ ಹಿಂದೂಗಳ ನರಮೇಧÀವಾಗಿ ಅವರು ಅಲ್ಲಿಂದ ಪಲಾಯನ ಮಾಡಬೇಕಾಯಿತು. ವಿಭಜನೆಯ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ಇದನ್ನೇ ತೋರಿಸುತ್ತದೆ. ಭಾರತದಲ್ಲಿಯೂ ಹಲವು ಜಿಲ್ಲೆಗಳು ಮುಸ್ಲಿಂ ಬಹುಸಂಖ್ಯಾತವಾಗಿವೆ. ಕೇರಳದ ಮಲಪ್ಪುರಂ ಇದಕ್ಕೆ ಕುಖ್ಯಾತಿ ಪಡೆದಿದೆ. ‘ಭವಿμಯ್Àದಲ್ಲಿ ಪಾಕಿಸ್ತಾನದೊಂದಿಗೆ ಯುದ್ಧವಾದರೆ, ಭಾರತದ ದೇಶದ್ರೋಹಿಗಳು ಮತ್ತು ಮತಾಂಧರು ಜಿಹಾದ್‌ಗೆ ಕರೆ ನೀಡಿದರೆ, ಅದನ್ನು ಎದುರಿಸುವ ಶಕ್ತಿ ಮತ್ತು ಸಿದ್ಧತೆ ಇತರ ನಾಗರಿಕರಲ್ಲಿದೆಯೇ ?’, ‘ಭದ್ರತಾ ವ್ಯವಸ್ಥೆಯಲ್ಲಿದೆಯೇ ?’, ಆಡಳಿತಗಾರರಾದರೂ ಅವರನ್ನು ರಕ್ಷಿಸುವರೇ ? ಇಂತಹ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಈಗಲೂ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮಸೀದಿಗಳಿಂದ ದಾಳಿ ಮಾಡಲಾಗುತ್ತದೆ. ಹಾಡುಹಗಲೇ ಹಿಂದೂಗಳ ತಲೆ ಕಡಿಯಲಾಗುತ್ತದೆ. ಅಲ್ಲದೇ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿ ನಂತರ ಅವರನ್ನು ತುಂಡುಗಳಾಗಿ ಮಾಡಲಾಗುತ್ತದೆ. ಹಿಂದುತ್ವನಿಷ್ಠರನ್ನು ಹೆಕ್ಕಿ ಕೊಲೆ ಮಾಡಲಾಗುತ್ತದೆ. ಈ ಸ್ಥಿತಿಯು ಭವಿಷ್ಯದ ಸ್ಥಿತಿಯ ಕಲ್ಪನೆಯನ್ನು ಮಾಡಿಕೊಡುತ್ತದೆ. ನಾಸ್ಟ್ರ್ರಾಡಾಮಸ್ಸನ ಭವಿಷ್ಯವಾಣಿಯ ಪ್ರಕಾರ, ‘ಇಸ್ರೈಲ್ ಮತ್ತು ಹಮಾಸ್ ನಡುವಿನ ಯುದ್ಧವು ೩ ನೇ ಮಹಾಯುದ್ಧದ ನಾಂದಿಯಾಗಿದೆ’ ಎನ್ನಲಾಗಿದೆ. ಆದ್ದರಿಂದ ಈ ಯುದ್ಧವು ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧವಾಗಿರಲಿದೆ. ಇದರಲ್ಲಿ ಧರ್ಮವೆಂದರೆ ಕೇವಲ ಪಂಥವಲ್ಲ, ಯೋಗ್ಯ ಆಚರಣೆ ಮತ್ತು ಸರಿಯಾದ ನಡವಳಿಕೆ ಇದುವೇ ಧರ್ಮವಾಗಿದೆ. ಅಮಾಯಕರನ್ನು ಕೊಲ್ಲುವುದು ಯುದ್ಧದ ಧರ್ಮವಲ್ಲ. ಹಮಾಸ ಇಂದು ಇದರ ವಿರುದ್ಧ ಕೃತ್ಯಗಳನ್ನು ಮಾಡುತ್ತಿದೆ.
ಈ ಅಧರ್ಮದ ವಿರುದ್ಧವೇ ಜಗತ್ತಿನಾದ್ಯಂತ ದಂಗೆಯೇಳ ಬಹುದು. ಈ ಯುದ್ಧವು ಬಹಳ ವಿನಾಶಕಾರಿಯಾಗಲಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ವಿನಾಶದ ಕಾಲದಲ್ಲಿ ತನ್ನನ್ನು, ತನ್ನ ಕುಟುಂಬವನ್ನು, ತನ್ನ ಧರ್ಮವನ್ನು ಮತ್ತು ತನ್ನ ದೇಶವನ್ನು ರಕ್ಷಿಸುವ ಸಿದ್ಧತೆಯನ್ನು ಪ್ರತಿಯೊಬ್ಬ ಧಾರ್ಮಿಕ ವ್ಯಕ್ತಿಯೂ ಮಾಡಬೇಕು. ಇದಕ್ಕಾಗಿ ಈಗ ಸಮರೋಪಾದಿಯಲ್ಲಿ ಪ್ರಯತ್ನಿಸುವುದು ಆವಶ್ಯಕವಾಗಿದೆ.