ಭಾರತೀಯ ಸೇನಾಧಿಕಾರಿಗಳ ಮೊಬೈಲ್ ನಲ್ಲಿ ‘ವೈರಸ್’ ಕಳಿಸಿ ಸೂಕ್ಷ್ಮ ಮಾಹಿತಿ ಕದಿಯುತ್ತಿದ್ದ ಪಾಕಿಸ್ತಾನಿ ಗೂಢಚಾರನ ಬಂಧನ !

ಗುಜರಾತ್ ಭಯೋತ್ಪಾದನಾ ನಿಗ್ರಹ ದಳದಿಂದ ಕಾರ್ಯಾಚರಣೆ !

ಕರ್ಣಾವತಿ (ಗುಜರಾತ್) – ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಅಕ್ಟೋಬರ್ 20 ರಂದು ಓರ್ವ ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಿದೆ. ಅವನು 1999 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾನೆ. ಅವನು ಭಾರತೀಯ ಪೌರತ್ವವನ್ನೂ ಪಡೆದಿದ್ದು, ಅವನ ಪರಿಚಯದ ಭಾರತೀಯರನ್ನೂ ಈಗ ಹುಡುಕಲಾಗುತ್ತಿದೆ. ಇದಕ್ಕಾಗಿ ತಂಡವು ವಿವಿಧೆಡೆ ದಾಳಿ ನಡೆಸುತ್ತಿದೆ.

ಭಾರತೀಯ ಸೇನೆಯ ಬಗ್ಗೆ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ನೀಡುತ್ತಿದ್ದ ಲಾಬಶಂಕರ ದುರ್ಯೋಧನ ಮಹೇಶ್ವರಿನನ್ನು ಬಂಧಿಸಲಾಗಿರುವ ಪಾಕ್ ಗೂಢಚಾರಿಯ ಹೆಸರಾಗಿದೆ. ಅವನು ಗುಜರಾತ್‌ನ ಆನಂದ್ ಜಿಲ್ಲೆಯ ತಾರಾಪುರದಲ್ಲಿ ವಾಸಿಸುತ್ತಿದ್ದನು. ಆತನಿಂದ ಹಣ ಹಾಗೂ ಸಿಮ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ತಾನು ಆರ್ಮಿ ಪಬ್ಲಿಕ್ ಸ್ಕೂಲ್‌ನ ಅಧಿಕಾರಿ ಎಂದು ಹೇಳಿಕೊಂಡು ವಾಟ್ಸಪ್ ಮೂಲಕ ಸೇನಾ ಅಧಿಕಾರಿಗಳು ಮತ್ತು ಅವರ ಕುಟುಂಬದವರನ್ನು ಸಂಪರ್ಕಿಸುತ್ತಿದ್ದನು. ಸಂಪರ್ಕ ಸ್ಥಾಪಿಸಿದ ನಂತರ, ಅವರ ಮೊಬೈಲಗೆ ಮಹೇಶ್ವರಿ ‘ರಿಮೋಟ್ ಆಕ್ಸೆಸ್ ಟ್ರೋಜನ್ ಮಾಲವೇರ್’ ಹೆಸರಿನ ಕಂಪ್ಯೂಟರ್ ಮೂಲಕ (‘ವೈರಸ್’ ಮೂಲಕ) ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದನು. ಈ ಮಾಧ್ಯಮದಿಂದ ಅವನು ಭಾರತೀಯ ಸೇನೆಯ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಂಡು ಅದನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಗೆ ನೀಡುತ್ತಿದ್ದನು.