೧. ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವವರಿಗೆ ಬಂಧುಬಳಗದಿಂದ ವಿರೋಧವಾಗುವುದು; ಆದರೆ ಗುರು ಮತ್ತು ಈಶ್ವರ ಅವರಿಗೆ ಸರ್ವೋಚ್ಚ ಆನಂದ ನೀಡುವುದು
’ನಮ್ಮ ಜನ್ಮದ ಉದ್ದೇಶ ’ಪ್ರಾರಬ್ಧ ಭೋಗವನ್ನು ಭೋಗಿಸಿ ತೀರಿಸುವುದು ಮತ್ತು ಆನಂದಪ್ರಾಪ್ತಿ (ಈಶ್ವರಪ್ರಾಪ್ತಿ)ಯನ್ನು ಮಾಡಿ ಕೊಳ್ಳುವುದು’ ಇದಾಗಿದೆ. ಆದರೆ ಇಂದು ಜನರಿಗೆ ಇದು ಸಂಪೂರ್ಣ ಮರೆತುಹೋಗಿದೆ. ಆದ್ದರಿಂದ ಇಂದು ಈಶ್ವರಪ್ರಾಪ್ತಿಗಾಗಿ ಪೂರ್ಣವೇಳೆ ಸಾಧನೆ ಮಾಡುವ ಅಥವಾ ಸಾಧನೆಗಾಗಿ ಹೆಚ್ಚೆಚ್ಚು ಸಮಯವನ್ನು ಕೊಡುವವರಿಗೆ ಅವರ ಬಂಧುಬಳಗದವರಿಂದ ವಿರೋಧವಾಗುತ್ತದೆ. ’ಸಾಧನೆ ಮಾಡುವುದು ಎಂದರೆ ಜೀವನವನ್ನು ವ್ಯರ್ಥಗೊಳಿಸುವುದು’, ಎಂದು ಅವರಿಗೆ ಅನಿಸುತ್ತದೆ. ಈ ವಿಷಯದಲ್ಲಿ ಪೂರ್ಣವೇಳೆ ಸಾಧನೆ ಮಾಡುವ ಸಾಧಕನ ಅನುಭವವನ್ನು ಕೇಳಿ ’ಗುರು ಮತ್ತು ಈಶ್ವರ ಇಂತಹ ಸಾಧಕರ ಹೇಗೆ ಕಾಳಜಿ ತೆಗೆದುಕೊಳ್ಳುತ್ತಾರೆ ? ಮತ್ತು ಅವನಿಗೆ ಸರ್ವೋಚ್ಚ ಸುಖ, ಅಂದರೆ ಆನಂದವನ್ನು ಹೇಗೆ ಪ್ರಾಪ್ತಮಾಡಿಕೊಡುತ್ತಾರೆ ?’, ಎಂಬುದನ್ನು ಕಲಿಯಬಹುದು.
೨. ಧರ್ಮಾಚರಣೆ ಮತ್ತು ಸಾಧನೆ ಮಾಡುವ ಇತರ ಪಂಥೀಯರನ್ನು ಅವರ ಪಂಥಬಾಂಧವರು ಪ್ರಶಂಸೆ ಮಾಡುವುದು, ಹಿಂದೂಗಳು ಅವರನ್ನು ವಿರೋಧಿಸುವುದು !
ಇತರ ಪಂಥೀಯರು ಅವರ ಪಂಥಕ್ಕನುಸಾರ ಆಚರಣೆ ಮಾಡುವವರನ್ನು ಪ್ರಶಂಸೆ ಮಾಡಿದರೆ, ಹಿಂದೂಗಳು ಅವರನ್ನು ಟೀಕಿಸುತ್ತಾರೆ. ಮುಸಲ್ಮಾನ ಕುಟುಂಬದಲ್ಲಿ ಯಾರಾದರೂ ಮುಲ್ಲಾ ಅಥವಾ ಮೌಲ್ವಿಯಾದರೆ, ಕ್ರೈಸ್ತ ಕುಟುಂಬದಲ್ಲಿ ಯಾರಾದರೂ ಫಾದರ್ ಅಥವಾ ನನ್‌ಗಳಾದರೆ ಅಥವಾ ಜೈನ ಪಂಥದಲ್ಲಿ ಯಾರಾದರೂ ಸನ್ಯಾಸ ಅಥವಾ ದೀಕ್ಷೆ ತೆಗೆದುಕೊಂಡರೆ ಅವರ ಕುಟುಂಬದವರು ಅದನ್ನು ಆ ವಿಷಯದಲ್ಲಿ ಅಭಿಮಾನದಿಂದ ಇತರರಿಗೆ ಹೇಳುತ್ತಾರೆ. ಅವರನ್ನು ಕೊಂಡಾಡುತ್ತಾರೆ; ಆದರೆ ’ಹಿಂದೂ ಧರ್ಮದವರಲ್ಲಿ ಯಾರಾದರೂ ಸಾಧನೆ ಮಾಡಲು ಆರಂಭಿಸಿದರೆ ಅಥವಾ ಧರ್ಮಕಾರ್ಯಕ್ಕಾಗಿ ಪೂರ್ಣವೇಳೆ ಸಮರ್ಪಿಸಿಕೊಂಡರೆ ಅವನ ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ’ಅವನು ದಾರಿ ತಪ್ಪಿದ್ದಾನೆ’, ಎಂದು ಅನಿಸುತ್ತದೆ.
೩. ಪೂರ್ಣವೇಳೆ ಸಾಧನೆ ಮಾಡಲು ನಿರ್ಧರಿಸಿದಾಗ ಆಗಿರುವ ವಿರೋಧ
ಒಬ್ಬ ಸಾಧಕ ಅಥವಾ ಸಾಧಕಿ ಪೂರ್ಣವೇಳೆ ಸಾಧನೆ ಮಾಡುವ ವಿಚಾರ ಮಾಡಿದರೆ ಅವನಿಗೆ / ಅವಳಿಗೆ ಎಲ್ಲರಿಂದ ಆರಂಭಿಕ ಹಂತದಲ್ಲಿ ತುಂಬಾ ವಿರೋಧವಾಗುತ್ತದೆ. ಅಂತಹ ವಿರೋಧವು ನನಗೂ ಆಗಿತ್ತು. ಆಪ್ತ-ಮಿತ್ರರು ನನಗೆ ಮೂರ್ಖ ಎಂದರು. ’ಇಷ್ಟು ಒಳ್ಳೆಯ ನೌಕರಿ ಇರುವಾಗ ನೌಕರಿ ಬಿಡುವ ದುರ್ಬುದ್ಧಿ ಬಂದಿದೆ. ’ಪತ್ನಿ ಮತ್ತು ಮಗಳ ಮುಂದಿನ ಜೀವನ ಹೇಗಾಗುವುದು?’, ಎಂಬುದರ ವಿಚಾರ ಮಾಡಿದ್ದೀಯಾ ? ಒಬ್ಬ ಹುಡುಗಿಯ (ಪತ್ನಿಯ) ಜೀವನವನ್ನು ಹಾಳು ಮಾಡುತ್ತಿದ್ದಿ. ನಿನ್ನ ಮಗಳು ಎಷ್ಟು ಚಿಕ್ಕವಳಿದ್ದಾಳೆ ಮತ್ತು ಮನೆಯಲ್ಲಿ ದುಡಿಯುವವರು ಬೇರೆ ಯಾರೂ ಇಲ್ಲ. ಸ್ವಂತ ಮನೆಯೂ ಇಲ್ಲ, ಸಾಕಷ್ಟು ಹಣವೂ ಇಲ್ಲ, ಜೀವನ ಹೇಗೆ ನಡೆಯುವುದು ? ಮುಂದೆ ಕಠಿಣ ಕಾಲ ಬರುವುದು, ಆಗ ಸಮಯ ಮೀರಿ ಹೋಗಿರುವುದು’, ಎಂದು ಹೇಳುತ್ತಾ ನನ್ನನ್ನು ಪೂರ್ಣ ವೇಳೆ ಸಾಧನೆ ಮಾಡದಂತೆ ತಡೆಯುವ ಪ್ರಯತ್ನ ಮಾಡಿದರು.
೪. ಸಾಧನೆಯಿಂದ ದೂರವಿಡಲು ಪ್ರಯತ್ನಿಸುವವರ ಮಾತುಗಳಿಂದ ಗುರುಕೃಪೆಯಿಂದಲೇ ಮನಸ್ಸಿನ ಮೇಲೆ ಪರಿಣಾಮವಾಗದಿರುವುದು
ಎಲ್ಲಕ್ಕಿಂತ ಆಶ್ಚರ್ಯದ ಸಂಗತಿ ಎಂದರೆ ನನ್ನನ್ನು ಸಾಧನೆಯಿಂದ ದೂರವಿಡಲು ಪ್ರಯತ್ನಿಸುವವರಲ್ಲಿ ಯಾರಿಗೂ ಸಾಧನೆ ಎಂದರೇನು ?’, ಎಂಬುದು ನಿಜವಾದ ಅರ್ಥದಲ್ಲಿ ಗೊತ್ತಿರಲಿಲ್ಲ. ಆದರೂ ಅವರು ’ಸಾಧನೆ ಮಾಡುವುದರಿಂದ ನನ್ನ ಜೀವನದಲ್ಲಿ ಅಪಾರ ಹಾನಿಯಾಗುವುದು !’, ಎಂದು ನನಗೆ ಹೇಳುತ್ತಿದ್ದರು; ಆದರೆ ಗುರುಕೃಪೆಯಿಂದ ಪೂರ್ಣವೇಳೆ ಸಾಧನೆ ಮಾಡುವ ನನ್ನ ನಿರ್ಣಯ ದೃಢವಾಗಿತ್ತು. ’ಇತರರು ಹೇಳುತ್ತಿದ್ದ ಯಾವುದೇ ವಿಷಯದಿಂದ ನನ್ನ ಮನಸ್ಸಿನ ಮೇಲೆ ಪರಿಣಾಮವಾಗಲಿಲ್ಲ’, ಇದು ಗುರುದೇವರ ಕೃಪೆಯೇ ಆಗಿತ್ತು.
೫. ಪೂರ್ಣವೇಳೆ ಸಾಧನೆ ಮಾಡಲು ಆರಂಭಿಸಿದ ನಂತರ ಮಾಯೆಯಲ್ಲಿನ ವಿಷಯಗಳಲ್ಲಿ ಸಿಲುಕದೆ ಸಾಧನೆಗೆ ಪ್ರಾಧಾನ್ಯತೆಯನ್ನು ಕೊಡುವುದು
ನವೆಂಬರ್ ೨೦೦೩ ರಲ್ಲಿ ಪೂರ್ಣವೇಳೆ ಸಾಧನೆ ಮಾಡಲು ಆರಂಭಿಸಿದ ನಂತರ ನಾನು ಮನೆಯಲ್ಲಿನ ಯಾವುದೇ ವಿಷಯದಲ್ಲಿ ಸಿಲುಕಲಿಲ್ಲ. ಮನೆಯಲ್ಲಿ ಪತ್ನಿ, ಸಣ್ಣ ಮಗಳು ಮತ್ತು ತಾಯಿ ಹೀಗೆ ಮೂವರು ಇರುವಾಗ ಮನೆಯಿಂದ ೨ ಕಿಲೋಮೀಟರ್ ದೂರವಿರುವ ಸನಾತನದ ಠಾಣೆ ಸೇವಾಕೇಂದ್ರಕ್ಕೆ ಹೋಗಿ ಉಳಿದುಕೊಂಡೆನು. ವಾರಕ್ಕೊಮ್ಮೆ ರಾತ್ರಿ ಮನೆಗೆ ಹೋಗಿ ಬೆಳಗ್ಗೆ ಅಲ್ಪಾಹಾರ ಮಾಡಿ ಪುನಃ ಆಶ್ರಮಕ್ಕೆ ಹೋಗುತ್ತಿದ್ದೆ. ನಾನು ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋಗುವುದನ್ನು ತಪ್ಪಿಸುತ್ತಿದ್ದೆ; ಏಕೆಂದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಸಾಧನೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಈ ವಿಷಯದಲ್ಲಿ ನನ್ನ ಪತ್ನಿ ’ಸಂಬಂಧಿಕರ ಕಾರ್ಯಕ್ರಮಗಳಿಗಾದರೂ ಬನ್ನಿರಿ. ನನಗೆ ಜನರು ನಿಮ್ಮ ವಿಷಯದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಬರುವುದಿಲ್ಲ”, ಎನ್ನುತ್ತಿದ್ದರು. ಇದನ್ನು ಕೇಳಿ ನಾನು ಸುಮ್ಮನಿರುತ್ತಿದ್ದೆ ಮತ್ತು ಪ್ರತಿ ಸಲ ಸಾಧನೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದೆ. ನಾನು ನನ್ನ ಮಗಳು ವೈದೇಹಿಯ ಹತ್ತನೇ ಮತ್ತು ಹನ್ನೆರಡನೇ ಪರೀಕ್ಷೆಯ ಮೊದಲು ಅಥವಾ ಪರೀಕ್ಷೆಯ ಸಮಯದಲ್ಲಿಯೂ ಮನೆಗೆ ಹೋಗಿರಲಿಲ್ಲ, ಅದೇ ರೀತಿ ನಾನು ನನ್ನ ಸಹೋದರಿಯ ಇಬ್ಬರು ಮಕ್ಕಳ ವಿವಾಹಕ್ಕೂ ಹೋಗಿರಲಿಲ್ಲ.
೬. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಕುಟುಂಬದ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳುವುದು ಮತ್ತು ಎಲ್ಲರನ್ನೂ ಸಾಧಕರನ್ನಾಗಿ ಮಾಡಿ ತಮ್ಮ ಕೃಪಾಛತ್ರದಡಿಯಲ್ಲಿ ಆಶ್ರಮದಲ್ಲಿ ಇಟ್ಟುಕೊಳ್ಳುವುದು
ಈ ಕಾಲಾವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು) ನನ್ನ ಕುಟುಂಬದ ಸಂಪೂರ್ಣ ಕಾಳಜಿ ವಹಿಸಿಕೊಂಡರು. ಇದನ್ನು ನಾನು ಅನೇಕ ಪ್ರಸಂಗಗಳಲ್ಲಿ ಅನುಭವಿಸಿದ್ದೇನೆ. ಪೂರ್ಣವೇಳೆ ಸಾಧನೆ ಆರಂಭಿಸಿ ಈಗ ನನಗೆ ೨೦ ವರ್ಷಗಳಾದವು. ಇಂದು ನನ್ನ ಸ್ಥಿತಿ ಹೇಗಿದೆ ಎಂದರೆ ಮಗಳು ವೈದ್ಯಕೀಯ ಶಿಕ್ಷಣ ಪಡೆಯುವಾಗ ಅವಳಿಗೆ ಸಾಧನೆಯ ಬಗ್ಗೆ ಆಸಕ್ತಿ ಮೂಡಿತು ಮತ್ತು ಅವಳು ೨೦೧೪ ರಲ್ಲಿ ಪೂರ್ಣವೇಳೆ ಸಾಧಕಿಯಾದಳು. ಪತ್ನಿಗೆ ’ಒಬ್ಬಳೇ ಮನೆಯಲ್ಲಿ ಹೇಗೆ ಸಮಯ ಕಳೆಯಬೇಕು ?’, ಎಂಬ ಪ್ರಶ್ನೆ ಇರುವಾಗ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅವಳು ಮನೆಯಲ್ಲಿಯೆ ಇದ್ದು ಸೇವೆಯನ್ನು ಮಾಡುವ ಬುದ್ಧಿಯನ್ನು ನೀಡಿದರು ಮತ್ತು ಅವಳು ಸೇವೆಯನ್ನು ಮಾಡಲು ಆರಂಭಿಸಿದಳು. ಗುರುಕೃಪೆಯಿಂದ ಅವಳು ಕೂಡ ೨೦೧೬ ರಿಂದ ಪೂರ್ಣವೇಳೆ ಸಾಧಕಿಯಾದಳು. ಈಗ ಉಳಿದಿರುವುದು ತಾಯಿಯ ಸಮಸ್ಯೆ ಮಾತ್ರ ! ಈಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ತಾಯಿಗೆ (ಶ್ರೀಮತಿ ಪ್ರಭಾವತಿ ಗಜಾನನ ಶಿಂದೆ, ೮೭ ವರ್ಷ) ಆಶ್ರಮಕ್ಕೆ ಬಾರದೆ ಬೇರೆ ಪರ್ಯಾಯವಿರಲಿಲ್ಲ. ಅವರನ್ನೂ ಗುರುದೇವರು ಆಶ್ರಮಕ್ಕೆ ತಂದರು. ಇಂದು ಅವರ ಆಧ್ಯಾತ್ಮಿಕ ಮಟ್ಟ ಶೇ. ೬೬ ರಷ್ಟು ಆಗಿದೆ.
೭. ಕುಟುಂಬದವರೆಲ್ಲರೂ ಸಾಧನೆ ಮಾಡುವುದರಿಂದ ಕುಟುಂಬದವರಿಗೆ ಹಾನಿಯಾಗದೆ ಆನಂದ ಸಿಗುವುದು
ಇಂದು ನನ್ನ ಕುಟುಂಬದವರೆಲ್ಲರೂ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಆಶ್ರಯದಲ್ಲಿ ಮಾನವ ಜೀವನದಲ್ಲಿನ ’ಮೋಕ್ಷಪ್ರಾಪ್ತಿ’ ಎಂಬ ಸರ್ವೋಚ್ಚ ಧ್ಯೇಯವನ್ನು ಪ್ರಾಪ್ತ ಮಾಡಿಕೊಳ್ಳಲು ಸಾಧನೆಯನ್ನು ಮಾಡುತ್ತಿದ್ದಾರೆ. ಇಂದು ನಾವು ನಮ್ಮ ಕುಟುಂಬದವರೆಲ್ಲರೂ ಆನಂದದಿಂದ ಇದ್ದೇವೆ. ವ್ಯವಹಾರದಲ್ಲಿನ ವ್ಯಕ್ತಿಗಳು ಪ್ರತಿದಿನ ಅನುಭವಿಸುವ ಭಯ, ಚಿಂತೆ ಮತ್ತು ಕಾಳಜಿಯಿಂದ ನಾವು ದೂರವಿದ್ದೇವೆ. ಇದರಿಂದ ’ಸಾಧನೆ ಮಾಡಿ ಹಾನಿಯಾಯಿತು’, ಎನ್ನುವ ಒಂದು
ಉದಾಹರಣೆಯೂ ಜಗತ್ತಿನಲ್ಲಿಲ್ಲ, ಎಂಬುದು ಸಿದ್ಧವಾಗುತ್ತದೆ.
೮. ಪ್ರತಿಯೊಬ್ಬನಿಗೂ ಧರ್ಮಶಿಕ್ಷಣ ನೀಡಿದರೆ ಮಾತ್ರ ಅವನಿಗೆ ’ಜೀವನದ ಸಾರ್ಥಕತೆ ಯಾವುದರಲ್ಲಿದೆ ?’, ಎಂಬುದು ತಿಳಿದು ಮುಂದೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಉತ್ಕರ್ಷವನ್ನು ಸಾಧಿಸಲಾಗುವುದು
ಸಾಧನೆ ಮಾಡಿ ಜೀವನವನ್ನು ಸಾರ್ಥಕಗೊಳಿಸುವವರಿಗೆ ಸಮಾಜದಿಂದ ವಿರೋಧವಾಗುತ್ತದೆ. ಇದು ಎಷ್ಟು ದೊಡ್ಡ ಅಜ್ಞಾನ ! ಇದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳುವ ಹಾಗೆ ಚಿಕ್ಕಂದಿನಿಂದಲೇ ಧರ್ಮಶಿಕ್ಷಣ ನೀಡಿದರೆ ಮಾತ್ರ ಅವನಿಗೆ ಜೀವನದಲ್ಲಿನ ಸಾಧನೆಯ ಮಹತ್ವ ತಿಳಿಯುವುದು ಮತ್ತು ಅವನು ಸಾಧನೆ ಮಾಡಲು ಆರಂಭಿಸುವನು. ಇದರಿಂದಲೇ ಮುಂದೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಉತ್ಕರ್ಷವನ್ನು ಸಾಧಿಸಲು ಸಾಧ್ಯವಾಗಬಹುದು. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಸುಮನಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಿಗೆ ಸಮರ್ಪಿಸುತ್ತೇನೆ ! ’ಇದಂ ನ ಮಮ |’ – (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ಪನವೇಲ್. (೨೦.೮.೨೦೨೩)