‘‘ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ರೂಪಾಯಿ ವರೆಗೆ ಅನುದಾನ ಹೆಚ್ಚಿಸುತ್ತೇನೆ. ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ೪೦೦ ಕೋಟಿ ಅನುದಾನವನ್ನು ನಾನು ೩ ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಿಸಿದ್ದೇನೆ. ಮುಂದಿನ ವರ್ಷವೂ ಅನುದಾನವನ್ನು ಮತ್ತಷ್ಟು ಹೆಚ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಣಿ ಮುತ್ತುಗಳನ್ನು ಉದುರಿಸಿದ್ದಾರೆ. ಅವರು ಈ ಸಮಯದಲ್ಲಿ ‘ರಾಜ್ಯದಲ್ಲಿ ನಾವು ಎಲ್ಲ ಸಮುದಾಯಗಳ ಉನ್ನತಿಗಾಗಿ ಕೆಲಸ ಮಾಡುತ್ತೇವೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗುವಂತಾಗಬೇಕು’’ ಎಂದೂ ಹೇಳಿದರು. ಆಗಿನ ಕಾಂಗ್ರೆಸ್ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ”ಭಾರತ ದೇಶದ ಸಾಧನ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸಲ್ಮಾನರದ್ದಾಗಿದೆ’’ ಎಂದು ಹೇಳಿದ್ದರು. ಇದರಿಂದ, ಅಧಿಕಾರಕ್ಕಾಗಿ ಮತ್ತು ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಯಾವ ಮಟ್ಟಕ್ಕೆ ಹೋಗಬಹುದು ಎಂದು ಅಂದಾಜಿಸಬಹುದು. ಇದು ಕಾಂಗ್ರೆಸ್ಸಿನ ಬೂಟಾಟಿಕೆಯಾಗಿದೆ. ‘ಭಾರತ ಜಾತ್ಯತೀತವಾಗಿರುವಾಗ ಧರ್ಮದ ಆಧಾರದಲ್ಲಿ ಮತಗಳಿಗಾಗಿ ಒಂದು ಧರ್ಮವನ್ನು ಓಲೈಸುವವರು ಹಿಂದೂಗಳಿಗಾಗಿ ಏನು ಮಾಡುತ್ತಾರೆ ?’ ಎಂದು ಅವರು ಹೇಳಬೇಕು. ಹಾಗೆಯೇ ರಾಜ್ಯದ ಖಜಾನೆಯಿಂದ ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತದಲ್ಲಿರುವ ಮತ್ತು ವಿರೋಧ ಪಕ್ಷದ ಶಾಸಕರ ವೇತನ ಮತ್ತು ಶಾಸಕರ ನಿಧಿ, ಅವರಿಗೆ ನೀಡುವ ಸೌಲಭ್ಯಗಳನ್ನು ಸ್ಥಗಿತಗೊಳಿಸಿ ಅವರ ಹಣವನ್ನು ಅಲ್ಪಸಂಖ್ಯಾತರಿಗೆ ನೀಡುವರೇ ?
ಹೆಚ್ಚುತ್ತಿರುವ ಹಿಂದೂವಿರೋಧಿ ಚಟುವಟಿಕೆ !
ಮತ್ತೊಂದೆಡೆ, ಕರ್ನಾಟಕದ ಬ್ಯಾರಿ ಅಸೋಶಿಯನ್ ಇದರ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಮಾತನಾಡುತ್ತಾ, ಸರಕಾರದ ರಚನೆಯಲ್ಲಿ ಮುಸಲ್ಮಾನರ ಪಾತ್ರ ದೊಡ್ಡದಿದೆ. ಇನ್ನು ಕನಿಷ್ಠ ೩ ಸಚಿವ ಸ್ಥಾನಗಳನ್ನು ಮುಸಲ್ಮಾನರಿಗೆ ನೀಡಬೇಕು’, ಎಂದು ಹೇಳಿದರು. ಇದರಿಂದ ‘ಸಚಿವ ಸ್ಥಾನವನ್ನು ಪಡೆಯುವಲ್ಲಿಯೂ ಮುಸಲ್ಮಾನರು ಎμಟ್Àರಮಟ್ಟಿಗೆ ಮುಂದುವರೆದಿದ್ದಾರೆ‘ ಎಂಬುದು ತಿಳಿಯುತ್ತದೆ. ಚುನಾವಣೆಯ ಮೊದಲು ೨೦೦ ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ೧೦ ಕಿ.ಲೋ. ಅಕ್ಕಿ, ಪದವೀಧರ ಯುವಕರಿಗೆ ಪ್ರತಿ ತಿಂಗಳಿಗೆ ೩ ಸಾವಿರ ರೂಪಾಯಿಗಳಂತಹ ಅನೇಕ ಭರವಸೆಗಳ ಸುರಿಮಳೆಯನ್ನೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ನೀಡಿದ್ದರು. ಈಗ ಈ ಭರವಸೆಗಳು ಕಾರ್ಯರೂಪಕ್ಕೆ ಬಂದಿರುವುದರಿಂದ ಈ ಎಲ್ಲ ವೆಚ್ಚದ ಹೊರೆ ಸರಕಾರದ ಬೊಕ್ಕಸದ ಮೇಲೆ ಬೀಳುತ್ತಿದೆ.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತದಾರರನ್ನು ಸೆಳೆಯಲು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿತು. ಅದರಂತೆ ಕರ್ನಾಟಕದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು; ಆದರೆ ಇದರಿಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಕೋಟ್ಯಂತರ ರೂಪಾಯಿ ನಷ್ವವಾಗುತ್ತಿದೆ. ಈ ನಿರ್ಣಯದಿಂದ ಸ್ವತಃ ಚಾಲಕರು, ನಿರ್ವಾಹಕರು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ನೌಕರರು ಅಸಮಾಧಾನಗೊಂಡಿದ್ದಾರೆ. ‘ಮಹಾರಾಷ್ಟ್ರದಂತೆ ಮಹಿಳೆಯರಿಗೆ ಶೇ.೫೦ ರಷ್ಟು ರಿಯಾಯಿತಿ ಸೌಲಭ್ಯ ನೀಡಿದರೆ ಚೆನ್ನಾಗಿತ್ತು’ ಎಂದು ಅಧಿಕಾರಿಗಳು ಹೇಳುತ್ತಾರೆ. ಆದಾಗ್ಯೂ ಕೇವಲ ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡು ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಆಗಿನ ಬಸವರಾಜ ಬೊಮ್ಮಾಯಿ ಸರಕಾರವು, ‘ಒಬಿಸಿ’ ಕೋಟಾದಡಿ ಮುಸಲ್ಮಾನರಿಗೆ ನೀಡಲಾಗಿದ್ದ ಮೀಸಲಾತಿಯನ್ನು ತೆಗೆದು ಹಾಕುವಾಗ ಈ ಸಮಾಜಕ್ಕೆ ಆರ್ಥಿಕದೃಷ್ಟಿಯಿಂದ ದುರ್ಬಲರಿಗೆ ಇರುವ ಮೀಸಲಾತಿಯನ್ನು ನೀಡಲಾಗಿದೆಯೆಂದು ಹೇಳಿದ್ದರು; ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸಲ್ಮಾನರಿಗೆ ಮೀಸಲಾತಿಯನ್ನು ಮೊದಲಿನಂತೆ ಜಾರಿಗೊಳಿಸುವ ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿತ್ತು. ಈಗ ಈ ಮೀಸಲಾತಿ ಮುಸಲ್ಮಾನರಿಗೆ ಸಿಗಲಿದೆ. ಕಾಂಗ್ರೆಸ್ ಪಕ್ಷವು ಚುನಾವಣೆ ಸಮಯದಲ್ಲಿ ಸಮಾಜದಲ್ಲಿ ದ್ವೇಷ ಹೆಚ್ಚಿಸುವ ಸಂಘಟನೆಗಳನ್ನು ನಿಷೇಧಿಸುವುದಾಗಿ ಮುಸಲ್ಮಾನರಿಗೆ ಭರವಸೆ ನೀಡುವಾಗ, ‘ಬಜರಂಗದಳ’ವನ್ನು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಎಂಬ ಉಗ್ರ ಸಂಘಟನೆಗೆ ಹೋಲಿಕೆ ಮಾಡಿತ್ತು, ಹಾಗೆಯೇ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ಪಕ್ಷವು ಭಾಜಪ ತೆಗೆದುಕೊಂಡ ಎಲ್ಲ ನಿರ್ಣಯಗಳನ್ನು ಬದಲಾಯಿಸಲು ಪ್ರಾರಂಭಿಸಿದೆ. ಹಿಜಾಬ್ ಧರಿಸಲು ಅವಕಾಶ ನೀಡುವುದರ ಜೊತೆಗೆ ಹಿಂದೂದ್ವೇಷಿ ಟಿಪ್ಪು ಸುಲ್ತಾನ್ ಅವರ ಜನ್ಮದಿನದ ಆಚರಣೆಗೂ ಅನುಮತಿ ನೀಡಿದೆ.
ಹಿಂದೂಗಳು ಸ್ವಯಂಪೂರ್ಣರಾಗಬೇಕು !
ರಾಜ್ಯದ ವಿಧಾನಸಭಾ ಚುನಾವಣೆಗೂ ಮುನ್ನವೇ ಭಾಜಪದಲ್ಲಿ ಆಂತರಿಕ ಕಲಹ ಪ್ರಾರಂಭವಾಗಿತ್ತು. ಹಿರಿಯ ನಾಯಕರಿಗೆ ಟಿಕೆಟ್ ನೀಡಲಿಲ್ಲ. ಇದು ಬಂಡಾಯಕ್ಕೆ ಕಾರಣವಾಯಿತು. ಚುನಾವಣೆಗೂ ಮುನ್ನ ಭಾಜಪ ಶಾಸಕರೊಬ್ಬರ ಮಗನು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಇದರಿಂದ ಭಾಜಪ ಶಾಸಕ ಜೈಲು ಸೇರಬೇಕಾಯಿತು. ಕಾಮಗಾರಿ ಮಾಡುವಾಗಲೂ ‘ಕಮಿಷನ್’ ಕೊಡಬೇಕಾಗುತ್ತದೆ’ ಎಂದು ಗುತ್ತಿಗೆದಾರರು ಆರೋಪಿಸಿದರು. ಭಾಜಪ ಸರಕಾರವು ಗೃಹಬಳಕೆಯ ಅನಿಲದ ಇಂಧನ ದರದಿಂದ ಹಿಡಿದು ಆಹಾರ ಪದಾರ್ಥಗಳ ಮೇಲಿನ ಶುಲ್ಕವನ್ನು ಹೆಚ್ಚಿಸಿತು. ಹಿಂದುತ್ವ ಮತ್ತು ಅಭಿವೃದ್ಧಿ ಎರಡನ್ನೂ ಸಮತೋಲನ ಕಾಪಾಡುವ ಈ ಪಕ್ಷವನ್ನು ಜನರು ಯಾವಾಗಲೂ ಆಯ್ಕೆ ಮಾಡುತ್ತಾರೆ. ಇದೆಲ್ಲದರ ಪರಿಣಾಮವಾಗಿ ಅಲ್ಲಿ ಅಧಿಕಾರ ಬದಲಾವಣೆಯಾಯಿತು. ಕಾಂಗ್ರೆಸ್ ಮುಸಲ್ಮಾನ ಮತ್ತು ಕ್ರೈಸ್ತರನ್ನು ಓಲೈಸುವ ಮೂಲಕ ಹಿಂದೂವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಭಾಜಪ ಅಧಿಕಾರದಲ್ಲಿದ್ದಾಗ ಮತಾಂಧರನ್ನು ಹೇಳಿಕೊಳ್ಳುವಷ್ಟು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಲ್ಲಿ ಹಿಂದುತ್ವನಿಷ್ರಠ ಹತ್ಯೆಗಳಾದವು. ಹಾಗಾದರೆ ಹಿಂದೂಗಳ ಹಿತವನ್ನು ರಕ್ಷಿಸುವ ಪಕ್ಷ ಯಾವುದು ? ‘ಇನ್ನು ಮುಂದೆ ಯಾರಿಗೆ ಮತದಾನ ಮಾಡಿ ಅಧಿಕಾರ ನೀಡುವುದು ?’ ಎನ್ನುವ ಪ್ರಶ್ನೆ ಹಿಂದೂಗಳನ್ನು ಖಂಡಿತ ಕಾಡುತ್ತಿದೆ. ಕರ್ನಾಟಕದಂತೆಯೇ ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಸಾಮ್ಯವಾದಿಗಳು ಅಧಿಕಾರದಲ್ಲಿದ್ದಾರೆಯೋ, ಅಲ್ಲಿ ಹಿಂದೂಗಳಿಗೆ ಇಂತಹ ಘಟನೆಗಳೇ ನೋಡಲು ಸಿಗುತ್ತಿದೆ. ಇದರಿಂದ ಹಿಂದೂಗಳು ಇತಿಹಾಸದಿಂದ ಪಾಠವನ್ನು ಕಲಿತು ಹೋರಾಡಬೇಕು. ಇಂದು ಜಗತ್ತಿನಾದ್ಯಂತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಭಾರತದಲ್ಲಿ ೧೪೦ ಕೋಟಿ ಜನಸಂಖ್ಯೆ ಇರುವ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ.
ಹಿಂದೂ ಧರ್ಮವು ಜಗತ್ತಿನ ಮೂರನೇ ಅತಿದೊಡ್ಡ ಧರ್ಮವಾಗಿದೆ; ಆದರೆ ಹಿಂದೂಗಳ ಮಾನಸಿಕತೆ ಅಲ್ಪಸಂಖ್ಯಾತರಂತಿದೆ. ಅವರಲ್ಲಿ ಬಂಧುತ್ವ ಭಾವನೆಯೂ ಕಡಿಮೆಯಿದೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಈ ಕಾರಣಕ್ಕಾಗಿ ಹಿಂದೂಗಳು ಈಗಿನಿಂದ ಚಲನವಲನ ಮಾಡದಿದ್ದರೆ, ಹಾಗೆಯೇ ಹಿಂದೂಗಳ ರಕ್ಷಣೆಗಾಗಿ ಸಂಘಟಿತರಾಗಿ ನ್ಯಾಯೋಚಿತ ಮಾರ್ಗದಿಂದ ಹೋರಾಡದಿದ್ದರೆ ನಾಳೆ ಅದೇ ಕಾಂಗ್ರೆಸಿಗರು ಮತ್ತು ಕಮ್ಯುನಿಸ್ಟರು ಹಿಂದೂಗಳ ಅಸ್ತಿತ್ವವನ್ನೇ ನಾಶಪಡಿಸುತ್ತಾರೆ !