
ದೇವರೂಖ – ಸಾಧನೆಯಲ್ಲಿ ಸಾತತ್ಯ, ಜಿಗುಟುತನ ಮತ್ತು ಶ್ರೀಕೃಷ್ಣನ ಸತತ ಅನುಸಂಧಾನ ದಲ್ಲಿರುವ ಸನಾತನದ ಸಾಧಕಿ ಶ್ರೀಮತಿ ವಿಜಯಾ ವಸಂತ ಪಾನವಳಕರ (ವಯಸ್ಸು ೮೪ ವರ್ಷ) ಇವರು ಸನಾತನದ ೧೨೩ ನೇ ಸಂತ ಪದವಿಯಲ್ಲಿ ವಿರಾಜಮಾನರಾದರು. ದೇವರೂಖ ಎಂಬಲ್ಲಿ ಶ್ರೀಮತಿ ಪಾನವಳಕರ ಅಜ್ಜಿ ಇವರ ಮನೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಾಡ್ಯೆ ಇವರು ಅವರನ್ನು ವ್ಯಷ್ಟಿ ಸಂತರೆಂದು ಘೋಷಿಸಿದರು. ಈ ವೇಳೆ ಸನಾತನ ಸಂಸ್ಥೆಯ ಸದ್ಗುರು ಸತ್ಯವಾನ ಕದಮ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಈ ವೇಳೆ ಪೂ. ಅಜ್ಜಿಯವರ ಪುತ್ರ ಶ್ರೀ. ವಿನಯ, ಸೊಸೆ ಸೌ. ನೇಹಾ, ದೇವರೂಖ ಇಲ್ಲಿನ ಸಾಧಕರು ಹಾಗೆಯೇ ‘ವಿಡಿಯೋ ಕಾಲ್’ ಮೂಲಕ ಪೂ. ಅಜ್ಜಿಯವರ ಮಗಳಾದ ಸೌ. ಪ್ರಾಚಿ ಜುವೇಕರ, ಅಳಿಯ ಶ್ರೀ. ಹೇಮಂತ ಜುವೇಕರ ಹಾಗೂ ಮೊಮ್ಮಗ ಶ್ರೀ. ಪ್ರಶಾಂತ ಜುವೇಕರ ಮತ್ತು ಅವರ ಪತ್ನಿ ಸೌ. ಕ್ಷಿಪ್ರಾ ಜುವೇಕರ ಇವರು ಉಪಸ್ಥಿತರಿದ್ದರು. ಸದ್ಗುರು ಸ್ವಾತಿ ಖಾಡ್ಯೆಯವರು ಪೂ. (ಶ್ರೀಮತಿ) ವಿಜಯಾ ವಸಂತ ಪಾನವಳಕರ ಇವರನ್ನು ಶಾಲು, ಶ್ರೀಫಲ ಮತ್ತು ಉಡುಗೊರೆ ನೀಡಿ ಸನ್ಮಾನಿಸಿದರು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !