ಪ್ರತಿಭಟನೆ ನಡೆಸುತ್ತಿರುವ ಹಮಾಸ್ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಿರಿ ! – ಬ್ರಿಟಿಷ್ ಗೃಹ ಸಚಿವರ ಆದೇಶ

ಲಂಡನ್ (ಬ್ರಿಟನ) – ಬ್ರಿಟನ್‌ನಲ್ಲಿ ಹಮಾಸ್ ಅನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಗೃಹ ಸಚಿವೆ ಸುಯೆಲಾ ಬ್ರೆವ್ಹರಮನ ಆದೇಶಿಸಿದ್ದಾರೆ.  ಗೃಹ ಸಚಿವೆ ಬ್ರೆವ್ಹರಮನ ತಮ್ಮ ಮಾತನ್ನು ಮುಂದುವರಿಸಿ, ಇಸ್ರೇಲ್ ಮೇಲಿನ ದಾಳಿಯ ನಂತರ ಬ್ರಿಟನ್‌ನಲ್ಲಿ ಹಮಾಸ್ ಬೆಂಬಲಿಗರು ನಡೆಸಿದ ಪ್ರತಿಭಟನೆಗಳು ಒಂದು ರೀತಿಯಲ್ಲಿ ಜ್ಯೂ ಸಮುದಾಯವನ್ನು ಬೆದರಿಸುವ ಪ್ರಯತ್ನವಾಗಿದೆ. ಆದುದರಿಂದ ಎಲ್ಲಾ ಪೊಲೀಸ್ ಮುಖ್ಯಸ್ಥರು ಈ ಪ್ರತಿಭಟನೆಗಳ ವಿರುದ್ಧ ಸಂಪೂರ್ಣ ಪೊಲೀಸ್ ಬಲವನ್ನು ಬಳಸಬೇಕು. ಇಂಗ್ಲೆಂಡಿನ ಬೀದಿಗಳಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸುವುದು ಸರಿಯಲ್ಲ; ಏಕೆಂದರೆ ಹಾಗೆ ಮಾಡುವುದೆಂದರೆ ಭಯೋತ್ಪಾದನೆಯನ್ನು ಬೆಂಬಲಿಸಿದಂತಾಗುತ್ತದೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ಇಸ್ರೇಲ್‌ನ ಹೈಕಮಿಷನ್‌ ಕಾರ್ಯಾಲಯದ ಎದುರು ಪ್ಯಾಲೆಸ್ಟೈನ್ ಬೆಂಬಲಿಗರಿಂದ ಪ್ರತಿಭಟನೆಗಳು

ಪಾಕಿಸ್ತಾನದಲ್ಲಿ, ಪ್ಯಾಲೆಸ್ತೀನ್‌ನ ಸಾವಿರಾರು ಬೆಂಬಲಿಗರು ಅಕ್ಟೋಬರ್ 10 ರ ರಾತ್ರಿ ಇಸ್ರೇಲ್‌ನ ಹೈಕಮಿಷನ್ ಕಾರ್ಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು. ಈ ಪೈಕಿ 3 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರಲ್ಲಿ ಒಬ್ಬನ ವಯಸ್ಸು ಕೇವಲ 15 ವರ್ಷ ಇದೆ.

ಸಂಪಾದಕೀಯ ನಿಲಿವು

ಬ್ರಿಟನ್ ಇಂತಹ ಆದೇಶವನ್ನು ನೀಡಬಹುದಾದರೆ, ಭಾರತ ಏಕೆ ನೀಡಬಾರದು ?