ಮಾಸ್ಕೊ – ಹಮಾಸ್-ಇಸ್ರೆಲ್್ ಯುದ್ಧಕ್ಕೆ ಅಮೇರಿಕಾ ಹೊಣೆ ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರು ಆರೋಪಿಸಿದ್ದಾರೆ. ಇಸ್ರೆಲ್ ಮತ್ತು ಗಾಝಾ ಪಟ್ಟಿ ಇವರಲ್ಲಿನ ಸಂಘರ್ಷ ಅಮೆರಿಕಾದ ಮಧ್ಯಪೂರ್ವ ನೀತಿಯ ವಿಫಲತೆ ತೋರಿಸುತ್ತದೆ. ಸ್ವತಂತ್ರ ಸಾರ್ವಭೌಮ ಪ್ಯಾಲೆಸ್ಟೈನಿನ ನಿರ್ಮಿತಿಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಬ್ರಿಟನ್ ನಿಂದ ಇಸ್ರೆಲ್ ಗೆ ಬೆಂಬಲ
ಇಸ್ರೆಲ್ ಗೆ ಪಶ್ಚಿಮಾತ್ಯ ದೇಶಗಳಿಂದ ಬೆಂಬಲ ದೊರೆಯುತ್ತಿದೆ. ಈಗ ಬ್ರೀಟನಿನ್ ಪ್ರಧಾನಮಂತ್ರಿ ಋಷಿ ಸುನಾಕ್ ಇವರು ಇಸ್ರೆಲ್ ಗೆ ಬೆಂಬಲ ನೀಡಿದ್ದಾರೆ. ಬ್ರಿಟನ್ ಸಹಿತ ಅಮೇರಿಕಾ, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ಈ ದೇಶದ ನಾಯಕರು ಪ್ರಸಾರ ಮಾಡಿರುವ ಒಂದು ಜಂಟಿ ಹೇಳಿಕೆಯಲ್ಲಿ ಹಮಾಸ್ ಕೃತ್ಯವನ್ನು ಖಂಡಿಸಿದ್ದಾರೆ.