‘ಡಿಸೀಸ್‌ ಎಕ್ಸ್‌’ ಈ ಸಂಭಾವ್ಯ ಮಾರಕ ಸಾಂಕ್ರಾಮಿಕ ರೋಗಕ್ಕಾಗಿ ಮಾಡಬೇಕಾದ ನಾಮಜಪ

‘೨೦೨೦ ಮತ್ತು ೨೦೨೧ ರಲ್ಲಿ, ಇಡೀ ಜಗತ್ತನ್ನು ಆವರಿಸಿದ್ದ ‘ಕೊರೊನಾ’ ಮಹಾಮಾರಿಯಿಂದ ಎಲ್ಲರೂ ಹೊರಬಂದಿಲ್ಲ, ಅಷ್ಟರಲ್ಲೇ, ೨೭.೯.೨೦೨೩ ರಂದು ಮತ್ತೊಂದು ಅದಕ್ಕಿಂತ ಭಯಾನಕ ಸಾಂಕ್ರಾಮಿಕ ರೋಗ ಬರಲಿದೆ ಎಂಬ ವಾರ್ತೆ ದಿನಪತ್ರಿಕೆಗಳಲ್ಲಿ ಪ್ರಕಟವಾಯಿತು. ಅದರಲ್ಲಿ, ‘ವಿಶ್ವ ಆರೋಗ್ಯ ಸಂಘಟನೆ’ಯು, ‘ಕೊರೊನಾ’ ಸಾಂಕ್ರಾಮಿಕ ರೋಗಕ್ಕಿಂತ ೭ ಪಟ್ಟು ಹೆಚ್ಚು ಅಪಾಯಕಾರಿಯಾದ ‘ಡಿಸೀಸ್‌ ಎಕ್ಸ್‌’ ಎಂಬ ಸಾಂಕ್ರಾಮಿಕ ರೋಗ ಬರಲಿದೆ ಮತ್ತು ಇದರಿಂದ ವಿಶ್ವದ ೫ ಕೋಟಿ ಜನರ ಜೀವ ಹೋಗಬಹುದು ಎಂದು ಹೇಳಿದೆ. ಈ ಮಹಾಮಾರಿ ಜಗತ್ತಿನ ಮೇಲೆ ಯಾವಾಗ ಬೇಕಾದರೂ ದಾಳಿ ಮಾಡಬಹುದು. ಈ ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ, ಅಂದರೆ ಅದು ಹೇಗೆ ಹರಡುತ್ತದೆ, ಅದರ ಲಕ್ಷಣಗಳು ಇತ್ಯಾದಿಗಳನ್ನು ಇನ್ನೂ ಪ್ರಸಿದ್ಧವಾಗಿಲ್ಲ.
ಎಂದಿಗೂ ಬರಬಹುದಾದ ಈ ಮಹಾಮಾರಿಯ ವಿರುದ್ಧ ಎಲ್ಲರೂ ಜಾಗೃತರಾಗುವುದು ಮತ್ತು ಅದರ ಬಗ್ಗೆ ವೈದ್ಯಕೀಯ ಚಿಕಿತ್ಸೆ ಯೊಂದಿಗೆ ಆಧ್ಯಾತ್ಮಿಕ ಉಪಾಯ ಮಾಡುವುದು ಆವಶ್ಯಕವಾಗಿದೆ.

೧. ‘ಡಿಸೀಸ್‌ ಎಕ್ಸ್‌’ ಸಾಂಕ್ರಾಮಿಕ ರೋಗದ ಬಗ್ಗೆ ಸೂಕ್ಷ್ಮದಲ್ಲಿ ಅರಿವಾದ ಅಂಶಗಳು

ಅ. ಈ ರೋಗದ ರೋಗಾಣು ಗಾಳಿಯಿಂದ ಹರಡುತ್ತದೆ ಮತ್ತು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತದೆ.
ಆ. ಶ್ವಾಸದ ಮೂಲಕ ಶರೀರದಲ್ಲಿ ಹೋದ ನಂತರ ಈ ರೋಗಾಣು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯದ ಕಾರ್ಯವು ಮಂದವಾಗುತ್ತದೆ ಮತ್ತು ಅದರ ರಕ್ತಪರಿಚಲನೆ ಕಾರ್ಯದಲ್ಲಿ ಅಡಚಣೆ ನಿರ್ಮಾಣವಾಗುತ್ತದೆ.
ಇ. ಬಳಿಕ ಮೆದುಳಿಗೆ ರಕ್ತ ಪೂರೈಕೆಯ ಕೊರತೆಯಿಂದ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವು ಹೆಚ್ಚಾಗಿ ಮೆದುಳಿನ ಬಲಭಾಗದ ಮೇಲೆ ಬೀರುತ್ತದೆ. (ಮೆದುಳಿನ ಬಲಭಾಗವು ಭಾವನೆಗಳು, ಅರಿವು, ವಿವಿಧ ಕಲೆಗಳು, ಸುತ್ತಮುತ್ತಲಿನ ಅರಿವು ಇತ್ಯಾದಿಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತದೆ.)
ಈ. ಈ ರೋಗವು ದೇಹದ ಎರಡು ಪ್ರಮುಖ ಅಂಗಗಳಾದ ಹೃದಯ ಮತ್ತು ಮೆದುಳಿಗೆ ಪರಿಣಾಮ ಬೀರುವುದರಿಂದ, ಇಡೀ ದೇಹವು ಬಾಧಿತವಾಗುವ ಸಾಧ್ಯತೆ ಹೆಚ್ಚಿದೆ. ಈ ಕಾರಣದಿಂದಾಗಿ, ವ್ಯಕ್ತಿಯು ಹತಾಶನಾಗಿ ಅವನ ಸ್ಥಿತಿಯು ೭-೮ ಗಂಟೆಗಳಲ್ಲಿ ಗಂಭೀರವಾಗಬಹುದು ಮತ್ತು ಅವನು ಸಾಯಬಹುದು.
ಉ. ‘ಕೊರೊನಾ’ ಸಾಂಕ್ರಾಮಿಕದ ಸಮಯದಲ್ಲಿ, ಸೋಂಕಿತ ವ್ಯಕ್ತಿಯಲ್ಲಿ ಶೀತ, ಜ್ವರ, ಕೆಮ್ಮು ಮುಂತಾದ ರೋಗಲಕ್ಷಣಗಳು ಕಂಡು ಬರುತ್ತಿದ್ದವು; ಆದರೆ ‘ಡಿಸೀಸ್‌ ಎಕ್ಸ್‌’ನ ಬಾಹ್ಯ ಲಕ್ಷಣಗಳು ಹೆಚ್ಚು ಕಾಣಿಸುವುದಿಲ್ಲ.

೨. ‘ಡಿಸೀಸ್‌ ಎಕ್ಸ್‌’ ಸಾಂಕ್ರಾಮಿಕ ರೋಗವನ್ನು ಮೆಟ್ಟಿನಿಲ್ಲಲು ಮಾಡಬೇಕಾದ ಜಪ

‘ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ |’

ಈ ಐದು ನಾಮಪಗಳನ್ನು ಇದೇ ಕ್ರಮದಲ್ಲಿ ಹೇಳಿದರೆ ಅದು ಒಂದು ಜಪವಾಗುತ್ತದೆ. ಈ ರೀತಿಯಾಗಿ ಈ ೫ ನಾಮಜಪ ಗಳ ಒಟ್ಟು ಜಪವನ್ನು ೪ ರಿಂದ ೫ ಗಂಟೆಗಳ ಕಾಲ ಮಾಡಿದರೆ ‘ಡಿಸೀಸ್‌ ಎಕ್ಸ್‌’ ರೋಗವನ್ನು ಮೆಟ್ಟಿನಿಲ್ಲಬಹುದು. ಈ ನಾಮವನ್ನು ಮಾಡುವಾಗ ಮಧ್ಯ ಮಧ್ಯದಲ್ಲಿ ಕರ್ಪೂರದ ಸುವಾಸನೆಯನ್ನು ತೆಗೆದುಕೊಂಡರೆ ಉತ್ತಮ ಲಾಭವಾಗುತ್ತದೆ.

೩. ಕೃತಜ್ಞತೆ

‘ಡಿಸೀಸ್‌ ಎಕ್ಸ್‌’ ಈ ರೋಗದ ಬಗ್ಗೆ ಸೂಕ್ಷ್ಮದಲ್ಲಿನ ಮಾಹಿತಿ ಮತ್ತು ಅದಕ್ಕೆ ಮಾಡಬೇಕಾದ ನಾಮಜಪವು ಗುರುಕೃಪೆಯಿಂದ ಸಿಕ್ಕಿತು. ಇದಕ್ಕಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ನಾಮಜಪವು ‘ಡಿಸೀಸ್‌ ಎಕ್ಸ್‌’ ಸಾಂಕ್ರಾಮಿಕ ಸಮಯದಲ್ಲಿ ಎಲ್ಲರಿಗೂ ಲಾಭವಾಗಲಿ’, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥಿಸುತ್ತೇನೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೧೦.೨೦೨೩)