ಕುಂಕುಮಾರ್ಚನೆ

ದೇವಿಯ ಮೂರ್ತಿಗೆ ಕುಂಕುಮಾರ್ಚನೆಯನ್ನು ಹೇಗೆ ಮಾಡಬೇಕು

೧. ಪದ್ಧತಿ

೧ ಅ. ಪದ್ಧತಿ ೧

‘ದೇವಿಯ ನಾಮಜಪವನ್ನು ಮಾಡುತ್ತಾ ಒಂದೊಂದು ಚಿಟಿಕೆಯಷ್ಟು ಕುಂಕುಮ ವನ್ನು ದೇವಿಯ ಚರಣಗಳಿಂದ ಪ್ರಾರಂಭಿಸಿ ದೇವಿಯ ತಲೆಯವರೆಗೆ ಅರ್ಪಿಸಬೇಕು ಅಥವಾ ದೇವಿಯ ನಾಮಜಪವನ್ನು ಮಾಡುತ್ತಾ ಅವಳಿಗೆ ಕುಂಕುಮದ ಅಭಿಷೇಕವನ್ನು ಮಾಡಬೇಕು.’

– ಬ್ರಹ್ಮತತ್ತ್ವ (ಸೌ. ಪಾಟೀಲರ ಮಾಧ್ಯಮದಿಂದ, ೨೨.೨.೨೦೦೪, ರಾತ್ರಿ ೯.೩೦)

೧ ಆ. ಪದ್ಧತಿ ೨

ಕೆಲವು ಕಡೆಗಳಲ್ಲಿ ದೇವಿಗೆ ಕುಂಕುಮಾರ್ಚನೆ ಮಾಡುವಾಗ ಕುಂಕುಮವನ್ನು ಕೇವಲ ದೇವಿಯ ಚರಣಗಳ ಮೇಲೆ ಮಾತ್ರ ಅರ್ಪಿಸುತ್ತಾರೆ.

೨. ಶಾಸ್ತ್ರ

ಮೂಲ ಕಾರ್ಯನಿರತ ಶಕ್ತಿತತ್ತ್ವವು ಕೆಂಪು ಬಣ್ಣದ ಪ್ರಕಾಶದಿಂದ ನಿರ್ಮಾಣವಾಗಿರುವುದ ರಿಂದ ಶಕ್ತಿತತ್ತ್ವದ ಪ್ರತೀಕವೆಂದು ದೇವಿ ಯನ್ನು ಕುಂಕುಮದಿಂದ ಪೂಜಿಸುತ್ತಾರೆ ಕುಂಕುಮದಿಂದ ಪ್ರಕ್ಷೇಪಿತವಾಗುವ ಸುಗಂಧಲಹರಿಗಳ ಸುವಾಸನೆಯ ಕಡೆಗೆ ಬ್ರಹ್ಮಾಂಡದಲ್ಲಿನ ಶಕ್ತಿತತ್ತ್ವದ ಲಹರಿಗಳು ಕಡಿಮೆ ಕಾಲಾವಧಿಯಲ್ಲಿ ಆಕರ್ಷಿ¸ಲ್ಪಡುತ್ತವೆ. ಮೂರ್ತಿಯಲ್ಲಿನ ಸಗುಣತತ್ತ್ವವನ್ನು ಜಾಗೃತಗೊಳಿಸಲು ಕೆಂಪು ಬಣ್ಣದ ಪ್ರತೀಕವೆಂದು, ಹಾಗೆಯೇ ದೇವಿತತ್ತ್ವವನ್ನು ಪ್ರಸನ್ನಗೊಳಿಸುವ ಸುಗಂಧ ಲಹರಿಗಳ ಪ್ರತೀಕವೆಂದು ದೇವಿಯ ಪೂಜೆಯಲ್ಲಿ ಕುಂಕುಮಕ್ಕೆ ಅಗ್ರಸ್ಥಾನವನ್ನು ನೀಡಲಾಗಿದೆ. ಮೂಲ ಶಕ್ತಿತತ್ತ್ವದ ಬೀಜದ ಸುಗಂಧವೂ, ಕುಂಕುಮದಿಂದ ಹರಡುವ ಸುಗಂಧದೊಂದಿಗೆ ಹೋಲುವುದರಿಂದ ದೇವಿಯನ್ನು ಜಾಗೃತಗೊಳಿಸಲು ಕುಂಕುಮವನ್ನು ಪ್ರಭಾವಿ ಮಾಧ್ಯಮವಾಗಿ ಉಪಯೋಗಿಸಲಾಗುತ್ತದೆ.

– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೦.೧೦.೨೦೦೫, ರಾತ್ರಿ ೯.೫೩)

ಕುಂಕುಮಾರ್ಚನೆಯಿಂದ ಬಂದ ಅನುಭೂತಿ

ಕುಂಕುಮಾರ್ಚನೆಯನ್ನು ಮಾಡಿದ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಪ್ರಾರ್ಥನೆ ಮತ್ತು ನಾಮಜಪವು ಒಳ್ಳೆಯ ರೀತಿಯಲ್ಲಾಗುವುದು ಮತ್ತು ಉತ್ಸಾಹವೆನಿಸುವುದು !

‘೨೭.೧.೨೦೦೪ ರಂದು ನಾವು ಕುಂಕುಮಾರ್ಚನೆ ಯನ್ನು ಮಾಡಲು ದೇವಸ್ಥಾನಕ್ಕೆ ಹೋಗಿದ್ದೆವು. ಪುರೋಹಿತರು ನಾವು ಕೊಟ್ಟ ಕುಂಕುಮದಿಂದ ಎರಡು ಮೂರ್ತಿಗಳಿಗೆ ಅರ್ಚನೆಯನ್ನು ಮಾಡಿದರು. ಆಮೇಲೆ ಆ ಕುಂಕುಮವನ್ನು ನಮಗೆ ಕೊಟ್ಟರು. ಕುಂಕುಮವನ್ನು ತೆಗೆದುಕೊಳ್ಳುವಾಗ ನಾನು ದೇವಿಗೆ, ‘ಹೇ ಸಾತೇರಿ ದೇವಿ, ಈ ಕುಂಕುಮದಿಂದ ನಮಗೆ ಶಕ್ತಿ ಸಿಗಲಿ, ನಮ್ಮ ಪ್ರಾರ್ಥನೆ ಮತ್ತು ನಾಮಜಪವು ಚೆನ್ನಾಗಿ ಆಗಲಿ’ ಎಂದು ಪ್ರಾರ್ಥನೆ ಮಾಡಿದೆ. ಅಂದಿನಿಂದ ಯಾವಾಗ ನಾನು ಆ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುತ್ತೇನೆಯೋ, ಆಗ ನನ್ನ ನಾಮಜಪವು ಪ್ರಾರಂಭವಾಗುತ್ತದೆ ಮತ್ತು ನನಗೆ ಉತ್ಸಾಹವೆನಿಸುತ್ತದೆ.

– ಸೌ. ರಕ್ಷಂದಾ ರಾಜೇಶ ಗಾವಕರ, ಫೋಂಡಾ, ಗೋವಾ