ಪಂಢರಪುರದ ಪಾದಯಾತ್ರೆಗಾಗಿ (ವಾರಕರಿಗೆ) ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ !

ನವ ದೆಹಲಿ – ಕೊರೊನಾದಿಂದಾಗಿ ಕಳೆದ ವರ್ಷ ಪಂಢರಪುರ ಪಾದಯಾತ್ರೆಯನ್ನು ರದ್ದುಪಡಿಸಲಾಗಿತ್ತು. ಈ ವರ್ಷವೂ ಕೂಡ ರಾಜ್ಯಸರಕಾರ ಪಾದಯಾತ್ರೆಗೆ ಅನುಮತಿ ನೀಡಲಿಲ್ಲ; ಆದರೆ ೧೦ ಮುಖ್ಯ ದಿಂಡಿಗಳಿಗೆ ಬಸ್ ಮೂಲಕ ಹೋಗಲು ಅನುಮತಿ ನೀಡಲಾಗಿದೆ. ರಾಜ್ಯ ಸರಕಾರವು ಕೈಗೊಂಡಿರುವ ನಿರ್ಧಾರವನ್ನು ಸಂತ ನಾಮದೇವ ಮಹಾರಾಜ ಸಂಸ್ಥಾನವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ನ್ಯಾಯಾಲಯವು ಜುಲೈ ೧೯ ರಂದು ನಡೆದ ಆಲಿಕೆಯಲ್ಲಿ ಈ ಅರ್ಜಿಯನ್ನು ತಿರಸ್ಕರಿಸಿತು. ನ್ಯಾಯಾಲಯವು ಮಹಾರಾಷ್ಟ್ರದಲ್ಲಿನ ಕೊರೊನಾದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ದಿಂಡಿಗಳನ್ನು ಹಾಗೂ ವಾರಕರಿಗೆ ಅನುಮತಿಯನ್ನು ಕೋರಿದ್ದ ಬೇಡಿಕೆಯನ್ನು ತಿರಸ್ಕರಿಸಿತು.

‘ಆಷಾಢ ವಾರಕರಿಗಾಗಿ ರಾಜ್ಯಸರಕಾರವು ಲಕ್ಷಗಟ್ಟಲೆ ವಾರಕರಿಯೊಂದಿಗೆ ನೋಂದಣೀಕೃತ ೨೫೦ ಪಲ್ಲಕಿಗೆ ವಾರಕರಿಯ ಅನುಮತಿ ನಿರಾಕರಿಸಿತ್ತು. ಈ ನಿರ್ಧಾರವೆಂದರೆ ವಾರಕರಿಯವರ ಮೂಲಭೂತ ಅಧಿಕಾರದ ಉಲ್ಲಂಘನೆಯೇ ಆಗಿದೆ’, ಎಂದು ಈ ಅರ್ಜಿಯಲ್ಲಿ ಹೇಳಲಾಗಿತ್ತು.