ಆಯುರ್ವೇದದ ಮಹತ್ವವನ್ನು ತಿಳಿದುಕೊಳ್ಳಿರಿ ಮತ್ತು ಹಿಂದೂ ಧರ್ಮದ ಅಭಿಮಾನವನ್ನು ಇಟ್ಟುಕೊಳ್ಳಿರಿ !

ಪೂ. ಸಂದೀಪ ಆಳಶಿ

ಮಾರ್ಚ್ ೨೦೨೦ ರಲ್ಲಿ ನನ್ನ ಮೂತ್ರದ ತೊಂದರೆಯು (‘ಯುರಿನ್ ಇನಫೆಕ್ಶನ್’ದ ತೊಂದರೆ) ತುಂಬಾ ಹೆಚ್ಚಾಯಿತು. ೨ ಬಾರಿ ಒಂದರ ಹಿಂದೆ ಒಂದು ಪ್ರತಿಜೈವಿಕ (ಆಂಟಿಬಾಯೋಟಿಕ್) ಮಾತ್ರೆಗಳನ್ನು ತೆಗೆದುಕೊಂಡರೂ ತೊಂದರೆ ಕಡಿಮೆಯಾಗಲಿಲ್ಲ. ತೊಂದರೆಯಿಂದಾಗುವ ವೇದನೆಗಳು ಮತ್ತು ಜ್ವರದಿಂದಾಗಿ ನನಗೆ ಒಂದು ಹೆಜ್ಜೆ ಮುಂದಿಡುವುದೂ ಕಠಿಣವಾಗತೊಡಗಿತು. ಕೊನೆಗೆ ಸನಾತನದ ವೈದ್ಯ ಮೇಘರಾಜ ಪರಾಡಕರ ಇವರು ನನಗೆ ‘ಗಂಧಕ ರಸಾಯನ’ ಎಂಬ ಆಯುರ್ವೇದಿಕ ಔಷಧವನ್ನು ಕೊಟ್ಟರು. ಈ ಆಯುರ್ವೇದಿಕ ಔಷಧಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ೩ – ೪ ದಿನಗಳಲ್ಲಿಯೇ ನನ್ನ ತೊಂದರೆಯು ಶೇ. ೬೦ ರಷ್ಟು ಕಡಿಮೆಯಾಯಿತು ಹಾಗೂ ೧೦ – ೧೨ ದಿನಗಳಲ್ಲಿಯೇ ಬಹಳಷ್ಟು ತೊಂದರೆ ಕಡಿಮೆಯಾಯಿತು. ಇದರಿಂದ ಮುಂದಿನ ಅಂಶಗಳು ನನ್ನ ಗಮನಕ್ಕೆ ಬಂದವು.

೧. ಆಯುರ್ವೇದಿಕ ಔಷಧಿಗಳ ಬಗ್ಗೆ ತಪ್ಪು ತಿಳುವಳಿಕೆ

‘ಆಯುರ್ವೇದಿಕ ಔಷಧಿಗಳ ಪರಿಣಾಮವಾಗಲು ಬಹಳ ಸಮಯ ತಗಲುತ್ತದೆ’, ಎಂಬ ತಪ್ಪು ತಿಳುವಳಿಕೆ ತುಂಬಾ ಜನರಲ್ಲಿದೆ. ತದ್ವಿರುದ್ಧ ಸರಿಯಾಗಿ ಪರೀಕ್ಷಿಸಿ ನೀಡಿದ ಆಯುರ್ವೇದಿಕ ಔಷಧಿಗಳು ರೋಗದ ಮೂಲದವರೆಗೆ ಹೋಗಿ ಕಾರ್ಯವನ್ನು ಮಾಡುತ್ತವೆ. ಆದುದರಿಂದ ಅವುಗಳ ಪರಿಣಾಮವು ಒಳಗಿನಿಂದ ಮತ್ತು ಬೇಗನೆ ಆಗುತ್ತದೆ. ‘ಆಲೋಪಥಿ’ಯ (ಆಲೋಪಥಿಕ್) ಔಷಧಿಗಳಿಂದ ಕೇವಲ ಲಕ್ಷಣಗಳು ತಾತ್ಕಾಲಿಕವಾಗಿ ದೂರವಾಗುತ್ತವೆ ಮತ್ತು ರೋಗ ಗುಣವಾಗುತ್ತದೆ ಎಂಬ ಭರವಸೆಯೂ ಇರುವುದಿಲ್ಲ. ಇದರಿಂದಾಗಿಯೇ ಅನೇಕ ಬಾರಿ ‘ಅಲೋಪಥಿಕ್’ ಔಷಧಿಗಳನ್ನು ಜೀವನವಿಡಿ ತೆಗೆದುಕೊಳ್ಳಬೇಕಾಗುತ್ತದೆ.

೨. ಪಾಶ್ಚಾತ್ಯರ ಸಂಶೋಧನೆಗಳ ಅಯೋಗ್ಯ ವೈಭವೀಕರಣ ಬೇಡ !

‘ಇಂದು ಅಲೋಪಥಿಕ್ ಔಷಧಿಗಳು ಆರೋಗ್ಯದ ವಿವಿಧ ಕ್ಷೇತ್ರಗಳಲ್ಲಿ ಉಪಯೋಗಕ್ಕೆ ಬರುತ್ತವೆ’, ಇದು ನಿಜವಾಗಿದ್ದರೂ, ‘ಅಲೋಪಥಿ’ ಔಷಧಿಗಳಿಗೆ ಪರ್ಯಾಯವೇ ಇಲ್ಲ’, ಎಂಬ ತಪ್ಪು ಕಲ್ಪನೆ ಭಾರತೀಯರಲ್ಲಿ ನಿರ್ಮಾಣವಾಗಿದೆ. ಆದುದರಿಂದ ಚಿಕ್ಕಪುಟ್ಟ ಕಾಯಿಲೆಗಳಾದರೂ, ತಕ್ಷಣ ‘ಅಲೋಪಥಿ’ ಔಷಧಿಗಳ ಕಡೆಗೇ ಧಾವಿಸುತ್ತಾರೆ. ಇದರಿಂದ ಹಿಂದೂ ಸಂಸ್ಕೃತಿಯ ಸಮೃದ್ಧ ವಂಶ ಪರಂಪರೆಯಿರುವ ಆಯುರ್ವೇದದ ಕಡೆಗೆ ನಾವೇ ಬೆನ್ನು ತಿರುಗಿಸುತ್ತಿದ್ದೇವೆ. ಭೌತಶಾಸ್ತ್ರದಲ್ಲಿ ವಿವಿಧ ಶೋಧಗಳನ್ನು ಮಾಡಿದ ಐನಸ್ಟಾಯೀನ್ ಮತ್ತು ಅವರಂತಹ ಅನೇಕ ಪಾಶ್ಚಾತ್ಯ ಶಾಸ್ತ್ರಜ್ಞರು ಹಿಂದೂಗಳ ವೇದ, ದರ್ಶನ ಮುಂತಾದ ಗ್ರಂಥಗಳಲ್ಲಿನ ವಿಚಾರಗಳ ಅಧ್ಯಯನವನ್ನು ಮಾಡಿದ್ದರು. ಈ ವಿಚಾರಗಳ ಆಧಾರದಲ್ಲಿ ಅವರ ಸಂಶೋಧನೆಗಳಿಗೆ ಮಾನ್ಯತೆ ದೊರಕಿತು. ಹೀಗಿರುವಾಗ ನಾವು ಭಾರತೀಯರು ಹಿಂದೂಗಳ ಗ್ರಂಥಗಳ, ಆಯುರ್ವೇದದ ಹಾಗೂ ಪರ್ಯಾಯದಿಂದ ಹಿಂದೂ ಧರ್ಮದ ಅಭಿಮಾನವನ್ನು ಇಟ್ಟುಕೊಳ್ಳುವುದು ಬೇಡವೇ ?

೩. ಮುಂಬರುವ ಮಹಾಭೀಕರ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದಿಕ ಔಷಧಗಳೆಂದರೆ ಸಂಜೀವಿನಿಯೇ ಆಗಿವೆ !

ಮೂರನೇ ಮಹಾಯುದ್ಧ, ನೈಸರ್ಗಿಕ ಆಪತ್ತುಗಳಂತಹ ಆಪತ್ಕಾಲ ದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಸಹಜವಾಗಿ ಸಿಗುವುದಿಲ್ಲ. ‘ಅಲೋಪಥಿಕ್’ ಔಷಧಿಗಳು ಒಂದೇ ಬಾರಿಗೆ ಮೂರು ತಿಂಗಳುಗಳಿಗಿಂತ ಹೆಚ್ಚು ಅವಧಿಗಾಗಿ ಮಾರಾಟವಾಗುವುದಿಲ್ಲ. ತದ್ವಿರುದ್ಧ ನಮ್ಮ ರೋಗಗಳಿಗೆ ಉಪಯುಕ್ತವಾಗಿರುವ ಆಯುರ್ವೇದಿಕ ಔಷಧಿಗಳನ್ನು ನಾವು ಮೊದಲೇ ಸಾಕಷ್ಟು ಖರೀದಿಸಿಡಬಹುದು. ಆಪತ್ಕಾಲದಲ್ಲಿ ‘ಅಲೋಪಥಿಕ್’ ಔಷಧಿಗಳ ಉತ್ಪಾದನೆಯು ಸ್ಥಗಿತಗೊಳ್ಳಬಹುದು. ತದ್ವಿರುದ್ಧ ನಾವು ಆಪತ್ಕಾಲದ ಮೊದಲೇ ಅನೇಕ ರೋಗಗಳಿಗೆ ಉಪಯುಕ್ತವಾಗಿರುವ ಆಯುರ್ವೇದಿಕ ಔಷಧಿ ವನಸ್ಪತಿಗಳನ್ನು ನಮ್ಮ ಮನೆಯ ಉಪ್ಪರಿಗೆಯಲ್ಲಿ (ಟೆರೇಸ್, ಬಾಲ್ಕನಿ ಇತ್ಯಾದಿಗಳಲ್ಲಿ), ಅಂಗಳದಲ್ಲಿ, ಹಿತ್ತಲು ಮುಂತಾದವುಗಳಲ್ಲಿ ಬೆಳೆಸಬಹುದು. ಇದರಿಂದ ಮುಂದೆ ಆಪತ್ಕಾಲದಲ್ಲಿ ಔಷಧಿಗಳಿಲ್ಲದೇ ನಮಗೆ ತೊಂದರೆಯಾಗಲಾರದು.

ಮೇಲಿನ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸನಾತನವು ‘ಔಷಧಿ ವನಸ್ಪತಿಗಳ ತೋಟಗಾರಿಕೆ’ ಈ ವಿಷಯದ ಗ್ರಂಥವನ್ನು ಪ್ರಕಟಿಸಿದೆ. ಇಷ್ಟೇ ಅಲ್ಲದೇ ನಾವು ಆಯುರ್ವೇದದಲ್ಲಿನ ತತ್ತ್ವಗಳಿಗನುಸಾರ ನಿಯಮಿತವಾಗಿ ಆಚರಣೆ ಮಾಡಿದರೆ, ರೋಗ ಮುಕ್ತರಾಗಿರಬಹುದು. ಈ ಬಗ್ಗೆಯೂ ಸನಾತನವು ‘ಆಯುರ್ವೇದಕ್ಕನುಸಾರ ಆಚರಣೆ ಮಾಡಿ ಔಷಧಿಗಳಿಲ್ಲದೇ ಅರೋಗ್ಯವಂತರಾಗಿರಿ !’ ಎಂಬ ಗ್ರಂಥವನ್ನು ಪ್ರಕಟಿಸಿದೆ. ಆಯುರ್ವೇದದ ಬಗೆಗಿನ ಇತರ ಉಪಯುಕ್ತ ಗ್ರಂಥಗಳನ್ನೂ ಸನಾತನವು ಆಪತ್ಕಾಲದ ಮೊದಲೇ ಪ್ರಕಟಿಸಲಿದೆ. ಎಲ್ಲರೂ ಈ ಎಲ್ಲ ಗ್ರಂಥಗಳ ಲಾಭವನ್ನು ಅವಶ್ಯಪಡೆಯಿರಿ, ಆಯುರ್ವೇದವನ್ನು ಆಚರಣೆಯಲ್ಲಿ ತನ್ನಿರಿ ಹಾಗೂ ಆಪತ್ಕಾಲದಲ್ಲಿ ತಮ್ಮ ಜೀವರಕ್ಷಣೆ ಮಾಡಿಕೊಳ್ಳಿರಿ !’ – (ಪೂ.) ಶ್ರೀ. ಸಂದೀಪ ಆಳಶಿ (೨೭.೪.೨೦೨೦)