ಕೊರೋನಾ ಲಸಿಕೆ ತುಂಬಿದ್ದ ಸಿರಿಂಜ್ ಅನ್ನು ಎಸೆದು ಬಿಡುತ್ತಿದ್ದ ಆರೋಗ್ಯ ಸಿಬ್ಬಂದಿ ನೇಹಾ ಖಾನ ಇವರ ಮೇಲೆ ಅಪರಾಧ ದಾಖಲು

ಜಮಾಲಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಸದ ತೊಟ್ಟಿಯಲ್ಲಿ ಕೊರೊನಾ ಲಸಿಕೆ ತುಂಬಿದ ೨೯ ಸಿರಿಂಜ್‍ಗಳು ಪತ್ತೆಯಾಗಿವೆ. ಪೊಲೀಸರು ಇಲ್ಲಿಯ ವ್ಯಾಕ್ಸಿನೇಷನ್ ವಿಭಾಗದ ಮುಖ್ಯಸ್ಥೆ ನೇಹಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೈಫೈ (ಉತ್ತರ ಪ್ರದೇಶ) ದ ಮದ್ಯದಂಗಡಿಗಳ ಹೊರಗೆ ‘ಲಸಿಕೆ ತೆಗೆದುಕೊಂಡವರಿಗೆ ಮಾತ್ರ ಮದ್ಯ ಸಿಗುವುದು’ ಎಂಬ ಸೂಚನೆ !

ಮದ್ಯದ ಅಂಗಡಿಯ ಮುಂದೆ ‘ವ್ಯಾಕ್ಸಿನೇಷನ್ ತೆಗೆದುಕೊಂಡಿರುವ ಪ್ರಮಾಣಪತ್ರವಿಲ್ಲದಿದ್ದರೆ, ನಿಮಗೆ ಮದ್ಯ ಸಿಗುವುದಿಲ್ಲ’, ಎಂಬ ಸೂಚನೆಯನ್ನು ಹಾಕಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಹೆಮಕುಮಾರ ಸಿಂಗ ಅವರ ಆದೇಶನುಸಾರ ಅಂಗಡಿಗಳ ಹೊರಗೆ ಸೂಚನೆ ಹಾಕಲಾಗಿದೆ.

ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ !

ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ. ೧೯೯೦ ರ ನಂತರ, ಜಗತ್ತಿನಾದ್ಯಂತ ಧೂಮಪಾನ ಮಾಡುವವರ ಸಂಖ್ಯೆ ೧೫ ಕೋಟಿಯಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಸಂಖ್ಯೆ ೧೩೦ ಕೋಟಿಗಿಂತ ಹೆಚ್ಚು ಇದೆ. ಪ್ರತಿ ಐದು ಪುರುಷರಲ್ಲಿ ಒಬ್ಬರು ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ.