ಕ್ಷಾಮಪೀಡಿತ ಭಾಗದಲ್ಲಿ ಅಥವಾ ಆಪತ್ಕಾಲದ ಪರಿಸ್ಥಿತಿಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಇರುವ ಪರ್ಯಾಯಗಳು !
ಪ್ರತಿವರ್ಷ ದೊಡ್ಡ ಮೂರ್ತಿಯನ್ನು ತರುವ ರೂಢಿಯಿದ್ದರೂ, ಬರಗಾಲದಲ್ಲಿ ವಿಸರ್ಜನೆ ಸುಲಭವಾಗಿ ಆಗುವಂತಹ ಚಿಕ್ಕ (೬-೭ ಇಂಚು ಎತ್ತರದ) ಮೂರ್ತಿಯನ್ನು ಪೂಜಿಸಬೇಕು.
ಪ್ರತಿವರ್ಷ ದೊಡ್ಡ ಮೂರ್ತಿಯನ್ನು ತರುವ ರೂಢಿಯಿದ್ದರೂ, ಬರಗಾಲದಲ್ಲಿ ವಿಸರ್ಜನೆ ಸುಲಭವಾಗಿ ಆಗುವಂತಹ ಚಿಕ್ಕ (೬-೭ ಇಂಚು ಎತ್ತರದ) ಮೂರ್ತಿಯನ್ನು ಪೂಜಿಸಬೇಕು.
ಈ ವರ್ಷ ಯಾವ ಪ್ರದೇಶದಲ್ಲಿ ಕೊರೊನಾ ವೈರಾಣುವಿನ ಸೋಂಕು ಅಲ್ಪ ಪ್ರಮಾಣದಲ್ಲಿದೆಯೋ, ಅಂದರೆ ಯಾವ ಭಾಗದಲ್ಲಿ ಸಂಚಾರಸಾರಿಗೆ ನಿಷೇಧವಿಲ್ಲವೋ, ಅಂತಹ ಸ್ಥಳಗಳಲ್ಲಿ ಎಂದಿನಂತೆ ಗಣೇಶಮೂರ್ತಿಯನ್ನು ತಂದು ಅದನ್ನು ಪೂಜಿಸಬೇಕು.
ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಅತ್ಯಧಿಕ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.
ಆವೆಮಣ್ಣು ಅಥವಾ ಜೇಡಿಮಣ್ಣನ್ನು ಬಿಟ್ಟು ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್, ಹಾಗೆಯೇ ಕಾಗದದ ಉಂಡೆ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತದೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ.
ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿಯನ್ನು ಬಿಡಿಸಬೇಕು
ಈ ಮೂರ್ತಿಯನ್ನು ಅಖಂಡ ‘ಕೃಷ್ಣಶಿಲೆ’ ಕಲ್ಲಿನಲ್ಲಿ ಕೆತ್ತಿ ನಿರ್ಮಿಸಲಾಗಿದೆ ಮತ್ತು ಅದರ ತೂಕ ೫೦೦ ಕಿಲೋದಷ್ಟಿದೆ. ಶ್ರೀ ಸಿದ್ಧಿವಿನಾಯಕನ ಮೂರ್ತಿಯು ಕಮಲದ ಆಸನದ ಮೇಲಿದೆ. ಸಪ್ತರ್ಷಿಗಳು ಮಾಡಿದ ಮಾರ್ಗದರ್ಶನಕ್ಕನುಸಾರ ಈ ಮೂರ್ತಿಯನ್ನು ತಯಾರಿಸಲಾಗಿದೆ. ಒಂದು ಶುಭಮುಹೂರ್ತದಲ್ಲಿ ಸನಾತನದ ರಾಮನಾಥಿ ಆಶ್ರಮದಲ್ಲಿ ಅದರ ಪ್ರಾಣಪ್ರತಿಷ್ಠಾಪನೆಯನ್ನು ಮಾಡಲಾಗುವುದು.
ಶ್ರೀ ಗಣೇಶಮೂರ್ತಿಯ ಪೂಜೆಯನ್ನು ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಇವರು ಭಾವಪೂರ್ಣವಾಗಿ ಮಾಡಿದ್ದರಿಂದ, ಅಲ್ಲದೇ ಮೂರ್ತಿಗೆ ಪರಾತ್ಪರ ಗುರು ಡಾ. ಆಠವಲೆಯವರು ಪುಷ್ಪಗಳನ್ನು ಅರ್ಪಿಸಿದ್ದರಿಂದ ಅದರಲ್ಲಿನ ಗಣೇಶತತ್ತ್ವ ಶೇ. ೧ ರಷ್ಟು ಹೆಚ್ಚಾಯಿತು. ಹಾಗೆಯೇ ಅದರಿಂದ ಪ್ರಕ್ಷೇಪಿತವಾಗುವ ಆನಂದದ ಸ್ಪಂದನಗಳೂ ಹೆಚ್ಚಾದವು. ಇದರಿಂದ ಪೂಜೆಯ ಬಳಿಕ ಎಲ್ಲರಿಗೂ ಆಶ್ರಮದ ವಾತಾವರಣದಲ್ಲಿ ಆನಂದದ ಲಹರಿಗಳು ಅರಿವಾಗತೊಡಗಿದವು.
ಗಣೇಶೋತ್ಸವವು ಎಲ್ಲ ಹಿಂದೂಗಳ ಶ್ರದ್ಧೆಯ ಹಾಗೂ ಆನಂದದ ಹಬ್ಬವಾಗಿದೆ ! ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ ಶ್ರೀ ಗಣೇಶನ ಆಗಮನದಿಂದ ಮಂಗಲಮಯವಾಗುವ ವಾತಾವರಣದಿಂದ ಭಕ್ತರಲ್ಲಿ ಆನಂದ ಹಾಗೂ ಉತ್ಸಾಹ ಸಂಚರಿಸುತ್ತದೆ. ಈ ವರ್ಷ ಮಾತ್ರ ಈ ಉತ್ಸಾಹಕ್ಕೆ ಕೊರೋನಾದ ಕರಿನೆರಳು ಬಂದಿದೆ. ಆದ್ದರಿಂದ ಈ ವರ್ಷ ಸರಕಾರವೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲು ಕರೆ ನೀಡಿದೆ.
ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆ ಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.
ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಯಲ್ಲಿ ಉಷ್ಣತೆಯ ಅರಿವಾಗತೊಡಗಿತು. ಇದನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.