ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಹಾಗೆಯೇ ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರುವುದು ಅವಶ್ಯಕವಾಗಿರುತ್ತದೆ.

ವೈರಾಗ್ಯ ಸ್ವರೂಪ, ಕ್ಷಮಾಶೀಲ ಮತ್ತು ಭಕ್ತವತ್ಸಲರಾಗಿರುವ ಭಗವಾನ ದತ್ತಾತ್ರೇಯ !

ಬ್ರಹ್ಮದೇವರು ಜ್ಞಾನಸ್ವರೂಪ, ಶ್ರೀವಿಷ್ಣು ವಾತ್ಸಲ್ಯ ಸ್ವರೂಪ ಮತ್ತು ಶಿವನು ವೈರಾಗ್ಯ ಸ್ವರೂಪವಾಗಿದ್ದಾರೆ. ಇಂತಹ ತ್ರಿಮೂರ್ತಿಗಳ ಸಂಯುಕ್ತ ರೂಪವಾಗಿರುವ ದತ್ತಾತ್ರೇಯನು ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯಗಳ ಸುಂದರ ಸಂಗಮವಾಗಿದ್ದಾನೆ.

ಶ್ರೀ ದತ್ತಜಯಂತಿ (ಡಿಸೆಂಬರ್ ೧೮)

ದತ್ತಜಯಂತಿಯನ್ನು ಆಚರಿಸುವ ಸಂಬಂಧದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡು ಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರೆ ಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ.

ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

ಹಸು ಮತ್ತು ಶ್ವಾನಗಳು ಒಂದು ರೀತಿಯಲ್ಲಿ ದತ್ತನ ಅಸ್ತ್ರಗಳೂ ಆಗಿವೆ. ಹಸುವು ಕೋಡಿನಿಂದ ತಿವಿದು ಮತ್ತು ಶ್ವಾನಗಳು ಕಚ್ಚಿ ಶತ್ರುವಿನಿಂದ ರಕ್ಷಿಸುತ್ತವೆ.

ಬಲಿಪಾಡ್ಯ (ನವೆಂಬರ್ ೫)

ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡುತ್ತಾರೆ.

ಸಹೋದರ ಬಿದಿಗೆ (ಯಮದ್ವಿತೀಯಾ) ಕಾರ್ತಿಕ ಶುಕ್ಲ ಪಕ್ಷ ಪ್ರತಿಪದಾ (ಅಕ್ಟೋಬರ್ ೨೬)

ಈ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಭೋಜನಕ್ಕೆ ಹೋಗಿದ್ದನು; ಆದುದರಿಂದ ಈ ದಿನಕ್ಕೆ ಯಮದ್ವಿತೀಯಾ ಎನ್ನುವ ಹೆಸರು ಬಂದಿದೆ.

ಅಭ್ಯಂಗಸ್ನಾನ (ಮಂಗಲ ಸ್ನಾನ)

ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆಯಲ್ಲಿ ಶೇ. ೬ ರಷ್ಟು ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ.

ಧನ್ವಂತರಿ ಜಯಂತಿ (ನವೆಂಬರ್ ೨)

ವೈದ್ಯರು ಈ ದಿನ ಧನ್ವಂತರಿಯ (ಆಯುರ್ವೇದದ ದೇವತೆ) ಪೂಜೆಯನ್ನು ಮಾಡುತ್ತಾರೆ.

ಆಧ್ಯಾತ್ಮಿಕ ಲಾಭ ಮತ್ತು ಚೈತನ್ಯ ನೀಡುವ ಮಂಗಲಕರ ದೀಪಾವಳಿ !

ಆಶ್ವಯುಜ ಕೃಷ್ಣ ತ್ರಯೋದಶಿ ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ಕೋಶಾಗಾರ) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ.

ದೀಪಾವಳಿಯ ದೀಪಗಳ ಅಲಂಕಾರ

ವಿದ್ಯುತ್‍ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿಯಿರುತ್ತದೆ.