ದೀಪಾವಳಿಯ ಭಾವಾರ್ಥ

‘ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟಪ್ರವೃತ್ತಿಗಳಿಂದ ಮುಕ್ತಗೊಳಿಸಿದನು ಮತ್ತು ಪ್ರಭುವಿನ ವಿಚಾರ (ದೈವೀವಿಚಾರ)ಗಳನ್ನು ನೀಡಿ ಸುಖಿಯಾಗಿಸಿದನು, ಅದುವೇ ಈ ‘ದೀಪಾವಳಿ. ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಡಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನವು ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರೀ, ಅಸುರಿ ವೃತ್ತಿಯಿರುವ ಜನರ ಪ್ರಾಬಲ್ಯವು ಕಡಿಮೆಯಾಗಿ ಸಜ್ಜನಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು.

ಇನ್ನಷ್ಟು »