ಆಪತ್ಕಾಲದ ಭೀಕರತೆಯ ಬಗ್ಗೆ ಆಗಾಗ ಸೂಚಿಸುವ ಹಾಗೂ ಅದರ ಬಗ್ಗೆ ಪರಿಹಾರೋಪಾಯವನ್ನು ನೀಡುವ ದಾರ್ಶನಿಕ ಪರಾತ್ಪರ ಗುರು ಡಾ. ಆಠವಲೆ !

‘ಒಂದು ದಿನ ದೈನಿಕ ‘ಸನಾತನ ಪ್ರಭಾತದಲ್ಲಿ ಚೀನಾಗೆ ಸಂಬಂಧಿಸಿದ ವಾರ್ತೆಯನ್ನು ನೋಡಿ ಪರಾತ್ಪರ ಗುರು ಡಾ. ಆಠವಲೆಯವರು, “ಮುಂಬರುವ ಕೆಲವು ವರ್ಷಗಳಲ್ಲಿ ನಿಮ್ಮ ಮುಂದಿನ ಪೀಳಿಗೆಯು ಮೂರನೇ ಮಹಾಯುದ್ಧವನ್ನು ನೋಡಬಹುದು. ಚೀನಾವು ಮೊದಲು ಯುದ್ಧಕ್ಕೆ ಕರೆ ನೀಡುವುದು ಹಾಗೂ ಮೂರನೇ ಮಹಾಯುದ್ಧ ಆರಂಭವಾಗುವುದು ಎಂದು ಹೇಳಿದರು.

ತ್ರಿಕಾಲಜ್ಞಾನಿ ಪರಾತ್ಪರ ಗುರು ಡಾ. ಆಠವಲೆ !

೧೫-೨೦ ವರ್ಷಗಳ ಹಿಂದೆ ಪರಾತ್ಪರ ಗುರು ಡಾಕ್ಟರ್ ಆಠವಲೆಯವರು, ‘ಕಾಲಮಹಾತ್ಮೆಗನುಸಾರ ಶೀಘ್ರದಲ್ಲಿಯೇ ಆಪತ್ಕಾಲವು ಬರಲಿದೆ. ಸೇವೆ ಮತ್ತು ಸಾಧನೆ ಮಾಡಲು ವಾತಾವರಣವು ಪ್ರತಿಕೂಲವಾಗಿರಲಿದೆ. ಮುಂದುಮುಂದೆ ಆಪತ್ಕಾಲದ ತೀವ್ರತೆ ಎಷ್ಟು ಹೆಚ್ಚಾಗುತ್ತಾ ಹೋಗುವುದೆಂದರೆ, ಸಾಧಕರಿಗೆ ಅಧ್ಯಾತ್ಮ ಪ್ರಸಾರಕ್ಕಾಗಿ ಮನೆಯಿಂದ ಹೊರಬರಲೂ ಕಠಿಣವಾಗಲಿದೆ, ಎಂದು ಹೇಳಿದ್ದರು.

ಸಾಧಕರು ಆಧ್ಯಾತ್ಮಿಕ ಮಟ್ಟದಲ್ಲಿ ಕಠಿಣ ಸಾಧನೆ ಮಾಡಿ ಪ್ರಹ್ಲಾದನಂತಹ ಭಕ್ತರಾಗಿ !

‘ಸಾಧಕರು ಆನಂದದಿಂದ ಸಾಧನೆಯನ್ನು ಮಾಡಲು ಸಾಧ್ಯವಾಗಬೇಕೆಂದು ನಮ್ಮ ಗುರುಗಳು ಎಲ್ಲ ಸಾಧಕರ ತೊಂದರೆಗಳನ್ನು ಸ್ವತಃ ಭೋಗಿಸುತ್ತಾರೆ. ನಾವೆಲ್ಲರೂ ಸಾಧನೆಯ ನಿತ್ಯ ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ ನಿಮ್ಮ ರಕ್ಷಣೆಗಾಗಿ ಗುರುವಿನ ಶಕ್ತಿ ವ್ಯಯವಾಗುವುದಿಲ್ಲ. ನೀವು ಸಾಧನೆ ಮಾಡದಿದ್ದರೆ, ನಿಮ್ಮ ಗುರುಗಳು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ಮಹಾನತೆಗೆ ನಮನಗಳು !

ಭೂಮಂಡಲದ ಮೇಲೆ ಅನೇಕ ಗುರುಗಳಿದ್ದಾರೆ; ಆದರೆ ಆ ಗುರುಗಳ ಗುರು ಆಗಿರುವಂತಹ ಸತ್ಯಪುರುಷ ಗುರುಗಳು ನಿಮಗೆ ಲಭಿಸಿದ್ದಾರೆ. ಗುರುಗಳ ಬಳಿ ಪೂರ್ಣ ಹಾಗೂ ಶುದ್ಧ ಅಧ್ಯಾತ್ಮವಿದೆ. ಇದನ್ನು ಯಾರಿಂದಲೂ ಪರೀಕ್ಷಿಸಲು ಸಾಧ್ಯವಿಲ್ಲ.

ಸಂತರು ಮತ್ತು ಅವರ ಸಾಧನೆಯ ಕುರಿತು ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಾಧುಸಂತರಿಗೆ ಸುಖ-ದುಃಖ, ಲಾಭ-ಹಾನಿ ಮತ್ತು ಜಯ-ಪರಾಜಯ ಇವೆಲ್ಲವೂ ಒಂದೇ ಆಗಿರುತ್ತದೆ; ಆದ್ದರಿಂದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿಯೂ ಸಾಧು ಸಂತರು ಯಾವಾಗಲೂ ಆನಂದದಲ್ಲಿರುತ್ತಾರೆ. ಸಾಧುಗಳು ತಮ್ಮ ಮೃತ್ಯುವಿನ ದಿನದಂದೂ ನಗುತ್ತಿರುತ್ತಾರೆ; ಏಕೆಂದರೆ ಇಂತಹ ಮನುಷ್ಯರು ಅವ್ಯಕ್ತದಿಂದ ಬಂದು ಶರೀರವನ್ನು ಧರಿಸುತ್ತಾರೆ.

ಪ.ಪೂ. ಭಕ್ತರಾಜ ಮಹಾರಾಜರು ಹೇಳಿದ ಸಂತಸಂಗದ ಮಹತ್ವ !

ಕೇವಲ ಭಜನೆಗಳನ್ನು ಕೇಳುತ್ತಿರಿ. ಅದು ತಿಳಿಯದಿದ್ದರೂ ಪರವಾಗಿಲ್ಲ. ಒಂದು ವೇಳೆ ಭಜನೆಗಳನ್ನು ಕೇಳುತ್ತ ಮಲಗಿದರೂ ಪರವಾಗಿಲ್ಲ; ಆದರೆ ನನ್ನ ಜೊತೆಯಲ್ಲಿರಿ. ಸಂತಸಂಗದಲ್ಲಿರುವುದರಿಂದ ಒಮ್ಮೆಯಾದರೂ ದೇವರ ಗಮನವು ನಿಮ್ಮ ಕಡೆಗೆ ಬರುವುದು ಮತ್ತು ಅವನು ನಿಮ್ಮನ್ನು ಜಾಗೃತಗೊಳಿಸುವನು ಎಂದರು.

ಸಾಧಕರೇ, ಸಾಧನೆಯ ದೊಡ್ಡ ಅಡಚಣೆಯಾಗಿರುವ ನಕಾರಾತ್ಮಕತೆಯನ್ನು ದೂರಗೊಳಿಸಿರಿ ಮತ್ತು ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ಪ್ರಾಪ್ತಮಾಡಿಕೊಳ್ಳಿರಿ !

‘ಕಪ್ಪು ಬಣ್ಣದ ಕನ್ನಡಕ ಧರಿಸಿ ಸುಂದರ ಜಗತ್ತಿನ ಕಡೆಗೆ ನೋಡಿದರೆ, ಆ ವ್ಯಕ್ತಿಗೆ ಎಲ್ಲ ಜಗತ್ತು ಕಪ್ಪಾಗಿಯೇ ಕಾಣಿಸುತ್ತದೆ. ಸೃಷ್ಟಿಸೌಂದರ್ಯವೂ ಅವನಿಗೆ ಕಪ್ಪಾಗಿಯೇ ಕಾಣಿಸುತ್ತದೆ. ಆ ವ್ಯಕ್ತಿಗೆ ‘ದೇವರು ಜಗತ್ತಿನ ಪ್ರತಿಯೊಂದು ವಸ್ತುವನ್ನು ಪರೋಪಕಾರಕ್ಕಾಗಿ ನಿರ್ಮಿಸಿದ್ದಾನೆ’, ಎಂಬುದು ಗಮನಕ್ಕೆ ಬರುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಆಗಾಗ ಮಾಡಿದ ಮಾರ್ಗದರ್ಶನ

ಮನೆಯಲ್ಲಿ ಎಲ್ಲ ಮಾಯೆಯ ವಿಷಯಗಳಿರುತ್ತವೆ. ದೂರದರ್ಶನ (ಟಿ.ವಿ.) ಇರುತ್ತದೆ. ಆಶ್ರಮದಲ್ಲಿ ಏನೂ ಇರುವುದಿಲ್ಲ. ಇಲ್ಲಿ ೨೪ ಗಂಟೆ ಸಾಧನೆಯ ವಿಚಾರಗಳೇ ಇರುತ್ತವೆ. ನಾವು ಬೇಗಬೇಗನೇ ಕಲಿತು ಇತರರಿಗೆ ಕಲಿಸಬೇಕು. ಯಾರು ಒಳ್ಳೆಯ ಜನರಿದ್ದಾರೋ ಅವರಿಗೆ ಮಹಾಯುದ್ಧದ ಮೊದಲೇ ಸಾಧನೆ ತಿಳಿಯಬೇಕು.

ಸಾಧನೆಯಲ್ಲಿನ ಧ್ಯೇಯವನ್ನು ಸಾಧ್ಯಗೊಳಿಸುವಾಗ ಪುನಃ ಪುನಃ ವೈಫಲ್ಯ ಬಂದರೆ, ಏನು ಮಾಡಬೇಕು ?

ವೈಫಲ್ಯದ (ವಿಫಲ) ಹಿಂದಿನ ಕಾರಣಗಳನ್ನು ಹುಡುಕಬೇಕು. ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಇವುಗಳಲ್ಲಿ ನಿರ್ದಿಷ್ಟವಾಗಿ ಯಾವ ಕಾರಣವಿದೆ, ಎಂಬುದರ ಬಗ್ಗೆ ಚಿಂತನೆಯನ್ನು ಮಾಡಬೇಕು ಮತ್ತು ಆ ಕಾರಣಕ್ಕನುಸಾರ ಯೋಗ್ಯ ಉಪಾಯ ಯೋಜನೆಯನ್ನು ಮಾಡಬೇಕು.

ಸಾಧಕರೇ, ಸಾಧನೆಯ ದೊಡ್ಡ ಅಡಚಣೆಯಾಗಿರುವ ನಕಾರಾತ್ಮಕತೆಯನ್ನು ದೂರಗೊಳಿಸಿರಿ ಮತ್ತು ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ಪ್ರಾಪ್ತಮಾಡಿಕೊಳ್ಳಿರಿ !

ಆಲಸ್ಯವಿರುವ ಮನುಷ್ಯನಿಗೆ ವಿದ್ಯೆ ಸಿಗುವುದಿಲ್ಲ. ವಿದ್ಯೆ, ಕಲೆ ಮತ್ತು ಜ್ಞಾನ ಇವುಗಳ ಅಭಾವವಿರುವ ವ್ಯಕ್ತಿಗೆ ಧನಪ್ರಾಪ್ತಿಯಾಗುವುದಿಲ್ಲ. ಯಾರ ಬಳಿ ಧನವಿಲ್ಲವೋ, ಅವನಿಗೆ ಎಲ್ಲಿಂದ ಸುಖ ಸಿಗುವುದು ? ದುಃಖದಿಂದ ಬಳಲುವ ವ್ಯಕ್ತಿಯು ಸಕಾರಾತ್ಮಕವಾಗಿರಲು ಸಾಧ್ಯವಿಲ್ಲ. ಆ ವ್ಯಕ್ತಿಯು ಎಲ್ಲರ ಮೇಲೆ ಸಿಟ್ಟು ಮಾಡುತ್ತಾನೆ. ನಕಾರಾತ್ಮಕ ವಿಚಾರಗಳಿಂದಾಗಿ ಆ ವ್ಯಕ್ತಿಯು ತನ್ನ ಮೇಲೆ ಮತ್ತು ಇತರರ ಮೇಲೆ ಸಿಡಿಮಿಡಿಗೊಳ್ಳುತ್ತಾನೆ.