ಆಪತ್ಕಾಲದ ಭೀಕರತೆಯ ಬಗ್ಗೆ ಆಗಾಗ ಸೂಚಿಸುವ ಹಾಗೂ ಅದರ ಬಗ್ಗೆ ಪರಿಹಾರೋಪಾಯವನ್ನು ನೀಡುವ ದಾರ್ಶನಿಕ ಪರಾತ್ಪರ ಗುರು ಡಾ. ಆಠವಲೆ !

ಆಪತ್ಕಾಲದ ಭೀಕರತೆಯನ್ನು ಅರಿತು ಸಾಧಕರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸೌಕರ್ಯಗಳನ್ನು ಮಾಡುವ ಸಾಧಕವತ್ಸಲ ಪರಾತ್ಪರ ಗುರು ಡಾ. ಆಠವಲೆ

ಭವಿಷ್ಯಕಾರರು ಕೇವಲ ಭವಿಷ್ಯವನ್ನು ಹೇಳುತ್ತಾರೆ, ಆದರೆ ಗುರುಗಳು ಕೃಪಾವತ್ಸಲರಾಗಿರುತ್ತಾರೆ. ಆದ್ದರಿಂದಲೇ ದಾರ್ಶನಿಕ ಪರಾತ್ಪರ ಗುರು ಡಾ. ಆಠವಲೆಯವರು ಆಪತ್ಕಾಲದ ಸುಳಿವನ್ನು ಗುರುತಿಸಿ ಸಾಧಕರಿಗೆ ಕೇವಲ ಸೂಚಿಸಿ ಸುಮ್ಮನಾಗದೇ ಸಾಧಕರಿಗೆ ಮುಂದಿನ ಕಾಲದಲ್ಲಿ ಅನುಕೂಲವಾಗುವಂತಹ ಪ್ರತ್ಯಕ್ಷ ಪರಿಹಾರಗಳನ್ನೂ ಆರಂಭಿಸಿದರು. ಸನಾತನದ ಆಶ್ರಮವನ್ನು ನಿರ್ಮಿಸುವ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರು ಬಾವಿಯಿಂದ ನೀರನ್ನು ಎತ್ತಲು ಅನುಕೂಲ ಮಾಡಿಕೊಡುವುದು, ಬೆಟ್ಟದಿಂದ ಹರಿದು ಬರುವ ನೀರು ಶುದ್ಧವಾಗಿಸಲು ನದಿಯಲ್ಲಿನ ಕಲ್ಲು-ಗೋಲಿಗಳನ್ನು ಭೂಮಿಯಲ್ಲಿ ಹಾಕುವುದು ಇಂತಹ ನಿಸರ್ಗಕ್ಕೆ ಪೂರಕವಾಗಿರುವ ಪರಿಹಾರಗಳನ್ನು ಯೋಜಿಸಿದರು, ಇದರಿಂದ ಅವರ ದಾರ್ಶನಿಕತೆ ಕಂಡುಬರುತ್ತದೆ ! ಮಿತವ್ಯಯ, ಹೊಂದಿಕೊಳ್ಳುವುದು ಇತ್ಯಾದಿ ಗುಣಗಳನ್ನು ಸಾಧಕರಲ್ಲಿ ಬೇರೂರಿಸಿ ಅವರು ಶಾರೀರಿಕ ಹಾಗೂ ಮಾನಸಿಕ ಹೀಗೆ ಎರಡೂ ಹಂತಗಳಲ್ಲಿ ಸಾಧಕರಿಂದ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಸಿದ್ಧತೆಯನ್ನು ಮಾಡಿಸಿಕೊಂಡರು.

ಪರಾತ್ಪರ ಗುರು ಡಾ. ಆಠವಲೆ

ಮೂರನೇ ಮಹಾಯುದ್ಧದಲ್ಲಿ ಅಪಾರ ಪ್ರಮಾಣದಲ್ಲಿ ಜೀವ ಮತ್ತು ಆರ್ಥಿಕ ಹಾನಿಯಾಗಲಿದೆ !

ಶ್ರೀ. ಭೂಷಣ ಕುಲಕರ್ಣಿ

‘೨೦೦೪ ರಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧನೆಯ ಬಗ್ಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ನಮಗೆ ಹೇಳಿದರು, “೨೦೧೮ ನಂತರ ಮೂರನೇ ಮಹಾಯುದ್ಧವು ಆರಂಭವಾಗಲಿದೆ. ಆ ಸಮಯದಲ್ಲಿ ಜಗತ್ತಿನಾದ್ಯಂತ ಅಪಾರ ಪ್ರಮಾಣದಲ್ಲಿ ಜೀವ ಹಾನಿಯಾಗಲಿದೆ. ಅನೇಕ ಕಟ್ಟಡ ಹಾಗೂ ಸೇತುವೆಗಳು ರಾಶಿಯಾಗಿ ಉರುಳಲಿವೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಶವಗಳನ್ನು ಒಂದರಲೊಂದು ಹಾಕಿ ಒಟ್ಟಿಗೆ ಸುಡಲಾಗಿತ್ತು. ಈಗ ಬರುವ ಮೂರನೇ ಮಹಾಯುದ್ಧದಲ್ಲಿ ಆಗುವ ಜೀವ ಹಾಗೂ ಆರ್ಥಿಕ ಹಾನಿಯು ಇಲ್ಲಿಯವರೆಗೆ ಆಗಿದ್ದ ಎರಡೂ ಮಹಾಯುದ್ಧಗಳಿಗಿಂತ ಹೆಚ್ಚು ಆಗಲಿದೆ. ಈ ಸಮಯದಲ್ಲಿ ಅನೇಕ ಗ್ರಾಮಗಳು, ಹೆದ್ದಾರಿಗಳು, ನಗರಗಳಲ್ಲಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಶವಗಳು ಇರುತ್ತವೆ ಎಂದರೆ ಅದನ್ನು ಎತ್ತಲು ಮನುಷ್ಯರೂ ಇರುವುದಿಲ್ಲ ಹಾಗೂ ‘ಅದನ್ನು ಎಣಿಸಲೂ ಆಗುವುದಿಲ್ಲ ಎಂಬಂತಹ ಸ್ಥಿತಿ ಇರಲಿದೆ.

ಆಪತ್ಕಾಲದಲ್ಲಿ ಆಶ್ರಮದಲ್ಲಿದ್ದು ಸಾಧನೆಯನ್ನು ಮಾಡುವವರ ಪ್ರಗತಿಯಾಗಲಿದೆ

ಪರಾತ್ಪರ ಗುರು ಡಾಕ್ಟರರು ಆಪತ್ಕಾಲದ ಬಗ್ಗೆ ಮಾತನಾಡುವಾಗ, “ಮುಂಬರುವ ಆಪತ್ಕಾಲವು ತುಂಬಾ ಕಷ್ಟಕರ ಕಾಲವಾಗಿರಲಿದೆ. ಎಲ್ಲೆಡೆಯ ಸಾಧಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಗಬಹುದು. ಆಗ ದೇವರು ಸಾಧಕರಿಗೆ ‘ಎಲ್ಲಿ ಸ್ಥಳಾಂತರವಾಗಬೇಕು, ಎಂಬುದು ಸೂಚಿಸುವನು. ಈ ಆಪತ್ಕಾಲದಲ್ಲಿ ಆಶ್ರಮದಲ್ಲಿ ಇರುವ ಸಾಧಕರಿಂದ ತುಂಬಾ ಸಾಧನೆ ಆಗಲಿದೆ. ಆ ಸಮಯದಲ್ಲಿ ಆಶ್ರಮದ ಒಂದು ಮೂಲೆಯಲ್ಲಿದ್ದುಕೊಂಡು ಸಾಧನೆ ಮಾಡಿದೆವು ಮತ್ತು ಮುಂದೆ ಜೀವಂತವಿದ್ದಲ್ಲಿ ಆ ಸಾಧಕರ ಆಧ್ಯಾತ್ಮಿಕ ಮಟ್ಟ ೫೦ ಕ್ಕಿಂತಲೂ ಹೆಚ್ಚು ಆಗಲಿದೆ, ಎಂದಿದ್ದರು.

ಆಶ್ರಮದಲ್ಲೇ ಸಾಧಕರ ವ್ಯವಸ್ಥೆ ಮಾಡಬೇಕಾಗಬಹುದು

೨೦೦೪ ರಲ್ಲಿ ನಾವೆಲ್ಲ ಸಾಧಕರು ಸುಖಸಾಗರದಿಂದ ರಾಮನಾಥಿ ಆಶ್ರಮಕ್ಕೆ ಸ್ಥಳಾಂತರಗೊಂಡೆವು. ಆಗ ರಾಮನಾಥಿ ಆಶ್ರಮದ ಕಟ್ಟಡ ಕಾಮಗಾರಿ ಪೂರ್ಣ ಆಗಿರಲಿಲ್ಲ; ಆದ್ದರಿಂದ ೪-೫ ತಿಂಗಳಿಗಾಗಿ ಪುರುಷ ಸಾಧಕರಿಗೆ ಉಳಿಯುವ ವ್ಯವಸ್ಥೆಯನ್ನು ಒಂದು ದೊಡ್ಡ ಕೋಣೆಯಲ್ಲಿ ಒಟ್ಟಿಗೆ ಮಾಡಲಾಗಿತ್ತು ಹಾಗೂ ಮಲಗುವ ವ್ಯವಸ್ಥೆಯನ್ನೂ ಸೇವೆಯನ್ನು ಮಾಡುವ  ಕಕ್ಷೆಯಲ್ಲಿ ಮಾಡಲಾಗಿತ್ತು. ಪರಾತ್ಪರ ಗುರು ಡಾಕ್ಟರರು ರಾಮನಾಥಿ ಆಶ್ರಮಕ್ಕೆ ಬಂದ ನಂತರ ಅವರು ‘ಸಾಧಕರಿಗೆ ಉಳಿಯುವ ವ್ಯವಸ್ಥೆ ಹೇಗೆ ಮಾಡಲಾಗಿದೆ ? ಎಂಬುದನ್ನು ನೋಡಿದರು. ಅದನ್ನು ನೋಡಿ ಪರಾತ್ಪರ ಗುರು ಡಾಕ್ಟರರು, “ಮುಂದೆ ಆಪತ್ಕಾಲ ಬಂದನಂತರ ಈ ಸ್ಥಳದಲ್ಲಿ ಈಗಿರುವ ಸಾಧಕರಿಗಿಂತಲೂ ಹೆಚ್ಚು ಸಾಧಕರು ಮತ್ತು ಸಾಧಕಿಯರು ಮಲಗಬೇಕಾಗಬಹುದು; ಏಕೆಂದರೆ ಅನೇಕ ಸಾಧಕರಿಗೆ ಆಶ್ರಮವೇ ಆಧಾರ ಹಾಗೂ ವಾಸಸ್ಥಳವಾಗಲಿದೆ. ಅವರ ಊಟ-ಉಪಹಾರದ ಹಾಗೂ ನಿವಾಸ ಹೀಗೆ ಎಲ್ಲ ವ್ಯವಸ್ಥೆಗಳನ್ನು ಇಲ್ಲೇ ಮಾಡಬೇಕಾಗಬಹುದು, ಎಂದರು.

ಆಪತ್ಕಾಲದಲ್ಲಿ ಸೌರಶಕ್ತಿ ವ್ಯವಸ್ಥೆಯನ್ನು ಅಳವಡಿಸಬೇಕಾಗಬಹುದು !

ಆಪತ್ಕಾಲದಲ್ಲಿ ಸಾಧಕರಿಗೆ ಅನಾನುಕೂಲವಾಗದಿರಲಿ ಎಂದು ಸೌರಶಕ್ತಿ ಯೋಜನೆ : ರಾಮನಾಥಿ(ಗೋವಾ)ಯ ಆಶ್ರಮದಲ್ಲಿ ಸೌರಶಕ್ತಿ ಯೋಜನೆಯನ್ನು ನೋಡಿ ಅದರ ಬಗ್ಗೆ ಶ್ರೀ. ಸುಧೀಶ ಪುಥಲತ ಇವರಿಗೆ ಸಲಹೆ ನೀಡುತ್ತಿರುವ ಪರಾತ್ಪರ ಗುರು ಡಾಕ್ಟರರು

ರಾಮನಾಥಿ ಆಶ್ರಮಕ್ಕೆ ಸ್ಥಳಾಂತರವಾದ ನಂತರ ಪ.ಪೂ.ಡಾಕ್ಟರರು ಬಿಸಿ ನೀರು ಸಿಗಲಿಕ್ಕೆ ಆಶ್ರಮದ ಛಾವಣಿಯ ಮೇಲೆ ‘ಸೋಲಾರ್ ಪ್ಯಾನಲ್ ಅಳವಡಿಸುವ ಯಂತ್ರದ ಬಗ್ಗೆ ಮಾಹಿತಿ ಯನ್ನು ಪಡೆಯಲು ಹೇಳಿದರು. ಆಗ ಪರಾತ್ಪರ ಗುರು ಡಾಕ್ಟರರು, “ಮುಂದಿನ ಆಪತ್ಕಾಲದಲ್ಲಿ ಸೂರ್ಯಪ್ರಕಾಶ(ಸೌರಶಕ್ತಿ)ಯನ್ನು ಉಪಯೋಗಿಸಿ ಬಿಸಿ ನೀರನ್ನು ಪಡೆಯಬಹುದು. ಆದ್ದರಿಂದ ಆಪತ್ಕಾಲದಲ್ಲಿ ಯಾವ ಸಾಧಕರಿಗೆ ತಣ್ಣೀರಿನ ಅಭ್ಯಾಸ ಇಲ್ಲ ಅಥವಾ ಯಾರಿಗೆ ತಣ್ಣೀರು ಆಗುವುದಿಲ್ಲ, ಅವರಿಗೆ ‘ಸೋಲಾರನ ಬಿಸಿ ನೀರು ಸಿಗಲಿದೆ. ಸಮಯಕ್ಕೆ ಸರಿಯಾಗಿ ಗ್ಯಾಸ್ ಸಿಗದಿದ್ದಲ್ಲಿ, ನಮಗೆ ‘ಸೌರಶಕ್ತಿಯನ್ನು (ಸೋಲಾರ) ಉಪಯೋಗಿಸಿ ಅನ್ನ-ಬೇಳೆ ಬೇಯಿಸಬಹುದೇ ?, ಎಂಬುದನ್ನು ಸಹ ನೋಡಬೇಕಾಗಬಹುದು ಹಾಗೂ ಅದರೊಂದಿಗೆ ಆಶ್ರಮದಲ್ಲಿ ವಿದ್ಯುತ್ ಮೂಲಕ ನಡೆಯುವ ಯಂತ್ರಗಳನ್ನು ಸೌರಶಕ್ತಿಯಿಂದ ಹೇಗೆ ನಡೆಸಬಹುದು ?, ಇದಕ್ಕಾಗಿ ಪ್ರಯತ್ನಿಸಬೇಕಾಗಬಹುದು. ನಮಗೆ ‘ಬಯೋಗ್ಯಾಸ್ನ ವ್ಯವಸ್ಥೆಯನ್ನೂ ಮಾಡಬೇಕಾಗಬಹುದು. ಇದರಿಂದ ಆಪತ್ಕಾಲದಲ್ಲಿ ಆಶ್ರಮದಲ್ಲಿರುವ ಸಾಧಕರು ಕನಿಷ್ಟ ಅಡಚಣೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಿದರು.

‘ಪರ್ವತದಿಂದ ಹರಿದು ಬರುವ ನೀರು ಸಾಧಕರಿಗೆ ಕುಡಿಯಲು ಯೋಗ್ಯವಾಗಬೇಕು, ಅದಕ್ಕಾಗಿ ನದಿಯಲ್ಲಿನ ಕಲ್ಲು-ಗೋಲಿ ಆಶ್ರಮದ ಭೂಮಿಯಲ್ಲಿ ಹಾಕುವುದು

ಆಶ್ರಮದ ಕಟ್ಟಡಕಾಮಗಾರಿ ನಡೆಯುತ್ತಿರುವಾಗ ಪರಾತ್ಪರ ಗುರು ಡಾಕ್ಟರರು, “ಮಳೆಯ ಅಥವಾ ಇತರ ಸಮಯದಲ್ಲೂ ಬೆಟ್ಟಗಳಿಂದ ಹರಿದು ಬರುವ ನೀರು ಭೂಮಿಯಿಂದ ಆಶ್ರಮದ ಬಾವಿಗೆ ಬರುತ್ತದೆ. ಆ ನೀರನ್ನು ಸಾಧಕರಿಗೆ ಕುಡಿಯಲು ಯೋಗ್ಯವಾಗಿ ಮಾಡಲು ಆಶ್ರಮದ ಕಟ್ಟಡದ ಪರಿಸರದ ಭೂಮಿಯಲ್ಲಿ ನದಿಯಲ್ಲಿನ ವಿವಿಧ ಪ್ರಕಾರದ ಕಲ್ಲು-ಗೋಲಿ ಕೂಡಿಸಬೇಕು. ಇದರಿಂದ ಇದರ ಮೇಲಿನಿಂದ ಹರಿದು ಬರುವ ನೀರು ಶುದ್ಧವಾಗುತ್ತದೆ. ಮುಂದೆ ನಗರಪಾಲಿಕೆಯ ನೀರಿನ ಪೂರೈಕೆ ನಿಂತರೆ, ಕಲ್ಲು-ಗೋಲಿಗಳ ಮೇಲಿಂದ ಹರಿದು ಬರುತ್ತಿರುವುದರಿಂದ ಆಶ್ರಮದ ಬಾವಿಯ ನೀರು ಕುಡಿಯಲು ಯೋಗ್ಯವಾಗುತ್ತದೆ. ಆಪತ್ಕಾಲದಲ್ಲಿ ವಿದ್ಯುತ್ ಇಲ್ಲದಿದ್ದಾಗ, ಆಗ ಬಾವಿಯ ನೀರನ್ನು ಕೈಯಿಂದ ಸೇದಿ ಕುಡಿಯಲು ಉಪಯೋಗಿಸಬಹುದು ಎಂದು ಹೇಳಿದರು. – ಶ್ರೀ. ಭೂಷಣ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ.


ಆಪತ್ಕಾಲದಲ್ಲಿ ಔಷಧಿಗಳು ಸಿಗುವುದು ಕಷ್ಟ, ಎಂಬುದನ್ನು ಮೊದಲೇ ಅರಿತುಕೊಂಡು ವೈದ್ಯ ಸಾಧಕರಿಗೆ ವಿವಿಧ ಚಿಕಿತ್ಸಾಪದ್ದತಿಗಳನ್ನು ಕಲಿಯಲು ಪ್ರೇರಣೆ ನೀಡುವ ಪರಾತ್ಪರ ಗುರು ಡಾ. ಆಠವಲೆ !

ಆಯುರ್ವೇದ ಔಷಧಿಗಳ ತಯಾರಿಕೆ : ವೈದ್ಯ (ಕು.) ಅಪರ್ಣಾ ಮಹಾಂಗಡೆ ಇವರಿಗೆ ಬಾಳಿಕೆ ಬರುವ ಔಷಧಿಯ ಪೊಟ್ಟಣವನ್ನು ತೋರಿಸಿ ಇದೇ ರೀತಿಯ ಉತ್ಪಾದನೆಗಳನ್ನು ಮಾಡುವಂತೆ ಹೇಳುತ್ತಿರುವ ಪರಾತ್ಪರ ಗುರು ಡಾಕ್ಟರರು

೧. ‘ನಾನು ಆಯುರ್ವೇದದ ವಿಷಯದಲ್ಲಿ ಶಿಕ್ಷಣವನ್ನು ಪಡೆದಿದ್ದೇನೆ. ನಾನು ಆಶ್ರಮದಲ್ಲಿ ಪೂರ್ಣವೇಳೆ ಸಾಧನೆ ಮಾಡಲು ಬಂದನಂತರ ಪರಾತ್ಪರ ಗುರುದೇವರು ನನಗೆ ವಿವಿಧ ಚಿಕಿತ್ಸಾ ಪದ್ದತಿಗಳ ಅಭ್ಯಾಸವನ್ನು ಮಾಡಲು ಕಲಿಸಿದರು. ಇದರಲ್ಲಿ ಬಿಂದುಒತ್ತಡ. ಬಣ್ಣಚಿಕಿತ್ಸೆ, ಚಕ್ರ ಹಿಲಿಂಗ್, ಮ್ಯಾನ್ಯುವಲ್ ಲಿಫ್ಮಾಟಿಕ್ ಡ್ರೈನೇಜ್ (Manual Lymphatic Drainage), ಮರ್ಮ ಚಿಕಿತ್ಸೆ, ನರಚಿಕಿತ್ಸೆ (Neurotheraphy), ಅಗ್ನಿಕರ್ಮ ವಿದ್ಧಕರ್ಮ ಇತ್ಯಾದಿ ಪದ್ದತಿಗಳು ಅದರಲ್ಲಿದೆ. ಇದಲ್ಲದೇ ಅವರು ನನಗೆ ಆಯುರ್ವೇದದ ಅಡಿಯಲ್ಲಿ ಬರುವ ಪಂಚಕರ್ಮ ಹಾಗೂ ಮರ್ದನದ ವಿವಿಧ ಪದ್ದತಿಗಳನ್ನು ಕಲಿಯಲು ಸತತವಾಗಿ ಪ್ರೇರಣೆ ನೀಡುತ್ತಿದ್ದರು. ಅವರು, ಮಂಬರುವ ಕಾಲದಲ್ಲಿ ಔಷಧಿ ಹಾಗೂ ವೈದ್ಯರು ಇರುವುದಿಲ್ಲ. ಬಾಹ್ಯ ಚಿಕಿತ್ಸಾ ಪದ್ದತಿಗಳನ್ನು ಕಲಿತುಕೊಳ್ಳಿ. ಸದ್ಯ ಔಷಧಿಗಳು ಸಿಗುತ್ತಿಲ್ಲ. ಹಾಗಾಗಿ ಆ ಸಮಯದಲ್ಲಿ ಪರಾತ್ಪರ ಗುರುದೇವರು ಹೇಳಿದ ಅಂಶಗಳು ಅನುಭವಕ್ಕೆ ಬರುತ್ತಿದೆ.

೨. ಪರಾತ್ಪರ ಗುರು ಡಾಕ್ಟರರು ೩ ವರ್ಷಗಳ ಹಿಂದೆಯೇ ‘ಪಲ್ಸಆಕ್ಸಿಮೀಟರ್ ಈ ಯಂತ್ರವನ್ನು ನೋಡಿದಾಗ, “ಈ ಯಂತ್ರವನ್ನು ನಮ್ಮ ಪ್ರತಿಯೊಂದು ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಒದಗಿಸಬೇಕು ಎಂದು ಹೇಳಿದರು. ಆಗ ಈ ಯಂತ್ರ ಸಾಮಾನ್ಯ ವ್ಯಕ್ತಿಯ ಬಳಿಯಂತೂ ಇರಲಿಲ್ಲ; ಆದರೆ ಆಸ್ಪತ್ರೆಯಲ್ಲಿಯೂ ಕೇವಲ ‘ಐಸಿಯುನಲ್ಲಿ ಉಪಯೋಗಿಸಲಾಗುತ್ತಿತ್ತು. ಆದ್ದರಿಂದ ಅವರು ಇದನ್ನು ಹೇಳಿದ ನಂತರ ನಮಗೆ ಆಶ್ಚರ್ಯವೇ ಆಯಿತು; ಆದರೆ ಇಂದು ಮನೆಮನೆಗಳಲ್ಲಿ ಈ ಯಂತ್ರವು ಉಪಯೋಗಕ್ಕೆ ಬರುತ್ತಿದೆ.

. ‘ಮುಂದೆ ಸ್ನಾಯು ಹಾಗೂ ಮೂಳೆಯ ಬಗೆಗಿನ ಕಾಯಿಲೆಯ ಪ್ರಮಾಣ ಹೆಚ್ಚಾಗಲಿದೆ, ಎಂದು ಹೇಳಿ ಪರಾತ್ಪರ ಗುರುದೇವರು ಮರ್ದನದ ಬಗ್ಗೆ ಅನೇಕ ಪ್ರಕಾರಗಳು ಕಲಿತುಕೊಳ್ಳಲು ಹೇಳಿದರು. ತದನಂತರ ಅನೇಕ ಸಾಧಕರಿಗೆ ಅದೇ ರೀತಿಯ ವ್ಯಾಧಿಯಾಗಿರುವುದು ಗಮನಕ್ಕೆ ಬಂದಿತು.

– ವೈದ್ಯ ಕು. ಅಪರ್ಣಾ ಮಹಾಂಗಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ.


ಸೆಕೆ ಇರುವಾಗಲೂ ಆಪತ್ಕಾಲಕ್ಕಾಗಿ ಪಂಖಾವನ್ನು ಹಾಕದೇ ಇರಲು ಅಭ್ಯಾಸವನ್ನು ಮಾಡುವ ಪರಾತ್ಪರ ಗುರು ಡಾಕ್ಟರರು !

‘ಪ.ಪೂ. ಡಾಕ್ಟರರ ಕೋಣೆಯಲ್ಲಿ ಕಸ ಗುಡಿಸುವ ಮುನ್ನ ನಾನು ಯಾವಾಗಲೂ ಪಂಖಾದ ಒತ್ತುಗುಂಡಿಯನ್ನು ಬಂದ್ ಮಾಡುತ್ತೇನೆ. ಆಗ ಒಂದು ದಿನ ಈ ಮುಂದಿನಂತೆ ಸಂಭಾಷಣೆ ಆಯಿತು.

ಪರಾತ್ಪರ ಗುರು ಡಾಕ್ಟರ್ : ಕಸ ಗುಡಿಸಿದ ನಂತರ ಕೂಡಲೇ ಪಂಖಾವನ್ನು ಹಚ್ಚುವ. ತುಂಬಾ ಸೆಕೆ ಆಗುತ್ತಿದೆ.

ನಾನು : ನಾಳೆಯಿಂದ ನಾನು ಬೇಗನೆ ಕಸ ಗುಡಿಸುತ್ತೇನೆ.

ಪರಾತ್ಪರ ಗುರು ಡಾಕ್ಟರ್ : ಬೇಡ. ಅಷ್ಟು ಅವಶ್ಯಕತೆ ಇಲ್ಲ. ಈಗ ಆಪತ್ಕಾಲ ತುಂಬಾ ಹತ್ತಿರ ಬಂದಿದೆಯಲ್ಲ ! ಆಪತ್ಕಾಲದಲ್ಲಿ ನಮಗೆ ಪಂಖಾ ಸಿಗುವುದಿಲ್ಲ; ಆದ್ದರಿಂದ ಈಗಿಂದಲೇ ಅಭ್ಯಾಸ ಮಾಡಿಕೊಳ್ಳುತ್ತೇನೆ.

– ಸೌ. ರೋಹಿಣಿ ಭುಕನ, ಸನಾತನ ಆಶ್ರಮ, ಗೋವಾ.


ಆಪತ್ಕಾಲದ ಸ್ಥಿತಿಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಆಗಾಗ ಹೇಳಿದ ಅಂಶಗಳು !

ಶ್ರೀ. ಚೇತನ ರಾಜಹಂಸ

೧. ‘ಒಂದು ದಿನ ದೈನಿಕ ‘ಸನಾತನ ಪ್ರಭಾತದಲ್ಲಿ ಚೀನಾಗೆ ಸಂಬಂಧಿಸಿದ ವಾರ್ತೆಯನ್ನು ನೋಡಿ ಪರಾತ್ಪರ ಗುರು ಡಾ. ಆಠವಲೆಯವರು, “ಮುಂಬರುವ ಕೆಲವು ವರ್ಷಗಳಲ್ಲಿ ನಿಮ್ಮ ಮುಂದಿನ ಪೀಳಿಗೆಯು ಮೂರನೇ ಮಹಾಯುದ್ಧವನ್ನು ನೋಡಬಹುದು. ಚೀನಾವು ಮೊದಲು ಯುದ್ಧಕ್ಕೆ ಕರೆ ನೀಡುವುದು ಹಾಗೂ ಮೂರನೇ ಮಹಾಯುದ್ಧ ಆರಂಭವಾಗುವುದು ಎಂದು ಹೇಳಿದರು.

೨. ನಾವು ನಾಗಪುರದಲ್ಲಿದ್ದ ನಮ್ಮ ಮನೆಯನ್ನು ಮಾರಾಟ ಮಾಡಿದೆವು. ಆಗ ಪರಾತ್ಪರ ಗುರು ಡಾಕ್ಟರರು, ‘ಮನೆ ಮಾರಾಟ ಮಾಡಿ ಬಂದ ಹಣವನ್ನು ಸಂಗ್ರಹಿಸಿಟ್ಟುಕೊಳ್ಳಿ. ಮುಂದೆ ಆಪತ್ಕಾಲಕ್ಕೆ ಉಪಯೋಗವಾಗಲಿದೆ. ಆಗ ಸಾಧಕರಿಗಾಗಿ ಪ್ರತಿದಿನ ‘ಬ್ರೆಡ್ ಖರೀದಿಸಲು ತುಂಬಾ ಹಣ ತೆರಬೇಕಾಗುತ್ತದೆ. ಎಂದು ಹೇಳಿದರು.

. ೧೯೯೮ ರಲ್ಲಿ ಓರ್ವ ಸಾಧಕನು ‘ಬೇಕರಿಯ ಕೋರ್ಸನ್ನು ಮಾಡಿರುವುದು ಪರಾತ್ಪರ ಗುರು ಡಾಕ್ಟರರಿಗೆ ತಿಳಿಯಿತು. ಆಗ ಅವರು, “ಮುಂದೆ ಆಪತ್ಕಾಲ ಬರಲಿದೆ. ಆಗ ನಿಮ್ಮ ‘ಬೇಕರಿಯಿಂದ ಸಾಧಕರಿಗೆ ‘ಬ್ರೆಡ್ ಸಿಗಲಿದೆ ಎಂದು ಹೇಳಿದರು.

೪. ಸಾಂಗ್ಲಿಯಲ್ಲಿದ್ದ ಓರ್ವ ಸಾಧಕರು ಕುಟುಂಬ ಸಹಿತ ಆಶ್ರಮದಲ್ಲಿ ವಾಸಿಸಲು ಬಂದನಂತರ ಅವರ ಮನೆ ಖಾಲಿ ಇತ್ತು. ಆಗ ಪರಾತ್ಪರ ಗುರು ಡಾಕ್ಟರರು, “ಮುಂದೆ ಆಪತ್ಕಾಲ ಆರಂಭವಾದ ನಂತರ ಮುಂಬಯಿಯ ಎಲ್ಲ ಸಾಧಕರು ಮುಂಬಯಿಯನ್ನು ಬಿಟ್ಟು ಕೊಂಕಣ-ಗೋವಾಗೆ ಬರುವವರಿದ್ದಾರೆ. ಆಗ ಎಲ್ಲರ ವ್ಯವಸ್ಥೆ ಇಲ್ಲಿ ಮಾಡಲು ಸಾಧ್ಯವಾಗದಿದ್ದರೆ ಸಾಂಗ್ಲಿಯಲ್ಲಿ ಮಾಡಲು ಬರುತ್ತದೆ ಎಂದು ಹೇಳಿದರು.

– ಶ್ರೀ. ಚೇತನ ರಾಜಹಂಸ, ಸನಾತನ ಆಶ್ರಮ, ರಾಮನಾಥಿ, ಗೋವಾ.