ಪರಾತ್ಪರ ಗುರು ಡಾ. ಆಠವಲೆಯವರ ಮಹಾನತೆಗೆ ನಮನಗಳು !

ಮಹರ್ಷಿಗಳು ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ವರ್ಣಿಸಿರುವ ಪರಾತ್ಪರ ಗುರು ಡಾಕ್ಟರರ ಮಹಾತ್ಮೆ !

‘ಶಿವ ಹಾಗೂ ಶ್ರೀವಿಷ್ಣುವಿನ ಕಾರ್ಯದಂತೆ ಪರಾತ್ಪರ ಗುರು ಡಾಕ್ಟರರ ಕಾರ್ಯ ಸಹ ಪರಿಪೂರ್ಣ !

ವಸಿಷ್ಠಋಷಿಗಳು ನುಡಿಯುತ್ತಾರೆ, “ನಿಮ್ಮ ಸದ್ಗುರುಗಳು ಶ್ರೇಷ್ಠರಾಗಿದ್ದಾರೆ. ಪ್ರತಿಯೊಂದು ಅಧ್ಯಾತ್ಮಪ್ರಚಾರದ ಕಾರ್ಯವು ಅವರ ಆಜ್ಞೆಯಿಂದ ಹಾಗೂ ಕೃಪಾದೃಷ್ಟಿಯಡಿಯಲ್ಲಿ ನಡೆಯುತ್ತಿದೆ. ಅವರ ಸ್ಥಿತಿ ಶಿವ ಹಾಗೂ ಶ್ರೀವಿಷ್ಣುವಿನಂತಿದೆ. ಅವರ ಕಾರ್ಯವು ಪರಿಪೂರ್ಣವಾಗಿರುವಂತೆ ನಿಮ್ಮ ಕಾರ್ಯವು ಸಹ ಪರಿಪೂಣವಾಗಿದೆ. ನಿಮ್ಮ ಕಾರ್ಯಕ್ಕೆ ಶಿವ, ಶ್ರೀವಿಷ್ಣು ಹಾಗೂ ಸದಾಶಿವರ (ಪಾರ್ವತಿಯು ಶಿವನನ್ನು ವಿವಾಹವಾಗುವ ಮೊದಲಿನ ಹೆಸರು) ಆಶೀರ್ವಾದವಿದೆ. ನಿಮ್ಮ ಕಾರ್ಯದ ಕೀರ್ತಿ ಪತಾಕೆಯನ್ನು ನಾವು ಜಗತ್ತಿನಾದ್ಯಂತ ಹಾರಾಡಿಸಲಿದ್ದೇವೆ. (ನಾಡಿವಾಚನ ಕ್ರಮಾಂಕ ೫೦, ೯.೧೨.೨೦೧೫)

ಸಾಧಕರ ಜೀವನವನ್ನು ಪ್ರಕಾಶಮಾನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಭೂಮಂಡಲದ ಮೇಲೆ ಅನೇಕ ಗುರುಗಳಿದ್ದಾರೆ; ಆದರೆ ಆ ಗುರುಗಳ ಗುರು ಆಗಿರುವಂತಹ ಸತ್ಯಪುರುಷ ಗುರುಗಳು ನಿಮಗೆ ಲಭಿಸಿದ್ದಾರೆ. ಗುರುಗಳ ಬಳಿ ಪೂರ್ಣ ಹಾಗೂ ಶುದ್ಧ ಅಧ್ಯಾತ್ಮವಿದೆ. ಇದನ್ನು ಯಾರಿಂದಲೂ ಪರೀಕ್ಷಿಸಲು ಸಾಧ್ಯವಿಲ್ಲ. ನೀರಿನಲ್ಲಿ ಪಾಚಿಯಿರುತ್ತದೆ. ಆದರೆ ನಾವು ಆ ಪಾಚಿಯನ್ನು ಸರಿಸಿ ಒಳಗಿರುವ ಶುದ್ಧ ನೀರನ್ನು ಬಳಸುತ್ತೇವೆ ತಾನೆ ? ಆ ಪಾಚಿಯಂತೆ ನಮ್ಮ ಪ್ರಾರಬ್ಧಕರ್ಮ, ದೋಷ, ತಪ್ಪುಗಳನ್ನು ದೂರ ಮಾಡಲು ನಾವು ಗುರುಗಳ ಬಳಿ, ದೇವರ ಬಳಿಗೆ ಹೋಗುತ್ತೇವೆ. ಅಗ್ನಿಯಲ್ಲಿ ಲೋಹವನ್ನು ಹಾಕಿದರೆ ಅದರ ಬಣ್ಣವು ಬದಲಾಗುತ್ತದೆ. ಅದು ಕೆಂಪು ಹಾಗೂ ಪ್ರಕಾಶಮಾನವಾಗಿರುತ್ತದೆ, ಅದೇ ರೀತಿ ಅದು ಚಿನ್ನಕ್ಕೂ ಅನ್ವಯಿಸುತ್ತದೆ. ಗುರುಗಳ ಬಳಿ ಬಂದ ಸಾಧಕರದ್ದೂ ಅದೇ ರೀತಿ ಆಗುತ್ತದೆ. ಅವರೂ ಗುರುಗಳ ಸಹವಾಸದಿಂದ ಪ್ರಕಾಶಮಯರಾಗುತ್ತಾ ಹೋಗುತ್ತಾರೆ. (ನಾಡಿವಾಚನ ಕ್ರಮಾಂಕ ೬೨, ೨೩.೨.೨೦೧೬)

ಘೋರ ಆಪತ್ಕಾಲದಲ್ಲಿ ಸಾಧಕರಿಗೆ ಚೈತನ್ಯದ ಶ್ವಾಸವನ್ನು ನೀಡುವ ಪರಾತ್ಪರ ಗುರು ಡಾ. ಆಠವಲೆ !

‘ಪರಾತ್ಪರ ಗುರು ಡಾ. ಆಠವಲೆಯವರು ನೀಡಿದ ಚೈತನ್ಯದ ಶ್ವಾಸದಿಂದಲೇ ಈ ಘೋರ ಆಪತ್ಕಾಲದಲ್ಲಿಯೂ ತೀವ್ರ ತೊಂದರೆಯನ್ನು ಸಹಿಸಿ ಸಾಧಕರಿಗೆ ೧೦ ರಿಂದ ೧೫ ಗಂಟೆಗಳ ಕಾಲ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿದೆ, ಇಲ್ಲದಿದ್ದರೆ ವಾತಾವರಣದಲ್ಲಿನ ನಕಾರಾತ್ಮಕ ಶಕ್ತಿಗಳು ಸಾಧಕರನ್ನು ಎಂದೋ ಸಾಯಿಸಿ ಬಿಡುತ್ತಿದ್ದವು.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಗೋವಾ.

ಗುರುದೇವರೇ ಅನಂತಾನಂತ ಕೃತಜ್ಞತೆ !

ಈ ಜಗತ್ಪಾಲಕ ಮಹಾವಿಷ್ಣುಸ್ವರೂಪ ಗುರುದೇವರೇ, ಇಡೀ ಜಗತ್ತು ವಿವಿಧ ಬಿಕ್ಕಟ್ಟುಗಳಿಂದ ನಲುಗುತ್ತಿದೆ. ಎಲ್ಲೆಡೆ ಅನಾಚಾರ ಮತ್ತು ಅಧರ್ಮದ ಕತ್ತಲೆ ಆವರಿಸಿದೆ. ಅಖಿಲ ಮನುಕುಲವು ಚಿಂತೆ ಮತ್ತು ಅಸುರಕ್ಷಿತೆಯಿಂದ ಬಳಲುತ್ತಿದೆ. ನೈಸರ್ಗಿಕ ವಿಪತ್ತುಗಳು, ಸಾಂಕ್ರಾಮಿಕ ರೋಗಗಳು, ಸಾಮಾಜಿಕ ಅಸುರಕ್ಷಿತತೆ, ಕೌಟುಂಬಿಕ ಘರ್ಷಣೆಗಳು, ಆರ್ಥಿಕ ಬಿಕ್ಕಟ್ಟುಗಳು ಇತ್ಯಾದಿಗಳು ಎಲ್ಲೆಡೆ ದೂರದಲ್ಲಿ ಕಂಡುಬರುತ್ತವೆ ! ಗುರುದೇವರೇ, ಈ ಘೋರ ಆಪತ್ಕಾಲದಲ್ಲಿ ಏನೆಲ್ಲ ಸಂಭವಿಸುತ್ತದೆಯೋ ಅದೆಲ್ಲವನ್ನು ಸ್ವೀಕರಿಸಲು ನಮಗೆ ಶಕ್ತಿಯನ್ನು ನೀಡಿ ! ಎಷ್ಟೇ ದೊಡ್ಡ ವಿಪತ್ತು ಇರಲಿ, ತಮ್ಮ ಕೃಪಾಛತ್ರವು ಅವುಗಳಿಗಿಂತ ಅನೇಕ ಪಟ್ಟು ದೊಡ್ಡದಾಗಿದೆ ! ಹೇ ಗುರುದೇವರೇ, ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಮನಸ್ಸಿನಲ್ಲಿ ಮಾಡಿದ ಸಾಧನೆಯ ಸಂಸ್ಕಾರಗಳನ್ನು ನೀವೇ ಆವಿಷ್ಕರಿಸಿ ! ಗುರುದೇವರೇ ನಮ್ಮ ಶ್ರದ್ಧೆ ಮತ್ತು ಭಕ್ತಿಯನ್ನು ಇನ್ನಷ್ಟು ಬಲಪಡಿಸಿ ! ಸಾಧಕರಿಗಾಗಿ ಕಾಲದೊಂದಿಗೂ ಹೋರಾಡುವ ಸಾಕ್ಷಾತ್ ಶ್ರೀಮನ್ನಾರಾಯಣಸ್ವರೂಪ ಗುರುದೇವರಿರುವಾಗ ನಮಗೇಕೆ ಕಾಲದ ಭಯ ? ಹೇ ಭಗವಂತ, ನೀವು ನಮ್ಮ ಜೀವನದಲ್ಲಿ ಬಂದಿದ್ದೀರಿ, ಇದಕ್ಕಿಂಂತ ದೊಡ್ಡಭಾಗ್ಯ ಇನ್ನೇನಿಲ್ಲ ! ನಿಮ್ಮ ಕೋಮಲ ಚರಣಗಳಲ್ಲಿ ಅನಂತಾನಂತ ಕೃತಜ್ಞತೆಗಳು !