ಸಾಧಕರು ಆಧ್ಯಾತ್ಮಿಕ ಮಟ್ಟದಲ್ಲಿ ಕಠಿಣ ಸಾಧನೆ ಮಾಡಿ ಪ್ರಹ್ಲಾದನಂತಹ ಭಕ್ತರಾಗಿ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಸಾಧಕರು ಬೇಸರಗೊಳ್ಳದೆ ಆಧ್ಯಾತ್ಮಿಕ ಮಟ್ಟದಲ್ಲಿ ಸತತವಾಗಿ ಕಠಿಣ ಸಾಧನೆಯನ್ನು ಮಾಡಿದರೆ, ಸಾಧಕರ ಜೀವನರಕ್ಷಣೆಗಾಗಿ ಖರ್ಚಾಗುತ್ತಿರುವ ಸಂತರ ಮತ್ತು ಪರಾತ್ಪರ ಗುರುದೇವರ ಶಕ್ತಿಯು ರಾಷ್ಟ್ರೀಯ ರಕ್ಷಣೆಗೆ ಬಳಕೆಯಾಗಿ ‘ಈಶ್ವರೀ ರಾಜ್ಯ ಶೀಘ್ರದಲ್ಲೇ ಬರಲಿದೆ ! : ‘ಸಾಧಕರು ಆನಂದದಿಂದ ಸಾಧನೆಯನ್ನು ಮಾಡಲು ಸಾಧ್ಯವಾಗಬೇಕೆಂದು ನಮ್ಮ ಗುರುಗಳು ಎಲ್ಲ ಸಾಧಕರ ತೊಂದರೆಗಳನ್ನು ಸ್ವತಃ ಭೋಗಿಸುತ್ತಾರೆ. ನಾವೆಲ್ಲರೂ ಸಾಧನೆಯ ನಿತ್ಯ ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ ನಿಮ್ಮ ರಕ್ಷಣೆಗಾಗಿ ಗುರುವಿನ ಶಕ್ತಿ ವ್ಯಯವಾಗುವುದಿಲ್ಲ. ನೀವು ಸಾಧನೆ ಮಾಡದಿದ್ದರೆ, ನಿಮ್ಮ ಗುರುಗಳು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಗುರುಗಳು ಸಾಧಕರ ತೊಂದರೆಯನ್ನು ನಿಸ್ವಾರ್ಥದಿಂದ ಭೋಗಿಸುತ್ತಾರೆ.

ಪರಾತ್ಪರ ಗುರು ಡಾ. ಆಠವಲೆಯವರ ವಿಷಯದಲ್ಲೂ ಇದೇ ರೀತಿ ಇದೆ. ಅವರ ದೇಹವು ಈಗ  ಅವರದ್ದಾಗಿಲ್ಲ, ಅದು ಸಮಷ್ಟಿಯದ್ದಾಗಿದೆ. ನಾವು ಆಧ್ಯಾತ್ಮಿಕ ತೊಂದರೆಗಳಿಂದ ಬಳಲುತ್ತಿದ್ದರೆ, ಅನೇಕ ಸಂತರು ನಮ್ಮ ಜೀವ ಉಳಿಸಲು ಜಪ ಮಾಡುತ್ತಾರೆ. ನಾವೇ ಸಾಧನೆಯನ್ನು ಗಂಭೀರವಾಗಿ ಮಾಡಿದರೆ, ನಾವು ಸಂತರ ಅಮೂಲ್ಯ ಸಮಯವನ್ನು ಉಳಿಸಬಹುದು. ನಮ್ಮ ಜೀವನದ ರಕ್ಷಣೆಗಾಗಿ ಖರ್ಚು ಮಾಡುವ ಸಂತರ ಮತ್ತು ಪರಾತ್ಪರ ಗುರುದೇವರ ಶಕ್ತಿಯನ್ನು ರಾಷ್ಟ್ರರಕ್ಷಣೆಗಾಗಿ ಬಳಸಿದರೆ, ‘ಈಶ್ವರೀ ರಾಜ್ಯ ಶೀಘ್ರದಲ್ಲೇ ಬರುವುದಿಲ್ಲವೇ ? ಇದಕ್ಕೆ ನಿಮ್ಮ ಸಾಧನೆಯ ಕೊಡುಗೆ ನೀಡುವುದು ಅಗತ್ಯವಿದೆ. ನಾವು ಬೇಸರಗೊಳ್ಳದೆ ಸಾತತ್ಯದಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಕಠಿಣ ಸಾಧನೆ ಮಾಡಿ ಕಾರ್ಯನಿರತವಾಗಿರಬೇಕು ಆಗ ಮಾತ್ರ ‘ಈಶ್ವರೀ ರಾಜ್ಯ ಶೀಘ್ರದಲ್ಲೇ ಬರಲು ಸಾಧ್ಯ. ಇದಕ್ಕೆ ನಾವೇ ಎಲ್ಲ ರೀತಿಯಿಂದ ಜವಾಬ್ದಾರರಾಗಿದ್ದೇವೆ. ಇದನ್ನು ಎಲ್ಲರೂ ಗಂಭೀರವಾಗಿ ವಿಚಾರ ಮಾಡಬೇಕು.

೨. ‘ಈಶ್ವರೀ ರಾಜ್ಯದ ಬರುವುದು ಇದು ಸಾಧಕರ ಮೇಲೆಯೇ ಅವಲಂಬಿತವಾಗಿದೆ, ಹಾಗಾಗಿ ಅದಕ್ಕೆ ಸಂಖ್ಯಾಬಲಕ್ಕಿಂತ ಪ್ರಹ್ಲಾದ ನಂತಹ ಭಕ್ತನಾಗುವ ಅವಶ್ಯಕತೆ ಇದೆ ! : ‘ಈಶ್ವರೀ ರಾಜ್ಯವು ಯಾವಾಗ ಬರುತ್ತದೆ ?, ಅಂತಹ ಪ್ರಶ್ನೆಯನ್ನು ಯಾರೂ ಕೇಳಬಾರದು. ಇದು ಪೂರ್ಣತಃ ನಮ್ಮ ಮೇಲೆಯೇ ಅವಲಂಬಿಸಿದೆ. ನರಸಿಂಹನು ಪ್ರಹ್ಲಾದನಿಗಾಗಿ ಅವತರಿಸಿ ಹಿರಣ್ಯಕಶ್ಯಪನನ್ನು ವಧಿಸಿದನು. ಈಗ ನಾವು ಆ ಪ್ರಹ್ಲಾದನಾಗಲು ಪರಿಶ್ರಮ ಪಡಬೇಕಾಗಿದೆ. ಈಶ್ವರನಿಗೆ, ‘ನಿಜಕ್ಕೂ, ಈಗ ನಾನು ಈ ಒಬ್ಬ ಭಕ್ತನ ಸಲುವಾಗಿಯಾದರೂ ಭೂಮಿಗೆ ಹೋಗಬೇಕು ಎಂದು ಅನಿಸಬೇಕು ‘ಈಶ್ವರೀ ರಾಜ್ಯವು ಬರಲು ಸಂಖ್ಯಾಬಲದ ಅಗತ್ಯವಿಲ್ಲ, ಆದರೆ ಭಕ್ತ ಪ್ರಹ್ಲಾದನಂತಹ ಭಕ್ತನಾಗುವ ಅವಶ್ಯಕತೆ ಇದೆ. ನಾವೆಲ್ಲರೂ ಸಾಧನೆಯನ್ನು ಮಾಡಲು ಇನ್ನೂ ಹೆಚ್ಚು ಪ್ರಯತ್ನವನ್ನು ಮಾಡೋಣ ಮತ್ತು ಭಗವಂತನ ಕೃಪಾಪ್ರಸಾದವನ್ನು ಪಡೆಯೋಣ !

– ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳ