ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಆಗಾಗ ಮಾಡಿದ ಮಾರ್ಗದರ್ಶನ

ಪರಾತ್ಪರ ಗುರು ಡಾ. ಆಠವಲೆ

ಪ್ರತಿಯೊಂದು ಜೀವದ ಸಾಧನೆ ಆಗಬೇಕೆಂದು, ಪರಾತ್ಪರ ಗುರು ಡಾ. ಆಠವಲೆಯವರು ಆಗಾಗ ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಕಳೆದ ವಾರ ‘ಪ್ರಾರಬ್ಧ ಮತ್ತು ಸಾಧನೆ’ ಎಂಬ ವಿಷಯವನ್ನು ನೋಡಿದೆವು. ಇಂದು ಅದರ ಮುಂದಿನ ಭಾಗವನ್ನು ನೋಡೊಣ.

(ಭಾಗ ೨)

ಸಾಧನೆಯಲ್ಲಿ ಸಂದೇಹಗಳ ನಿವಾರಣೆ

೨ ಅ. ‘ಸಾಧನೆ ಆಗಲಿಲ್ಲ’ಎಂದು ದುಃಖಿಸುತ್ತ ಕುಳಿತುಕೊಳ್ಳಬೇಡಿರಿ, ‘ಅದು ತಿಳಿದಿದ್ದು ಒಳ್ಳೆಯದಾಯಿತು’ ಎಂಬ ಸ್ವಯಂಸೂಚನೆಗಳನ್ನು ಕೊಡಿ !

ಓರ್ವ ಸಾಧಕಿ : ನಾನು ಈ ಮೊದಲೂ ‘ಒಮ್ಮೆ ಆಶ್ರಮಕ್ಕೆ ಬಂದಿದ್ದೆ, ಆದರೆ ನಾನು ಸಾಧನೆಯ ದೃಷ್ಟಿಯಿಂದ ತಮಗೆ ಅಪೇಕ್ಷಿತವಿರುವ ಪ್ರಯತ್ನಗಳನ್ನು ಮಾಡಲಿಲ್ಲ, ಹಾಗಾಗಿ ನಿಮಗೆ ಹೇಗೆ ಮುಖ ತೋರಿಸುವುದು ?’, ಎಂಬ ವಿಚಾರವು ಮನಸ್ಸಿನಲ್ಲಿ ಪುನಃ ಪುನಃ ಬರುತ್ತದೆ.

ಪರಾತ್ಪರ ಗುರು ಡಾಕ್ಟರ್ : ಅದಕ್ಕೆ ಯಾವ ಸ್ವಯಂಸೂಚನೆಯನ್ನು ಕೊಟ್ಟಿರಿ ? ಸ್ವಯಂಸೂಚನೆಯನ್ನು ಕೊಡಬೇಕು. ಜಗತ್ತಿನಲ್ಲಿ ಯಾವುದೇ ಸಮಸ್ಯೆಯಿರಲಿ, ಸ್ವಭಾವದೋಷ ನಿರ್ಮೂಲನೆಯ ಸಂದರ್ಭದಲ್ಲಿ ಗ್ರಂಥದಲ್ಲಿ ಹೇಳಿದಂತೆ ‘ಅ ೧, ಅ ೨, ಅ ೩, ಆ ೧, ಆ ೨, ಇ ೧, ಇ ೨’ ಈ ಸ್ವಯಂಸೂಚನೆಯ ಪದ್ಧತಿಗಳಲ್ಲಿಯೇ ಎಲ್ಲವೂ ಬರುತ್ತವೆ. ಎಲ್ಲ ಸಮಸ್ಯೆಗಳ ಉತ್ತರಗಳು ಇದರಲ್ಲಿಯೇ ಇವೆ. ‘ನನ್ನಿಂದ ಸಾಧನೆಯ ದೃಷ್ಟಿಯಿಂದ ಪ್ರಯತ್ನವಾಗಲಿಲ್ಲ’, ಎಂಬ ವಿಚಾರದಿಂದ ದುಃಖವಾಗುತ್ತದೆ. ಅದರ ಬದಲು ‘ಒಳ್ಳೆಯದಾಯಿತು, ಅದು ಈಗಲಾದರೂ ನನ್ನ ಗಮನಕ್ಕೆ ಬಂದಿತು. ಈಗ ನಾನು ತಳಮಳದಿಂದ ಪ್ರಯತ್ನಿಸುತ್ತೇನೆ’, ಎಂಬ ಸ್ವಯಂಸೂಚನೆಯನ್ನು ಕೊಡಬೇಕು; ಇಲ್ಲದಿದ್ದರೆ ‘ಇ ೨’ ಎಂಬ ಶಿಕ್ಷಾಪದ್ಧತಿಯನ್ನು ಉಪಯೋಗಿಸಬೇಕು. ನನ್ನಿಂದ ಸಾಧನೆಯ ಪ್ರಯತ್ನವಾಗದಿದ್ದರೆ, ನಾನು ಊಟ ಮಾಡುವುದಿಲ್ಲ ಅಥವಾ ೩-೪ ಗಂಟೆ ತಿಂಡಿಯನ್ನು ತಿನ್ನುವುದಿಲ್ಲ’ ಹೀಗೆ ತನಗೇ ಶಿಕ್ಷೆಯನ್ನು ನೀಡಿದರೆ ನಿಯಮಿತವಾಗಿ ಸಾಧನೆಯ ಪ್ರಯತ್ನಗಳಾಗುತ್ತವೆ.

೨ ಆ. ಕೌಟುಂಬಿಕ ಸಮಸ್ಯೆಗಳಿಂದ ಸಾಧನೆಯ ಮೇಲೆ ಪರಿಣಾಮವಾಗಿದೆ ಎಂದು ದುಃಖ ಪಡುವುದಕ್ಕಿಂತ ನಿರಂತರವಾಗಿ ಸಾಧನೆಯ ಪ್ರಯತ್ನಗಳನ್ನು ಮಾಡಬೇಕು !

ಶ್ರೀ. ಪ್ರೇಮಪ್ರಕಾಶ : ನನಗೆ ಕೌಟುಂಬಿಕ ಸಮಸ್ಯೆಗಳಿದ್ದವು. ತಮ್ಮ ಕೃಪೆಯಿಂದ ಈಗ ಆ ಸಮಸ್ಯೆಗಳು ದೂರವಾಗಿವೆ; ಆದರೆ ಆ ಕಾಲದಲ್ಲಿ ಸಾಧನೆ ಮತ್ತು ಸೇವೆ ಸ್ವಲ್ಪ ಕಡಿಮೆಯಾಯಿತು. ಇದರ ಬಗ್ಗೆ ಮನಸ್ಸಿಗೆ ಬಹಳ ದುಃಖವಾಗುತ್ತದೆ.

ಪರಾತ್ಪರ ಗುರು ಡಾಕ್ಟರ್ : ಹೀಗೆ ಎಲ್ಲರಿಗೂ ಆಗುತ್ತದೆ. ಅದಕ್ಕಾಗಿ ಹೆಚ್ಚು ದುಃಖ ಪಡಬೇಡಿ. ನಿಯಮಿತ ಸಾಧನೆ ಮತ್ತು ನಾಮಜಪವಾಗಬೇಕೆಂದು ಮನಸ್ಸಿಗೆ ಸ್ವಯಂಸೂಚನೆಗಳನ್ನು ಕೊಡಬೇಕು. ಮುಂದೆ ಸಾಧನೆಯಲ್ಲಿ ಸಾತತ್ಯ ಹೆಚ್ಚಾದಂತೆ ಶೇ. ೫೦, ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸಾಧನೆಯಲ್ಲಿ ಬೇಗ ಬೇಗ ಮುಂದೆ ಹೋಗಬೇಕಾಗಿರುತ್ತದೆ. ನಿಮಗೆ ಈಗ ಇದು ಬುದ್ಧಿಗೆ ತಿಳಿದಿದೆ. ಮನೆಗೆ ಹೋಗಿ ಪ್ರತ್ಯಕ್ಷ ಸಾಧನೆಯ ಪ್ರಯತ್ನವನ್ನು ಮಾಡಬೇಕು. ಸಾಧನೆಯಲ್ಲಿ ‘ನಾನು ಮಾಡುವೆನು’ ಎಂದರೆ ಪ್ರಯತ್ನಗಳು ಆಗುವುದಿಲ್ಲ. ನಮ್ಮನ್ನು ಕೇಳುವವರು ಯಾರಾದರೂ ಬೇಕು. ಆಗಲೇ ನಾವು ಪ್ರಯತ್ನ ಮಾಡುತ್ತೇವೆ. ಇಂದಿನ ಸ್ವಯಂಸೂಚನೆಗಳ ಸತ್ರವನ್ನು ಮಾಡಿದಿರೋ ಇಲ್ಲವೋ ? ಹೀಗೆ ಯಾರಾದರು ಕೇಳಿದರೆ ಮಾತ್ರ ಸಾಧಕರು ಪ್ರಯತ್ನ ಮಾಡುತ್ತಾರೆ. ಆದುದರಿಂದಲೇ ನಾವು ವರದಿ ತೆಗೆದುಕೊಳ್ಳುವ ಪದ್ಧತಿಯನ್ನು ಉಪಯೋಗಿಸುತ್ತೇವೆ. ಸ್ಥಳೀಯ ಸಾಧಕರಿಗೆ ಸಾಧನೆಯ ವರದಿಯನ್ನು ಕೊಡಿ. ಅವರಿಗೆ ಪ್ರತಿದಿನ ಸಂಚಾರವಾಣಿಯಿಂದ ವರದಿಯನ್ನು ಕೊಡಿ. ಇದರಿಂದಲೂ ಪ್ರಯತ್ನವಾಗದಿದ್ದರೆ, ಶಿಕ್ಷಾಪದ್ಧತಿಯನ್ನು ಅಳವಡಿಸಿ. ಸುಮಾರು ಶೇ. ೬೦ ರಿಂದ ೭೦ ರಷ್ಟು ಸಾಧಕರಿಗೆ (ಸೆಲ್ಫ್ ಪನಿಶಮೆಂಟ್) ತಮ್ಮ ಪ್ರಕೃತಿಗನುಸಾರ ಸ್ವಂತಕ್ಕೆ ಶಿಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಆಗಲೇ ಅವರು ಸಾಧನೆಯಲ್ಲಿ ಮುಂದೆ ಹೋಗುತ್ತಾರೆ.

೨ ಇ. ‘ಸಾಧನೆಯಲ್ಲಿ ಏಕೆ ಕಡಿಮೆ ಬೀಳುತ್ತೇನೆ’, ಇದರ ಮೂಲದವರೆಗೆ ಹೋಗಿ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳಿರಿ !

ಸೌ. ರಾಖಿ ಮೋದಿ : ಸಾಧನೆಯನ್ನು ಹೆಚ್ಚಿಸಲು ಹೇಗೆ ಪ್ರಯತ್ನಿಸಬೇಕು ? ನಾನು ಸಾಧನೆಯಲ್ಲಿ ತುಂಬಾ ಕಡಿಮೆ ಬೀಳುತ್ತೇನೆ.

ಪರಾತ್ಪರ ಗುರು ಡಾಕ್ಟರ್ : ಸಾಧನೆಯಲ್ಲಿ ನಾವು ಕಡಿಮೆ ಬೀಳುತ್ತೇವೆ, ಎಂದರೆ ನಾವು ಸಾಧನೆಯ ಪ್ರಯತ್ನಗಳನ್ನು ಮಾಡುವುದಿಲ್ಲ ಎಂದರ್ಥ. ಅಂದರೆ ಸ್ವಭಾವದೋಷ ಪಟ್ಟಿಯಲ್ಲಿ (ಡೆಲೀ ಚಾರ್ಟ) ಪ್ರತಿದಿನ ಆಗುವ ತಪ್ಪುಗಳನ್ನು ಬರೆಯುವುದಿಲ್ಲ, ಮನಸ್ಸಿಗೆ ಸ್ವಯಂಸೂಚನೆಗಳನ್ನು ಕೊಡುವುದಿಲ್ಲ, ನಾಮಜಪವನ್ನು ಮಾಡುವುದಿಲ್ಲ ಇತ್ಯಾದಿ. ಮಕ್ಕಳು ತಮ್ಮ ಮಾತನ್ನು ಕೇಳದಿದ್ದರೆ, ತಂದೆ-ತಾಯಿ ಅವರ ಮೇಲೆ ಕೋಪಿಸಿಕೊಳ್ಳುತ್ತಾರೆ, ಆದರೂ ಮಕ್ಕಳು ಕೇಳದಿದ್ದರೆ, ಅವರು ಮಕ್ಕಳಿಗೆ ಪೆಟ್ಟು ಕೊಡುತ್ತಾರೆ, ಅಂದರೆ ಅವರು ಸುಧಾರಿಸಬೇಕೆಂದು ಅವರಿಗೆ ಶಿಕ್ಷೆಯನ್ನು ನೀಡುತ್ತಾರೆ. ಅದೇ ರೀತಿ ಸ್ವಂತಕ್ಕೆ ಶಿಕ್ಷೆಯನ್ನು ಕೊಡಬೇಕು. ಸಾಧನೆಯ ಪ್ರಯತ್ನಗಳಾಗದಿದ್ದಾಗ ಅಥವಾ ಸ್ವಭಾವದೋಷಗಳ ಪಟ್ಟಿಯನ್ನು ಬರೆಯದಿದ್ದರೆ, ‘ಎಲ್ಲಿಯವರೆಗೆ ನಾನು ಪಟ್ಟಿಯನ್ನು ಬರೆಯುವುದಿಲ್ಲ, ಸ್ವಯಂಸೂಚನೆಯ ಸತ್ರಗಳನ್ನು ಮಾಡುವುದಿಲ್ಲ, ನಾಮಜಪವನ್ನು ಮಾಡುವುದಿಲ್ಲ; ಅಲ್ಲಿಯವರೆಗೆ ನಾನು ತಿಂಡಿಯನ್ನು ತಿನ್ನುವುದಿಲ್ಲ, ಚಹಾ ಕುಡಿಯುವುದಿಲ್ಲ. ಊಟ ಮಾಡುವುದಿಲ್ಲ’, ಎಂದು ಸ್ವಂತಕ್ಕೆ ಇಂತಹ ಶಿಕ್ಷೆಯನ್ನು ಕೊಡಬೇಕು. ಹೀಗೆ ಕೆಲವು ವಾರಗಳವರೆಗೆ ಮಾಡಿದರೆ, ಮನಸ್ಸು ಅದನ್ನು ಕೇಳಲೇ ಬೇಕಾಗುತ್ತದೆ. ಸಮಯ ಸಿಗಲಿಲ್ಲ ಅಥವಾ ಇತರ ಕಾರಣದಿಂದಾಗಿ ಸ್ವಯಂಸೂಚನೆಯ ಸತ್ರಗಳನ್ನು ಮಾಡದಿರುವುದೆಂದರೆ ‘ನಾವು ನಮ್ಮ ಮನಸ್ಸು ಹೇಳಿದಂತೆ ಕೇಳುತ್ತೇವೆ’, ಎಂದಾಗುತ್ತದೆ. ಮೂಲಭೂತ ಸಿದ್ಧಾಂತ ಏನಿದೆ ? ಯಾವನು ತನ್ನ ಇಚ್ಛೆಯಂತೆ, ಅಂದರೆ ಸ್ವೇಚ್ಛೆಯಿಂದ ಎಲ್ಲವನ್ನೂ ಮಾಡುತ್ತಾನೋ, ಅವನಿಗೆ ಪ್ರಾಣಿ, ಅಂದರೆ ‘ದೇಹಧಾರಿ ಮನುಷ್ಯ ಪ್ರಾಣಿ’, ಎಂದು ಕರೆಯುತ್ತಾರೆ. ಮನುಷ್ಯಜನ್ಮವು ಸಿಕ್ಕಿದೆ, ಹಾಗಾದರೆ ನಾವು ಪ್ರಾಣಿಯಾಗಬೇಕೇ ?

ಸೌ. ರಾಖಿ ಮೋದಿ: ಇಲ್ಲ.

ಪರಾತ್ಪರ ಗುರು ಡಾಕ್ಟರ್ : ಮನುಷ್ಯ, ಪ್ರಾಣಿ ಮತ್ತು ಇತರ ಪ್ರಾಣಿಗಳಲ್ಲಿ ವ್ಯತ್ಯಾಸವೇನಿದೆ ? ವ್ಯತ್ಯಾಸ ಇಷ್ಟೇ, ಮನುಷ್ಯನಿಗೆ ಕೋಡು ಮತ್ತು ಬಾಲವಿಲ್ಲ, ಉಳಿದಂತೆ ಅವನು ಪ್ರಾಣಿಗಳಂತೆಯೇ ವರ್ತಿಸುತ್ತಿದ್ದಾನೆ. ನೀವು ಸತ್ಸಂಗವನ್ನು ತೆಗೆದುಕೊಳ್ಳುತ್ತಿರಲ್ಲವೇ ? ಅದರಲ್ಲಿ ‘ಇ ೨’ ಕ್ಕನುಸಾರ ಸೂಚನೆಗಳನ್ನು ತೆಗೆದುಕೊಳ್ಳುವುದು ಈ ಅಂಶವನ್ನು ಹೇಳಿರಿ. ನಮ್ಮ ಸಾಧನೆಯು ‘ಅ’, ‘ಆ’, ಎಂಬ ಸ್ವಯಂಸೂಚನೆ ಪದ್ಧತಿಗನುಸಾರ ಆಗದಿದ್ದರೆ ‘ಇ’ ಪದ್ಧತಿಯನ್ನು ಉಪಯೋಗಿಸಿರಿ. ಉತ್ತರ ಇಲ್ಲದಿರುವ ಯಾವುದೇ ಸಮಸ್ಯೆಯು ಈ ಜಗತ್ತಿನಲ್ಲಿ ಇಲ್ಲ,  ಪ್ರಾರಬ್ಧವೂ ಒಂದು ಸಮಸ್ಯೆಯೇ ಆಗಿದೆ, ಅದಕ್ಕೆ ‘ಸಾಧನೆ’ಯು ಉತ್ತರವಾಗಿದೆ. ಸ್ವಭಾವದೋಷಗಳ ಸಮಸ್ಯೆಯಿದ್ದರೆ, ಅದಕ್ಕೆ ಸ್ವಯಂಸೂಚನೆಗಳ ಸತ್ರವು ಉತ್ತರವಾಗಿದೆ.

ಸೌ. ರಾಖಿ ಮೋದಿ : ನಾನು ವಿಚಾರಗಳಲ್ಲಿಯೇ ಸಿಲುಕಿಕೊಳ್ಳುತ್ತೇನೆ. ನಾನು ಆಶ್ರಮದಿಂದ ಯಾವುದಾದರೊಂದು ವಿಷಯವನ್ನು ಕಲಿತುಕೊಂಡು ಹೋದರೆ, ಮನೆಗೆ ಹೋದ ನಂತರ ‘ಇದನ್ನು ಮಾಡಬೇಕು, ಅದನ್ನು ಮಾಡಬೇಕು’, ಎಂಬ ವಿಚಾರಗಳಿರುತ್ತವೆ. ನನ್ನಲ್ಲಿ ಅವುಗಳನ್ನು ಮಾಡುವ ಕ್ಷಮತೆಯೂ ಇದೆ; ಆದರೆ ನನಗೆ ಅದಕ್ಕೂ ಮುಂದೆ ಹೋಗಲು ಬರುವುದಿಲ್ಲ. ಪ್ರತ್ಯಕ್ಷ ಕೃತಿ ಮಾಡಲು ನಾನು ಕಡಿಮೆ ಬೀಳುತ್ತೇನೆ.

ಪರಾತ್ಪರ ಗುರು ಡಾಕ್ಟರ : ಅದಕ್ಕಾಗಿಯೇ ಈಗ ಇದೆಲ್ಲವನ್ನೂ ಹೇಳಿದೆನಲ್ಲ.

ಸೌ. ರಾಖಿ ಮೋದಿ : ‘ಎಷ್ಟು ಸೇವೆ ಇದೆಯೋ, ಅಷ್ಟನ್ನೇ ಮಿತಿಯಲ್ಲಿದ್ದು ಚೆನ್ನಾಗಿ ಮಾಡೋಣ’, ಎಂದೆನಿಸುತ್ತದೆ.

ಪರಾತ್ಪರ ಗುರು ಡಾಕ್ಟರ್ : ನಿಮಗೆ ಮುಂದೆ ಹೋಗಬೇಕಾಗಿದೆ; ಆದರೆ ನೀವು ಮುಂದೆ ಹೋಗುತ್ತಿಲ್ಲ ಎಂದು ಅನಿಸುತ್ತಿದ್ದರೆ, ‘ಏಕೆ ಮುಂದೆ ಹೋಗುತ್ತಿಲ್ಲ ?’, ಎಂಬುದರ ವಿಚಾರವನ್ನು ಮಾಡಿ ಮೂಲದವರೆಗೆ ಹೋಗಬೇಕು. ಅದು ‘ಹಾಗೆ ಅನಿಸಲು ಏನು ಕಾರಣವಿದೆ ?’, ಎಂಬುದು ತಿಳಿದರೆ, ಅದಕ್ಕಾಗಿ ಅ ೧, ಅ ೨, ಆ ೩ ಈ ಪದ್ಧತಿಗಳನ್ನು ಉಪಯೋಗಿಸಿ ಸ್ವಯಂಸೂಚನೆಗಳನ್ನು ಕೊಡಬೇಕು ಮತ್ತು ಸ್ವಯಂಸೂಚನೆಗಳನ್ನು ಕೊಡದಿದ್ದರೆ ತಮ್ಮ ಪ್ರಕೃತಿಗನುಸಾರ ಊಟ ಮಾಡುವುದಿಲ್ಲ’, ಎಂದು ಸ್ವಂತಕ್ಕೆ ಶಿಕ್ಷೆಯನ್ನು ಕೊಡಬೇಕು.

೨. ಸಾಧನೆಯ ಬಗ್ಗೆ ಸಂದೇಹ ನಿವಾರಣೆ

೨ ಈ. ಒಂದುಸಲ ಸಾಧನೆಯಲ್ಲಿ ಆನಂದ ಸಿಗಲು ಪ್ರಾರಂಭವಾಯಿತೆಂದರೆ, ವ್ಯವಹಾರಿಕ ಸಮಸ್ಯೆಗಳಿಂದ ಅದು ಭಂಗವಾಗುವ ವಿಚಾರವನ್ನು ಮಾಡಬಾರದು !

ಶ್ರೀಮತಿ ಗಣೋರಕರ : ತಮ್ಮ ಕೃಪೆಯಿಂದ ಸಾಧನೆಯಲ್ಲಿ ತುಂಬಾ ಆನಂದ ಸಿಗುತ್ತಿದೆ, ಆದರೆ ಕೆಲವೊಮ್ಮೆ ವ್ಯವಹಾರಿಕ ಅಡಚಣೆಗಳು ಬಂದಾಗ ಮನಸ್ಸಿನಲ್ಲಿ ಸಂಘರ್ಷವಾಗುತ್ತದೆ.

ಪರಾತ್ಪರ ಗುರು ಡಾಕ್ಟರ : ಸಾಧನೆಯ ಗ್ರಾಫ್ ನಾಲ್ಕೈದು ಹೆಜ್ಜೆ ಮುಂದೆ ಮತ್ತು ಒಂದೆರೆಡು ಹೆಜ್ಜೆ ಹಿಂದೆ ಹೀಗೆಯೇ ಇರುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೫೦ ರಷ್ಟು ಆದ ನಂತರ ಹಿಂದೆ ಹೋಗುವುದು ಕಡಿಮೆಯಾಗುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟಾದ ನಂತರ ಸಾಧನೆಯಲ್ಲಿ ಹಿಂದೆ ಹೋಗುವುದು ತುಂಬಾ ಕಡಿಮೆಯಾಗುತ್ತದೆ. ಅಲ್ಲಿಯವರೆಗೆ ಎಲ್ಲರ ಸಾಧನೆಯಲ್ಲಿ ಹೀಗೆಯೇ ಇರುತ್ತದೆ. ‘ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ನಂತರ ಗ್ರಾಫ್ ಸರಳ ರೇಖೆಯಲ್ಲಿ ಬರುತ್ತದೆ. ಆಗ ‘ದುಃಖವೆನಿಸದೇ ಆನಂದ, ಆನಂದ ಮತ್ತು ಇನ್ನೂ ಆನಂದ ಹೀಗೆ ಮನಸ್ಸಿನ ಸ್ಥಿತಿಯಿರುತ್ತದೆ. ಅಲ್ಲಿಯವರೆಗೆ ಪ್ರಯತ್ನವನ್ನು ಮಾಡುತ್ತಿರಬೇಕಾಗುತ್ತದೆ. ನೀವು ‘ಆನಂದ ಸಿಗುವುದು ಎಂಬ ಹಂತದವರೆಗೆ ಬಂದಿರುವಿರಿ, ಇದು ಮಹತ್ವದ ವಿಷಯವಾಗಿದೆ. ಬಹಳಷ್ಟು ಸಾಧಕರಿಗೆ ಈ ಹಂತವನ್ನು ತಲುಪಲು ೫ ರಿಂದ ೧೦ ವರ್ಷಗಳು ಬೇಕಾಗುತ್ತವೆ. ಒಂದುಸಲ ಐಸಕ್ರೀಮ್ ತಿಂದ ಮೇಲೆ ಸುಖ ಸಿಕ್ಕರೆ ಮತ್ತೆ ಐಸಕ್ರೀಮ್ ತಿನ್ನಬೇಕು ಮತ್ತೆ ಐಸಕ್ರೀಮ್ ತಿನ್ನಬೇಕು ಎಂದು ಅನಿಸುತ್ತದೆ ಅಲ್ಲವೇ ? ಇದೂ ಹಾಗೆಯೇ ಆಗಿದೆ. ನಾಮಜಪ, ಸೇವೆ ಇತ್ಯಾದಿಗಳನ್ನು ಮಾಡುವಾಗ ಆನಂದ ಸಿಗುತ್ತಿದ್ದರೆ, ಮನಸ್ಸಿಗೆ ‘ಅದೇ ಬೇಕು, ಎಂದೆನಿಸುತ್ತದೆ. ಅದರಿಂದ ಸೇವೆಯೂ ಆಗುತ್ತದೆ ಮತ್ತು ಸಾಧನೆಯೂ ಆಗುತ್ತದೆ. ನೀವು ಈಗ ಅದರ ವಿಚಾರವನ್ನೇ ಮಾಡಬೇಡಿ. ‘ಆನಂದ ಸಿಗುತ್ತದೆಯಲ್ಲ ?, ಅದರ ಕಡೆ ಗಮನ ಕೊಡಿ.

೨ ಉ. ವ್ಯವಹಾರದಿಂದ (ಮಾಯೆಯಿಂದ) ಹೊರಗೆ ಬಂದು ಶೀಘ್ರ ಪ್ರಗತಿಯಾಗುವ ಉದ್ದೇಶದಿಂದ ಆಶ್ರಮದಲ್ಲಿ ಕೆಲವು ದಿನಗಳಿದ್ದು ಸಾಧನೆಯನ್ನು ಕಲಿಯಿರಿ !

ಕು. ರುಚಿ ಪವಾರ : ರಸ್ತೆ ಅಪಘಾತದ ಗಂಭೀರ ದುರ್ಘಟನೆಯ ನಂತರ ಈಗ ನಾನು ಗುಣಮುಖಳಾಗಿದ್ದೇನೆ. ಅಂದಿನಿಂದ ‘ನನಗೆ ಪುರ್ನಜನ್ಮವೇ ಸಿಕ್ಕಿದೆ, ಎಂದೆನಿಸುತ್ತದೆ. ‘ಈಗ ಈ ಎರಡನೇ ಜನ್ಮವು ತಮ್ಮದೇ ಚರಣಗಳಲ್ಲಿ……

ಪರಾತ್ಪರ ಗುರು ಡಾಕ್ಟರ್ : ಈಗ ಮೂರನೇ ಜನ್ಮ ಬೇಡವೆನಿಸುತ್ತದೆಯಲ್ಲ ? ಈ ಜನ್ಮದಲ್ಲಿ ಸಾಧನೆಯನ್ನು ಮಾಡಿ ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತರಾಗಿರಿ !

ಕು. ರುಚಿ ಪವಾರ : ನನಗೆ ವ್ಯವಹಾರದಿಂದ (ಮಾಯೆಯಿಂದ) ಹೊರಗೆ ಬರಬೇಕಾಗಿದೆ. ತಾವು ನನ್ನನ್ನು ತಮ್ಮ ಚರಣಗಳಲ್ಲಿ ತೆಗೆದುಕೊಳ್ಳಿರಿ.

ಪರಾತ್ಪರ ಗುರು ಡಾಕ್ಟರ್ : ಸ್ವಲ್ಪ ಸಮಯ, ಅಂದರೆ ೧-೨ ತಿಂಗಳು ಸನಾತನದ ಆಶ್ರಮದಲ್ಲಿ ಇರಲು ಬರುವಿರಾ ? ಎಲ್ಲವನ್ನೂ ಬೇಗನೇ ಕಲಿತರೆ, ಹೊರಗೆ ಪ್ರಸಾರದಲ್ಲಿ ಹೋಗಿ ಕಲಿಸಬಹುದಲ್ಲ ? ಮನೆಯಲ್ಲಿದ್ದು ಸಾಧನೆಯನ್ನು ಕಲಿಯಲು ೨-೩ ವರ್ಷಗಳು ಬೇಕಾಗುತ್ತವೆ. ಆಶ್ರಮದಲ್ಲಿ ೧-೨ ತಿಂಗಳುಗಳಲ್ಲಿ ಸಾಧನೆಯನ್ನು ಕಲಿಯಬಹುದು. ಮನೆಯಲ್ಲಿ ಎಲ್ಲ ಮಾಯೆಯ ವಿಷಯಗಳಿರುತ್ತವೆ. ದೂರದರ್ಶನ (ಟಿ.ವಿ.) ಇರುತ್ತದೆ. ಆಶ್ರಮದಲ್ಲಿ ಏನೂ ಇರುವುದಿಲ್ಲ. ಇಲ್ಲಿ ೨೪ ಗಂಟೆ ಸಾಧನೆಯ ವಿಚಾರಗಳೇ ಇರುತ್ತವೆ. ನಾವು ಬೇಗಬೇಗನೇ ಕಲಿತು ಇತರರಿಗೆ ಕಲಿಸಬೇಕು. ಯಾರು ಒಳ್ಳೆಯ ಜನರಿದ್ದಾರೋ ಅವರಿಗೆ ಮಹಾಯುದ್ಧದ ಮೊದಲೇ ಸಾಧನೆ ತಿಳಿಯಬೇಕು.

ಕು. ರುಚಿ ಪವಾರ : ಹಾ ಆಶ್ರಮಕ್ಕೆ ಬರುತ್ತೇನೆ. (ಮುಂದುವರಿಯುವುದು)