ಸಂತರು ಮತ್ತು ಅವರ ಸಾಧನೆಯ ಕುರಿತು ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಪೂ. ಸಖಾರಾಮ ಬಾಂದ್ರೆ ಮಹಾರಾಜ

೧. ದೇವರು, ಸಂತರು ಮತ್ತು ಅವತಾರಿ ಪುರುಷರು ಗಂಗೆಯಂತಹ ಪವಿತ್ರ ಕುಲದಲ್ಲಿ ಜನ್ಮ ಪಡೆಯುತ್ತಾರೆ

ಕುಲಾಚಾರದಿಂದ ಕುಲ ಶುದ್ಧ, ಪವಿತ್ರ ಮತ್ತು ಪುಣ್ಯವಂತರಾಗಿದ್ದರೆ ಮಾತ್ರ ಆ ಮನೆತನದಲ್ಲಿ ದೇವರು, ಸಂತರು ಮತ್ತು ಅವತಾರಗಳು ಜನ್ಮ ತಾಳುತ್ತಾರೆ. ಮಹಾರಾಷ್ಟ್ರದ ಸಂತರಾದ, ಸಂತ ತುಕಾರಾಮ ಮಹಾರಾಜರು, ಸಂತ ಜ್ಞಾನೇಶ್ವರ ಮಹಾರಾಜರು, ಸಮರ್ಥ ರಾಮದಾಸ ಸ್ವಾಮಿಗಳು, ಸಂತ ಏಕನಾಥ ಮಹಾರಾಜರು, ಸಂತ ನಾಮದೇವರು, ಸಂತ ಭಕ್ತ ಕುಂಬಾರ, ಸಂತ ಮೀರಾಬಾಯಿ, ಸಂತ ಜನಾಬಾಯಿ, ಸಂತ ಸಖುಬಾಯಿ, ಕಾನ್ಹೋಪಾತ್ರಾ ಮುಂತಾದವರ ಕುಲಗಳು ಶುದ್ಧವಾಗಿದ್ದವು. ರಘುವಂಶದಲ್ಲಿ ಶ್ರೀರಾಮ ಮತ್ತು ಯಾದವ ಕುಲದಲ್ಲಿ ಭಗವಾನ ಶ್ರೀಕೃಷ್ಣ ಈ ಅವತಾರಗಳ ಜನ್ಮವಾಯಿತು. ಸಂತರು ಅಥವಾ ಅವತಾರಗಳು ಜನ್ಮ ಪಡೆಯಲು ಕುಲವು ಗಂಗೆಯಂತೆ ಪವಿತ್ರವಾಗಿರಬೇಕು. ಅಪವಿತ್ರ ಕುಲದಲ್ಲಿ ದೇವರು ಜನ್ಮ ತಳೆಯುವುದಿಲ್ಲ.

ರತ್ನಾಗಿರಿ ಜಿಲ್ಲೆಯ ಪೂ. (ಹ.ಭ.ಪ.) ಸಖಾರಾಮ ರಾಮಜಿ ಬಾಂದ್ರೆ ಮಹಾರಾಜರು ಬರೆದ ಅದ್ವಿತೀಯ ಜ್ಞಾನದ ಮೇಲೆ ಆಧರಿಸಿದ ಸನಾತನ ಪ್ರಭಾತದ ಲೇಖನಮಾಲೆ !

ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಜಯಂತ ಆಠವಲೆಹ.ಭ.ಪ. (ಪೂ.) ಸಖಾರಾಮ ರಾಮಜಿ ಬಾಂದ್ರೆ ಮಹಾರಾಜರು (ವಯಸ್ಸು ೭೦ ವರ್ಷಗಳು) ರತ್ನಾಗಿರಿ ಜಿಲ್ಲೆಯ ಸುಪ್ರಸಿದ್ಧ ಕೀರ್ತನಕಾರರಾಗಿದ್ದಾರೆ. ಅವರ ಅಧ್ಯಾತ್ಮ ವಿಷಯದ ಕುರಿತು ಬಹಳ ಅಭ್ಯಾಸವಿದೆ ಮತ್ತು ಅವರಿಗೆ ಈಶ್ವರನಿಂದಲೂ ಪ್ರತಿದಿನ ಜ್ಞಾನ ಸಿಗುತ್ತದೆ. ಇವೆರಡೂ ಜ್ಞಾನಗಳನ್ನು ಅವರು ತಮ್ಮ ಕೀರ್ತನೆಯಲ್ಲಿ ಉಪಯೋಗಿಸುತ್ತಾರೆ. ಆದ್ದರಿಂದ ಅವರ ಕೀರ್ತನೆಗಳು ಅತ್ಯುತ್ತಮವಾಗುತ್ತದೆ ಮತ್ತು ಕೀರ್ತನೆಗೆ ಬಂದವರಿಗೆ ಅದರಿಂದ ಬಹಳಷ್ಟು ಕಲಿಯಲು ಸಿಗುತ್ತದೆ. ಅವರ ಬಳಿಯಿರವ ಅಮೂಲ್ಯ ಜ್ಞಾನವನ್ನು ಅವರು ದೊಡ್ಡ ಆಕಾರದ ೨೪ ವಹಿಗಳಲ್ಲಿ ಬರೆದಿದ್ದಾರೆ ಮತ್ತು ಆ ವಹಿಗಳನ್ನು ಸನಾತನ ಸಂಸ್ಥೆಗೆ ನೀಡಿದ್ದಾರೆ. ಮಹಾರಾಜರ ವಹಿಗಳನ್ನು ಓದಿದ ನಂತರ, ನಾನು ಬರೆದ ಗ್ರಂಥಗಳು ವಿಜ್ಞಾನದ ಶುಷ್ಕ ಭಾಷೆಯಲ್ಲಿದೆ ಮತ್ತು ಮಹಾರಾಜರ ಬರವಣಿಗೆಯು ಸರ್ವಸಾಮಾನ್ಯ ವ್ಯಕ್ತಿಗೆ ತಿಳಿಯುವಂತಹ ಸಮಯೋಚಿತ ಭಾಷೆಯಲ್ಲಿದೆ. ಅವರ ಬರವಣಿಗೆಯು ಬಹಳಷ್ಟು ಸಾಧಕರಿಗೆ ಉಪಯೋಗವಾಗುವಂತಹ, ಭಕ್ತಿಯೋಗದಲ್ಲಿನದಾಗಿದೆ. ಆದ್ದರಿಂದ ಅದು ಭಾವಪೂರ್ಣವೂ ಆಗಿದೆ. ಅಧ್ಯಾತ್ಮ ವಿಷಯವು ಎಲ್ಲರವರೆಗೆ ತಲುಪಿಸಲು ಅವರ ಬರವಣಿಗೆಯು ಬೇಗನೆ ಪ್ರಕಾಶಿತವಾಗುವುದು ಅವಶ್ಯಕವಾಗಿದೆ’, ಎಂದು ನನ್ನ ಗಮನಕ್ಕೆ ಬಂದಿತು. ಅವರ ಬರವಣಿಗೆಗಳನ್ನು ಗ್ರಂಥಗಳಲ್ಲಿ ರೂಪಾಂತರಿಸಲು ೨ – ೩ ವರ್ಷಗಳು ಬೇಕಾಗುತ್ತವೆ. ವಾಚಕರಿಗೆ ಇಷ್ಟು ವರ್ಷಗಳ ಕಾಲ ದಾರಿ ಕಾಯುವುದು ಬೇಡವೆಂದು ಅವರ ಬರವಣಿಗೆಯ ಮೇಲೆ ಆಧಾರಿಸಿದ ಲೇಖನವನ್ನು ಸನಾತನ ಪ್ರಭಾತದಲ್ಲಿ ಮುದ್ರಿಸಲಾಗುತ್ತದೆ. ಈ ಲೇಖನ ಮತ್ತು ಅದಕ್ಕೆ ಆಧರಿಸಿದ ಗ್ರಂಥಗಳಿಂದ ಸಾಧಕರು ಸಾಧನೆಗಾಗಿ ಲಾಭ ಮಾಡಿಕೊಂಡರೆ ಅವರ ಪ್ರಗತಿ ಶೀಘ್ರಗತಿಯಾಗುವುದು, ಎಂದು ನನಗೆ ಖಾತ್ರಿ ಇದೆ.

– (ಪರಾತ್ಪರ ಗುರು) ಡಾ. ಆಠವಲೆ

೨. ಸಂತರ ಸಾಧನೆ

೨ ಅ.ವಿಕಾರಗಳನ್ನು ಜಯಿಸುವುದು

೨ ಅ ೧. ಸಂತರು, ಸಾಧುಗಳು ಮತ್ತು ಋಷಿಗಳಲ್ಲಿ ಕಾಮವಿಕಾರಕ್ಕೆ, ಹಾಗೆಯೇ ಭೋಗ ಮತ್ತು ಸಂಪತ್ತಿಗೂ ಏನೂ ಮಹತ್ವವಿಲ್ಲ : ಚಿಕ್ಕ ಮಗುವಿನ ಮುಂದೆ ವಯಸ್ಕ ಮನುಷ್ಯನು (ಪುರುಷ) ಅಥವಾ ಸ್ತ್ರೀಯು ವಿವಸ್ತ್ರವಾದರೆ, ಆ ಮಗುವಿನ ಮನಸ್ಸಿನಲ್ಲಿ ಯಾವುದೇ ವಿಚಾರ ಬರುವುದಿಲ್ಲ; ಆದರೆ ಪುರುಷನು ವಿವಸ್ತ್ರಳಾಗಿರುವ ಸ್ತ್ರೀಯನ್ನು ನೋಡಿದರೆ, ಅವನ ಕಾಮವಾಸನೆಯು ಜಾಗೃತವಾಗುತ್ತದೆ. ಸಂತರ ಸಂದರ್ಭದಲ್ಲಿ ಹೀಗಾಗುವುದಿಲ್ಲ; ಏಕೆಂದರೆ ಅವರಿಗೆ ಆಕಳು-ಎತ್ತು ಎರಡೂ ಒಂದೇ ಆಗಿರುತ್ತವೆ. ಸಂತರು, ಸಾಧು ಮತ್ತು ಋಷಿಗಳು ಕಾಮ ಮುಂತಾದ ವಿಕಾರಗಳಿಗೆ ಉತ್ತೇಜನ ಕೊಡುವುದಿಲ್ಲ, ಹಾಗೆಯೇ ಅವರು ಭೋಗ ಮತ್ತು ಸಂಪತ್ತು ಇವುಗಳಿಗೂ ಮಹತ್ವವನ್ನು ನೀಡುವುದಿಲ್ಲ.

ಭಗವಂತಾ, ಪ್ರವಚನದ ಗ್ರಂಥವನ್ನು ಮುದ್ರಿಸಲು ಸಮರ್ಥ ಮಕ್ಕಳು ನನ್ನ ದೇಶದಲ್ಲಿ ಜನ್ಮಕ್ಕೆ ಬರಲಿ !

ಈ ಪ್ರವಚನದ ಗ್ರಂಥವನ್ನು ಮುದ್ರಿಸಲು ಸಾಮರ್ಥ್ಯಶಾಲಿ ವ್ಯಾಪಾರಿಗಳಿಂದ ಸಹಾಯ ಪಡೆಯುವುದು ಆವಶ್ಯಕವಾಗಿದೆ. ನನ್ನ ಭಾರತದಲ್ಲಿ ಈಶ್ವರನ ಮಕ್ಕಳು ಜನ್ಮಕ್ಕೆ ಬರಲಿ. ಏನೂ ಮಾಡದ ಆಲಸಿ, ಅಪೂರ್ಣ ಮಕ್ಕಳು ಕೆಲಸಕ್ಕೆ ಉಪಯೋಗವಿಲ್ಲ ? ಭಗವಂತ, ಒಳ್ಳೆಯ ಸಾಮರ್ಥ್ಯಶಾಲಿ ಮಕ್ಕಳು ನನ್ನ ದೇಶದಲ್ಲಿ ಬರಲಿ, ಇದೇ ಪ್ರಾರ್ಥನೆಯನ್ನು ನಾನು ಈಶ್ವರನಲ್ಲಿ ಮಾಡುತ್ತಿದ್ದೇನೆ. – ಹ.ಭ.ಪ. ಸಖಾರಾಮ ರಾಮಜಿ ಬಾಂದ್ರೆ, ಕಾತಳವಾಡಿ, ತಾ. ಚಿಪಳೂಣ, ಜಿಲ್ಲಾ ರತ್ನಾಗಿರಿ.

ಪೂ. ಸಖಾರಾಮ ಬಾಂದ್ರೆ ಮಹಾರಾಜ

೨ ಆ. ಸಾಧುಸಂತರು ದೇವರ ಭಕ್ತಿಯನ್ನು ಮಾಡಿ ಪುಣ್ಯವನ್ನು ಸಂಗ್ರಹಿಸುತ್ತಾರೆ ಮತ್ತು ದೇವರಿಗೆ ಪುಣ್ಯದ ಬಂಡವಾಳವನ್ನು ತೋರಿಸಿ ದೊಡ್ಡ ಸ್ಥಾನವನ್ನು ಪ್ರಾಪ್ತಮಾಡಿಕೊಳ್ಳುತ್ತಾರೆ ! : ಸಾಧುಸಂತರಿಗೆ ಸುಖ-ದುಃಖ, ಲಾಭ-ಹಾನಿ ಮತ್ತು ಜಯ-ಪರಾಜಯ ಇವೆಲ್ಲವೂ ಒಂದೇ ಆಗಿರುತ್ತದೆ; ಆದ್ದರಿಂದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿಯೂ ಸಾಧು ಸಂತರು ಯಾವಾಗಲೂ ಆನಂದದಲ್ಲಿರುತ್ತಾರೆ. ಸಾಧುಗಳು ತಮ್ಮ ಮೃತ್ಯುವಿನ ದಿನದಂದೂ ನಗುತ್ತಿರುತ್ತಾರೆ; ಏಕೆಂದರೆ ಇಂತಹ ಮನುಷ್ಯರು ಅವ್ಯಕ್ತದಿಂದ ಬಂದು ಶರೀರವನ್ನು ಧರಿಸುತ್ತಾರೆ. ಸಂಸಾರದ ಆಟ ಮುಗಿದ ಮೇಲೆ, ಅವರು ಎಲ್ಲಿಂದ ಬಂದಿರುತ್ತಾರೆಯೋ, ಮತ್ತೆ ಅಲ್ಲಿಗೆ ಹೋಗುತ್ತಾರೆ. ಅವರ ಮಧ್ಯಂತರದ ಸ್ಥಿತಿಯು ದೃಶ್ಯವಾಗಿದೆ. ದೇಹಕ್ಕೆ ಮರಣವಿದೆ. ಆತ್ಮ ಮತ್ತು ವಿಕಾರಗಳಿಗೆ ಮರಣವಿಲ್ಲ. ಪುಣ್ಯವಂತರು ವೈಕುಂಠಕ್ಕೆ ಹೋಗುತ್ತಾರೆ. ಅವರು ಜನ್ಮ-ಮೃತ್ಯುವಿನ ಚಕ್ರಗಳಿಂದ ಶಾಶ್ವತವಾಗಿ ಬಿಡುಗಡೆ ಮಾಡಿಕೊಳ್ಳುತ್ತಾರೆ. ಸಾಧು ಸಂತರಿಗೆ ಗರ್ಭಾಶಯದ ಮಲಿನತೆಯಲ್ಲಿ ೯ ತಿಂಗಳು ಕೊಳೆಯಲು ಇಷ್ಟವಾಗುವುದಿಲ್ಲ. ಅವರಿಗೆ ಯೋನಿಯಿಂದ ಜನ್ಮ ಪಡೆಯುವುದು ಬೇಡವೆನಿಸುತ್ತದೆ. ಪುನಃ ಜನ್ಮ-ಮರಣ ಬೇಡವೆಂದು ಅವರು ದೇವರ ಭಕ್ತಿಯನ್ನು ಮಾಡಿ ಪುಣ್ಯವನ್ನುಗಳಿಸುತ್ತಾರೆ ಮತ್ತು ದೇವರಿಗೆ ಪುಣ್ಯದ ಬಂಡವಾಳವನ್ನು ತೋರಿಸಿ ದೊಡ್ಡ ಸ್ಥಾನವನ್ನು ಪ್ರಾಪ್ತಮಾಡಿಕೊಳ್ಳುತ್ತಾರೆ.

೨ ಇ. ಸಂತರು ಯಾವಾಗಲೂ ಭಗವಂತನ ನಾಮಸ್ಮರಣೆ ಮಾಡುವುದರಿಂದ ಆನಂದದಲ್ಲಿರುತ್ತಾರೆ, ಹಾಗೆಯೇ ಸಾಧಕರು ನಾಮಸ್ಮರಣೆಯನ್ನು ಮಾಡಿದರೆ ಅವರೂ ಆನಂದದಲ್ಲಿರಬಹುದು ! : ಸಂತರ ಅಂತಃಕರಣವು ನಿರ್ಮಲವಾಗಿರುತ್ತದೆ. ಸಂತರಿಗೆ ಸುಖ-ದುಃಖ, ಲಾಭ-ಹಾನಿ, ಜಯ-ಪರಾಜಯ ಇವೆಲ್ಲವೂ ಒಂದೇ ಆಗಿರುತ್ತವೆ. ಅವರು ಯಾವಾಗಲೂ ದೇವರ ನಾಮಜಪವನ್ನು ಮಾಡುವುದರಿಂದ ಇದು ಸಾಧ್ಯವಾಗುತ್ತದೆ. ಸಾಧಕರಿಗೆ ಸಂಸಾರದ ದುಃಖಗಳು ತಮಗೆ ತೊಂದರೆ ಕೊಡಬಾರದೆಂದು ಅನಿಸುತ್ತದೆ. ಅದಕ್ಕಾಗಿ ಅವರು ಸತತವಾಗಿ ಭಗವಂತನ ನಾಮಸ್ಮರಣೆ ಮಾಡಬೇಕು. ಅದರಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ, ಸಮಾಧಾನ, ಆನಂದ, ಶಾಂತಿ ಮತ್ತು ಯಶಲಕ್ಷ್ಮೀ ನೆಲೆಸುವಳು.

೨ ಈ. ಸಂತರು ಸಂಸಾರಕ್ಕೆ ಅತಿ ಮಹತ್ವ ನೀಡದ ಕಾರಣ ಅವರ ಜೀವನಯಾತ್ರೆಯು ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ ಮತ್ತು ಅವರಿಗೆ ಸುಖ, ಸಮಾಧಾನ, ಆನಂದ ಮತ್ತು ಶಾಂತಿ ಲಭಿಸುತ್ತದೆ : ಸಂತರು ಸಂಸಾರಕ್ಕೆ ಅತಿ ಮಹತ್ವ ನೀಡಲಿಲ್ಲ. ಹೊಟ್ಟೆಗೆ ಆವಶ್ಯಕವಾಗಿರುವಷ್ಟೇ ಅವರು ಸಂಗ್ರಹಿಸಿದರು. ಹೆಚ್ಚು ಸಂಗ್ರಹಿಸಿಡದ ಕಾರಣ ಅವರ ಜೀವನಯಾತ್ರೆಯು ಒಳ್ಳೆಯ ರೀತಿಯಲ್ಲಿ ಸಾಗಿತು. ಸಂತರು ಪಶುಪಕ್ಷಿಗಳಂತೆ ಬದುಕಿದರು; ಏಕೆಂದರೆ ಹೆಚ್ಚು ಸಂಪತ್ತು ಮತ್ತು ಸಂತತಿಯಿಂದ ವಿಪತ್ತು ಬರುತ್ತದೆ; ಆದುದರಿಂದ ಸಂಗ್ರಹವು ಸೀಮಿತವಾಗಿರಬೇಕು. ಹೆಚ್ಚು ಆಸೆಯನ್ನು ಪಡಬಾರದು. ಇದರಿಂದ ಸುಖ, ಸಮಾಧಾನ, ಆನಂದ ಮತ್ತು ಶಾಂತಿ ನಾಶವಾಗುತ್ತದೆ.

೨ ಉ. ಕೆಲವು ಸಂತರು ಲೌಕಿಕ ಭೋಗದ ಸುಖದಲ್ಲಿ ಸಿಲುಕದೇ ಪರಮಾರ್ಥವನ್ನು ಸಾಧಿಸುವುದು ಮತ್ತು ಕೆಲವರು ಸಂಸಾರವನ್ನು ಮಾಡಿ ಮೋಕ್ಷಕ್ಕೆ ಹೋಗುವುದು : ಮಹಾರಾಷ್ಟ್ರದಲ್ಲಿ ಸಂತ ನಿವೃತ್ತಿ ಮಹಾರಾಜರು, ಸಂತ ಜ್ಞಾನೇಶ್ವರರು, ಸಂತ ಸೋಪಾನ, ಸಂತ ಮುಕ್ತಾಬಾಯಿ ಮತ್ತು ಸಮರ್ಥ ರಾಮದಾಸ ಸ್ವಾಮಿಗಳು ಲೌಕಿಕ ಭೋಗದ ಸುಖವನ್ನು ಧಿಕ್ಕರಿಸಿ ಪರಮಾರ್ಥವನ್ನು ಸಾಧಿಸಿದರು. ಈ ಶಕ್ತಿಯು ಕೇವಲ ಅವರಿಗಷ್ಟೇ ತಿಳಿದಿತ್ತು. ಉಳಿದವರು ಯಾರು ಸಂತರಾದರೋ, ಅವರು ಆ ಸುಖದ ಸವಿ ನೋಡಿದರು ಅನಂತರ ಭೋಗವನ್ನು ತ್ಯಜಿಸಿದರು, ಇಂತಹವರ ಕೆಲವು ಉದಾ. ಸಂತ ತುಕಾರಾಮ ಮಹಾರಾಜರು, ಸಂತ ಏಕನಾಥ ಮಹಾರಾಜರು, ಸಂತ ನಾಮದೇವ ಮಹಾರಾಜರು, ಸಂತ ನರಹರಿ ಸೋನಾರ, ಸಂತ ಸೇನಾ ನ್ಹಾವಿ, ಸಂತ ಚೋಖೋಬಾ, ಸಂತ ಸೂರದಾಸರು, ಸಂತ ಕಬೀರರು, ಸಂತ ತುಲಸಿದಾಸರು, ಸಂತ ಸಖುಬಾಯಿ, ಸಂತ ಮೀರಾಬಾಯಿ, ಸಂತ ಗೋಪಾಬಾಯಿ ಇಂತಹ ಸ್ತ್ರೀ ಸಂತರೂ ಇದ್ದರು. ಅವರು ಸಂಸಾರವನ್ನು ಮಾಡಿ ಮೋಕ್ಷಕ್ಕೆ ತಲುಪಿದರು.

೨ ಊ. ಪೂ. ಬಾಂದ್ರೆ ಮಹಾರಾಜರ ಜೀವವು ವಿಠ್ಠಲನ ನಾಮದಿಂದ ತುಂಬಿಹೋದುದರಿಂದ ಅವರ ಮನಸ್ಸಿನಲ್ಲಿ ವ್ಯವಹಾರದಲ್ಲಿ ಸುಖ-ದುಃಖ, ಲಾಭ-ಹಾನಿ, ಇಂತಹ ವಿಚಾರಗಳು ಬರುವುದಿಲ್ಲ : ಈಗ ನನಗೆ ನನ್ನ, ನನ್ನತನದ ವಿಸ್ಮರಣೆಯಾಗಿದೆ. ನನ್ನ ದೇಹ, ಕಾಯಾ ಮತ್ತು ಅಂತಃಕರಣವು ವಿಠ್ಠಲನ, ಪಾಂಡುರಂಗನ ನಾಮದಿಂದ ತುಂಬಿ ಹೋಗಿದೆ. ನಾನು ಲೌಕಿಕ ವ್ಯವಹಾರಗಳಿಂದ ಬೇರೆಯಾಗಿದ್ದೇನೆ. ನಾನು ವಾರ, ದಿನಾಂಕ ಮತ್ತು ತಿಂಗಳು ಇವೆಲ್ಲವನ್ನೂ ಮರೆತು ಹೋಗಿದ್ದೇನೆ. ಸುಖ-ದುಃಖವೆಂದರೇನು ?, ಇದು ಸಹ ನೆನಪಿಗೆ ಬರುವುದಿಲ್ಲ. ನನ್ನ ದೇಹವು ವಿಠ್ಠಲನಿಂದ ತುಂಬಿ ಹೋಗಿದೆ. ಸುಖ-ದುಃಖ, ಲಾಭ-ಹಾನಿ, ಜಯ-ಪರಾಜಯ, ಇವೆಲ್ಲವೂ ನನಗೆ ಒಂದೇ ಆಗಿವೆ, ಈಗ ನನ್ನ ಅವಸ್ಥೆ ಹೀಗಾಗಿದೆ.

ಪೂ. ಸಖಾರಾಮ ರಾಮಜಿ ಬಾಂದ್ರೆ (ವಯಸ್ಸು ೭೦ ವರ್ಷ), ಕಾತಳವಾಡಿ, ಚಿಪಳೂಣ ತಾ., ರತ್ನಾಗಿರಿ ಜಿಲ್ಲೆ.

(ಪೂ. ಸಖಾರಾಮ ಬಾಂದ್ರೆ ಮಹಾರಾಜರ ಈ ಬರವಣಿಗೆಯು ೨೦೦೫ ರಿಂದ ೨೦೨೦ ರ ನಡುವಿನ ಕಾಲಾವಧಿಯದ್ದಾಗಿದೆ.)