ಕೆಲವು ವರ್ಷಗಳ ಹಿಂದೆ ‘ಆಪತ್ಕಾಲದಲ್ಲಿ ಮನೆಯಿಂದ ಹೊರಬರಲು ಅಸಾಧ್ಯವಾಗಲಿದೆ ಎಂದು ಹೇಳಿರುವುದು
೧೫-೨೦ ವರ್ಷಗಳ ಹಿಂದೆ ಪರಾತ್ಪರ ಗುರು ಡಾಕ್ಟರ್ ಆಠವಲೆಯವರು, ‘ಕಾಲಮಹಾತ್ಮೆಗನುಸಾರ ಶೀಘ್ರದಲ್ಲಿಯೇ ಆಪತ್ಕಾಲವು ಬರಲಿದೆ. ಸೇವೆ ಮತ್ತು ಸಾಧನೆ ಮಾಡಲು ವಾತಾವರಣವು ಪ್ರತಿಕೂಲವಾಗಿರಲಿದೆ. ಮುಂದುಮುಂದೆ ಆಪತ್ಕಾಲದ ತೀವ್ರತೆ ಎಷ್ಟು ಹೆಚ್ಚಾಗುತ್ತಾ ಹೋಗುವುದೆಂದರೆ, ಸಾಧಕರಿಗೆ ಅಧ್ಯಾತ್ಮ ಪ್ರಸಾರಕ್ಕಾಗಿ ಮನೆಯಿಂದ ಹೊರಬರಲೂ ಕಠಿಣವಾಗಲಿದೆ, ಎಂದು ಹೇಳಿದ್ದರು. ಕೊರೋನಾದಿಂದ ಕಳೆದ ವರ್ಷವಿಡೀ ಸಾಧಕರಿಗೆ ಪ್ರತ್ಯಕ್ಷ ಪ್ರಸಾರ ಮಾಡಲು ಆಗಲಿಲ್ಲ, ಇದರಿಂದ ಅವರ ಈ ವಚನದ ಸತ್ಯತೆಯ ಅನುಭವವಾಗುತ್ತಿದೆ.
ಕೊರೋನಾದಂತಹ ಸಾಂಕ್ರಾಮಿಕ ರೋಗಗಳು ಶೀಘ್ರವಾಗಿ ಹರಡುವುದರಿಂದ ಅನೇಕ ಸಾವುಗಳು ಸಂಭವಿಸುತ್ತಿವೆ, ಇದು ಆಪತ್ಕಾಲದ ಭೀಕರತೆಯನ್ನು ತೋರಿಸುತ್ತದೆ. ಪ್ರಸ್ತುತ ಪರಿಸ್ಥಿತಿಯು ಭೀಕರ ಆಪತ್ಕಾಲದ ಒಂದು ಸಣ್ಣ ರೂಪವಾಗಿದೆ. ಇದಕ್ಕಿಂತಲೂ ಅನೇಕ ಪಟ್ಟು ದೊಡ್ಡ ಆಪತ್ಕಾಲವು ಸಮೀಪಿಸಿದೆ. ಗುರುದೇವರು ಕೆಲವು ವರ್ಷಗಳ ಹಿಂದೆಯೇ ಇದನ್ನು ಸೂಚಿಸಿದರು ಮತ್ತು ಆಪತ್ಕಾಲವನ್ನು ಎದುರಿಸಲು ಸಾಧನೆಯನ್ನು ಮಾಡಿ ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವಂತೆ ಹೇಳಿದ್ದರು. ಇದರಿಂದ ಅವರ ದಾರ್ಶನಿಕತೆ ಮತ್ತು ಸರ್ವಜ್ಞತೆಯು ಅನುಭವಕ್ಕೆ ಬರುತ್ತದೆ.
ವಿಶ್ವ ಕಲ್ಯಾಣಕ್ಕಾಗಿ ಕಾರ್ಯನಿರತವಾಗಿರುವ ಗುರುದೇವರ ಸರ್ವಜ್ಞತೆ !
ಭಾವೀ ಆಪತ್ಕಾಲ ಮತ್ತು ಆ ಸಮಯದಲ್ಲಿ ಉಂಟಾಗಬಹುದಾದ ಭಯಾನಕ ಸ್ಥಿತಿಯ ಬಗ್ಗೆ ದಾರ್ಶನಿಕ ಸಂತರು ಮಾತ್ರ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲರು. ಪ್ರಸ್ತುತ ತುರ್ತುಪರಿಸ್ಥಿತಿ ಯಿಂದಾಗಿ ಕೆಲವು ವರ್ಷಗಳ ಹಿಂದೆಯೇ ಆಪತ್ಕಾಲದ ಬಗ್ಗೆ ಅರಿವನ್ನು ಮೂಡಿಸಿ ಅದಕ್ಕೆ ಪರಿಣಾಮಕಾರಿ ಉಪಾಯವನ್ನು ಹೇಳಿದ್ದ ಪರಾತ್ಪರ ಗುರುದೇವರ ದಾರ್ಶನಿಕತೆ ಮತ್ತು ಸರ್ವಜ್ಞತೆಯನ್ನು ಎಲ್ಲ ಸಾಧಕರು ಅನುಭವಿಸಿದರು. ‘ಅವರು ಹೇಳಿದ ವಿಷಯಗಳನ್ನು ಕಾರ್ಯರೂಪಕ್ಕೆ ತರುವುದು ಏಕೆ ಆವಶ್ಯಕವಾಗಿದೆ ?, ಎಂಬುದು ಎಲ್ಲರಿಗೂ ತೀವ್ರವಾಗಿ ಅರಿವಾಯಿತು. ಅಂತಹ ಮಹಾನ್ ಮತ್ತು ತ್ರಿಕಾಲಜ್ಞಾನಿ ಗುರುದೇವರ ಮಾರ್ಗದರ್ಶನವು ಲಭಿಸಿರುವುದು ಸನಾತನದ ಸಾಧಕರ ಬಹುದೊಡ್ಡ ಭಾಗ್ಯವಾಗಿದೆ. ಸಾಧಕರು ಪರಾತ್ಪರ ಗುರುದೇವರ ಬಗ್ಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಅದು ಅಲ್ಪವೇ ಆಗಿರುತ್ತದೆ !
ಆಪತ್ಕಾಲದ ಬಗ್ಗೆ ಅಖಿಲ ಮನುಕುಲಕ್ಕೆ ಸಮಗ್ರ ಮಾರ್ಗದರ್ಶನ ನೀಡುವ ಮೂಲಕ ವಿಶ್ವದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಪರಾತ್ಪರ ಗುರುದೇವರ ಈ ಕಾರ್ಯವು ಅದ್ವಿತೀಯವಾಗಿದೆ. ‘ಸಾಧನೆಯ ಅಸಾಧಾರಣ ಮಹತ್ವವನ್ನು ಅರಿತುಕೊಂಡು ಸಮಸ್ತ ಮನುಕುಲಕ್ಕೆ ಸಾಧನೆ ಮಾಡುವ ಬುದ್ಧಿಯು ಸಿಗಲಿ, ಎಂದು ಜಗತ್‌ನಿಯಂತ್ರಕ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !
– ಶ್ರೀಸತ್‌ಶಕ್ತಿ (ಸೌ) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ