ಸಾಧನೆಯಲ್ಲಿನ ಧ್ಯೇಯವನ್ನು ಸಾಧ್ಯಗೊಳಿಸುವಾಗ ಪುನಃ ಪುನಃ ವೈಫಲ್ಯ ಬಂದರೆ, ಏನು ಮಾಡಬೇಕು ?

(ಪೂ.) ಸಂದೀಪ ಆಳಶಿ

ಮೊದಲನೇಯ ಹಂತ 

‘ಧ್ಯೇಯಗಳಲ್ಲಿನ ಯಾವುದಾದರೊಂದು ಧ್ಯೇಯವು ಸ್ವಲ್ಪ ಮಟ್ಟಿಗಾದರೂ ಸಾಧ್ಯವಾಗಿದ್ದರೆ, ಅದರ ಬಗ್ಗೆ ಸಮಾಧಾನ ಪಡಬೇಕು ಮತ್ತು ಗುರುಗಳಿಗೆ ಅಥವಾ ಈಶ್ವರನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

ಎರಡನೇಯ ಹಂತ

ವೈಫಲ್ಯದ (ವಿಫಲ) ಹಿಂದಿನ ಕಾರಣಗಳನ್ನು ಹುಡುಕಬೇಕು. ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಇವುಗಳಲ್ಲಿ ನಿರ್ದಿಷ್ಟವಾಗಿ ಯಾವ ಕಾರಣವಿದೆ, ಎಂಬುದರ ಬಗ್ಗೆ ಚಿಂತನೆಯನ್ನು ಮಾಡಬೇಕು ಮತ್ತು ಆ ಕಾರಣಕ್ಕನುಸಾರ ಯೋಗ್ಯ ಉಪಾಯ ಯೋಜನೆಯನ್ನು ಮಾಡಬೇಕು. ಈ ಕುರಿತು ಅವಶ್ಯಕತೆಗನುಸಾರ ಕುಟುಂಬದವರ ಅಥವಾ ಸಂಗಡಿಗರ ಸಹಾಯವನ್ನು ಪಡೆಯಬೇಕು.

ಮೂರನೇಯ ಹಂತ

ಮೇಲಿನಂತೆ ಮಾಡಿದರೂ ವೈಫಲ್ಯ (ವಿಫಲರಾದರೆ) ಬಂದರೆ, ಅದರಲ್ಲಿಯೂ ಆನಂದವೇ ಅನಿಸಬೇಕು ಮತ್ತು ‘ಈಗ ದೇವರು ಇನ್ನೂ ಮುಂದಿನ ಹಂತದ ಪ್ರಯತ್ನವನ್ನು ಮಾಡಲು ಕಲಿಸುವನು, ಎಂಬ ವಿಚಾರವನ್ನು ಮಾಡಬೇಕು. ಧ್ಯೇಯವನ್ನು ತಲುಪಲು ಸತತವಾಗಿ ಪ್ರಯತ್ನಿಸುತ್ತಿರುವುದು, ಈಶ್ವರಪ್ರಾಪ್ತಿಗಾಗಿ ಅವಶ್ಯಕವಾಗಿದೆ; ಆದ್ದರಿಂದ ಪ್ರಯತ್ನ ಮಾಡುವುದನ್ನು ಬಿಡಬಾರದು.

– (ಪೂ.) ಶ್ರೀ. ಸಂದೀಪ ಆಳಶಿ (೨೩.೩.೨೦೨೧)