ಸಾಧಕರೇ, ಸನಾತನದ ಮತ್ತು ಎಸ್.ಎಸ್.ಆರ್.ಎಫ್.ನ ಸಂತರು ಕೇವಲ ಸಂತರಾಗಿಲ್ಲ, ಅವರು ಗುರುಗಳೇ ಇರುವುದರಿಂದ ಅವರಿಂದ ಕಲಿಯಿರಿ ಮತ್ತು ಅದನ್ನು ಕೃತಿಯಲ್ಲಿ ತಂದು ಅವರ ನಿಜವಾದ ಅರ್ಥದಲ್ಲಿನ ಲಾಭವನ್ನು ಪಡೆಯಿರಿ ಮತ್ತು ಸಾಧನೆಯಲ್ಲಿ ಶೀಘ್ರ ಗತಿಯಲ್ಲಿ ಮುಂದೆ ಹೋಗಿರಿ !

(ಪರಾತ್ಪರ ಗುರು) ಡಾ. ಆಠವಲೆ

‘ಇಲ್ಲಿಯವರೆಗೆ ಸನಾತನದ ಮತ್ತು ಸನಾತನದ ಬೋಧನೆಗನುಸಾರಗನುಸಾರ ಸಾಧನೆಯನ್ನು ಮಾಡಿದ ಎಸ್.ಎಸ್.ಆರ್.ಎಫ್.ನ ಸಂತರನ್ನು ಸೇರಿಸಿ ಒಟ್ಟು ೧೦೮ ಮಂದಿ ಸಾಧಕರು ಸಂತರಾಗಿದ್ದಾರೆ. ಇವರಲ್ಲಿ ಕೆಲವರು ಎಲ್ಲ ಕಡೆಗೆ ಹೋಗಿ ಸಾಧಕರಿಗೆ ಸಾಧನೆಯ ಸಂದರ್ಭದಲ್ಲಿ ದೇಹತ್ಯಾಗವಾಗುವವರೆಗೆ ಮಾರ್ಗದರ್ಶನ ಮಾಡಿದ್ದಾರೆ. ನಾವು ಅವರಿಗೆ ‘ಸಮಷ್ಟಿ ಸಂತರು ಎಂದು ಹೇಳುತ್ತೇವೆ. ಅವರ ಕಾರ್ಯವು ಗುರುಗಳಂತೆಯೇ ಸಾಧನೆಯಲ್ಲಿ ಮಾರ್ಗದರ್ಶನ ಮಾಡುವುದಾಗಿದೆ; ಆದುದರಿಂದ ಅವರ ಮಾಹಿತಿಯು ಎಲ್ಲ ಸಾಧಕರಿಗೆ ಸಿಗಬೇಕೆಂದು ಮತ್ತು ಸಾಧಕರಿಗೆ ಸಂತರಿಂದ ಏನಾದರೂ ಕಲಿಯಲು ಸಿಗಬೇಕೆಂದು ಅವರ ಬಗೆಗಿನ ಕೆಲವು ಲೇಖನಗಳನ್ನು ‘ಸನಾತನ ಪ್ರಭಾತದಲ್ಲಿ ಸ್ಥಳಕ್ಕನುಸಾರ ಪ್ರಕಟಿಸುತ್ತಿದ್ದೇವೆ. ಈ ಮಾಹಿತಿಯಲ್ಲಿ ಕೆಲವು ಸಂತರು ಮತ್ತು ಸಾಧಕರು ಬರೆದ ಗುಣವೈಶಿಷ್ಟ್ಯಗಳು; ಅವರ ಬೋಧನೆ; ಅವರ ಬಗ್ಗೆ ಸಾಧಕರಿಗೆ ಬಂದ ಅನುಭೂತಿಗಳು; ಅವರು ತಮ್ಮ ಬಗ್ಗೆ, ಕುಟುಂಬದವರ ಬಗ್ಗೆ, ಇತರ ಸಾಧಕರ ಬಗ್ಗೆ ಮತ್ತು ಸಂತರ ಬಗ್ಗೆ ಬರೆದ ಲೇಖನ; ಅವರು ರಚಿಸಿದ ಕವಿತೆಗಳು ಅಥವಾ ಅವರ ಬಗ್ಗೆ ಇತರ ಸಾಧಕರು ರಚಿಸಿದ ಕವಿತೆಗಳು ಮುಂತಾದ ವಿಷಯಗಳ ಬರವಣಿಗೆ ಇದೆ. ಈ ಲೇಖನವನ್ನು ಓದಿ ಅವರ ಬಗ್ಗೆ ಎಲ್ಲರಿಗೂ ಆತ್ಮೀಯತೆಯೆನಿಸಲು ಸಹಾಯವಾಗುವುದು ಮತ್ತು ಜಗತ್ತಿನಾದ್ಯಂತದ ಎಲ್ಲ ಸಾಧಕರಿಗೆ ಅವರ ಮುಖ ಪರಿಚಯವಾಗುವುದು. ಸಂತರ ವೈಶಿಷ್ಟ್ಯಗಳನ್ನು ಕೇವಲ ಓದಬೇಡಿರಿ, ಅವುಗಳನ್ನು ತಮ್ಮ ಆಚರಣೆಯಲ್ಲಿ ತರಲು ಪ್ರಯತ್ನಿಸಿರಿ. ಇದರಿಂದ ಈ ಲೇಖಮಾಲೆಯು ನಿಜವಾದ ಅರ್ಥದಲ್ಲಿ ಸಾರ್ಥಕವಾಗುವುದು.- (ಪರಾತ್ಪರ ಗುರು) ಡಾ. ಆಠವಲೆ.