ಶ್ರೀ. ರಮಾನಂದ ಗೌಡ ಇವರು ಸಂತಪದವಿಯಲ್ಲಿ ವಿರಾಜಮಾನರಾದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಪೂ. ರಮಾನಂದಣ್ಣ ಇವರ ಬಗ್ಗೆ ತೆಗೆದ ಗೌರವೋದ್ಗಾರ !
ಸಾಧಕರ ನಿಖರ ಅಭ್ಯಾಸವಿರುವ ಮತ್ತು ಸಾಧಕರ ಆಧ್ಯಾತ್ಮಿಕ ಪ್ರಗತಿಯಲ್ಲಿ ಸಿಂಹಪಾಲಿರುವ ಶ್ರೀ. ರಮಾನಂದ ಗೌಡ !
‘ಕರ್ನಾಟಕದಲ್ಲಿನ ಧರ್ಮಪ್ರಚಾರಕರಾದ ಶ್ರೀ. ರಮಾನಂದ ಗೌಡ ಇವರ ವೈಶಿಷ್ಟ್ಯವೆಂದರೆ ಅವರ ಸಾಧಕರ ಬಗೆಗಿರುವ ನಿಖರ ಅಭ್ಯಾಸ ! ಅವರಿಗೆ ಸಾಧಕರ ಆಧ್ಯಾತ್ಮಿಕ ಮಟ್ಟವನ್ನು ನಿಖರವಾಗಿ ಗುರುತಿಸಲು ಬರುತ್ತದೆ. ಅವರು ಸಾಧಕರಿಗೆ ಸರಿಯಾದ ಮಾರ್ಗದರ್ಶನ ಮಾಡುತ್ತಿರುವುದರಿಂದ ಅವರು ಕರ್ನಾಟಕ ರಾಜ್ಯದ ಪ್ರಸಾರ ಕಾರ್ಯವನ್ನು ನೋಡತೊಡಗಿದಾಗಿನಿಂದ ಕೆಲವು ಸಾಧಕರು ಶೇ. ೬೦ ಮತ್ತು ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡರು, ಹಾಗೆಯೇ ಅಲ್ಲಿನ ಕಾರ್ಯವು ತೀವ್ರಗತಿಯಲ್ಲಿ ಹೆಚ್ಚಾಗ ತೊಡಗಿತು. ಸಾಧಕರ ಆಧ್ಯಾತ್ಮಿಕ ಪ್ರಗತಿಯಲ್ಲಿ ಅವರ ಸಿಂಹಪಾಲಿದೆ.
ಅವರ ಸಾಧನೆಯ ತಳಮಳದಿಂದಾಗಿ ಅವರ ಸಂಪೂರ್ಣ ಕುಟುಂಬವು ಸಾಧನೆಯನ್ನು ಮಾಡುತ್ತಿದ್ದು ಅವರ ಆಧ್ಯಾತ್ಮಿಕ ಉನ್ನತಿಯೂ ಶೀಘ್ರಗತಿಯಲ್ಲಿ ಆಗುತ್ತಿದೆ.
ಶ್ರೀ. ರಮಾನಂದ ಇವರಲ್ಲಿನ ನಮ್ರತೆ, ತತ್ತ್ವನಿಷ್ಠತೆ ಮತ್ತು ಆಜ್ಞಾಪಾಲನೆ ಮುಂತಾದ ಗುಣಗಳಿಂದಾಗಿ ಅವರು ೨೦೧೩ ನೇ ಇಸವಿಯಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿ ಕೊಂಡರು. ಈಗ ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ಅವರು ಸನಾತನದ ೭೫ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.
ಭಾವ, ತಳಮಳ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಉತ್ತಮ ನೇತೃತ್ವವನ್ನು ಮಾಡುವ ಪೂ. ರಮಾನಂದ ಗೌಡ ಇವರ ಉತ್ತರೋತ್ತರ ಆಧ್ಯಾತ್ಮಿಕ ಪ್ರಗತಿಯಾಗಲಿ, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ ! – (ಪರಾತ್ಪರ ಗುರು) ಡಾ. ಆಠವಲೆ
೫ ಜುಲೈ ೨೦೨೦ ರಂದು ಆಷಾಢ ಹುಣ್ಣಿಮೆ, ಅಂದರೆ ಗುರುಪೂರ್ಣಿಮೆಯಾಗಿದೆ. ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಈ ದಿನ ಗುರುತತ್ತ್ವವು ಒಂದು ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸಾಧಕರಿಗೆ ಗುರುಪೂರ್ಣಿಮೆಯ ಹೆಚ್ಚೆಚ್ಚು ಲಾಭವಾಗಬೇಕೆಂದು ಗುರುಕೃಪಾಯೋಗದ ಮಾಧ್ಯಮದಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಸಂತಪದವಿಯನ್ನು ಮತ್ತು ಸದ್ಗುರುಪದವಿಯನ್ನು ಪ್ರಾಪ್ತಮಾಡಿಕೊಂಡಿರುವ ಸನಾತನದ ಕೆಲವು ಸಂತರ ಬಗೆಗಿನ ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ.
ಈ ಲೇಖನದಲ್ಲಿ ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರು ಮಾಡಿದ ಮಾರ್ಗದರ್ಶನವನ್ನು ನೋಡೋಣ.
ಈ ಲೇಖನದಲ್ಲಿನ ಬರವಣಿಗೆಯು ಮೊದಲಿನದ್ದಾಗಿರುವುದರಿಂದ ಸಂತರ ಹೆಸರನ್ನು ಮೊದಲಿನಂತೆಯೇ ಉಲ್ಲೇಖಿಸಲಾಗಿದೆ. – ಸಂಪಾದಕರು
ಪೂ. ರಮಾನಂದ ಗೌಡ ಇವರ ಪರಿಚಯ
ಪೂರ್ಣ ಹೆಸರು : ಶ್ರೀ. ರಮಾನಂದ ಚನ್ನಪ್ಪಾ ಗೌಡ
ವಯಸ್ಸು : ೪೪ ವರ್ಷಗಳು
ಜನ್ಮದಿನಾಂಕ : ೧.೬.೧೯೭೬
ಹುಟ್ಟುಹಬ್ಬ : ಈ ವರ್ಷ ೩೧.೫.೨೦೨೦ ರಂದು ಹುಟ್ಟುಹಬ್ಬವಾಯಿತು.
ಸಾಧನೆಯ ಆರಂಭ : ೨೦೦೦ ದಿಂದ
ಸಂತಪದವಿಯಲ್ಲಿ ವಿರಾಜಮಾನ : ೫ ಜೂನ್ ೨೦೧೮
ಇಲ್ಲಿಯವರೆಗೆ ಮಾಡಿದ ಕಾರ್ಯಗಳು : ಉಪಕೇಂದ್ರದಲ್ಲಿನ ಸೇವೆ, ಕೇಂದ್ರದಲ್ಲಿನ ಸೇವೆ, ಜಿಲ್ಲೆಯಲ್ಲಿನ ಸೇವೆ, ರಾಜ್ಯ ಮಟ್ಟದ ಸೇವೆ ಮತ್ತು ಧರ್ಮಪ್ರಸಾರ ಇತ್ಯಾದಿ.
ಪ್ರಸ್ತುತ ಮಾಡುತ್ತಿರುವ ಕಾರ್ಯ : ಸನಾತನ ಸಂಸ್ಥೆಯ ಧರ್ಮಪ್ರಚಾರಕರು (ಸಾಧನೆಗೆ ಬರುವ ಮೊದಲು ಅಡಿಕೆಯ ವ್ಯಾಪಾರ ಮಾಡುತ್ತಿದ್ದರು.)
ಅಖಂಡ ಭಾವಾವಸ್ಥೆಯಲ್ಲಿರುವ ಮತ್ತು ಸದಾ ನಮ್ರತೆಯಿಂದಿರುವ ಪೂ. ರಮಾನಂದ ಗೌಡ !
‘ಒಂದು ಬಾರಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ‘ಪೂ. ರಮಾನಂದ ಗೌಡರವರನ್ನು ನೋಡಿದಾಗ ಅವರಲ್ಲಿ ಶಿಷ್ಯಭಾವ ಅರಿವಾಗುತ್ತದೆ, ಎಂದು ಹೇಳಿದೆ, ಆಗ ಅವರು “ಪೂ. ರಮಾನಂದ ಇವರು ಅಖಂಡ ಭಾವಾವಸ್ಥೆಯಲ್ಲಿರುತ್ತಾರೆ. ಅವರಲ್ಲಿ ಎಷ್ಟು ನಮ್ರತೆ ಇದೆ ! ಕರ್ನಾಟಕ ರಾಜ್ಯದಲ್ಲಿನ ಜವಾಬ್ದಾರ ಸಾಧಕರಲ್ಲಿ ನಮ್ರತೆ, ಭಾವ, ಸಹಜತೆ, ಪ್ರೇಮಭಾವ ಮತ್ತು ಸರಳತನ ಬಹಳಷ್ಟು ಪ್ರಮಾಣದಲ್ಲಿ ಅರಿವಾಗುತ್ತವೆ. ಇದರ ಕಾರಣವೆಂದರೆ ಇವೆಲ್ಲ ಗುಣಗಳು ಪೂ. ರಮಾನಂದ ಇವರಲ್ಲಿವೆ. ಅವರೇ ಎಲ್ಲ ಸಾಧಕರನ್ನು ತಯಾರಿಸಿದ್ದಾರೆ. ಆದುದರಿಂದ ಸಾಧಕರಲ್ಲಿ ಮೇಲಿನ ಗುಣಗಳ ಅರಿವಾಗುತ್ತದೆ. ಪೂ. ರಮಾನಂದ ಇವರು ಸಾಧಕರನ್ನು ಎಷ್ಟು ಚೆನ್ನಾಗಿ ತಯಾರಿಸುತ್ತಾರೆ ! ಅಲ್ಲವೇ, ಎಂದು ಹೇಳಿದ್ದರು.
ಶ್ರೀಮನ್ನಾರಾಯಣಸ್ವರೂಪ ಗುರುದೇವರ ಬಾಯಿಯಿಂದ ಭಕ್ತರೂಪಿ ಸಂತರ ಸ್ತುತಿಯನ್ನು ಕೇಳುವಾಗ ನನಗೆ ಬೇರೆಯೇ ಆನಂದವು ಸಿಕ್ಕಿತು. ಗುರುದೇವರ ಕೃಪೆಯಿಂದ ನಮಗೆ ವಿವಿಧ ಸಂತರ ಅನೇಕ ಗುಣವೈಶಿಷ್ಟ್ಯಗಳು ಉದಾಹರಣೆಗಳೊಂದಿಗೆ ಕಲಿಯಲು ಸಿಕ್ಕಿದವು, ಅದಕ್ಕಾಗಿ ಗುರುಚರಣಗಳಲ್ಲಿ ಕೃತಜ್ಞತೆಗಳು ! – ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಪೂ. ರಮಾನಂದ ಗೌಡರವರು ಸಾಧಕರಿಗೆ ಮಾಡಿದ ಮಾರ್ಗದರ್ಶನ
ಅ. ವ್ಯಷ್ಟಿ ಸಾಧನೆ
ಅ ೧. ಮನಸ್ಸಿನ ಅಧ್ಯಯನವನ್ನು ಹೇಗೆ ಮಾಡಬೇಕು ?
ಅ ೧. ತಪ್ಪುಗಳನ್ನು ಸ್ವೀಕರಿಸದಿದ್ದರೆ ‘ನಾನು ಮಾಡಿದ ಕೃತಿಯೇ ಯೋಗ್ಯವಾಗಿದೆ’, ಎಂದು ಅನಿಸುತ್ತದೆ ಮತ್ತು ಸ್ಪಷ್ಟೀಕರಣಗಳನ್ನು ಕೊಡುತ್ತೇವೆ : ‘ನಾವು ಪ್ರತಿಯೊಂದು ವಿಷಯವನ್ನು ಮನಸ್ಸಿನಿಂದ ಗುರುದೇವರಿಗೆ ಕೇಳಬೇಕು ಮತ್ತು ಅವರು ಏನು ಸೂಚಿಸುತ್ತಾರೆಯೋ, ಅದರಂತೆ ಮಾಡಬೇಕು. ಪ್ರತಿಯೊಂದು ತಪ್ಪಾದ ನಂತರ ‘ನಾವು ಎಲ್ಲಿ ಕಡಿಮೆ ಬಿದ್ದಿದ್ದೇವೆ’, ಎಂದು ನೋಡುವುದು ಮಹತ್ವದ್ದಾಗಿದೆ. ನಮ್ಮ ಮನಸ್ಸು ತಪ್ಪನ್ನು ಸ್ವೀಕರಿಸಲು ತಯಾರಿರುವುದಿಲ್ಲ. ಮನಸ್ಸು ಮೋಸಗೊಳಿಸುತ್ತಿರುತ್ತದೆ. ಆಗ ‘ನಮ್ಮ ತಪ್ಪನ್ನು ಹೇಳುವವರು ಏನು ಹೇಳುತ್ತಾರೆ ಅದನ್ನು ಕೇಳೋಣ’, ಎಂಬ ವಿಚಾರವಿರಬೇಕು. ಇದರಿಂದ ಮನಸ್ಸು ನಿರ್ಮಲವಾಗಲು ಸಹಾಯವಾಗುತ್ತದೆ. ‘ನಾವು ಏನು ಮಾಡಿದ್ದೇವೆ’, ಎಂಬುದು ದೇವರಿಗೆ ಗೊತ್ತಿರುತ್ತದೆ. ನಾವು ತಪ್ಪನ್ನು ಮಾಡಿಲ್ಲ ಮತ್ತು ತಪ್ಪು ಹೇಳುವವರು ತಪ್ಪು ಮಾಡಿದ್ದರೆ ಕಾಲಾಂತರದಲ್ಲಿ ಅದು ಬೆಳಕಿಗೆ ಬರುತ್ತದೆ. ನಾವು ತಪ್ಪನ್ನು ಸ್ವೀಕರಿಸದಿದ್ದರೆ ನಾವು ಯಾವ ಕೃತಿಯನ್ನು ಮಾಡಿದ್ದೇವೆಯೋ, ಅದೇ ನಮಗೆ ಯೋಗ್ಯವೆನಿಸುತ್ತದೆ. ಆದುದರಿಂದ ನಾವು ಸ್ಪಷ್ಟೀಕರಣಗಳನ್ನು ಕೊಡುತ್ತೇವೆ.’
ಅ. ೨. ಶ್ರೀ. ರಮಾನಂದ ಗೌಡ ಇವರು ಭಾವಜಾಗೃತಿಗಾಗಿ ಹೇಳಿದ ಅಂಶಗಳು
ಅ ೨ ಅ. ಗುರುದೇವರಿಗೆ ಆನಂದವಾಗಗುವಂತಹ ಕೃತಿಗಳನ್ನು ಮಾಡಬೇಕು !
೧. ‘ಗುರುದೇವರು ನಮ್ಮನ್ನು ಸಂಸ್ಥೆಯಲ್ಲಿ ಕರೆದುಕೊಂಡು ಬಂದಿದ್ದಾರೆ, ಅವರು ನಮ್ಮನ್ನು ಮೋಕ್ಷದವರೆಗೆ ಕರೆದುಕೊಂಡು ಹೋಗುವವರೇ ಇದ್ದಾರೆ’, ಎಂಬ ಶ್ರದ್ಧೆಯನ್ನಿಟ್ಟು ಗುರುದೇವರಿಗೆ ಆನಂದವಾಗುವ ಹಾಗೆ ಸಾಧನೆಯನ್ನು ಮಾಡಬೇಕು.
೨. ಗುರುದೇವರಿಗೆ ಮುಂದಿನ ವಿಷಯಗಳು ಇಷ್ಟವಾಗುತ್ತವೆ, ಆಜ್ಞಾಪಾಲನೆ, ಇತರರ ವಿಚಾರ ಮಾಡುವುದು, ಕೇಳಿ ಕೇಳಿ ಮಾಡುವುದು, ದೇವರಿಗೆ ಅಪೇಕ್ಷಿತವಿದ್ದಂತೆ ಮಾಡುವುದು, ಭಾವದ ಸ್ತರದಲ್ಲಿ ಕೃತಿಗಳನ್ನು ಮಾಡುವುದು, ತಪ್ಪುರಹಿತ ಭಾವಪೂರ್ಣ ಸೇವೆಯನ್ನು ಮಾಡುವುದು, ತಳಮಳವನ್ನು ಹೆಚ್ಚಿಸುವುದು ಇತ್ಯಾದಿ.
ಅ ೨ ಆ. ಕೃತಜ್ಞತೆಯನ್ನು ವ್ಯಕ್ತಪಡಿಸುವುದು
ಅ ೨ ಆ ೧. ‘ಗುರುದೇವರು ನಮ್ಮ ಕೈಯನ್ನು ಹಿಡಿದಿದ್ದಾರೆ, ಆದುದರಿಂದ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ! : ‘ಕೋಟಿಗಟ್ಟಲೆ ಜನರಲ್ಲಿ ಗುರುದೇವರು ಸಾಧನೆಗೆ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರು ನಮ್ಮ ಕೈಯನ್ನು ಹಿಡಿದಿದ್ದಾರೆ, ಅದಕ್ಕಾಗಿ ಅವರಿಗೆ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಇದೆ, ಎಂಬ ವಾಕ್ಯವನ್ನು ಮನಸ್ಸಿನ ಮೇಲೆ ಬಿಂಬಿಸಿಬೇಕು. ಇದರಿಂದ ಪ್ರತಿಯೊಂದು ಸತ್ಸಂಗದ ಮೊದಲು ಇದೇ ವಾಕ್ಯದಿಂದ ಪ್ರಾರಂಭಿಸಿದರೆ ಭಾವಜಾಗೃತಿಯಾಗುತ್ತದೆ.
ಅ ೨ ಆ ೨. ಕೃತಜ್ಞತಾಭಾವವನ್ನು ಹೆಚ್ಚಿಸಲು ಹೇಳುವುದು : ಯಾರು ಬುದ್ಧಿಯನ್ನು ಕಡಿಮೆ ಉಪಯೋಗ ಮಾಡುತ್ತಾರೆಯೋ, ಅವರಿಗೆ ‘ಏನಿದೆಯೋ, ಅದೆಲ್ಲವೂ ಕೇವಲ ಈಶ್ವರನಿಂದಾಗಿಯೇ ಆಗಿದೆ, ಎಂದು ಅನಿಸುತ್ತದೆ. ಹೀಗೆ ಭಾವದ ಸ್ತರದಲ್ಲಿ ವಿಚಾರ ಮಾಡಬೇಕು. ಪ್ರತಿಯೊಂದು ಸಲ ‘ಗುರುದೇವರು ನಮಗೆ ಬಹಳಷ್ಟು ಕೊಟ್ಟಿದ್ದಾರೆ, ಎಂಬುದರ ಅರಿವಿರಬೇಕು.
ಅ ೨ ಇ. ನಾವು ಸನಾತನ ಸಂಸ್ಥೆಯಲ್ಲಿ ಸಾಧನೆ ಮಾಡಲು ಬಂದಿದ್ದೇವೆ, ಇಲ್ಲಿ ನಮ್ಮ ಸಾಧನೆ ಹೇಗಾಗುವುದು ಎಂದು ವಿಚಾರ ಮಾಡುವುದಕ್ಕಿಂತ, ‘ಈಶ್ವರನು ನನ್ನಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾನೆ, ಎಂಬ ಅನುಭೂತಿಯನ್ನು ಪಡೆಯೋಣ ಮತ್ತು ಗುರುದೇವರ ಕೃಪೆಗೆ ಪಾತ್ರರಾಗೋಣ.
೧. ‘ಆಪತ್ಕಾಲವು ಹತ್ತಿರ ಬಂದಿರುವುದರಿಂದ ನಾವು ಅವರು ಹೇಳಿದಂತೆ ಮಾಡಿ ಅವರಿಗೆ ಆನಂದವನ್ನು ಕೊಡೋಣ. ನಾವು ‘ಅವರ ಶಕ್ತಿಯು ಖರ್ಚಾಗದಂತೆ, ನೋಡಿಕೊಳ್ಳೋಣ. ಸಾಧನೆಯನ್ನು ಮಾಡದಿರುವುದೆಂದರೆ ಗುರುದೇವರಿಗೆ ದುಃಖವನ್ನು ನೀಡಿದಂತಾಗಿದೆ.
೨. ನಾವು ಪ್ರತಿಯೊಂದು ಸೇವೆಯನ್ನು ಮಾಡುವಾಗ ‘ಗುರುದೇವರಿಗೆ ಏನು ಇಷ್ಟವಾಗುತ್ತದೆ ? ಇಷ್ಟೇ ವಿಚಾರ ಮಾಡೋಣ. ನಕಾರಾತ್ಮಕ ವಿಚಾರ ಮತ್ತು ಪರಸ್ಪರರ ಸ್ವಭಾವದೋಷಗಳಲ್ಲಿ ಸಿಲುಕದೇ ‘ಕೇವಲ ಮತ್ತು ಕೇವಲ ಗುರುದೇವರಿಗೆ ಇಷ್ಟವಾಗುವಂತೆ, ಸೇವೆಯನ್ನು ಮಾಡೋಣ. – ಪೂ. ರಮಾನಂದ ಗೌಡ, ಕರ್ನಾಟಕ
ಆ. ಸಮಷ್ಟಿ ಸಾಧನೆ
ಆ ೧. ಪೂ. ರಮಾನಂದ ಗೌಡ ಇವರು ಸಾಧಕರ ಸಂದೇಹನಿವಾರಣೆಯನ್ನು ಮಾಡುವಾಗ ಹೇಳಿದ ಮಾರ್ಗದರ್ಶಕ ಅಂಶಗಳು ಮತ್ತು ಆ ಸಮಯದಲ್ಲಿ ಅರಿವಾದ ಅವರ ಗುಣವೈಶಿಷ್ಟ್ಯಗಳು ! : ‘ಸಾಧನೆಯನ್ನು ಮಾಡುತ್ತಿರುವಾಗ ಸಾಧಕರಿಗೆ ಅನೇಕ ಸಂದೇಹಗಳು ಬರುತ್ತವೆ. ಈ ಸಂದೇಹಗಳ ನಿವಾರಣೆಯು ಯೋಗ್ಯ ರೀತಿಯಲ್ಲಿ ಆಗದಿದ್ದರೆ, ಹಾಗೆಯೇ ವಿಕಲ್ಪಗಳು ದೂರವಾಗದಿದ್ದರೆ ಮನಸ್ಸಿನಲ್ಲಿನ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಅದರಿಂದ ಮನಸ್ಸಿನ ಶಕ್ತಿ ಖರ್ಚಾಗುತ್ತದೆ. ೮.೭.೨೦೧೮ ರಂದು ರಾಮನಾಥಿ ಆಶ್ರಮದಲ್ಲಿ ನಡೆದ ಒಂದು ಸತ್ಸಂಗದಲ್ಲಿ ಪೂ. ರಮಾನಂದ ಗೌಡ ಇವರು ಸಾಧಕರ ಸಂದೇಹ ನಿವಾರಣೆ ಮಾಡಿದರು. ಆ ಸಮಯದಲ್ಲಿ ಅವರು ಹೇಳಿದ ಅಂಶಗಳನ್ನು ಮುಂದೆ ಕೊಡುತ್ತಿದ್ದೇವೆ.
ಆ ೧ ಅ. ಪೂ. ರಮಾನಂದ ಗೌಡ ಇವರು ಸಾಧಕರಿಗೆ ಹೇಳಿದ ಮಾರ್ಗದರ್ಶಕ ಅಂಶಗಳು
ಆ ೧ ಅ ೧. ಸೇವೆಯನ್ನು ಮಾಡುವಾಗ ಮನಸ್ಸಿನಲ್ಲಿ ಅಹಂನ ವಿಚಾರಗಳು ಬರುತ್ತಿದ್ದರೆ ಆರ್ತತೆಯಿಂದ ಪ್ರಾರ್ಥನೆ ಮಾಡಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು !
ಸಾಧಕಿ : ಸೇವೆಯನ್ನು ಮಾಡುವಾಗ ಮನಸ್ಸಿನಲ್ಲಿ ಅಹಂನ ವಿಚಾರಗಳು ಬರುತ್ತವೆ, ಉದಾ. ನಾನು ಚೆನ್ನಾಗಿ ಸೇವೆಯನ್ನು ಮಾಡುತ್ತೇನೆ. ಈ ರೀತಿಯ ವಿಚಾರಗಳು ಬಂದರೆ ಹೇಗೆ ಪ್ರಯತ್ನ ಮಾಡಬೇಕು ?
ಪೂ. ರಮಾನಂದ ಗೌಡ : ನಮ್ಮ ಯೋಗ್ಯತೆ ಇಲ್ಲದಿರುವಾಗಲೂ ಗುರುದೇವರು ನಮಗೆ ಸೇವೆಯನ್ನು ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್ತತೆಯಿಂದ ಪ್ರಾರ್ಥನೆ ಮಾಡಬೇಕು, ‘ನನ್ನ ಯೋಗ್ಯತೆ ಇಲ್ಲದಿರುವಾಗಲೂ ನೀವು ನನಗೆ ಈ ಸೇವೆಯನ್ನು ನೀಡಿದ್ದೀರಿ. ನಿಮಗೆ ಅಪೇಕ್ಷಿತ ಇರುವಂತಹ ಸೇವೆಯನ್ನು ನೀವೇ ನನ್ನಿಂದ ಮಾಡಿಸಿಕೊಳ್ಳಿ ಸೇವೆಯು ಮುಗಿದ ನಂತರ ‘ನೀವೇ ಸೇವೆಯನ್ನು ಮಾಡಿಸಿಕೊಂಡಿದ್ದೀರಿ, ಎಂದು ಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ‘ಗುರುದೇವರು ಪ್ರತಿಯೊಂದು ಕ್ಷಣ ನಮ್ಮೆದುರಿಗೆ ಇದ್ದಾರೆ, ಎಂದು ವಿಚಾರ ಮಾಡಿ ಕೃತಿಗಳನ್ನು ಮಾಡಬೇಕು.
ಆ ೧ ಅ ೨. ಮನಸ್ಸು ರಜೋಗುಣಿಯಾದರೆ ಅಸ್ಥಿರತೆ ಹೆಚ್ಚಾಗುವುದರಿಂದ ಭಾವಪೂರ್ಣ ಕೃತಿಯನ್ನು ಮಾಡಲು ಸಾಧ್ಯವಾಗದಿರುವುದು ಮತ್ತು ಇದಕ್ಕಾಗಿ ಸಾಧನೆಯನ್ನು ಮಾಡಿ ಸತ್ತ್ವಗುಣವನ್ನು ಹೆಚ್ಚಿಸುವುದು ಆವಶ್ಯಕವಾಗಿದೆ
ಸಾಧಕ : ನನ್ನಿಂದ ಆರ್ತತೆಯಿಂದ ಪ್ರಾರ್ಥನೆ ಆಗುವುದಿಲ್ಲ. ಮನಸ್ಸು ಯಾವಾಗಲೂ ವಿಚಾರಗಳನ್ನು ಮಾಡುತ್ತಿರುತ್ತದೆ. ‘ನನಗೆ ಈ ಸೇವೆಯನ್ನು ಮಾಡಬೇಕಾಗಿದೆ. ಅದನ್ನು ಬೇಗನೆ ಪೂರ್ಣಗೊಳಿಸಬೇಕಾಗಿದೆ, ಎಂಬ ವಿಚಾರಗಳು ಬರುತ್ತಿರುತ್ತವೆ. ಇಂತಹ ಸಮಯದಲ್ಲಿ ನನ್ನ ಭಾವ ಕಡಿಮೆ ಬೀಳುತ್ತದೆ. ಇಂತಹ ಪ್ರಸಂಗಗಳಲ್ಲಿ ಹೇಗೆ ಪ್ರಯತ್ನ ಮಾಡಬೇಕು ?
ಪೂ. ರಮಾನಂದ ಗೌಡ : ಇಂತಹ ಸಮಯದಲ್ಲಿ ಸೇವೆಗಳ ಪಟ್ಟಿಯನ್ನು ತಯಾರಿಸಿ ಅವುಗಳ ಆದ್ಯತೆಯನ್ನು ನಿರ್ಧರಿಸಬೇಕು ಮತ್ತು ಪ್ರತಿಯೊಂದು ಸೇವೆಗಾಗಿ ಸಮಯಮಿತಿಯನ್ನು ಹಾಕಬೇಕು. ಕೆಲವೊಮ್ಮೆ ನಮಗೆ ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡುವುದು ಸಾಧ್ಯವಾಗುವುದಿಲ್ಲ. ಇದು ನಮ್ಮಲ್ಲಿನ ಸತ್ತ್ವ, ರಜ ಮತ್ತು ತಮ ಈ ಗುಣಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ. ನಮ್ಮಲ್ಲಿನ ಸತ್ತ್ವ ಗುಣವು ಹೆಚ್ಚಾಗುತ್ತಾ ಹೋದಂತೆ ನಮಗೆ ಅದು ಸಾಧ್ಯವಾಗುವುದು, ಇದಕ್ಕಾಗಿ ‘ಸಾಧನೆಯನ್ನು ಹೆಚ್ಚಿಸುವುದೇ ಪರ್ಯಾಯವಾಗಿದೆ. ಸೇವೆಯು ಸಾಧನೆಯನ್ನು ಹೆಚ್ಚಿಸುವ ಒಂದು ಮಾಧ್ಯಮವಾಗಿದೆ. ಈ ಮಾಧ್ಯಮದಿಂದಲೇ ನಮಗೆ ಗುರುಚರಣಗಳವರೆಗೆ ಹೋಗುವುದಿದೆ. ನಮ್ಮಲ್ಲಿ ಇಂತಹ ಅನೇಕ ಉದಾಹರಣೆಗಳಿವೆ. ಕೆಲವರು ಇಂದಿಗೂ ಗುರುದೇವರ ಪ್ರತ್ಯಕ್ಷ ದರ್ಶನ ಪಡೆದಿಲ್ಲ; ಆದರೆ ಸೇವೆಯನ್ನು ಮಾಡಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡಿದ್ದಾರೆ. ಸಾಧನೆಯಿಂದ ಸತ್ತ್ವಗುಣವು ಹೆಚ್ಚಾದಂತೆ, ಸಾಧಕರ ಪ್ರಗತಿಯಾಗಲೇಬೇಕು.
ಆ ೧ ಅ ೩. ಕಾರ್ಯಪದ್ಧತಿಗಳ ಬಗ್ಗೆ ಮನಸ್ಸಿನಲ್ಲಿ ವಿಕಲ್ಪಗಳು ಬಂದರೆ ಪ್ರತಿಯೊಂದು ಸೇವೆಯು ಚೆನ್ನಾಗಿ ಆಗಬೇಕು ಎಂಬ ಉದ್ದೇಶದಿಂದ ಪ. ಪೂ. ಗುರುದೇವರೇ ಈ ಕಾರ್ಯಪದ್ಧತಿಗಳನ್ನು ಹಾಕಿಕೊಟ್ಟಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ‘ತಮಗೆ ಅವುಗಳನ್ನು ಏಕೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ?, ಎಂಬುದರ ಚಿಂತನೆಯನ್ನು ಮಾಡುವುದು ಆವಶ್ಯಕವಾಗಿದೆ !
ಸಾಧಕ : ಸೇವೆಯನ್ನು ಮಾಡುವಾಗ ಅನೇಕ ಕಾರ್ಯಪದ್ಧತಿಗಳಿರುವುದರಿಂದ ನನ್ನ ಮನಸ್ಸಿನಲ್ಲಿ ವಿಕಲ್ಪಗಳು ಬರುತ್ತವೆ ಮತ್ತು ‘ಕೆಲವೊಮ್ಮೆ ಕಾರ್ಯಪದ್ಧತಿಗಳಿಂದಾಗಿ ಕಾರ್ಯವೂ ಆಗುವುದಿಲ್ಲ, ಎಂದು ನನಗೆ ಅನಿಸುತ್ತದೆ.
ಪೂ. ರಮಾನಂದ ಗೌಡ : ‘ಈ ಕಾರ್ಯಪದ್ಧತಿಗಳನ್ನು ಯಾರು ಮಾಡಿದ್ದಾರೆ ?, ಎಂಬ ವಿಚಾರವನ್ನು ಮೊದಲು ಮಾಡಬೇಕು, ಹಾಗೆಯೇ ‘ನನಗೆ ಅವುಗಳನ್ನು ಏಕೆ ಸ್ವೀಕರಿಸಲು ಆಗುವುದಿಲ್ಲ ?, ಎಂಬುದನ್ನೂ ನೋಡಬೇಕು. ಜಗತ್ತಿನಾದ್ಯಂತದ ಅನೇಕ ಸಾಧಕರು, ಧರ್ಮಾಭಿಮಾನಿಗಳು ಮತ್ತು ಹಿತಚಿಂತಕರು ರಾಮನಾಥಿ ಆಶ್ರಮಕ್ಕೆ ಭೇಟಿ ನೀಡುತ್ತಿರುತ್ತಾರೆ. ಆಗ ‘ಯಾರ ಆಯೋಜನೆಯನ್ನು ಯಾವಾಗ ಮತ್ತು ಹೇಗೆ ಮಾಡಬೇಕು ?, ಎಂಬುದರ ಕಾರ್ಯಪದ್ಧತಿಯನ್ನು ಹಾಕಲಾಗಿದೆ. ಇದರ ಹಿಂದೆ ‘ಪ್ರತಿಯೊಬ್ಬರ ಆಯೋಜನೆಯು ಚೆನ್ನಾಗಿ ಅಗಬೇಕು, ಎಂಬ ಉದ್ದೇಶವಿರುತ್ತದೆ. ಪ್ರತಿಯೊಬ್ಬರ ನಿವಾಸ-ವ್ಯವಸ್ಥೆಯಿಂದ ಇತರ ಎಲ್ಲ ಆಯೋಜನೆಗಳನ್ನು ಮಾಡಬೇಕಾಗುತ್ತದೆ. ಕಾರ್ಯವು ವ್ಯವಸ್ಥಿತವಾಗಿ ಆಗಲು ಗುರುದೇವರು ಈ ಎಲ್ಲ ಕಾರ್ಯಪದ್ಧತಿಗಳನ್ನು ಮೊದಲಿನಿಂದಲೇ ಹಾಕಿದ್ದಾರೆ. ನಾವು ಅಂತರ್ಮುಖರಾಗಿ, ‘ನನಗೆ ಅವುಗಳನ್ನು ಏಕೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ?, ಎಂಬುದನ್ನು ಇಂತಹ ಪ್ರಸಂಗಗಳ ಅಧ್ಯಯನ ಮಾಡಿ ಚಿಂತನೆಯನ್ನು ಮಾಡಬೇಕು. ಅದಕ್ಕನುಸಾರ ಸ್ವಭಾವದೋಷಗಳಿಗೆ ಸ್ವಯಂಸೂಚನೆಗಳನ್ನು ಕೊಡಬೇಕು ಮತ್ತು ಜವಾಬ್ದಾರ ಸಾಧಕರಿಗೆ ಅದರ ವರದಿಯನ್ನೂ ಕೊಡಬೇಕು.
ಸದ್ಗುರು (ಡಾ.) ಪಿಂಗಳೆಕಾಕಾರವರು, ‘ಕಾರ್ಯಪದ್ಧತಿಗಳ ಪಾಲನೆಯೆಂದರೆ ಧರ್ಮಪಾಲನೆ !, ಎಂದು ಹೇಳಿದ್ದಾರೆ. ಇದನ್ನೂ ಗಮನದಲ್ಲಿಡಬೇಕು.
ಆ ೧. ಅ ೪. ಸಾಧನೆಯಲ್ಲಿ ‘ಬಹಿರ್ಮುಖತೆ ಒಂದು ದೊಡ್ಡ ಅಡಚಣೆಯಾಗಿದೆ, ಅದರಿಂದ ನಾವು ದೇವರಿಂದ ದೂರ ಹೋಗುತ್ತೇವೆ, ಆದುದರಿಂದ ಅದನ್ನು ದೂರಗೊಳಿಸಲು ಸ್ವಯಂಸೂಚನೆಗಳನ್ನು ಕೊಡುವುದು, ಗುರುಗಳಲ್ಲಿ ಕ್ಷಮೆ ಯಾಚನೆ ಮಾಡುವುದು ಮತ್ತು ಶಿಕ್ಷಾಪದ್ಧತಿಯನ್ನು ಅವಲಂಬಿಸುವುದು ಮುಂತಾದವುಗಳನ್ನು ಕೃತಿಯ ಸ್ತರದಲ್ಲಿನ ಪ್ರಯತ್ನಗಳನ್ನು ಮಾಡಬೇಕು !
ಸಾಧಕ : ನನ್ನ ಜೊತೆಗೆ ಸೇವೆಯನ್ನು ಮಾಡುವ ಸಾಧಕರ ಸ್ವಭಾವದೋಷಗಳಿಗನುಸಾರ ನನ್ನ ವರ್ತನೆ ಆಗುತ್ತದೆ. ಆಗ ನನ್ನ ಅಹಂಭಾವ ಉಮ್ಮಳಿಸಿ ಬರುತ್ತದೆ ಮತ್ತು ನನಗೆ ಇತರರ ಗುಣಗಳನ್ನು ನೋಡಲು ಸಾಧ್ಯವಾಗುವುದಿಲ್ಲ.
ಪೂ. ರಮಾನಂದ ಗೌಡ : ಇದು ಬಹಿರ್ಮುಖತೆಯಾಗಿದೆ. ನಾವು ಸಮಷ್ಟಿಯಲ್ಲಿ ಸೇವೆಯನ್ನು ಮಾಡುತ್ತಿದ್ದೇವೆ. ಆದುದರಿಂದ ನಮಗೆ ಸಾಧಕರ ಸ್ವಭಾವದೋಷಗಳನ್ನು ಅವರಿಗೆ ಪ್ರೀತಿಯಿಂದ ಹೇಳಲು ಸಾಧ್ಯವಾಗಬೇಕು. ನಮ್ಮ ಅಂತರ್ಮುಖತೆಯನ್ನು ಹೆಚ್ಚಿಸಲು ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ ?, ಎಂಬುದರ ನಿರೀಕ್ಷಣೆಯನ್ನು ಮಾಡಬೇಕು. ‘ಅನೇಕ ವರ್ಷಗಳವರೆಗೆ ಸಾಧನೆಯನ್ನು ಮಾಡಿಯೂ ನಾನು ಬಹಿರ್ಮುಖತೆಯಿಂದಾಗಿ ದೇವರಿಂದ ಬಹಳ ದೂರವಿದ್ದೇನೆ. ನನ್ನ ಸಾಧನೆಯಲ್ಲಿ ‘ಬಹಿರ್ಮುಖತೆಯೇ ನನ್ನ ಅಡಚಣೆಯಾಗಿದೆ, ಎಂದು ಸಾಧಕರು ಅರಿವನ್ನು ಇಟ್ಟುಕೊಳ್ಳಬೇಕು. ‘ಎಷ್ಟು ಪ್ರಸಂಗಗಳಲ್ಲಿ ನಿಮ್ಮಿಂದ ಹೀಗಾಗುತ್ತದೆ ?, ಎಂಬುದರ ಅಧ್ಯಯನ ಮಾಡಿರಿ ಮತ್ತು ಅದಕ್ಕನುಸಾರ ಸ್ವಯಂಸೂಚನೆಯನ್ನು ತಯಾರಿಸಿರಿ. ಇದಕ್ಕಾಗಿ ಗುರುಗಳಲ್ಲಿ ಕ್ಷಮೆಯಾಚನೆ ಮಾಡುವುದು ಮತ್ತು ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು, ಇಂತಹ ಕೃತಿಯ ಸ್ತರದಲ್ಲಿನ ಪ್ರಯತ್ನಗಳನ್ನೂ ಮಾಡಬೇಕು. ಕ್ಷಮೆ ಯಾಚನೆಯಿಂದ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.
ಆ ೧ ಅ ೫. ಸಾಧಕರು ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿದ್ದಾರೆ, ಅಂದರೆ, ಈ ಎಲ್ಲ ಸಾಧಕರ ಆಯ್ಕೆಯನ್ನು ಪ.ಪೂ. ಗುರುದೇವರೇ ಮಾಡಿದ್ದಾರೆ. ಆದುದರಿಂದ ‘ಪ್ರತಿಯೊಬ್ಬ ಸಾಧಕನೆಂದರೆ ಗುರುಗಳ ಸಮಷ್ಟಿ ರೂಪವಾಗಿದೆ., ಎಂಬ ಅರಿವನ್ನಿಟ್ಟುಕೊಂಡರೆ ಬಹಿರ್ಮುಖತೆಯು ಕಡಿಮೆಯಾಗಲು ಸಹಾಯವಾಗುವುದು : ಸಾಧಕರು ಇತರ ಎಲ್ಲ ಸಾಧಕರ ಬಗ್ಗೆ ಒಳ್ಳೆಯ ಭಾವವನ್ನಿಡಬೇಕು. ಹಿಂದಿನ ೫೪ ಜನ್ಮಗಳಲ್ಲಿ ಸಾಧನೆಯನ್ನು ಮಾಡಿದ ನಂತರ ಸಾಧಕರು ಈಗ ಸನಾತನ ಸಂಸ್ಥೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿದ್ದಾರೆ, ಅಂದರೆ ಈ ಎಲ್ಲ ಸಾಧಕರ ಆಯ್ಕೆಯನ್ನು ಪ.ಪೂ. ಗುರುದೇವರೇ ಮಾಡಿದ್ದಾರೆ. ಆದುದರಿಂದ ‘ಪ್ರತಿಯೊಬ್ಬ ಸಾಧಕನೆಂದರೆ ಗುರುಗಳ ಸಮಷ್ಟಿ ರೂಪವಾಗಿದೆ, ಎಂಬ ಅರಿವನ್ನಿಟ್ಟುಕೊಂಡರೆ ಬಹಿರ್ಮುಖತೆಯು ಕಡಿಮೆಯಾಗಲು ಸಹಾಯವಾಗುತ್ತದೆ.
ಆ ೧ ಅ ೬. ಸಮಷ್ಟಿಯಲ್ಲಿ ತತ್ತ್ವನಿಷ್ಠರಾಗಿದ್ದು ಸಾಧಕರಿಗೆ ತಪ್ಪುಗಳನ್ನು ಹೇಳುವುದು ಆವಶ್ಯಕ !
ಸಾಧಕ : ಸಾಧಕರಲ್ಲಿ ಗುರುಗಳ ರೂಪವನ್ನು ನೋಡಬೇಕು, ಹೀಗಿದ್ದಲ್ಲಿ ಅವರಿಗೆ ತಪ್ಪುಗಳನ್ನು ಹೇಗೆ ಹೇಳುವುದು ? ಆಗ ತಾರತಮ್ಯವನ್ನು ಹೇಗೆ ಇಟ್ಟುಕೊಳ್ಳಬೇಕು ?
ಪೂ. ರಮಾನಂದ ಗೌಡ : ‘ಸಾಧಕರಿಗೆ ತಪ್ಪುಗಳನ್ನು ಹೇಗೆ ಹೇಳಬೇಕು ?, ಎಂದು ಅನಿಸುವುದು, ಭಾವನಾಪ್ರಧಾನತೆಯಾಗಿದೆ. ನಮ್ಮಲ್ಲಿ ತತ್ತ್ವನಿಷ್ಠತೆ ಬಂದರೆ ಸಾಧಕರಿಗೆ ಸ್ವಭಾವದೋಷಗಳನ್ನು ಹೇಳುವಾಗ ಅಡಚಣೆ ಬರುವುದಿಲ್ಲ. ಸಮಷ್ಟಿಯಲ್ಲಿ ತತ್ತ್ವನಿಷ್ಠರಾಗಿರುವುದು ಆವಶ್ಯಕವಾಗಿದೆ. – ಕು. ಮೇಘಾ ಚವ್ಹಾಣ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೭.೨೦೧೮)
ಆ ೨. ‘ಸನಾತನದ ಸಾಧಕರು ಕುಟುಂಬದವರ, ಸಂಬಂಧಿಕರ ಮತ್ತು ಸಮಾಜದಲ್ಲಿನ ಇತರ ವ್ಯಕ್ತಿಗಳ ವಿರೋಧವನ್ನು ಸಹಿಸಿ ಮತ್ತು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಡಚಣೆಗಳ ಮೇಲೆ ವಿಜಯಸಾಧಿಸಿ ಹಗಲುರಾತ್ರಿ ಗುರುಸೇವೆಯನ್ನು ಮಾಡುತ್ತಾರೆ. ‘ದೇವರು, ಇಂತಹ ಸಾಧಕರನ್ನು ಸನಾತನಕ್ಕೆ ನೀಡಿದ ಬಹುಮೂಲ್ಯ ಉಡುಗೊರೆಯಾಗಿದೆ.
ಆ ೩. ಸಾಧಕರಿಗೆ ಸಾಧನೆಯ ದೃಷ್ಟಿಯಿಂದ, ಹಿಂದುತ್ವ ನಿಷ್ಠರಿಗೆ ರಾಷ್ಟ್ರ ಮತ್ತು ಧರ್ಮ ಕಾರ್ಯದ ದೃಷ್ಟಿಯಿಂದ ಮತ್ತು ಸಾಧನೆಯ ಒಲವಿರುವವರಿಗೆ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳುವ ದೃಷ್ಟಿಯಿಂದ ಮಾರ್ಗದರ್ಶನ ಮಾಡುವುದು ಆವಶ್ಯಕವಾಗಿದೆ. – ಪೂ. ರಮಾನಂದ ಗೌಡ (ಮೇ ೨೦೧೯) (ಮುಂದುವರಿಯುವುದು)
ಪೂ. ರಮಾನಂದ ಗೌಡರವರ (ಅಣ್ಣನವರ) ಕೃತಜ್ಞತಾಭಾವ !
‘ಅಣ್ಣ ಮನೆಗೆ ಹೋದಾಗ ತೋಟಕ್ಕೆ ಹೋಗುತ್ತಾರೆ ಅವರು ಸಂತ ಭಕ್ತರಾಜ ಮಹಾರಾಜರ ದರ್ಶನವಾದ ಗಿಡದ ಬಳಿಗೆ ಹೋಗಿ ಪ್ರಾರ್ಥನೆಯನ್ನು ಮಾಡುತ್ತಾರೆ ಮತ್ತು ಗಿಡಗಳ ಹಾಗೂ ಪಶು-ಪಕ್ಷಿಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ‘ಗಿಡಗಳು ಮತ್ತು ಪಶು-ಪಕ್ಷಿಗಳು ನನಗೆ ಸಾಧನೆಯಲ್ಲಿ ಸಹಾಯ ಮಾಡಿದವು. ನನಗೆ ಅವು ಸಾಧಕರಂತಿವೆ ಎಂದೆನಿಸುತ್ತದೆ, ಎಂದು ಅಣ್ಣರವರು ಕೃತಜ್ಞತಾಭಾವದಿಂದ ಹೇಳುತ್ತಾರೆ. – ಕು. ರೂಪಾ ಗೌಡ (ನಾದಿನಿ) ಮಂಗಳೂರು, ಕರ್ನಾಟಕ. (೨.೪.೨೦೧೮)
ಪೂ. ರಮಾನಂದ ಗೌಡ ಇವರ ಅಮೂಲ್ಯ ವಿಚಾರಸಂಪತ್ತು
‘ಜೀವನದಲ್ಲಿನ ಪ್ರತಿಯೊಂದು ವಿಷಯವು ಭಗವಂತನಿಂದಾಗಿಯೇ ಆಗುತ್ತದೆ, ಎಂಬ ಶ್ರದ್ಧೆಯನ್ನಿಟ್ಟು ಪ್ರಯತ್ನಿಸಿದರೆ ಪ್ರಗತಿಯು ಶೀಘ್ರಗತಿಯಿಂದ ಆಗುವುದು
ನಮ್ಮಲ್ಲಿ ತಳಮಳವಿದ್ದರೆ, ಸಾಧನೆಯು ಚೆನ್ನಾಗಿ ಆಗುತ್ತದೆ. ತಳಮಳದಿಂದ ಸಾಧನೆಯನ್ನು ಮಾಡಿದರೆ ಅಡಚಣೆಗಳೂ ತಮ್ಮಿಂದ ತಾವೇ ದೂರವಾಗುತ್ತವೆ. ತಳಮಳವೇ ಮುಂದೆ ಶ್ರದ್ಧೆ ಯಲ್ಲಿ ರೂಪಾಂತರಗೊಳ್ಳುತ್ತದೆ. ಸಾಧನೆ ಮತ್ತು ಶ್ರೀಗುರುಗಳ ಬಗ್ಗೆ ಸತತವಾಗಿ ವಿಚಾರ ಮಾಡುವುದು, ಶ್ರೀಗುರುಗಳು ಹೇಳಿದ್ದನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ‘ಜೀವನದಲ್ಲಿನ ಪ್ರತಿಯೊಂದು ವಿಷಯವು ಭಗವಂತನಿಂದಾಗಿಯೇ ಆಗುತ್ತದೆ, ಎಂಬ ಶ್ರದ್ಧೆಯನ್ನಿಟ್ಟು ಮಾಡಿದರೆ ನಮ್ಮ ಪ್ರಗತಿಯು ಶೀಘ್ರಗತಿಯಿಂದಾಗುತ್ತದೆ.
ಅ. ಸ್ವಭಾವದೋಷಗಳೊಂದಿಗೆ ಸೇವೆಯನ್ನು ಮಾಡಿದರೆ ಸಾಧನೆಯಾಗುವುದಿಲ್ಲ. ಗುಣ ಮತ್ತು ಭಾವ ಇವುಗಳೊಂದಿಗೆ ಸೇವೆಯನ್ನು ಮಾಡಿದರೆ ಸಾಧನೆಯಾಗುತ್ತದೆ ಮತ್ತು ಆನಂದವೂ ಸಿಗುತ್ತದೆ.
ಆ. ನಮ್ಮ ಅಂತಿಮ ಧ್ಯೇಯವು ಈಶ್ವರ ಪ್ರಾಪ್ತಿಯಾಗಿದ್ದು ರಜ-ತಮ ಮತ್ತು ಮನಸ್ಸು ಹಾಗೂ ಬುದ್ಧಿ ಇವುಗಳು ನಮ್ಮನ್ನು ಆ ಧ್ಯೇಯದಿಂದ ದೂರ ಮಾಡಲು ಕಾರಣವಾಗುತ್ತಿರುತ್ತವೆ. ಅದಕ್ಕಾಗಿ ನಾವು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಬೇಕು. ಅದರಿಂದಾಗಿಯೇ ನಮ್ಮ ರಜ-ತಮಗಳಿಂದ ರಕ್ಷಣೆಯಾಗಿ ನಮ್ಮ ಮನಸ್ಸು ಮತ್ತು ಬುದ್ಧಿ ಸಾತ್ತ್ವಿಕವಾಗಲು ಸಾಧ್ಯವಾಗುತ್ತದೆ.
ಇ. ನಮಗೆ ಸಾಧನೆಯನ್ನು ಅಂರ್ತಮನದಿಂದ ಮಾಡುವುದಿದೆ. ಆ ರೀತಿ ಸಾಧನೆಯಾದರೆ, ಶ್ರೀ ಗುರುಗಳೇ ನಮ್ಮನ್ನು ಸಾಧನೆಯಲ್ಲಿ ಮುಂದೆ ಕರೆದೊಯ್ಯುತ್ತಾರೆ.
ಈ. ‘ಯಾರು ಸತತವಾಗಿ ಗುರುಸೇವೆ ಮತ್ತು ಗುರುಕಾರ್ಯವನ್ನು ‘ಇದು ನನ್ನ ಕಾರ್ಯವಾಗಿದೆ’, ಎಂದು ತಿಳಿದು ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಮಾಡುವರೋ, ಅವರಿಗಾಗಿ ಶ್ರೀ ಗುರುಗಳ ಶಕ್ತಿಯು ಸತತವಾಗಿ ಕಾರ್ಯನಿರತವಾಗಿರುತ್ತದೆ.
ಉ. ಸಾಧನೆಯಲ್ಲಿ ತಳಮಳವಿರಬೇಕು. ಸಂತ ಸಖುಬಾಯಿಯಂತೆ ಭಗವಂತ ಮತ್ತು ಶ್ರೀ ಗುರು ಇವರಿಗಾಗಿ ನಾವು ವ್ಯಾಕುಲರಾಗಬೇಕು. ಅದಕ್ಕಾಗಿ ಅವರಿಗೆ ನಮ್ಮ ಹೃದಯದಲ್ಲಿ ಸ್ಥಾನ ನೀಡಬೇಕು.
ಊ. ಶ್ರೀ ಗುರುಗಳ ಒಂದೊಂದು ಶಬ್ದವೂ ಅವರ ಸಂಕಲ್ಪವೇ ಆಗಿರುತ್ತದೆ; ಆದುದರಿಂದ ಅವರು ಹೇಳಿದ ಪ್ರತಿಯೊಂದು ವಿಷಯವನ್ನು ನಾವು ಆಚರಣೆಯಲ್ಲಿ ತರಬೇಕು. ಉತ್ತಮ ಶಿಷ್ಯನು ಯಾವಾಗಲೂ ಆಜ್ಞಾಪಾಲನೆಯನ್ನು ಮಾಡುತ್ತಿರುತ್ತಾನೆ.
ಏ. ನಮ್ಮ ಶ್ರೀಗುರುಗಳು ಸರ್ವಶ್ರೇಷ್ಠರಾಗಿರುವರು. ಅವರು ಸಾಧಕರಿಗೆ ಗುರುಮಂತ್ರವನ್ನು ನೀಡದೇ ‘ಸಂತ, ಸದ್ಗುರು ಮತ್ತು ಪರಾತ್ಪರ ಗುರು’ ಈ ಪದದ ವರೆಗೆ ತಲುಪಿಸಿದ್ದಾರೆ.
ಐ. ಕೃತಜ್ಞತೆಯನ್ನು ಹೆಚ್ಚಿಸಲು ಕರ್ತೃತ್ವವನ್ನು ಕಡಿಮೆ ಮಾಡಬೇಕು.
ಓ. ನಮ್ಮ ಶ್ರೀಗುರುಗಳು ಸಾಧಕರಿಗಾಗಿ ಹಗಲಿರುಳು ಕಷ್ಟವನ್ನು ಅನುಭವಿಸುತ್ತಾರೆ. ಅವರ ಬಗ್ಗೆ ಎಷ್ಟು ಕೃತಜ್ಞತಾಭಾವವಿದ್ದರೂ, ಅದು ಕಡಿಮೆಯೇ ಆಗಿದೆ.
ಔ. ತನು, ಮನ, ಧನ ಮತ್ತು ಸಮಯ ಇವುಗಳ ತ್ಯಾಗವನ್ನು ಯಾರು ಮಾಡುವರೋ, ಅವರು ಮಾಯೆಯ ಬಂಧನದಿಂದ ಬೇಗನೆ ಮುಕ್ತರಾಗುತ್ತಾರೆ.
ಅಂ. ಭಾವವು ಹೆಚ್ಚಾದರೆ ಮನಸ್ಸು ಮತ್ತು ಬುದ್ಧಿ ಸಾತ್ತ್ವಿಕವಾಗುತ್ತವೆ.
ಕ. ‘ಸೇವೆಯನ್ನು ಮಾಡುವಾಗ, ಭಗವಂತನು ಯಾವಾಗಲೂ ನಮ್ಮ ಜೊತೆಯಲ್ಲಿರುವನು’, ಎಂಬ ಭಾವವನ್ನಿಟ್ಟು ಸೇವೆಯನ್ನು ಮಾಡಬೇಕು.
ಖ. ಪ್ರಾಯಶ್ಚಿತ್ತದಿಂದ ಪಾಪಕ್ಷಾಲನೆಯಾಗುತ್ತದೆ ಮತ್ತು ಕ್ಷಮೆ ಯಾಚನೆಯಿಂದ ‘ಅಹಂ’ ನಷ್ಟವಾಗುತ್ತದೆ !