೧. ವ್ಯಷ್ಟಿ ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯವಿರುವುದು
‘ಸೌ. ಲಕ್ಷ್ಮೀದೇವಿ ಗವಿಸಿದ್ಧಪ್ಪಾ ಇವರು ೨೦೧೦ ನೇ ಇಸವಿಯಿಂದ ಸನಾತನ ಸಂಸ್ಥೆಯ ಮಾರ್ಗದರ್ಶದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಅಕ್ಕನವರು ಪ್ರತಿದಿನ ೨ ಗಂಟೆ ಕುಳಿತು ನಾಮಜಪ ಮಾಡುತ್ತಾರೆ, ಹಾಗೆಯೇ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಸಾಧಕನಿಗೆ ತಾವೇ ಸಂಪರ್ಕಿಸಿ ವರದಿಯನ್ನು ಕೊಡುತ್ತಾರೆ.
೨. ಯಾವುದೇ ಪರಿಸ್ಥಿತಿಯಲ್ಲಿ ಸಕಾರಾತ್ಮಕವಾಗಿರುವುದು
ಲಕ್ಷ್ಮೀ ಅಕ್ಕನವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಮೊದಲು ಅವರೆಲ್ಲರೂ ಒಟ್ಟಿಗೆ ಇರುತ್ತಿದ್ದರು. ಈಗ ಅವರಿಬ್ಬರೂ ಬೇರೆ ಬೇರೆ ಇದ್ದಾರೆ. ಮಕ್ಕಳು ಬೇರೆ ಬೇರೆ ಇರತೊಡಗಿದಾಗ, ಆರಂಭದಲ್ಲಿ ಅಕ್ಕನವರಿಗೆ ತುಂಬಾ ಕೆಟ್ಟದೆನಿಸಿತು; ಆದರೆ ಈಗ ಅವರಿಗೆ ಏನೂ ಅನಿಸುವುದಿಲ್ಲ. ‘ಮಕ್ಕಳು ಬೇರೆಯಾದದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ನನಗೆ ಸೇವೆ ಹಾಗೂ ವ್ಯಷ್ಟಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪರಾತ್ಪರ ಗುರುದೇವರು ನನ್ನಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ ಹಾಗೂ ನನ್ನನ್ನು ಮಾಯೆಯಿಂದ ಮುಕ್ತ ಮಾಡುತ್ತಿದ್ದಾರೆ’, ಎಂಬ ಸಕಾರಾತ್ಮಕ ವಿಚಾರವನ್ನು ಮಾಡುತ್ತಾರೆ.
೩. ತ್ಯಾಗ ವೃತ್ತಿ ಹಾಗೂ ಮಕ್ಕಳ ಮೇಲೆಯೂ ಅರ್ಪಣೆಯ ಮಹತ್ವವನ್ನು ಬಿಂಬಿಸುವುದು
ಅಕ್ಕನವರ ಗಂಡು ಮಕ್ಕಳು ಕೆಲವೊಮ್ಮೆ ಅವರಿಗೆ ತಮ್ಮ ವ್ಯವಹಾರದಲ್ಲಾದ ಲಾಭದ ಬಗ್ಗೆ ಹೇಳುತ್ತಾರೆ. ಆಗ ಅಕ್ಕನವರು, ಅವರಿಗೆ ಏನನ್ನೂ ಕೇಳದೇ ಅವರೆದುರು ಅರ್ಪಣೆ ಪೆಟ್ಟಿಗೆಯನ್ನಿಟ್ಟು ‘ನಿಮಗೆ ಎಷ್ಟಾದರೂ ಸಿಗಲಿ; ಆದರೆ ನಿಮಗೆ ಸಾಧ್ಯವಿದ್ದಷ್ಟು ಹಣವನ್ನು ಈ ಪೆಟ್ಟಿಗೆಯಲ್ಲಿ ಹಾಕಿರಿ’, ಎಂದು ಹೇಳುತ್ತಾರೆ.
೪. ಸೇವೆಯ ತಳಮಳ
ಲಕ್ಷ್ಮೀ ಅಕ್ಕನವರಿಗೆ ಅವರ ಯಜಮಾನರು ಸಾಧನೆಗಾಗಿ ಹಾಗೂ ಸೇವೆ ಮಾಡಲು ಬಹಳ ವಿರೋಧಿಸುತ್ತಾರೆ; ಆದರೆ ಅಕ್ಕವನರು ಅದನ್ನು ಲೆಕ್ಕಿಸದೇ ಸೇವೆ ಮಾಡುತ್ತಾರೆ. ‘ಪ್ರತಿದಿನ ೨ ಗಂಟೆಯಾದರೂ ಸೇವೆ ಆಗಬೇಕು’, ಎಂದು ಅವರಿಗೆ ಅನಿಸುತ್ತದೆ. ವಿಶೇಷಾಂಕವನ್ನು ವಿತರಿಸುವುದು, ಜಾಹೀರಾತಿನ ಸೇವೆ ಮಾಡುವುದು, ಸಾತ್ತ್ವಿಕ ಉತ್ಪಾದನೆಗಳ ವಿತರಣೆ ಮಾಡುವುದು ಮುಂತಾದ ಸೇವೆ ಮಾಡುವುದರಲ್ಲಿ ಅಕ್ಕನ ತುಡಿತವಿರುತ್ತದೆ. ಅವರು ಬಿಸಿಲು-ಮಳೆಯೆನ್ನದೇ ಸೇವೆಗೆ ಹೋಗುತ್ತಾರೆ. ಸೇವೆಯಾಗದಿದ್ದರೆ, ಅವರಿಗೆ ದುಃಖವಾಗುತ್ತದೆ. ಅವರು ಮನಃಪೂರ್ವಕ ಹಾಗೂ ತತ್ಪರತೆಯಿಂದ ಸೇವೆಯನ್ನು ಮಾಡುತ್ತಾರೆ.
೫. ಸಾಧಕರ ಬಗ್ಗೆ ಪ್ರೇಮಭಾವ
ಅಕ್ಕನವರು ಸಹಸಾಧಕರಿಗೆ ಸೇವೆಯಲ್ಲಿ ಸಹಾಯ ಮಾಡುತ್ತಾರೆ, ಹಾಗೆಯೇ ಅವರ ಬಹಳ ಕಾಳಜಿಯನ್ನೂ ವಹಿಸುತ್ತಾರೆ. ಅವರು ಸಾಧಕರಿಗೆ ‘ಸೇವೆಯ ಬಗ್ಗೆ ಒತ್ತಡ ಮಾಡಿಕೊಂಡು ಮಾಡಬೇಡಿರಿ. ಎಲ್ಲವನ್ನೂ ಪರಾತ್ಪರ ಗುರುದೇವರೇ ಮಾಡಿಸಿಕೊಳ್ಳುವವರಿದ್ದಾರೆ’, ಎಂದು ಹೇಳಿ ಸ್ಫೂರ್ತಿಯನ್ನೂ ನೀಡುತ್ತಾರೆ.
೬. ಅಹಂ ಕಡಿಮೆ
ಲಕ್ಷ್ಮೀ ಅಕ್ಕನವರು ಶ್ರೀಮಂತ ಕುಟುಂಬದವರಾಗಿದ್ದರೂ ಅವರಲ್ಲಿ ಶ್ರೀಮಂತಿಕೆಯ ಅಹಂ ಇಲ್ಲ. ಅವರು ಸಮಾಜಕ್ಕೆ ಹೋಗಿ ಅರ್ಪಣೆ ಪಡೆಯುವ ಸೇವೆಯನ್ನು ಮಾಡುತ್ತಾರೆ.
೭. ಗುರುದೇವರ ಬಗ್ಗೆ ಭಾವ
ಯಾವುದೇ ಸೇವೆಯನ್ನು ಮಾಡುವಾಗ ಅಕ್ಕನವರ ‘ನಾನು ಮಾಡುತ್ತೇನೆ’, ಎಂಬ ವಿಚಾರವಿರುವುದಿಲ್ಲ, ಆದರೆ ‘ಎಲ್ಲವನ್ನೂ ಪರಾತ್ಪರ ಗುರುದೇವರೇ ಮಾಡಿಸಿಕೊಳ್ಳುತ್ತಾರೆ’, ಎಂಬ ಭಾವವಿರುತ್ತದೆ. ಪ್ರತಿದಿನ ರಾತ್ರಿ ಮಲಗುವಾಗ ಅಕ್ಕನವರು ಪರಾತ್ಪರ ಗುರುದೇವರಿಗೆ, ‘ನನಗೆ ಬೇಗನೆ ದರ್ಶನ ನೀಡಿರಿ. ನನ್ನನ್ನು ನಿಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿ. ನಿಮ್ಮ ಚರಣವೇ ನನ್ನ ಸರ್ವಸ್ವವಾಗಿದೆ’, ಎಂದು ಆತ್ಮನಿವೇದನೆ ಮಾಡುತ್ತಾರೆ.
೮. ಅನುಭೂತಿ – ಗುರುದೇವರಿಗೆ ಪ್ರಾರ್ಥನೆ ಮಾಡಿದಾಗ ಎಳನೀರು ಸಿಗುವುದು
ಲಕ್ಷ್ಮೀ ಅಕ್ಕನವರಿಗೆ ಉಷ್ಣತೆಯ ತೊಂದರೆಯಿರುವುದರಿಂದ ಅವರಿಗೆ ಪ್ರತಿದಿನ ಎಳನೀರು ಕುಡಿಯಬೇಕಾಗುತ್ತದೆ. ಕೆಲವೊಮ್ಮೆ ಅವರಿಗೆ ಎಳನೀರು ಸಿಗುವುದಿಲ್ಲ. ಆಗ ಅವರು ಗುರುದೇವರಿಗೆ, ‘ನೀವೇ ನನಗೆ ಎಳನೀರು ಕೊಡಿರಿ’, ಎಂದು ಹೇಳುತ್ತಾರೆ. ಆಗ ಯಾರದೋ ಮೂಲಕ ಅವರ ಮನೆಗೆ ಎಳನೀರು ಬರುತ್ತದೆ. ಇಂತಹ ಅನುಭೂತಿಯು ಅವರಿಗೆ ಅನೇಕ ಬಾರಿ ಬಂದಿದೆ.
ಮೇಲಿನ ಎಲ್ಲ ಗುಣಗಳೊಂದಿಗೆ ಲಕ್ಷ್ಮೀ ಅಕ್ಕನವರಲ್ಲಿ ಕಲಿಯುವ ಸ್ಥಿತಿಯಲ್ಲಿರುವುದು, ಆಜ್ಞಾಪಾಲನೆ ಮಾಡುವುದು, ಇತರರ ವಿಚಾರ ಮಾಡುವುದು, ತಮ್ಮ ಕಡೆಗೆ ಕಡಿಮೆತನ ತೆಗೆದುಕೊಳ್ಳುವುದು, ಇತರರಿಗೆ ಸಹಾಯ ಮಾಡುವುದು ಹಾಗೂ ಸ್ವೀಕಾರ ಮಾಡುವ ವೃತ್ತಿ ಹಾಗೂ ಅಂತರ್ಮುಖತೆ ಮುಂತಾದ ಗುಣಗಳೂ ಇವೆ.’ – ಸೌ. ಸುಜಾತಾ ಹುಳಿಪಲ್ಲೇದ, ರಾಯಚೂರ, ಬಾಗಲಕೋಟ. (೫.೬.೨೦೨೦)