ಪೂ. ರಮಾನಂದ ಗೌಡ ಇವರ ಅಮೂಲ್ಯ ವಿಚಾರಸಂಪತ್ತು

ಪೂ. ರಮಾನಂದ ಗೌಡ

‘ಜೀವನದಲ್ಲಿನ ಪ್ರತಿಯೊಂದು ವಿಷಯವು ಭಗವಂತನಿಂದಾಗಿಯೇ ಆಗುತ್ತದೆ, ಎಂಬ ಶ್ರದ್ಧೆಯನ್ನಿಟ್ಟು ಪ್ರಯತ್ನಿಸಿದರೆ ಪ್ರಗತಿಯು ಶೀಘ್ರಗತಿಯಿಂದ ಆಗುವುದು

ನಮ್ಮಲ್ಲಿ ತಳಮಳವಿದ್ದರೆ, ಸಾಧನೆಯು ಚೆನ್ನಾಗಿ ಆಗುತ್ತದೆ. ತಳಮಳದಿಂದ ಸಾಧನೆಯನ್ನು ಮಾಡಿದರೆ ಅಡಚಣೆಗಳೂ ತಮ್ಮಿಂದ ತಾವೇ ದೂರವಾಗುತ್ತವೆ. ತಳಮಳವೇ ಮುಂದೆ ಶ್ರದ್ಧೆ ಯಲ್ಲಿ ರೂಪಾಂತರಗೊಳ್ಳುತ್ತದೆ. ಸಾಧನೆ ಮತ್ತು ಶ್ರೀಗುರುಗಳ ಬಗ್ಗೆ ಸತತವಾಗಿ ವಿಚಾರ ಮಾಡುವುದು, ಶ್ರೀಗುರುಗಳು ಹೇಳಿದ್ದನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ‘ಜೀವನದಲ್ಲಿನ ಪ್ರತಿಯೊಂದು ವಿಷಯವು ಭಗವಂತನಿಂದಾಗಿಯೇ ಆಗುತ್ತದೆ, ಎಂಬ ಶ್ರದ್ಧೆಯನ್ನಿಟ್ಟು ಮಾಡಿದರೆ ನಮ್ಮ ಪ್ರಗತಿಯು ಶೀಘ್ರಗತಿಯಿಂದಾಗುತ್ತದೆ.

ಅ. ಸ್ವಭಾವದೋಷಗಳೊಂದಿಗೆ ಸೇವೆಯನ್ನು ಮಾಡಿದರೆ ಸಾಧನೆಯಾಗುವುದಿಲ್ಲ. ಗುಣ ಮತ್ತು ಭಾವ ಇವುಗಳೊಂದಿಗೆ ಸೇವೆಯನ್ನು ಮಾಡಿದರೆ ಸಾಧನೆಯಾಗುತ್ತದೆ ಮತ್ತು ಆನಂದವೂ ಸಿಗುತ್ತದೆ.

ಆ. ನಮ್ಮ ಅಂತಿಮ ಧ್ಯೇಯವು ಈಶ್ವರ ಪ್ರಾಪ್ತಿಯಾಗಿದ್ದು ರಜ-ತಮ ಮತ್ತು ಮನಸ್ಸು ಹಾಗೂ ಬುದ್ಧಿ ಇವುಗಳು ನಮ್ಮನ್ನು ಆ ಧ್ಯೇಯದಿಂದ ದೂರ ಮಾಡಲು ಕಾರಣವಾಗುತ್ತಿರುತ್ತವೆ. ಅದಕ್ಕಾಗಿ ನಾವು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಬೇಕು. ಅದರಿಂದಾಗಿಯೇ ನಮ್ಮ ರಜ-ತಮಗಳಿಂದ ರಕ್ಷಣೆಯಾಗಿ ನಮ್ಮ ಮನಸ್ಸು ಮತ್ತು ಬುದ್ಧಿ ಸಾತ್ತ್ವಿಕವಾಗಲು ಸಾಧ್ಯವಾಗುತ್ತದೆ.

ಇ. ನಮಗೆ ಸಾಧನೆಯನ್ನು ಅಂರ್ತಮನದಿಂದ ಮಾಡುವುದಿದೆ. ಆ ರೀತಿ ಸಾಧನೆಯಾದರೆ, ಶ್ರೀ ಗುರುಗಳೇ ನಮ್ಮನ್ನು ಸಾಧನೆಯಲ್ಲಿ ಮುಂದೆ ಕರೆದೊಯ್ಯುತ್ತಾರೆ.

ಈ. ‘ಯಾರು ಸತತವಾಗಿ ಗುರುಸೇವೆ ಮತ್ತು ಗುರುಕಾರ್ಯವನ್ನು ‘ಇದು ನನ್ನ ಕಾರ್ಯವಾಗಿದೆ’, ಎಂದು ತಿಳಿದು ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಮಾಡುವರೋ, ಅವರಿಗಾಗಿ ಶ್ರೀ ಗುರುಗಳ ಶಕ್ತಿಯು ಸತತವಾಗಿ ಕಾರ್ಯನಿರತವಾಗಿರುತ್ತದೆ.

ಉ. ಸಾಧನೆಯಲ್ಲಿ ತಳಮಳವಿರಬೇಕು. ಸಂತ ಸಖುಬಾಯಿಯಂತೆ ಭಗವಂತ ಮತ್ತು ಶ್ರೀ ಗುರು ಇವರಿಗಾಗಿ ನಾವು ವ್ಯಾಕುಲರಾಗಬೇಕು. ಅದಕ್ಕಾಗಿ ಅವರಿಗೆ ನಮ್ಮ ಹೃದಯದಲ್ಲಿ ಸ್ಥಾನ ನೀಡಬೇಕು.

ಊ. ಶ್ರೀ ಗುರುಗಳ ಒಂದೊಂದು ಶಬ್ದವೂ ಅವರ ಸಂಕಲ್ಪವೇ ಆಗಿರುತ್ತದೆ; ಆದುದರಿಂದ ಅವರು ಹೇಳಿದ ಪ್ರತಿಯೊಂದು ವಿಷಯವನ್ನು ನಾವು ಆಚರಣೆಯಲ್ಲಿ ತರಬೇಕು. ಉತ್ತಮ ಶಿಷ್ಯನು ಯಾವಾಗಲೂ ಆಜ್ಞಾಪಾಲನೆಯನ್ನು ಮಾಡುತ್ತಿರುತ್ತಾನೆ.

ಏ. ನಮ್ಮ ಶ್ರೀಗುರುಗಳು ಸರ್ವಶ್ರೇಷ್ಠರಾಗಿರುವರು. ಅವರು ಸಾಧಕರಿಗೆ ಗುರುಮಂತ್ರವನ್ನು ನೀಡದೇ ‘ಸಂತ, ಸದ್ಗುರು ಮತ್ತು ಪರಾತ್ಪರ ಗುರು’ ಈ ಪದದ ವರೆಗೆ ತಲುಪಿಸಿದ್ದಾರೆ.

ಐ. ಕೃತಜ್ಞತೆಯನ್ನು ಹೆಚ್ಚಿಸಲು ಕರ್ತೃತ್ವವನ್ನು ಕಡಿಮೆ ಮಾಡಬೇಕು.

ಓ. ನಮ್ಮ ಶ್ರೀಗುರುಗಳು ಸಾಧಕರಿಗಾಗಿ ಹಗಲಿರುಳು ಕಷ್ಟವನ್ನು ಅನುಭವಿಸುತ್ತಾರೆ. ಅವರ ಬಗ್ಗೆ ಎಷ್ಟು ಕೃತಜ್ಞತಾಭಾವವಿದ್ದರೂ, ಅದು ಕಡಿಮೆಯೇ ಆಗಿದೆ.

ಔ. ತನು, ಮನ, ಧನ ಮತ್ತು ಸಮಯ ಇವುಗಳ ತ್ಯಾಗವನ್ನು ಯಾರು ಮಾಡುವರೋ, ಅವರು ಮಾಯೆಯ ಬಂಧನದಿಂದ ಬೇಗನೆ ಮುಕ್ತರಾಗುತ್ತಾರೆ.

ಅಂ. ಭಾವವು ಹೆಚ್ಚಾದರೆ ಮನಸ್ಸು ಮತ್ತು ಬುದ್ಧಿ ಸಾತ್ತ್ವಿಕವಾಗುತ್ತವೆ.

ಕ. ‘ಸೇವೆಯನ್ನು ಮಾಡುವಾಗ, ಭಗವಂತನು ಯಾವಾಗಲೂ ನಮ್ಮ ಜೊತೆಯಲ್ಲಿರುವನು’, ಎಂಬ ಭಾವವನ್ನಿಟ್ಟು ಸೇವೆಯನ್ನು ಮಾಡಬೇಕು.

ಖ. ಪ್ರಾಯಶ್ಚಿತ್ತದಿಂದ ಪಾಪಕ್ಷಾಲನೆಯಾಗುತ್ತದೆ ಮತ್ತು ಕ್ಷಮೆ ಯಾಚನೆಯಿಂದ ‘ಅಹಂ’ ನಷ್ಟವಾಗುತ್ತದೆ !