೬. ಸರ್ವಜ್ಞತೆ
೬ ಅ. ಪರಾತ್ಪರ ಗುರುದೇವರು ಸೇವೆಗಾಗಿ ಬಂದಿರುವ ದಂಪತಿಗಳಿಗೆ ರಾತ್ರಿ ಊಟ ಮಾಡಿ ಮನೆಗೆ ಹೋಗಲು ಹೇಳುವುದು, ದಂಪತಿಗಳು ‘ಮನೆಯಲ್ಲಿ ಅಡುಗೆ ಮಾಡಿದ್ದೇವೆ’, ಎಂದು ಹೇಳುವುದು; ಆದರೆ ಮನೆಗೆ ಹೋದಾಗ ಅವರಿಗೆ ಆಹಾರಪದಾರ್ಥಗಳು ಕೆಟ್ಟು ಹೋಗಿರುವುದು ಗಮನಕ್ಕೆ ಬರುವುದು : ಓರ್ವ ಸಾಧಕರು ತಮ್ಮ ಪತ್ನಿಯೊಂದಿಗೆ ಸೇವೆಯನ್ನು ಮಾಡಲು ಸೇವಾಕೇಂದ್ರಕ್ಕೆ ಬಂದಿದ್ದರು. ಅವರು ಸೇವೆಯನ್ನು ಪೂರ್ಣಗೊಳಿಸಿ ಮನೆಗೆ ಹೋಗಲು ತಯಾರಾದಾಗ ಪರಾತ್ಪರ ಗುರುದೇವರು ಅವರಿಗೆ ಊಟ ಮಾಡಿ ಹೋಗಲು ಹೇಳಿದರು. ಆಗ ಆ ದಂಪತಿಗಳು, “ಮನೆಯಲ್ಲಿ ಅಡುಗೆಯನ್ನು ಮಾಡಿಟ್ಟು ಬಂದಿದ್ದೇವೆ. ನಾವು ಮನೆಗೆ ಹೋಗಿ ಊಟ ಮಾಡುತ್ತೇವೆ”, ಎಂದು ಹೇಳಿದರು. ಅವರು ಮನೆಗೆ ಹೋಗಿ ನೋಡಿದಾಗ, ಮನೆಯಲ್ಲಿನ ಆಹಾರಪದಾರ್ಥಗಳು ಹಾಳಾಗಿದ್ದವು.
೬ ಆ. ಓರ್ವ ಸಾಧಕನ ಸಹೋದರಿಯು ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದುದರಿಂದ ಅವಳನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಭರ್ತಿ ಮಾಡಿದ ಬಗ್ಗೆ ತಿಳಿದಾಗ ಪರಾತ್ಪರ ಗುರುದೇವರು ಸಾಧಕನಿಗೆ ‘ಕಾಳಜಿ ಮಾಡುವ ಅಗತ್ಯವಿಲ್ಲ’, ಎಂದು ಹೇಳುವುದು ಮತ್ತು ಕೆಲವು ದಿನಗಳ ನಂತರ ಸಹೋದರಿಯ ಆರೋಗ್ಯ ಸರಿಯಾಗುವುದು : ಓರ್ವ ಸಾಧಕರು ಗುರುಪೂರ್ಣಿಮೆ ನಿಮಿತ್ತ ಪರಾತ್ಪರ ಗುರುದೇವರೊಂದಿಗೆ ಹೊರ ಊರಿಗೆ ಹೋದಾಗ ಅವರ ಸಹೋದರಿಯು ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿರುವುದಾಗಿ ಮತ್ತು ‘ಅವಳ ಸ್ಥಿತಿಯು ಗಂಭೀರವಾಗಿದ್ದು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ’, ಎಂದು ಅವರಿಗೆ ತಿಳಿಯಿತು. ಅವರು ತಕ್ಷಣ ಈ ಬಗ್ಗೆ ಪರಾತ್ಪರ ಗುರುದೇವರಿಗೆ ಹೇಳಿದರು. ಆಗ ಅವರು, “ಯಾವುದೇ ಕಾಳಜಿ ಮಾಡುವ ಆವಶ್ಯಕತೆ ಇಲ್ಲ”, ಎಂದು ಹೇಳಿದರು. ಕೆಲವು ದಿನಗಳ ನಂತರ ಸಾಧಕರ ಸಹೋದರಿಯು ಸಂಪೂರ್ಣ ಗುಣಮುಖಳಾಗಿ ಮನೆಗೆ ಬಂದಳು.
೭. ಸಾಧಕರ ಮನಸ್ಸಿನ ಮೇಲೆ ಆಜ್ಞಾಪಾಲನೆಯ ಮಹತ್ವವನ್ನು ಬಿಂಬಿಸುವುದು
ಆರಂಭದಲ್ಲಿ ಪರಾತ್ಪರ ಗುರುದೇವರು ತಾವೇ ಸ್ವತಃ ಬಹಿರಂಗ ಸಭೆಗಳನ್ನು ತೆಗೆದುಕೊಳ್ಳುತ್ತಿದ್ದರು. ಒಂದು ಬಹಿರಂಗ ಸಭೆಯ ಸಮಯದಲ್ಲಿ ಅವರು ಓರ್ವ ಸಾಧಕನಿಗೆ, “ನೀವು ವೇದಿಕೆಯ ಪಕ್ಕಕ್ಕೆ ನಿಂತುಕೊಳ್ಳಿ. ನಾನು ಪ್ರವಚನದ ಸಮಯದಲ್ಲಿ ನಿಮ್ಮನ್ನು ಕರೆಯುವೆನು. ಆಗ ನೀವು ವೇದಿಕೆಗೆ ಬನ್ನಿರಿ”, ಎಂದು ಹೇಳಿದರು. (ಆ ಸಮಯದಲ್ಲಿ ಅವರು ಸಭೆಯ ಆರಂಭದಲ್ಲಿ ಕ್ರಿಯಾಶೀಲ ಸಾಧಕರನ್ನು ವೇದಿಕೆಯ ಮೇಲೆ ಕರೆದು ಉಪಸ್ಥಿತರಿಗೆ ಅವರ ಪರಿಚಯವನ್ನು ಮಾಡಿಕೊಡುತ್ತಿದ್ದರು.) ಆ ಸಾಧಕರು ಹೇಳಿದಂತೆ ನಿಂತು ಕೊಂಡು ಕರೆಯುವ ದಾರಿಯನ್ನು ನೋಡುತ್ತಿದ್ದರು. ಸಭೆ ಮುಗಿಯಲು ೧೦ ನಿಮಿಷಗಳಿದ್ದಾಗ ಸಾಧಕರು, ‘ಈಗ ಪರಾತ್ಪರ ಗುರುದೇವರು ನನ್ನನ್ನು ಕರೆಯುವುದಿಲ್ಲ’, ಎಂದು ವಿಚಾರ ಮಾಡಿ ಯಾವುದೋ ಒಂದು ಕೆಲಸಕ್ಕಾಗಿ ಹೊರಗೆ ಹೋದರು ಮತ್ತು ಅದೇ ಕ್ಷಣ ಪರಾತ್ಪರ ಗುರುದೇವರು ಅವನನ್ನು ಕರೆದರು. ಈ ಪ್ರಸಂಗದಿಂದ ಅವರು ಸಾಧಕರಿಗೆ ಆಜ್ಞಾಪಾಲನೆಯ ಮಹತ್ವವನ್ನು ಗಮನಕ್ಕೆ ತಂದು ಕೊಟ್ಟರು.
೮. ವಸ್ತುವನ್ನು ಸಂಪೂರ್ಣವಾಗಿ ಬಳಸಲು ಕಲಿಸುವುದು
ನಾನು ಕೇರಳಕ್ಕೆ ಪ್ರಸಾರಕ್ಕಾಗಿ ಹೋಗುವವನಿದ್ದೆನು. ನಮ್ಮ ಮನೆಯಲ್ಲಿ ಒಂದು ಬಹಳ ದೊಡ್ಡ ಮಂಚವಿತ್ತು. ಎರಡನೇ ಮಹಡಿಯಲ್ಲಿರುವ ನಮ್ಮ ಮನೆಗೆ ಈ ಮಂಚವನ್ನು ತರುವಾಗ ಬಹಳ ತೊಂದರೆಯಾಗಿತ್ತು. ಈಗ ಅದನ್ನು ಅಲ್ಲಿಂದ ಹೊರಗೆ ತೆಗೆಯುವುದು ಅತ್ಯಂತ ಕಠಿಣವಾಗಿತ್ತು. ಆದುದರಿಂದ ನಾವು, ‘ಆ ಮಂಚನ್ನು ಇಲ್ಲಿಯೇ ಇಡಬೇಕು’, ಎಂದು ವಿಚಾರ ಮಾಡಿದೆವು. ಈ ಬಗ್ಗೆ ನಾವು ಪರಾತ್ಪರ ಗುರುದೇವರಿಗೆ ಹೇಳಿದಾಗ ಅವರು, “ಆ ಮಂಚವನ್ನು ಮಧ್ಯದಲ್ಲಿ ಕತ್ತರಿಸಿರಿ ಮತ್ತು ಎರಡು ಭಾಗ ಮಾಡಿ ಬಾಗಿಲಿನಿಂದ ಹೊರಗೆ ತೆಗೆಯಿರಿ”, ಎಂದು ಹೇಳಿದರು. ಅವರು ಹೇಳಿದಂತೆ ಮಾಡಿದಾಗ ನಮಗೆ ಮಂಚವನ್ನು ಸಹಜವಾಗಿ ಹೊರಗೆ ತೆಗೆಯಲು ಸಾಧ್ಯವಾಯಿತು ಮತ್ತು ಎತ್ತಲೂ ಸುಲಭವಾಯಿತು. ಇದರಿಂದ ಪರಾತ್ಪರ ಗುರುದೇವರು, ‘ಯೋಗ್ಯ ವಿಚಾರವನ್ನು ಹೇಗೆ ಮಾಡಬೇಕು ಮತ್ತು ಸಮಸ್ಯೆಯನ್ನು ಬಿಡಿಸುವಾಗ ಅದರಿಂದ ನಮ್ಮ ಸಾಧನೆ ಹೇಗಿರಬೇಕು’, ಎಂದು ಕಲಿಸಿದರು.
೯. ಗುರುಗಳ ಬಗ್ಗೆ ಅಪಾರ ಭಾವ
೯ ಅ. ಪ.ಪೂ ಬಾಬಾರವರ ದರ್ಶನಕ್ಕೆ ಬರುವ ಅವರ ಭಕ್ತರಿಗೆ ಮತ್ತು ಸಾಧಕರಿಗೆ ‘ಕಲ್ಲುಗಳು ಚುಚ್ಚುಬಾರದೆಂದು’, ರಾತ್ರಿ ೨ ಗಂಟೆಗೆ ಪರಾತ್ಪರ ಗುರು ಡಾಕ್ಟರರು ಕಾರ್ಯಸ್ಥಳಕ್ಕೆ ಬಂದು ಮಾರ್ಗದಲ್ಲಿನ ಕಲ್ಲುಗಳನ್ನು ತೆಗೆಯುವುದು : ಪ.ಪೂ. ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ಅಮೃತ ಮಹೋತ್ಸವದ ನಿಮಿತ್ತ ಸಾಧಕರು ತಡರಾತ್ರಿಯವರೆಗೆ ಸೇವೆಯನ್ನು ಮಾಡುತ್ತಿದ್ದರು. ಮಹೋತ್ಸವದ ಸೇವೆಯು ವೇಗದಿಂದ ನಡೆದಿತ್ತು. ಒಂದು ಸಲ ನಾನು ರಾತ್ರಿ ೨ ಗಂಟೆಗೆ ಸೇವೆಯನ್ನು ಮಾಡುತ್ತಿದ್ದೆನು. ಆ ಸಮಯದಲ್ಲಿ ನನಗೆ, ‘ಪರಾತ್ಪರ ಗುರುದೇವರು ಅಮೃತ ಮಹೋತ್ಸವದ ಸ್ಥಳಕ್ಕೆ ಬಂದು ಮಾರ್ಗದಲ್ಲಿರುವ ಚಿಕ್ಕ ಕಲ್ಲುಗಳನ್ನು ತಾವೇ ಎತ್ತಿ ಬದಿಗೆ ಎಸೆಯುವುದು ಮತ್ತು ‘ಮಾರ್ಗವು ಸ್ವಚ್ಛ ಇದೆಯಲ್ಲ ?’, ಎಂದು ಖಚಿತ ಪಡಿಸಿಕೊಳ್ಳುವುದು ಕಾಣಿಸಿತು. ‘ಪ.ಪೂ.ಬಾಬಾರವರ ದರ್ಶನಕ್ಕೆ ಬರುವ ಅವರ ಭಕ್ತರು, ಸಾಧಕರಿಗೆ ಕಲ್ಲುಗಳು ಚುಚ್ಚಬಾರದೆಂದು’, ಅವರು ರಾತ್ರಿ ೨ ಗಂಟೆಗೆ ಸೇವೆಯನ್ನು ಮಾಡುತ್ತಿದ್ದರು.
೯ ಆ. ಪರಾತ್ಪರ ಗುರುದೇವರು ಬರೆದ ‘ಸಂತ ಭಕ್ತರಾಜ ಮಹಾರಾಜರ ಚರಿತ್ರೆ’, ಎಂಬ ಗ್ರಂಥವನ್ನು ಓದುವಾಗ ‘ಅವರ ಜೀವನಚಿತ್ರವನ್ನು ನೋಡುತ್ತಿರುವೆನು’, ಎಂದೆನಿಸುವುದು : ನಮ್ಮಂತಹ ಸಾಮಾನ್ಯ ಮನುಷ್ಯರಿಗೆ ಪರಾತ್ಪರ ಗುರುದೇವರು ಬರೆದ ಗ್ರಂಥಗಳ ವರ್ಣನೆ ಮಾಡಲು ಸಾಧ್ಯವಿಲ್ಲ. ವಿಶೇಷವೆಂದರೆ ಅವರು ತಾವೇ ‘ಸಂತ ಭಕ್ತರಾಜ ಮಹಾರಾಜರ ಚರಿತ್ರೆ’ಯನ್ನು ಬರೆದಿದ್ದಾರೆ. ಈ ಗ್ರಂಥವನ್ನು ಓದುವಾಗ ಪ್ರತಿಯೊಂದು ಸಲ, ‘ಇವೆಲ್ಲ ಘಟನೆಗಳು ನಮ್ಮ ಕಣ್ಣೆದುರು ಘಟಿಸುತ್ತಿವೆ’, ಎಂದೆನಿಸುತ್ತದೆ. ಅವರು ಸಂತ ಭಕ್ತರಾಜ ಮಹಾರಾಜರು ಎಲ್ಲ ಸಾಧಕರಿಗೆ ಪ್ರತ್ಯಕ್ಷ ದೃಶ್ಯ ಸ್ವರೂಪದಲ್ಲಿ ಕಾಣಿಸಬೇಕು, ಎಂಬ ಪದ್ಧತಿಯಲ್ಲಿ ಎಲ್ಲವನ್ನೂ ಬರೆದಿದ್ದಾರೆ. ನಾವು ಈ ಗ್ರಂಥವನ್ನು ಎಷ್ಟು ಸಲ ಓದಿದರೂ ಪ್ರತಿ ಸಲ ‘ಬಾಬಾರವರ ಜೀವನಚಿತ್ರವನ್ನು ನೋಡುತ್ತಿದ್ದೇವೆ’, ಎಂದೆನಿಸುತ್ತದೆ. ಈ ಚೈತನ್ಯಮಯ ಗ್ರಂಥದ ಮಾಧ್ಯಮದಿಂದ ಬಾಬಾರವರ ಅಸ್ತಿತ್ವದ ಅರಿವಾಗುತ್ತದೆ.
೧೦. ಪರಾತ್ಪರ ಗುರು ಡಾಕ್ಟರರ ಗುರುಸೇವೆಯ ಬಗ್ಗೆ ಮಾತನಾಡುವುದು ನೆನಪಾದಾಗ ‘ಸಾಧಕರು ಪರಾತ್ಪರ ಗುರು ಡಾಕ್ಟರರ ಸೇವೆಯನ್ನು ಮಾಡಬಹುದಾದ ಕ್ಷಮತೆ ಯಾರಲ್ಲಿಯೂ ಇಲ್ಲ’, ಎಂಬ ಸತ್ಯವು ತೀವ್ರವಾಗಿ ಅರಿವಾಗುವುದು
‘ನಾವು ಪರಾತ್ಪರ ಗುರುದೇವರ ಸೇವೆಯನ್ನು ಮಾಡಬಹುದು’, ಎಂಬಂತಹ ಕ್ಷಮತೆಯೇ ನಮ್ಮಲಿಲ್ಲ. ಒಂದು ಸಲ ಪ.ಪೂ. ಗುರುದೇವರು ಓರ್ವ ಸಾಧಕನೊಂದಿಗೆ ‘ನಾವೆಲ್ಲರೂ ಪ.ಪೂ. ಬಾಬಾರವರ ಸೇವೆಯನ್ನು ಹೇಗೆ ಮಾಡುತ್ತಿದ್ದೆವು ?’ ಎಂಬುದರ ಬಗ್ಗೆ ಮಾತನಾಡುತ್ತಿದ್ದರು. ಆಗ ಅವರು, “ಪ.ಪೂ. ಬಾಬಾರವರ ಸೇವೆಯನ್ನು ಮಾಡಲು ನಮ್ಮಲ್ಲಿ ಅರ್ಹತೆ ಎಲ್ಲಿತ್ತು ?” ಎಂದು ಹೇಳಿದರು. ಈಗ ನಾವು, ಪರಾತ್ಪರ ಗುರುದೇವರೇ ಸಾಧಕರ ಸೇವೆಯನ್ನು ಮಾಡುತ್ತಿರುವುದನ್ನು ಅನುಭವಿಸುತ್ತಿದ್ದೇವೆ. ಗುರುದೇವರ ಮೇಲಿನ ಮಾತುಗಳು ನೆನಪಾದಾಗ ನನಗೆ, ‘ನಮ್ಮ ಸಂದರ್ಭದಲ್ಲಿ ಅವರ ಮಾತುಗಳು ಶೇ. ೧೦೦ ರಷ್ಟು ಸತ್ಯವಾಗಿವೆ. ‘ನಾವು ಪರಾತ್ಪರ ಗುರುದೇವರ ಸೇವೆಯನ್ನು ಮಾಡಬಹುದು’, ಅಷ್ಟು ಕ್ಷಮತೆಯೇ ನಮ್ಮಲಿಲ್ಲ. ಅವರೇ ನಮ್ಮೆಲ್ಲ ಸಾಧಕರ ಸೇವೆಯನ್ನು ಮಾಡುತ್ತಿದ್ದಾರೆ’, ಎಂದೆನಿಸಿತು. ‘ಗುರುದೇವಾ, ನಿಮ್ಮ ಕೃಪೆಯಿಂದ ನನ್ನಲ್ಲಿ ಗುರುಸೇವೆಯಲ್ಲಿರುವ ಅರ್ಹತೆಯು ನಿರ್ಮಾಣವಾಗಲಿ’, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ.’ – ಶ್ರೀ. ಸುಧೀಷ ಪುಥಲತ, ಕೇರಳ